ಡಿ.9ರ ನಂತರ ಮಲ್ಲಿಕಾರ್ಜುನ ಖರ್ಗೆಯವರಿಗೆ ಭ್ರಮೆ ನಿರಸನವಾಗುತ್ತದೆ; ಮಾಜಿ ಸಿಎಂ ಎಸ್​.ಎಂ.ಕೃಷ್ಣ

ಗೊತ್ತುಗುರಿ ಇಲ್ಲದ ಸರ್ಕಾರ ಕಿತ್ತು ಹಾಕಿ, ಬಿಜೆಪಿ ಸರ್ಕಾರ ತನ್ನಿ ಎಂದು ಹೇಳುತ್ತಿದ್ದೆ. ನನ್ನ ಮಾತಿಗೂ ಕಿಮ್ಮತ್ತು ಕೊಟ್ಟು ಬಿಜೆಪಿ ಸರ್ಕಾರವನ್ನು ತಂದರು. ಅದಕ್ಕೆ ನನಗೆ ಸಂತೋಷವಾಗಿದೆ ಎಂದರು.

 ಎಸ್​ ಎಂ ಕೃಷ್ಣ

ಎಸ್​ ಎಂ ಕೃಷ್ಣ

  • Share this:
ಬೆಂಗಳೂರು(ಡಿ.03): ಮಾಜಿ ಸಿಎಂ ಎಸ್​.ಎಂ.ಕೃಷ್ಣ ಇಂದು ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್​.ಟಿ.ಸೋಮಶೇಖರ್​ ಪರ ಪ್ರಚಾರ ನಡೆಸಿದ್ದಾರೆ. ಈ ವೇಳೆ ಎಸ್​ಎಂಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 

ಈ ಉಪ ಚುನಾವಣೆ ಬಂದಿರುವುದಕ್ಕೆ ಕಾರಣ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಕಳೆದ 14 ತಿಂಗಳ ಕಾಲ ಸಮ್ಮಿಶ್ರ ಸರ್ಕಾರ ಇತ್ತು. ಚುನಾವಣಾ ಫಲಿತಾಂಶ ಬಂದ ಅರ್ಧಗಂಟೆಯಲ್ಲಿ ಅವಸರ ಅವಸರವಾಗಿ ಸರ್ಕಾರ ರಚನೆ ಮಾಡಿದರು. ಆದರೆ  ಆ ಸರ್ಕಾರದ ಆಡಳಿತದಲ್ಲಿ ಯಾವ ಸ್ಪಷ್ಟತೆಯೂ ಇರಲಿಲ್ಲ. ಜನರಿಗೆ ನಿರಾಸೆಯಾಯ್ತು.

ಜನರ ಕಷ್ಟ ಸುಖಗಳಿಗೆ ಅವರು ಸ್ಪಂದಿಸಲಿಲ್ಲ. ಜನರ ಮನಸ್ಸಿನಲ್ಲಿ ಕುದಿಯುತ್ತಿದ್ದ ಭಾವನೆಗಳಿಗೆ ಎಸ್.ಟಿ.ಸೋಮಶೇಖರ್ ಮತ್ತು ಮುನಿರತ್ನ ಸ್ಪಷ್ಟರೂಪ ಕೊಟ್ಟರು‌. ಅದರಿಂದ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರುವಂತಾಯ್ತು ಎಂದು ಮಾಜಿ ಸಿಎಂ ಹೇಳಿದರು.

ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಪತ್ತೆ ಹಚ್ಚಿದ್ದು ಯಾರು ಗೊತ್ತಾ? ನಿಜಕ್ಕೂ ಇದು ಹೆಮ್ಮೆಯ ವಿಚಾರ!

ಈ ಕ್ಷೇತ್ರಕ್ಕೆ 760 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ‌. ಇದನ್ನು ಪಡೆಯಲು ಸೋಮಶೇಖರ್ ಅದೆಷ್ಟು ಯಾಗ ಮಾಡಬೇಕಿತ್ತೋ ಗೊತ್ತಿಲ್ಲ. ಯಡಿಯೂರಪ್ಪನವರ ವಿಶೇಷ ಗುಣ ಎಂದರೆ ಯಾವುದೇ ನಿರ್ಧಾರ ತಕ್ಷಣ ತೆಗೆದುಕೊಂಡು ಜಾರಿಗೆ ತರುತ್ತಾರೆ ಎಂದು ಶ್ಲಾಘಿಸಿದರು.

ಗೊತ್ತುಗುರಿ ಇಲ್ಲದ ಸರ್ಕಾರ ಕಿತ್ತು ಹಾಕಿ, ಬಿಜೆಪಿ ಸರ್ಕಾರ ತನ್ನಿ ಎಂದು ಹೇಳುತ್ತಿದ್ದೆ. ನನ್ನ ಮಾತಿಗೂ ಕಿಮ್ಮತ್ತು ಕೊಟ್ಟು ಬಿಜೆಪಿ ಸರ್ಕಾರವನ್ನು ತಂದರು. ಅದಕ್ಕೆ ನನಗೆ ಸಂತೋಷವಾಗಿದೆ ಎಂದರು.

ಪ್ರಸಕ್ತ ಕಾಂಗ್ರೆಸ್​​​ನಲ್ಲಿ ಯಾವುದೇ ಗೊತ್ತುಗುರಿ ಇಲ್ಲ, ಗೊಂದಲದಲ್ಲಿದ್ದಾರೆ. ಯಾರು ಎ ಟೀಮ್, ಯಾರು ಬಿ ಟೀಮ್ ಅನ್ನೋದು ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಳ ಒಪ್ಪಂದ ಆಗಿದೆ ಎನಿಸುತ್ತಿಲ್ಲ. ಸಿದ್ದರಾಮಯ್ಯ ಒಂದು ದಿಕ್ಕು, ಕುಮಾರಸ್ವಾಮಿ ಇನ್ನೊಂದು ದಿಕ್ಕು, ದೇವೇಗೌಡರು ಮತ್ತೊಂದು ದಿಕ್ಕಿನಲ್ಲಿದ್ದಾರೆ.ಯಡಿಯೂರಪ್ಪ ಸರ್ಕಾರವನ್ನು ಬೀಳಲು ಅವಕಾಶ ಕೊಡಲ್ಲ ಅಂತಾ ದೇವೇಗೌಡರು ಹೇಳುತ್ತಾರೆ ಎಂದರು.

ಚುನಾವಣೆ ನಂತರ ಸಿದ್ದರಾಮಯ್ಯ, ರಮೇಶ್ ಕುಮಾರ್ ಅವರ ಸತ್ಯ ಬಿಚ್ಚಿಡುತ್ತೇನೆ: ಡಾ. ಸುಧಾಕರ್

ಈಗ ಉಪಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಹಾಗಾಗಿ ಯಡಿಯೂರಪ್ಪ ಸರ್ಕಾರಕ್ಕೆ ಬೇಕಾದ ಬಹುಮತ ಸಿಕ್ಕೇ ಸಿಗುತ್ತದೆ. ಹಾಗಾಗಿ ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ ಎಂಬ ದೇವೇಗೌಡರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಡಿಸೆಂಬರ್ 9ರ ನಂತರ ಮಲ್ಲಿಕಾರ್ಜುನ ಖರ್ಗೆಯವರಿಗೆ ಭ್ರಮ ನಿರಸನವಾಗುತ್ತದೆ. ನಾವೇ ಅವರಿಗೆ 9 ತಾರೀಖು ಸಿಹಿ ಸುದ್ದಿ ಕೊಡುತ್ತೇವೆ ಎಂದು ಹೇಳಿದರು.
First published: