ರಾಜ್ಯದ ರಾಜಕೀಯ ಬೆಳವಣಿಗೆಗೆ ಅಮಿತ್ ಷಾ ಕಾರಣ; ಸಿದ್ದರಾಮಯ್ಯ ಗಂಭೀರ ಆರೋಪ

ನಾವೇನೂ ಪ್ರಯತ್ನ ಮಾಡ್ತಿಲ್ಲಪ್ಪಾ ಅಂತಾ ಹೇಳ್ತಾನೆ ಬಿಜೆಪಿಯವರು ಹೊಸ ತಂತ್ರಗಾರಿಕೆ ನಡೆಸಿದ್ದಾರೆ. ಹೇಗಾದರೂ ಮಾಡಿ ಈ ಸರ್ಕಾರ ಉರುಳಿಸಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡೋದು ಬಿಜೆಪಿ ಹುನ್ನಾರ.

Latha CG | news18
Updated:July 2, 2019, 4:13 PM IST
ರಾಜ್ಯದ ರಾಜಕೀಯ ಬೆಳವಣಿಗೆಗೆ ಅಮಿತ್ ಷಾ ಕಾರಣ; ಸಿದ್ದರಾಮಯ್ಯ ಗಂಭೀರ ಆರೋಪ
ಸಿದ್ದರಾಮಯ್ಯ- ಅಮಿತ್ ಶಾ
Latha CG | news18
Updated: July 2, 2019, 4:13 PM IST
ಬೆಂಗಳೂರು,(ಜು.02): ಸಮ್ಮಿಶ್ರ ಸರ್ಕಾರದಲ್ಲಿ ಇಬ್ಬರು ಶಾಸಕರು ರಾಜೀನಾಮೆ ನೀಡಿರುವುದು ಮೈತ್ರಿ ನಾಯಕರ ಆತಂಕಕ್ಕೆ ಕಾರಣವಾಗಿದೆ. ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪರ್ವ ಒಂದೆಡೆಯಾದರೆ, ಇನ್ನೊಂದೆಡೆ ಆಪರೇಷನ್ ಕಮಲದ ಭೀತಿ. ಹೀಗಾಗಿ ದೋಸ್ತಿ ನಾಯಕರು ಸರ್ಕಾರ ಬೀಳುವ ಆತಂಕದಲ್ಲಿ ಇದ್ದಾರೆ.

ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಎಲ್ಲಾ ರಾಜಕೀಯ ಬೆಳವಣಿಗೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ನೇರ ಹೊಣೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. "ರಾಜ್ಯದ ರಾಜಕೀಯ ಬೆಳವಣಿಗೆಗೆ ಅಮಿತ್ ಶಾ ಕಾರಣ. ಎಲ್ಲಾ ಗೊಂದಲಗಳಿಗೆ ಅಮಿತ್ ಷಾ ನೇರ ಕಾರಣ," ಎಂದು ನೇರವಾಗಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಶಾಸಕರಿಗೆ ಹಣ, ಸ್ಥಾನಮಾನದ ಆಮಿಷ ಒಡ್ಡುತ್ತಿದ್ದಾರೆ. ಆದರೆ ರಾಜೀನಾಮೆ ನೀಡಿದ ಶಾಸಕರು ಬಿಜೆಪಿಗೆ ಹೋಗಲ್ಲ. ರಮೇಶ್​ ಜಾರಕಿಹೊಳಿ, ಆನಂದ್​ ಸಿಂಗ್ ಬಿಜೆಪಿ  ಪಕ್ಷಕ್ಕೆ ಹೋಗಲ್ಲ. ಇಬ್ಬರು ಶಾಸಕರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಿಕ್ಕರೆ ಮಾತನಾಡುತ್ತೇನೆ. ಬಿಜೆಪಿಯವರು ಹೊಸ ಆಟ ಶುರು ಮಾಡಿದ್ದಾರೆ. ಆದರೆ ಸರ್ಕಾರ ಸೇಫ್​ ಆಗಿದೆ. ಯಾವುದೇ ತೊಂದರೆಯಿಲ್ಲ ಎಂದು ಹೇಳಿದರು.

ನಾವೇನೂ ಪ್ರಯತ್ನ ಮಾಡ್ತಿಲ್ಲಪ್ಪಾ ಅಂತಾ ಹೇಳ್ತಾನೆ ಬಿಜೆಪಿಯವರು ಹೊಸ ತಂತ್ರಗಾರಿಕೆ ನಡೆಸಿದ್ದಾರೆ. ಹೇಗಾದರೂ ಮಾಡಿ ಈ ಸರ್ಕಾರ ಉರುಳಿಸಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡೋದು ಬಿಜೆಪಿ ಹುನ್ನಾರ. ನಾವು ಸರ್ಕಾರಕ್ಕೆ ಏನೂ ಮಾಡಲ್ಲ ಅಂತಾ ಹೇಳುತ್ತಲೇ ಅವರೇ ಎಲ್ಲವನ್ನೂ ಮಾಡ್ತಿದ್ದಾರೆ. ಈ ಬೆಳವಣಿಗೆಯಿಂದ ತುರ್ತು ಸಮನ್ವಯ ಸಮಿತಿ ಸಭೆ ಕರೆಯಲ್ಲ. ಕರೆಯುವ ಅಗತ್ಯತೆಯೂ ಇಲ್ಲ ಎಂದರು.
First published:July 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...