ಬೆಂಗಳೂರು (ನ.13): ಕೋಲಾರದಿಂದ (Kolara) ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ (H D Kumaraswamy), ಬಾದಾಮಿಯಲ್ಲೂ ಜಾತಿ ಆಧಾರದಲ್ಲೇ ಸಿದ್ದರಾಮಯ್ಯ ಗೆದ್ದಿರೋದು, ಸಿದ್ದರಾಮಯ್ಯ (Siddaramaiah) 10 ಸಾವಿರ ಮತಗಳಿಂದ ಸೋಲ್ತಿದ್ರು. ನನ್ನಿಂದಲೇ ಸಿದ್ದರಾಮಯ್ಯ ಬಾದಾಮಿಯಲ್ಲಿ (Badami) ಗೆದ್ದಿರೋದು ನಮ್ಮ ಎರಡು ಬಾರಿಯ ತಪ್ಪಿಂದಲೇ ಸಿದ್ದರಾಮಯ್ಯ ಗೆ ಒಳ್ಳೆಯದು ಆಗಿದೆ ಎಂದ ಕುಮಾರಸ್ವಾಮಿ ಹೇಳಿದ್ದಾರೆ. ಸಿದ್ದರಾಮಯ್ಯಗೆ ನಾನು ಎರಡು ಬಾರಿ ಪುನರ್ಜನ್ಮ ಕೊಟ್ಟಿದ್ದೇನೆ. ಅದೇ ನನ್ನಿಂದ ಆದ ದೊಡ್ಡ ತಪ್ಪು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ
ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಕ್ಷೇತ್ರದ ಬಗ್ಗೆ ಲಘುವಾಗಿ ನಾನು ಮಾತಾಡೋಕೆ ಹೋಗಲ್ಲ. ಸಿದ್ದರಾಮಯ್ಯ ಡಿಸಿಎಂ ಆಗಿ ಸಿಎಂ ಆಗಿ ರಾಜ್ಯ ಆಡಳಿತ ನಡೆಸಿದ್ದಾರೆ. ಅವರು ಎಲ್ಲಿ ಬೇಕಾದರೂ ನಿಲ್ಲಬಹುದು ಹಾಗಂತ ನಾವು ಕ್ಷುಲ್ಲಕವಾಗಿ ಮಾತಾಡೋ ಅವಶ್ಯಕತೆ ಇಲ್ಲ. ಅಲ್ಲಿ ಸಿದ್ದರಾಮಯ್ಯ ನಿಲ್ತಾರೋ ಬೇರೆ ಎಲ್ಲಿ ನಿಲ್ತಾರೋ ನಮಗೆ ಬೇಡ ಆದರೆ ಈ ಬಾರಿ ಕೋಲಾರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲೇಬೇಕು ಆ ರೀತಿಯಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮ ಸ್ಟಾಟರ್ಜಿಯಲ್ಲಿ ಬದಲಾವಣೆ ಇಲ್ಲ
ಸಿದ್ದರಾಮಯ್ಯ ಸ್ಪರ್ಧೆಯಿಂದ ನಮ್ಮ ಯಾವುದೇ ಸ್ಟಾಟರ್ಜಿ ಬದಲಾವಣೆ ಆಗಲ್ಲ. ಶ್ರೀನಿವಾಸ್ ಗೌಡರೇ ಸಿದ್ದರಾಮಯ್ಯಗೆ ಮುಳುವಾಗ್ತಾರೆ. ಆ ವ್ಯಕ್ತಿಯ ನಡುವಳಿಕೆಯೇ ಸಿದ್ದರಾಮಯ್ಯ ಗೆ ಮುಳುವಾಗುತ್ತದೆ. ನನ್ನ ಪಕ್ಷದ ಅಭ್ಯರ್ಥಿ ಕೋಲಾರದಲ್ಲಿ ಗೆಲ್ಲಲೇಬೇಕು. ನಮ್ಮ ಅಭ್ಯರ್ಥಿ ಗೆಲ್ಲಿಸಲು ನಾನು ಪ್ರಚಾರ ಮಾಡುವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಕುಮಾರಸ್ವಾಮಿ ಕಿಡಿ
ಕೆಂಪೇಗೌಡರ ಪ್ರತಿಮೆ ನಿಲ್ಲಿಸಿ ಬಿಟ್ರೆ ಒಕ್ಕಲಿಗ ನಾಯಕರು ಆಗಿ ಬಿಡ್ತಾರಾ?ನಾನು ಎರಡು ಕಡೆಗಳಲ್ಲಿ ಪ್ರತಿಮೆ ಅನಾವರಣ ಮಾಡಿ ಬಂದೆ ಹಾಗಂತ ನನ್ನ ಜೊತೆ ಜನರು ಓಡಿ ಬರ್ತಾರಾ? ಪ್ರತಿಮೆ ಅನಾವರಣ ಮಾಡಿರೋದಕ್ಕೂ, ಮುಂದಿನ ಚುನಾವಣೆಗೂ ಬಹಳ ವ್ಯತ್ಯಾಸ ಇದೆ.
ಕೆಂಪೇಗೌಡರ ಕೆರೆ ಕಟ್ಟೆ ನುಂಗಿ ಹಾಕಿದ್ರು
ಪ್ರವಾಹ ಬಂದಾಗ ಸಮಾಜದ ಜನರು ಬೀದಿಗೆ ಬಂದ್ರು, ಜೀವಂತ ಪ್ರತಿಮೆಗಳಿಗೆ ಇವ್ರು ಏನು ಕೊಟ್ಟಿದ್ದಾರೆ? ಒಕ್ಕಲಿಗ ಸಮಾಜಕ್ಕೆ ಬಿಜೆಪಿಯ ಕೊಡುಗೆ ಏನು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕೆಂಪೇಗೌಡ ಹೆಸರಿನಲ್ಲಿ ಲಿಮ್ಕಾ ರೆಕಾರ್ಡ್ ಅಂತಾರಲ್ಲ ಕೆರೆ ಕಟ್ಟೆ ನುಂಗಿ ಹಾಕೋದ್ರಲ್ಲಿ ಯಾವ ಪಕ್ಷ ಮುಂದೆ ಇದೆ? ಕೆಂಪೇಗೌಡರ ಕೆರೆ ಕಟ್ಟೆ ನುಂಗಿ ಹಾಕಿದವರು ಬಿಜೆಪಿಯವರು, ಇವರು ಕೆಂಪೇಗೌಡರಿಗೆ ಗೌರವ ಕೊಡ್ತಾರಾ? ಎಂದು ಬಿಜೆಪಿ ನಾಯಕರ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದ್ರು.
ರಾತ್ರಿ ಆಹ್ವಾನ ಪತ್ರ ಕೊಟ್ರೆ ಯಾರು ಹೋಗ್ತಾರೆ?
ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಕುಮಾರಸ್ವಾಮಿ, ದೇವೇಗೌಡರಿಗೆ ರಾತ್ರಿ ಆಹ್ವಾನ ನೀಡಿದ್ದಾರೆ. ಯಾರೋ ಮನೆ ಹತ್ರ ಬಂದು ಲೆಟರ್ ಕೊಟ್ಟು ಹೋಗಿದ್ದಾರೆ. ರಾತ್ರಿ ಲೆಟರ್ ಕೊಟ್ರೆ ಬೆಳಗ್ಗೆ ಹೋಗೋಕೆ ಆಗುತ್ತಾ? ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿ 10 ದಿನ ಆಗಿದೆ. ಅದರಲ್ಲೂ ದೇವೇಗೌಡರ ಹೆಸರು ಇರಲಿಲ್ಲ. ಮಾಜಿ ಪ್ರಧಾನಿಗಳಿಗೆ ಹೀಗೆ ಮಾಡೋದು ಸರಿನಾ? ಇದು ಶಿಷ್ಟಾಚಾರನಾ? ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: Siddaramaiah: ಕೋಲಾರದಲ್ಲಿ ಮಾಜಿ ಸಿಎಂ ಸ್ಪರ್ಧೆ ಫಿಕ್ಸ್! ಮತ್ತೆ ನಾಮಿನೇಷನ್ ಮಾಡಲು ಬರ್ತಾರಂತೆ ಸಿದ್ದರಾಮಯ್ಯ
ಉದ್ದೇಶ ಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ.ಇದು ಸರ್ಕಾರದ ದುಡ್ಡಿನಲ್ಲಿ ಬಿಜೆಪಿ ಕಾರ್ಯಕ್ರಮ ಮಾಡಿದ್ದಾರೆ.ಮೋದಿ ಅವರು ಡಬಲ್ ಎಂಜಿನ್ ಸರ್ಕಾರ ಅಂತ ಮಾತಾಡಿದ್ರು. ಏನು ದುಡ್ಡು ಲೂಟಿ ಮಾಡೋದು ಡಬಲ್ ಎಂಜಿನ್ನಾ? ಹಣ ಹೊಡೆದುಕೊಂಡು ಹೋಗಿ ದೆಹಲಿಯಲ್ಲಿ ಇಟ್ಟುಕೊಂಡು ಹೋಗೋದಾ ನಿಮ್ಮ ಡಬಲ್ ಎಂಜಿನ್ ಸರ್ಕಾರನಾ? 2006 ರಲ್ಲಿ ಬಿಜೆಪಿಯ ಯಾವುದೇ ನಿರ್ಧಾರಗಳು ರಾಜ್ಯದಲ್ಲಿ ಆಗ್ತಿತ್ತು. ಈಗ ಎಲ್ಲವೂ ದೆಹಲಿಯಲ್ಲಿ ಆಗುತ್ತೆ. ರಾಜ್ಯದ ಜನರ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದ ಕುಮಾರಸ್ವಾಮಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ