ಮಂಡ್ಯ ಬಂಡಾಯ ಕಾಂಗ್ರೆಸ್ಸಿಗರ​ ಮನವೊಲಿಕೆಗೆ ಮುಂದಾದ ಸಿದ್ದರಾಮಯ್ಯ; ಇಂದು ಕಾವೇರಿ ನಿವಾಸದಲ್ಲಿ ಸಭೆ!

ಮೈತ್ರಿಧರ್ಮ ಪಾಲನೆ ಮಾಡುವಂತೆ ಸೂಚಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಇಂದು ಸಭೆ ಕರೆದಿದ್ಧಾರೆ. ಈ ಸಭೆಯಲ್ಲಿ ಬಂಡಾಯ ಕಾಂಗ್ರೆಸ್​​ ನಾಯಕರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ.

Ganesh Nachikethu | news18
Updated:April 9, 2019, 10:06 AM IST
ಮಂಡ್ಯ ಬಂಡಾಯ ಕಾಂಗ್ರೆಸ್ಸಿಗರ​ ಮನವೊಲಿಕೆಗೆ ಮುಂದಾದ ಸಿದ್ದರಾಮಯ್ಯ; ಇಂದು ಕಾವೇರಿ ನಿವಾಸದಲ್ಲಿ ಸಭೆ!
ಸಿದ್ದರಾಮಯ್ಯ
  • News18
  • Last Updated: April 9, 2019, 10:06 AM IST
  • Share this:
ಬೆಂಗಳೂರು(ಏ.09): ಕರ್ನಾಟಕದಲ್ಲೀಗ ಜೋರು ಸದ್ದು ಮಾಡುತ್ತಿರುವ ಲೋಕಸಭಾ ಕ್ಷೇತ್ರ ಮಂಡ್ಯ. ರಾಜ್ಯದಲ್ಲಿಯೇ ತೀವ್ರ ಕುತೂಹಲ ಕೆರಳಿಸಿರುವ ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್​​ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್​​ ಕಣದಲ್ಲಿದ್ದಾರೆ. ಮೈತ್ರಿಯಾಗಿದ್ದರೂ ಸ್ಥಳೀಯ ಕಾಂಗ್ರೆಸ್ಸಿಗರು ನಿಖಿಲ್​​​ ಪರ ಕೆಲಸ ಮಾಡದೆ, ಬಹಿರಂಗವಾಗಿಯೇ ಸುಮಲತಾರಿಗೆ ಬೆಂಬಲ ನೀಡುತ್ತಿದ್ಧಾರೆ. ಇದರ ವಿರುದ್ಧ ಜೆಡಿಎಸ್​​​ ವರಿಷ್ಠರು ಕೆಂಡಕಾರುತ್ತಲೇ ಇದ್ಧಾರೆ. ಹೀಗಾಗಿ ಮೈತ್ರಿಧರ್ಮ ಪಾಲನೆ ಮಾಡುವಂತೆ ಸೂಚಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಇಂದು ಸಭೆ ಕರೆದಿದ್ಧಾರೆ. ಈ ಸಭೆಯಲ್ಲಿ ಬಂಡಾಯ ಕಾಂಗ್ರೆಸ್​​ ನಾಯಕರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ. ಒಂದು ವೇಳೆ ಸಂಧಾನ ಸಭೆ ಸಫಲವಾಗದಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಸಕಂಷ್ಟ ಎದುರಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಮತಯಾಚಿಸಲು ಮಾಜಿ ಶಾಸಕರಾದ ಚಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ ಮನಸ್ಸು ಮಾಡುತ್ತಿಲ್ಲ. ಇವರೊಂದಿಗೆ ಮಂಡ್ಯ ಕಾಂಗ್ರೆಸ್‌ನ ಇತರರೂ ಸೇರಿಕೊಂಡಿದ್ದಾರೆ. ಈ ಕಗ್ಗಂಟು ಬಿಡಿಸುವಂತೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ಈ ಹಿಂದೆಯೇ ಸೂಚಿಸಿತ್ತು. ಅದರಂತೆ ಸಿದ್ದರಾಮಯ್ಯ ಎರಡು ಬಾರಿ ಸಭೆ ಕರೆದು ಚರ್ಚಿಸಿದ್ದರು. ಆದರೆ, ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧವೇ ತಿರುಗಿ ಬಿದ್ದಿರುವ ಚಲುವರಾಯಸ್ವಾಮಿ ಮತ್ತು ಇತರರು ಮೈತ್ರಿಯ ಚೌಕಟ್ಟಿನಿಂದ ಮಂಡ್ಯವನ್ನು ಹೊರಗಿಡುವುದೇ ಉತ್ತಮವೆಂದು ಪಟ್ಟು ಹಾಕಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ್ದ ಸಂಧಾನ ಸಭೆಯಲ್ಲಿ ಸ್ಥಳೀಯ ಕಾಂಗ್ರೆಸ್​​ ನಾಯಕರು ಜೆಡಿಎಸ್​​ ಮೇಲೆ ಸಾಲುಸಾಲು ದೂರು ನೀಡಿದ್ಧಾರೆ. ''ಸಿಎಂ ನಮ್ಮನ್ನು ಪದೇಪದೇ ಅಪಮಾನಿಸುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕಿದ್ದೇವೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅಂಥವರೊಂದಿಗೆ ಯಾವ ವಿಶ್ವಾಸವಿಟ್ಟುಕೊಂಡು ಕೆಲಸ ಮಾಡಬೇಕು? ಅವರಿಗೆ ನಮ್ಮ ಮೇಲೆ ನಂಬಿಕೆ ಇಲ್ಲದಿರುವಾಗ ನಾವು ಅವರನ್ನೇಕೆ ಬೆಂಬಲಿಸಬೇಕು?,'' ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಾಯಾವತಿ ಮುಳುಗುತ್ತಿರುವ ಹಡಗು; ಬಚಾವಾಗಲು ಮುಸ್ಲಿಮರತ್ತ ಕೈಚಾಚಿದ್ದಾರೆ: ಪ್ರಧಾನಿ ಮೋದಿ

ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ, ''ಕಾಂಗ್ರೆಸ್‌-ಜೆಡಿಎಸ್‌ ಸೇರಿ ರಾಜ್ಯದಲ್ಲಿ ಹೆಚ್ಚು ಸೀಟು ಗೆಲ್ಲುವ ವಾತಾವರಣವಿದೆ. ಮಂಡ್ಯದ ಸಂಘರ್ಷದಿಂದ ಇದನ್ನು ಹಾಳು ಮಾಡಿಕೊಳ್ಳಬಾರದು. ಹೀಗಾಗಿ ಹೈಕಮಾಂಡ್‌ ಸೂಚನೆ ಪಾಲಿಸೋಣ,'' ಎಂದಿದ್ಧಾರೆ. ಆದರೂ, ಸಿದ್ದರಾಮಯ್ಯನ ಮಾತುಗಳನ್ನು ಕೇಳಲಿಕ್ಕೆ ಬಂಡಾಯ ಕಾಂಗ್ರೆಸ್​​ ನಾಯಕರು ತಯಾರಿ ಇರಲಿಲ್ಲ ಎನ್ನಲಾಗಿದೆ. ಇದನ್ನು ಕಂಡ ಸಿದ್ದರಾಮಯ್ಯ, ಹಬ್ಬದ ಊಟ ಮಾಡಿಕೊಂಡು ಹೋಗುವಂತೆ ಸೂಚಿಸಿದ್ದಾರೆ. ಜತೆಗೆ ಇಂದು ಮತ್ತೊಮ್ಮೆ ಸಭೆ ನಡೆಸುವುದಾಗಿ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: AFSPA ಹಿಂಪಡೆಯುವುದೂ ಒಂದೇ, ದೇಶ ಕಾಯುವ ಸೈನಿಕರನ್ನು ಗಲ್ಲಿಗೇರಿಸುವುದೂ ಒಂದೇ: ಪ್ರಧಾನಿ ಮೋದಿ

ಇನ್ನೊಂದೆಡೆ ಕುಮಾರಸ್ವಾಮಿ ಅವರೇ ನೇರವಾಗಿ ಮಾತುಕತೆಗೆ ಆಹ್ವಾನಿಸಲಿ. ನಮ್ಮ ಬಗ್ಗೆ ಆಡಿಕೊಳ್ಳುವುದನ್ನು ನಿಲ್ಲಿಸಲಿ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಹೂಡಿರುವ ಕೇಸ್‌ ವಾಪಸ್‌ ತೆಗೆದುಕೊಳ್ಳಲಿ. ಜಿಲ್ಲೆಯ ನಿಗಮ ಮಂಡಳಿಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೂ ಸಮಾನ ಸ್ಥಾನಮಾನ ಕೊಡುವ ಸ್ಪಷ್ಟ ಭರವಸೆ ನೀಡಲಿ. ಆಗ ನಾವು ಪ್ರಚಾರಕ್ಕೆ ಬರುವ ಬಗ್ಗೆ ಯೋಚಿಸುತ್ತೇವೆ,'' ಎಂಬ ಷರತ್ತನ್ನು ಸಿದ್ದರಾಮಯ್ಯ ಮುಂದೆ ಅತೃಪ್ತರು ಇಟ್ಟಿದ್ದಾರೆಂದು ಗೊತ್ತಾಗಿದೆ.--------------
First published: April 9, 2019, 9:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading