ರಾಮನಗರ (ಡಿ.18): ಜೆಡಿಎಸ್ (JDS) ನಡೆಸುತ್ತಿರುವ ಪಂಚರಥ ಯಾತ್ರೆ ಇದೀಗ ರಾಮನಗರದಲ್ಲಿ (Ramanagara) ಭರ್ಜರಿಯಾಗಿ ಸಾಗಿದೆ. ಕನಕಪುರದಲ್ಲಿ ರೋಡ್ ಶೋ ನಡೆಸಿದ ಹೆಚ್.ಡಿ ಕುಮಾರಸ್ವಾಮಿಗೆ (H.D Kumaraswamy) ಕಾರ್ಯಕರ್ತರು ಹೂ ಮಳೆ ಸುರಿಸಿ ಅದ್ಧೂರಿ ಸ್ವಾಗತ ಕೋರಿದ್ದಾರೆ. ಡಿ.ಕೆ ಶಿವಕುಮಾರ್ (D K Shivakumar) ಸ್ವಕ್ಷೇತ್ರದಲ್ಲಿ ಕುಮಾರಸ್ವಾಮಿ ಹವಾ ಜೋರಾಗಿದೆ.
ಡಿಕೆ ಬ್ರದರ್ಸ್ ವಿರುದ್ಧ HDK ಕಿಡಿ
ಹಾರೋಹಳ್ಳಿ ಭಾಗದಲ್ಲಿ ಕಳಪೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ಬ್ರದರ್ಸ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕಳಪೆ ಕಾಮಗಾರಿಗೆ ಕನಕಪುರದ ಮಹಾನುಭಾವರೇ ಕಾರಣ ಎಂದ್ರು. ಹಾರೋಹಳ್ಳಿ ರಾಮನಗರ ವಿಧಾನಸಭಾ ಕ್ಷೇತ್ರ, ಆದರೆ ಅಧಿಕಾರಿಗಳು ಮಾತ್ರ ಕನಕಪುರದವರು, ಮುಂದಿನ ದಿನಗಳಲ್ಲಿ ಇದೆಲ್ಲದಕ್ಕೂ ಕಡಿವಾಣ ಹಾಕ್ತೇನೆ ಎಂದು ಹಾರೋಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಡಿ.ಕೆ ಶಿವಕುಮಾರ್ಗೆ ಹೆಚ್ಡಿಕೆ ಟಾಂಗ್
ಡಿ.ಕೆ ಶಿವಕುಮಾರ್ ಹೆಸರು ಹೇಳದೇ ಕುಮಾರಸ್ವಾಮಿ ಮತ್ತೆ ಟಾಂಗ್ ಕೊಟ್ಟಿದ್ದಾರೆ. ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿ ಮಾಡ್ತಿದ್ದಾರೆ. ಆದರೆ ನಿಮ್ಮ ಕಷ್ಟಕ್ಕೆ ಸಮಸ್ಯೆಗಳಿಗೆ ನಾವಿದ್ದೇವೆ. ಶಾಪಿಂಗ್ ಮಾಲ್, ಕಟ್ಟಡ ಕಟ್ಟೋದ್ದಕ್ಕೆ ಹಣ ಮಾಡಲಿಲ್ಲ. ನಾನು ಗಣಿಗಾರಿಕೆ ಮಾಡಿಲ್ಲ, ಶಾಪಿಂಗ್ ಮಾಲ್, ಶಿಕ್ಷಣ ಸಂಸ್ಥೆಗಳನ್ನ ಮಾಡಿಲ್ಲ. ನಾನು ಯಾವ ರೀತಿಯಲ್ಲಿ ಬದುಕಿದ್ದೇನೆ ನೀವೇ ನೋಡಿದ್ದೀರಾ. ನಾನು ರಾಜಕಾರಣಕ್ಕೆ ಬರೋದಕ್ಕೂ ಮುಂಚೆ ಬಿಡದಿ ಕೇತಗಾನಹಳ್ಳಿಯಲ್ಲಿ ಸಂಪಾದನೆ ಮಾಡಿದಷ್ಟೇ ಎಂದು ಹೆಚ್ಡಿಕೆ ಹೇಳಿದ್ದಾರೆ.
ಅಧಿಕಾರಕ್ಕೆ ಬರಲು ಸ್ಪಷ್ಟ ಬಹುಮತ ಬೇಕು
ಮತ್ತೊಂದು ಪಕ್ಷದ ಜೊತೆಗೆ ಸೇರಿ ಕೆಲಸ ಮಾಡಲು ಆಗಲ್ಲ, ತೆರಿಗೆ ಹಣವನ್ನ ಬಿಜೆಪಿಯವರು ಲೂಟಿ ಮಾಡಿದ್ದಾರೆ. ನೀವು ಕಟ್ಟುವ ತೆರಿಗೆ ಹಣ ಲೂಟಿ ಆಗದಂತೆ ಕಾಪಾಡುತ್ತೇನೆ. ಈ ಬಾರಿ ಸ್ವತಂತ್ರವಾಗಿ ಕೆಲಸ ಮಾಡಲು ಸ್ಪಷ್ಟ ಬಹುಮತ ಬೇಕು ನಿಮ್ಮ ಆಶೀರ್ವಾದಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಿಖಿಲ್ನನ್ನು ನಿಮ್ಮ ಮಗನಂತೆ ಬೆಳಸಿ
ಅನಿತಾರವರು ನಿಖಿಲ್ ಕುಮಾರಸ್ವಾಮಿ ಅವರನ್ನ ರಾಮನಗರ ಜನತಾದಳ ಸ್ಫರ್ಧಿ ಅಂತ ಘೋಷಣೆ ಮಾಡಿದ್ದಾರೆ. ನನ್ನ ಅನುಮತಿ ಪಡೆಯದೇ ಟಿಕೆಟ್ ಘೋಷಣೆ ಮಾಡಿಬಿಟ್ಟಿದ್ದಾರೆ. ನನ್ನ, ನಮ್ಮ ತಂದೆಯವರಂತೆ ನಿಖಿಲ್ ಅವರನ್ನ ನಿಮ್ಮ ಮನೆ ಮಗನಾಗಿ ಬೆಳೆಸಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಕನಕಪುರ ರಾಜಕೀಯವಾಗಿ ಜನ್ಮ ಕೊಟ್ಟ ಕ್ಷೇತ್ರ
ಕನಕಪುರ ರಾಜಕೀಯವಾಗಿ ಜನ್ಮ ಕೊಟ್ಟ ಕ್ಷೇತ್ರ ಕಳೆದ ಬಾರಿ ಅತಂತ್ರ ಫಲಿತಾಂಶ ಬಂದ ಹಿನ್ನೆಲೆ ರೈತರ ಸಾಲಮನ್ನಾ ಮಾಡಲು ಹೋಗಿ ನೋವು ಅನುಭವಿಸಿದ್ದೇನೆ. ನಿಷ್ಠಾವಂತ ಕಾರ್ಯಕರ್ತರೆಂದರೆ ಕನಕಪುರದ ಜನರು, ನಾನು ಯಾವುದೇ ಕಾರಣಕ್ಕೂ ಎಲ್ಲೂ ರಾಜಿ ಆಗೋದಿಲ್ಲ, ರೈತರಿಗೆ ಅನುಕೂಲವಾಗಲಿ ಎಂದು ಸರ್ಕಾರ ರಚನೆಯಲ್ಲಿ ಭಾಗಿಯಾಗಿದ್ದೆ. ನಾನು ಎಂದು ಯಾರಿಗೂ ರಾಜಿ ಆಗೋದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಾತನೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ನಾನು ಅಲ್ಲಿ ಸೋತಿದ್ದೆ, ಕನಕಪುರದಲ್ಲಿ ನಿಷ್ಠಾವಂತ ಹೋರಾಟ ಮಾಡಿಕೊಂಡು ಬಂದಂತಹ ಕಾರ್ಯಕರ್ತರಿದ್ದಾರೆ. ನಿಮ್ಮನ್ನ ನಾನು ಎಂದಿಗೂ ಬಿಡುವ ಪ್ರಶ್ನೆಯೇ ಇಲ್ಲ. ನೀವು ಒಂದೇ ಒಂದು ದಿನ ನನ್ನ ಬಳಿ ದುಡ್ಡು ಕೇಳಿಲ್ಲ. ಕಾರ್ಯಕ್ರಮಕ್ಕೆ ನೀವು ಬಂದರೆ ಸಾಕು ನಾವೇ ಚಂದಾ ವಸೂಲಿ ಮಾಡಿ ಕಾರ್ಯಕ್ರಮ ಮಾಡ್ತಿವಿ ಎಂದಿದ್ರು.
ರಾಮನಗದ 4 ಕ್ಷೇತ್ರದಲ್ಲೂ ಜೆಡಿಎಸ್ ಗೆಲ್ಲುತ್ತೆ
ನಾಲ್ಕು ವರ್ಷದಿಂದ ನಿಮ್ಮನ್ನು ಸರಿಯಾಗಿ ನೋಡಿಕೊಂಡಿಲ್ಲ. ಇನ್ಮುಂದೆ ತಾಲೂಕಿನಲ್ಲಿ ಪಕ್ಷ ಸಂಘಟನೆ ನಿರಂತರವಾಗಿ ಇರುತ್ತದೆ. ನಾನು ಸದಾ ನಿಮ್ಮ ಜೊತೆ ಇರ್ತೇನೆ. 2008 ರಲ್ಲಿ ನೀವು ಸ್ವಲ್ಪ ಶ್ರಮ ವಹಿಸಿದ್ದರೆ. ಈಗಾಗಲೇ ನಾವು ಗೆಲ್ತಾ ಇರ್ತಿದ್ವಿ. ಮುಂದೆ ಈ ಕ್ಷೇತ್ರ ರಾಮನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ 3 ಜೆಡಿಎಸ್ ಇದೆ. ಮುಂದೆ ಜಿಲ್ಲೆಯ 4 ಕಡೆ ಜನತಾದಳದ ಶಾಸಕರಾಗುತ್ತಾರೆ.ಈ ಕ್ಷೇತ್ರದಲ್ಲಿ ಇನ್ನೂ ಜನತಾದಳ ಬದುಕಿದೆ ಎಂಬುದನ್ನ ನೀವು ತೋರಿಸಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ