• Home
 • »
 • News
 • »
 • state
 • »
 • Siddaramaiah: ನಿಮಗೆ ಧಮ್, ತಾಕತ್ತು ಇದ್ದರೆ ತನಿಖೆ ಮಾಡ್ಸಿ! ಬಿಜೆಪಿ ಸರ್ಕಾರಕ್ಕೆ ಸಿದ್ದು, ಡಿಕೆಶಿ ಸವಾಲ್​

Siddaramaiah: ನಿಮಗೆ ಧಮ್, ತಾಕತ್ತು ಇದ್ದರೆ ತನಿಖೆ ಮಾಡ್ಸಿ! ಬಿಜೆಪಿ ಸರ್ಕಾರಕ್ಕೆ ಸಿದ್ದು, ಡಿಕೆಶಿ ಸವಾಲ್​

ಸಿದ್ದರಾಮಯ್ಯ

ಸಿದ್ದರಾಮಯ್ಯ

ಸಾಲ ತಗೊಳ್ಳೋದು ಅಪರಾಧನಾ? ಧಮ್ , ತಾಕತ್ ಅಂತಾರಲ್ಲ, ಆ ಧಮ್, ತಾಕತ್ತು ಇದ್ರೆ ತನಿಖೆ ಮಾಡ್ಸಿರೀ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಸಿದ್ದರಾಮಯ್ಯ ವಿರುದ್ಧ ಎನ್ ಆರ್​ ರಮೇಶ್ (N R Ramesh)​ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) , ಮಾಧ್ಯಮಗಳ ಮೇಲೆಯೇ ಕೆಂಡಾಮಂಡಲರಾಗಿದ್ದಾರೆ. ವಿವೇಕ್ ನನ್ನು ನಾನು ಟರ್ಫ್ ಕ್ಲಬ್ ಉಸ್ತುವಾರಿ ಮಾಡಿದ್ದು ನಿಜ ಆದ್ರೆ, ಅವನೊಬ್ಬನೇ ಅಲ್ಲ, ಇನ್ನಿಬ್ಬರನ್ನು ಕೂಡ ನೇಮಕ (Recruitment) ಮಾಡಿದ್ದೆ. ಹಾಗಂತ ಲಂಚ ತಗೊಂಡು ನೇಮಕ ಮಾಡಿದ್ನಾ ಎಂದು ಪ್ರಶ್ನೆ (Question) ಮಾಡಿದ್ದಾರೆ. ನಾನು ಮನೆ ಕಟ್ಟಲು ಅವನ ಬಳಿ 1.5 ಕೋಟಿ ಸಾಲ ತಗೊಂಡಿದ್ದೆ. ನಾನು ಇನ್ನೂ ಸಾಲ ತೀರಿಸಿಲ್ಲ, ಸಾಲ ತಗೊಳ್ಳೋದೂ ತಪ್ಪಾ ಎಂದು ಸಿದ್ದರಾಮಯ್ಯ ಕೆಂಡಾಮಂಡಲರಾದ್ರು. 


  ಧಮ್, ತಾಕತ್ತು ಇದ್ರೆ ತನಿಖೆ ಮಾಡ್ಸಿ


  ಎನ್ ಆರ್ ರಮೇಶ್ ಲೋಕಯುಕ್ತಕ್ಕಾದ್ರೂ ದೂರು ಕೊಡಲಿ, ಎಸಿಬಿಗಾದ್ರು ದೂರು ಕೊಡಲಿ, ತನಿಖೆ ಮಾಡ್ಸಿ, ನಾನು ಬೊಮ್ಮಾಯಿ ತರ ಹೇಳಲ್ಲ. ಸರ್ಕಾರಬೇಕಿದ್ರೆ ತನಿಖೆ ಮಾಡಿಸಲಿ ಎಂದ ಸಿದ್ದರಾಮಯ್ಯ ಸಿಟ್ಟಾಗಿ, ಸಾಲ ತಗೊಳ್ಳೋದು ಅಪರಾಧನಾ? ಧಮ್ , ತಾಕತ್ ಅಂತಾರಲ್ಲ, ಧಮ್ , ತಾಕತ್ತು ಇದ್ರೆ ತನಿಖೆ ಮಾಡ್ಸಿರೀ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.


  ಬೇಕಿದ್ರೆ ಸಿಬಿಐಗೂ ಕೊಡಿ ಎಂದು ಡಿಕೆಶಿ ಸವಾಲ್​


  ಸೋಲಾರ್ ಹಗರಣ ಕುರಿತ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಡಿಕೆ ಶಿವಕುಮಾರ್​, ಅದೇನೋ ಧಮ್ ಅಂತಾರಲ್ಲ, ನಾನು ಇನ್ನೂ ಮಾತಾಡೋಕೆ ಶುರು ಮಾಡಿಲ್ಲ. ಮುಂದೆ ಮಾತಾಡ್ತೀನಿ ಎನ್ನುತ್ತಲೇ ತನಿಖೆ ಹೊಣೆಯನ್ನು ಸಿಬಿಐಗೆ ಬೇಕಿದ್ರೆ ಕೊಡಲಿ ಎಂದು ಸರ್ಕಾರಕ್ಕೆ ಡಿಕೆ ಶಿವಕುಮಾರ್​ ಸವಾಲು ಹಾಕಿದ್ದಾರೆ.


  ಇದನ್ನೂ ಓದಿ: Bandemutt Swamy Case: ಮಠದ ಶಾಲೆ ಆಡಳಿತ ನೋಡಿಕೊಳ್ತಿದ್ದ ಮಹಿಳೆ ಅಂದರ್​; ಕಣ್ಣೂರು ಮಠದ ಸ್ವಾಮೀಜಿಗೆ 14 ದಿನ ನ್ಯಾಯಾಂಗ ಬಂಧನ!


  ಚೆಕ್​ನಲ್ಲಿ ಲಂಚ ಪಡೆದ ದಾಖಲೆ


  ಮಾಜಿ ಸಿಎಂ ಸಿದ್ದು ವಿರುದ್ಧ ಬಿಜೆಪಿ ಬ್ರಹ್ಮಾಸ್ತ್ರ ರೂಪಿಸಿದ್ದು, ಸಿದ್ದು ವಿರುದ್ಧ ಸಿಗ್ತು ಚೆಕ್​ನಲ್ಲಿ ಲಂಚ ಪಡೆದ ದಾಖಲೆ ಹೊರಬಿದ್ದಿದೆ. ಈ ಹಿನ್ನೆಲೆ ಸಿದ್ದರಾಮಯ್ಯ ವಿರುದ್ಧ ನಡೆದೇ ಬಿಡುತ್ತಾ CBI ತನಿಖೆ ಎಂಬ ಅನುಮಾನಕ್ಕೆ ದಾರಿ ಮಾಡಿ ಕೊಟ್ಟಿದ್ದಾರೆ. ದೆಹಲಿಯಿಂದ ರಾಜ್ಯ ಬಿಜೆಪಿಗೆ ಬಂದಿದೆ ಆ ದಾಖಲೆ, ಕಿಂಗ್ಸ್​ ಕೋರ್ಟ್​ ಮಾಲೀಕ ವಿವೇಕ್​​​​​​ನಿಂದ ಲಂಚ ಪಡೆಯಲಾಗಿದ್ದು, ಬೆಂಗಳೂರಿನ ರೇಸ್​ ಕೋರ್ಸ್​​​​​ ಟರ್ಫ್​ ಕ್ಲಬ್​​​ ಸದಸ್ಯತ್ವದ ಸ್ಟೀವರ್ಡ್​ ಹುದ್ದೆಗೆ ಸಿದ್ದರಾಮಯ್ಯ 1 ಕೋಟಿ 30 ಲಕ್ಷ ಲಂಚ ಚೆಕ್​ ರೂಪದಲ್ಲಿ ಪಡೆದಿರುವ ಗಂಭೀರ ಆರೋಪ ಮಾಡಲಾಗಿದೆ.


  ಸಿದ್ದರಾಮಯ್ಯ ವಿರುದ್ಧ ಎನ್ ಆರ್​ ರಮೇಶ್ 


  ಈ ಬಗ್ಗೆ ದಾಖಲೆ ಸಮೇತ ಸಿಎಂಗೆ ದೂರು ನೀಡಿದ ಎನ್​.ಆರ್​​​. ರಮೇಶ್​, ಸಿದ್ದರಾಮಯ್ಯ ಮೇಲೆ CBI ತನಿಖೆಯ ತೂಗು ಗತ್ತಿ ತೂಗುತ್ತಿದೆ. 2014ರಿಂದ 2017ರವರೆಗೆ ಟರ್ಫ್​​​ ಕ್ಲಬ್​​ ಸ್ಟೀವರ್ಡ್ ಆಗಲು ಲಂಚ ಪಡೆಯಲಾಗಿದ್ದು, 2014ರ ಜುಲೈ 28ರಂದು ಸಿದ್ದು ಅಕೌಂಟ್​ಗೆ ಹಣ ಬಂದಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅಡಿ ಕ್ರಮಕ್ಕೆ ರಮೇಶ್ ಆಗ್ರಹಿಸಿದ್ದಾರೆ. ಕಮಿಟಿ ಮೆಂಬರ್​ ಆಗಿ ನಾಮಿನೇಟ್ ಮಾಡಲು ಲಂಚ ಸ್ವೀಕಾರ ಮಾಡಲಾಗಿದೆ.


  ದಯಾಮರಣಕ್ಕೆ ಪತ್ರ


  ಗುತ್ತಿಗೆದಾರ ಬಸವರಾಜ ಅಮರಗೊಳ ದಯಾಮರಣಕ್ಕೆ ಪತ್ರ ಬರೆದಿದ್ದಾರೆ.  ಇಂಥಾ ಅಮಾಯಕರನ್ನು ಸಾಯಿಸೋದಕ್ಕೆ ಹೊರಟಿದ್ದಾರಲ್ಲ ಈ ಸರ್ಕಾರ? ಇಂಥಾ ಭ್ರಷ್ಟ ಜನ ವಿರೋಧಿ ಸರ್ಕಾರ ಯಾವತ್ತಾದರೂ ಬಂದಿತ್ತಾ? ಯಾವತ್ತೂ ಇಲ್ಲ. ನಮ್ಮ ಕಾಲದಲ್ಲೂ ನಡೆದಿದೆ ಭ್ರಷ್ಟಾಚಾರ ಅಂತೀರಲ್ಲ ಅದನ್ನೂ ತನಿಖೆ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.


  ಇದನ್ನೂ ಓದಿ:  KSRTC ಬಸ್​ಗಳಲ್ಲಿ ಇಷ್ಟು ಕೆಜಿ ಲಗೇಜ್​ ಸಾಗಣೆ ಉಚಿತ! ನಾಯಿ ಸಾಗಣೆಗೆ ಶುಲ್ಕವೆಷ್ಟು?


  ದೀಪಾವಳಿಗೆ ಪತ್ರಕರ್ತರಿಗೆ ಹಣ ಕೊಟ್ಟಿದ್ದಾರಲ್ಲ, ಅದು ಯಾವ ದುಡ್ಡು? ಅದು ನನ್ನ ಪ್ರಕಾರ ಭ್ರಷ್ಟಾಚಾರದ ಹಣ, ಅವರ ಭ್ರಷ್ಟಾಚಾರ ಬರೀಬಾರದು ಅಂತಾ ಅವ್ರು ದುಡ್ಡು ಕೊಟ್ಟಿರೋದು.ಕೆಲವರು ದುಡ್ಡು ವಾಪಸ್ಸು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

  Published by:ಪಾವನ ಎಚ್ ಎಸ್
  First published: