• Home
  • »
  • News
  • »
  • state
  • »
  • H D Kumaraswamy: ಅವ್ರು 50 ಕೋಟಿ ಕೊಟ್ಟಿರೋದು ನನ್ನನ್ನು ಕಟ್ಟಿ ಹಾಕಲು; ನಮ್ಮ ಕಾರ್ಯಕರ್ತರನ್ನು ಕೆಣಕಬೇಡಿ ಎಂದ್ರು ಕುಮಾರಸ್ವಾಮಿ

H D Kumaraswamy: ಅವ್ರು 50 ಕೋಟಿ ಕೊಟ್ಟಿರೋದು ನನ್ನನ್ನು ಕಟ್ಟಿ ಹಾಕಲು; ನಮ್ಮ ಕಾರ್ಯಕರ್ತರನ್ನು ಕೆಣಕಬೇಡಿ ಎಂದ್ರು ಕುಮಾರಸ್ವಾಮಿ

ಎಚ್‌.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಎಚ್‌.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಬ್ಲಾಕ್ ಮೇಲ್ ರಾಜಕೀಯ ಮಾಡುತ್ತಿದ್ದಾರೆ ಎಂಬ ಯೋಗೇಶ್ವರ್ ಆರೋಪಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವ್ರು, ಅಯ್ಯೋ ರಾಮ, ನಾನ್ ಯಾಕೆ ಬ್ಲಾಕ್ ಮೇಲ್ ಮಾಡ್ಲಿ, ನಾನು ಇರುವುದು ಬ್ಲಾಕ್ ಅಷ್ಟೇ, ನನಗೆ ಅದ್ಯಾವಾ ಬ್ಲಾಕ್ ಮೇಲ್ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

  • Share this:

ಚನ್ನಪಟ್ಟಣದಲ್ಲಿ (Chennapattana) ನಡೆದ ಗಲಾಟೆಗೆ ಸಂಬಂಧಿಸಿದಂತೆ ಮಾತಾಡಿದ ಮಾಜಿ ಸಿಎಂ ಕುಮಾರಸ್ವಾಮಿ (Former CM Kumaraswamy). ಇವತ್ತಿನ ದಿನ ನನ್ನ ಕ್ಷೇತ್ರ ಚನ್ನಪಟ್ಟಣದಲ್ಲಿ ಸರ್ಕಾರದ ಅನುದಾನ ಕಾರ್ಯಕ್ರಮದ ಶಂಕುಸ್ಥಾಪನೆ ನೆರೆವೇರಿದೆ.  ಕಾರ್ಯಕ್ರಮದ ಬಗ್ಗೆ ಸರ್ಕಾರದ ನಿಯಮಾವಳಿಗಳನ್ನು (Government Rules) ಗಾಳಿಗೆ ತೂರಿ ರಾಜಕೀಯಕ್ಕೋಸ್ಕರ ಇವತ್ತಿನ ಕಾರ್ಯಕ್ರಮ ಮಾಡಿದ್ದಾರೆ. ಸದನದಲ್ಲೇ  ಸಿಎಂ, ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿ ಆಗಬೇಕು ಎಂದು ಹೇಳಿದ್ದಾರೆ. ಆದ್ರೆ ಶಿಷ್ಟಾಚಾರ (Etiquette) ಪಾಲಿಸಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ನಾನು ಅಧಿಕಾರಕ್ಕೆ ರಾಜಕೀಯ ಮಾಡಲ್ಲ


ನಾನು ಅಧಿಕಾರಕ್ಕೆ ರಾಜಕೀಯ ಮಾಡಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಮೈತ್ರಿ ಸರ್ಕಾರ ತರಲು ಯಾವ ಪಾಪದ ಹಣ ತಂದಿಲ್ಲ. ಚುನಾವಣೆ 6 ತಿಂಗಳು ಇದೆ ಇವಾಗ ಹಣ ಹೊಡೆಯೋಕೆ ಏನೇನೋ ಮಾಡುತ್ತಿದ್ದಾರೆ. 20 ವರ್ಷ ಶಾಸಕರಾಗಿ ಅವ್ರು ಕೆಲಸ ಮಾಡಿದ್ದಾರೆ. ನಾನು 4 ವರ್ಷ ಆಯ್ತು ಚನ್ನಪಟ್ಟಣಕ್ಕೆ ಶಾಸಕರಾಗಿ, ಚನ್ನಪಟ್ಟಣಕ್ಕೆ ನಾನು ಏನ್ ಕೊಟ್ಟಿದ್ದೇನೆ ಎಂದು ಜನ ತೀರ್ಮಾನ ಮಾಡುತ್ತಾರೆ ಎಂದ್ರು.


ಮಾಜಿ ಸಿಎಂನನ್ನು ಲಘುವಾಗಿ ಪರಿಗಣಿಸಿದ್ದಾರೆ


ಮೊನ್ನೆ ದಿಢೀರ್ ಕೆಡಿಪಿ ಮೀಟಿಂಗ್ ನಂತರ ಅನ್ ಅಫಿಶಿಯಲ್ ಆಗಿ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ. ಇನ್ವಿಟೇಶನ್ ಮೊನ್ನೆ ಬೆಳಗ್ಗೆ ಹೊರಡಿಸಿದ್ದಾರೆ. ಈ ರೀತಿಯಲ್ಲಿ ಇನ್ವಿಟೇಶ್ ಹೊರಡಿಸಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದ್ರು. ಅಧಿಕಾರಿಗಳ ಉದ್ದಟತನ ಹೆಚ್ಚಾಗಿದೆ. ಮಾಜಿ ಸಿಎಂ ಅನ್ನು ಲಘುವಾಗಿ ಪರಿಗಣಿಸಿದ್ದಾರೆ. ಶಾಸಕರ ಅನುಪಸ್ಥಿತಿಯಲ್ಲಿ, ನನ್ನ ಗಮನಕ್ಕೂ ಬಾರದೆ ಈ ಕಾರ್ಯಕ್ರಮ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ಇದನ್ನೂ ಓದಿ:HDK Vs CPY: ಚನ್ನಪಟ್ಟಣದಲ್ಲಿ ಜೆಡಿಎಸ್ vs ಬಿಜೆಪಿ ವಾಕ್ಸಮರ; ಯೋಗೇಶ್ವರ್ ಕಾರ್​ಗೆ ಮೊಟ್ಟೆ


ಕುಮಾರಸ್ವಾಮಿ ಕಟ್ಟಿ ಹಾಕಲು 50 ಕೋಟಿ ಕೊಟ್ಟಿದ್ದಾರೆ


ಡಿಸಿ ನೋಡಿಲ್ಲ ಎಂದ್ರು ನಾನೇ ಅವರಿಗೆ ವಾಟ್ಸ್ ಆಪ್ ಮಾಡಿದೆ. ನಾನು ಸಣ್ಣ ಪುಟ್ಟದಕ್ಕೆ ಗುದ್ದಲಿ ಪೂಜೆಗೆ ಹೋಗಲ್ಲ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳುತ್ತೇನೆ.  38 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಕಟ್ಟಲು ಪ್ಲಾನ್ ಮಾಡಿದ್ರು. ಅದು ಇನ್ನೂ ಆಗಿಲ್ಲ ಅದರ ದುಡ್ಡು ತಿಂದು ಅವನ್ಯಾರೊ ಪೊಗರ್ ದಸ್ತ್ ಆಗಿ ಮಾಡಿದ್ದಾರೆ. ಈ 50 ಕೋಟಿ ಕೊಟ್ಟಿರುವುದು ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲು, ಕುಮಾರಸ್ವಾಮಿ ಭಯಕ್ಕೆ ಕೊಟ್ಟಿದ್ದಾರೆ. 50 ಕೋಟಿಯನ್ನು ಅವರ ಚೇಲಾಗಳು ನನ್ನ ವಿರುದ್ಧ ಕೆಲಸ ಮಾಡುವುದಕ್ಕೆ ಕೊಟ್ಟಿದ್ದಾರೆ.


jds activist egg thrown on cp yogeshwar car in channaptna ramanagara mrq
ಸಿಪಿ ಯೋಗೇಶ್ವರ್, ಮಾಜಿ ಸಚಿವ


40% ಸರ್ಕಾರ ಜನ ಮಾತಾಡ್ತಿದ್ದಾರೆ


ಯಾವ ಅಧಿಕಾರಿ ಎಸ್ಟಿಮೇಟ್ ಕೊಟ್ಟಿದ್ದಾರೆ. ಮೊದಲೇ ಜನ 40% ಸರ್ಕಾರ ಅಂತ ಬೀದಿ ಬೀದಿಯಲ್ಲಿ ಮಾತಾಡುತ್ತಾರೆ. ಅವನ್ಯಾರು ಅಧಿಕಾರಿ ಈ ಇನ್ವಿಟೇಶನ್ ಮಾಡಿದ್ದಾನೆ ಅವನು ಸಸ್ಪೆಂಡ್ ಆಗುವವರೆಗೂ ಬಿಡಲ್ಲಎಂದು ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.


ಈ ರೀತಿಯಲ್ಲಿ ಉದ್ಘಾಟನೆ ಮಾಡಬೇಕಿತ್ತಾ?


ಸಾವಿರಾರು ಪೊಲೀಸ್ ಬ್ಯಟಾಲಿಯನ್ ಹಾಕಿದ್ದೀರಿ, ಈ ರೀತಿಯಲ್ಲಿ ಉದ್ಘಾಟನೆ ಮಾಡಬೇಕಿತ್ತಾ? ಕುಮಾರಸ್ವಾಮಿ ಶಕ್ತಿ ಕುಂದಿಸಲು ಆಗಲ್ಲ. ಇನ್ನು 6 ತಿಂಗಳು ಚುನಾವಣೆ ಇದ್ದು, ಅಧಿಕಾರ ದುರುಪಯೋಗ ಮಾಡಿಕೊಂಡು ಹಿಡಿದಿಟ್ಟುಕೊಳ್ಳಲು ಆಗಲ್ಲ, ನಾನು ಅಧಿಕಾರದಲ್ಲಿ ಇರಲಿ ಇರದಿರಲು ಎಲ್ಲಾ ಒಂದೇ ಎಂದು ಹೇಳಿದ್ದಾರೆ.


ಇದನ್ನೂ ಓದಿ:  Davanagere: ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ; ಶಿಕ್ಷಕನಿಗೆ ಧರ್ಮದೇಟು


ಗುತ್ತಿಗೆದಾರರು ಯಾರು ಅಂತ ಬಹಿರಂಗವಾಗ್ಲಿ


ಸರ್ಕಾರ ಅವರದೇ ಇದೆ ಯೋಗೇಶ್ವರ್ ಹೇಳಿರುವ ಗುತ್ತಿಗೆದಾರ ಯಾರು ಅಂತ ಗೊತ್ತಾಗ್ಲಿ, ಇಬ್ಬರು ಗುತ್ತಿಗೆದಾರರು ಹಿಂದೆ ಕಾಂಗ್ರೆಸ್, ಬಿಜೆಪಿ ಅವಧಿಯಲ್ಲಿ ಎಷ್ಟು ಕೆಲಸ ಮಾಡಿದ್ದಾರೆ. ನನ್ನ ಪಕ್ಷದಲ್ಲಿ ಗೂಂಡಾಗಳು ಇಲ್ಲ ಕಾರ್ಯಕರ್ತರು ಇರುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ


ಬ್ಲಾಕ್ ಮೇಲ್ ರಾಜಕೀಯ ಮಾಡುತ್ತಿದ್ದಾರೆ ಎಂಬ ಯೋಗೇಶ್ವರ್ ಆರೋಪಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವ್ರು, ಅಯ್ಯೋ ರಾಮ, ನಾನ್ ಯಾಕೆ ಬ್ಲಾಕ್ ಮೇಲ್ ಮಾಡ್ಲಿ, ನಾನು ಇರುವುದು ಬ್ಲಾಕ್ ಅಷ್ಟೇ, ನನಗೆ ಅದ್ಯಾವಾ ಬ್ಲಾಕ್ ಮೇಲ್ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ಸರ್ಕಾರಕ್ಕೆ ಕುಮಾರಸ್ವಾಮಿ ಎಚ್ಚರಿಕೆ


ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿಗೂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ನಾನು ಪ್ರೀತಿ ಹಾಗೂ ಕಾನೂನಿಗೆ ತಲೆಬಾಗುತ್ತೇನೆ. ಕೆಣಕಿದ್ರೆ ಏನ್ ಆಗುತ್ತೆ ತೋರಿಸುತ್ತೇವೆ. ಧಮ್ ತಾಕತ್ ಬಗ್ಗೆ ಮುಂದೆ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ದೇವೇಗೌಡರನ್ನು ಜೈಲಿಗೆ ಕಳಿಸುತ್ತೇನೆ ಎಂದ್ರು ಅಮೇಲೆ ಏನ್ ಆಯ್ತು ಅಂತ ಗೊತ್ತಾಗಿದೆ. ಸುಮ್ಮನೆ ನಮ್ಮ ಕಾರ್ಯಕರ್ತರನ್ನು ಕೆರಳಿಸುವ ಕೆಲಸ ಮಾಡಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

Published by:ಪಾವನ ಎಚ್ ಎಸ್
First published: