Halal Controversy: ಸಿಎಂಗೆ ಗಂಡಸ್ತನವಿದ್ರೆ 'ಹಲಾಲ್​‘ ಬಗ್ಗೆ ಮಾತಾಡಲಿ, ಕಾಂಗ್ರೆಸ್​ನವರಿಗೂ ತಾಕತ್ತಿಲ್ಲ- H.D ಕುಮಾರಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ. ಗಂಡಸ್ತನ ಯಾವ ಯಾವುದಕ್ಕೆ ಬಳಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಗೊತ್ತಿದೆ ಅಂತ ಈಶ್ವರಪ್ಪ ವಾಗ್ದಾಳಿ ನಡೆಸಿದ್ರು.

ಸಿಎಂ ಬಸವರಾಜ್​ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿ

ಸಿಎಂ ಬಸವರಾಜ್​ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿ

  • Share this:
ರಾಮನಗರ (ಮಾ.31): ರಾಜ್ಯದಲ್ಲಿ ಹಲಾಲ್ (CM Basavaraj)​ ಮಾಂಸ ನಿಷೇಧ ಕುರಿತು ಭಾರೀ ಸುದ್ದಿಯಾಗಿದ್ದು, ಹಿಂದೂಗಳು ಯುಗಾದಿ ಹಬ್ಬಕ್ಕೆ ಮುಸ್ಲಿಂರ ಬಳಿ ಮಾಂಸ (Meat) ಖರೀದಿ ಮಾಡ್ಬೇಡಿ ಅಂತ ಹಿಂದೂ ಸಂಘಟನೆಗಳು ಕರೆ ಕೊಟ್ಟಿವೆ. ದೇಶದಲ್ಲಿ ಎಂಥಾ ಸ್ಥಿತಿ ನಿರ್ಮಾಣವಾಗಿದೆ. ಹಿಂದೂ ಸಂಘಟನೆಗಳು ಏನ್​ ಮಾಡ್ತಿವೆ, ಹಿಂದೂ ಪರಿಷತ್, ಭಜರಂಗದಳದವರು ಕಿಡಿಗೇಡಿಗಳು, ಸಮಾಜಘಾತುಕರು ಎಂದು ಹಿಂದೂ ಮುಖಂಡರ (Hindu Leaders) ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇನ್ನು ಸಿಎಂ ವಿರುದ್ಧ ಕೆಂಡಾಮಂಡಲರಾದ ಕುಮಾರಸ್ವಾಮಿ ಸರ್ಕಾರಕ್ಕೆ ಮಾನಮರ್ಯಾದೆ ಇದ್ರೆ, ಸಿಎಂ ಬಸವರಾಜ ಬೊಮ್ಮಾಯಿಗೆ (CM Basavaraj) ಗಂಡಸ್ತನ ಇದ್ದರೆ, ಏನು ಗೊತ್ತಿಲ್ಲದಂತೆ ಮೌನವಾಗಿರಬಾರದು ಎಂದು ಕಿಡಿಕಾರಿದ್ರು.

ಹಿಂದೂ ಸಂಘಟನೆ ವಿರುದ್ಧ HDK ಕಿಡಿ

ಈ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಿಗೆ ರೈತರ ಬದುಕು ಗೊತ್ತಿದೆಯಾ, ನಮ್ಮ ರೈತರು ಕಟ್ ಮಾಡುವ ಮಾಂಸ ಕ್ಲೀನ್ ಮಾಡಲು ಅದೇ ಸಮಾಜದವರೇ ಬರಬೇಕು. ಈಗ ಹಲಾಲ್ - ಜಟ್ಕಾ ಕಟ್ ಅಂತಿದ್ದೀರಲ್ಲ ನಿಮ್ಮ ಜಟ್ಕಾ ಮಾಡೋಕು, ಇನ್ನೊಂದು ಮಾಡೋಕು ಅವರೇಬೇಕು  ಎಂದು ಕಿಡಿಕಾರಿದ್ರು.  ರೇಷ್ಮೆ, ಮಾವು ಬೆಳೆ ಮಾರಾಟಕ್ಕೆ ಈ ಪೋಲಿಗಳು ಬರ್ತಾವಾ, ಅಕಾಲಿಕ ಮಳೆಯಿಂದಾಗಿ ಮಾವು ನಷ್ಟವಾಗಿದೆ. ಅದನ್ನ ಖರೀದಿ ಮಾಡಲು ಆ ಸಮಾಜದವರೇ ಬರಬೇಕು. ಇವರಿಗೇನೂ ಗೊತ್ತಿದೆ, ವಿಶ್ವ ಹಿಂದೂ ಪರಿಷತ್ ನವರು ಭಜರಂಗದಳದವರು  ಇವರ ಹೊಟ್ಟೆಪಾಡಿಗೆ, ದೇಶ ಹಾಳು ಮಾಡೋಕೆ ಇಂತಹ ವಿಚಾರವನ್ನು ದೊಡ್ಡದು ಮಾಡ್ತಿದ್ದಾರೆ.

ನಾನು ಇದಕ್ಕೆಲ್ಲಾ ಕೇರ್ ಮಾಡಲ್ಲ

ಇದಕ್ಕೆಲ್ಲ ನಾನು ಕೇರ್ ಮಾಡುವುದಿಲ್ಲ, ಇಷ್ಟು ವರ್ಷ ಹಲಾಲ್ ತಿಂದಿದ್ದೇವೆ, ಏನಾಗಿದೆ ಚೆನ್ನಾಗಿದ್ದೀವಲ್ಲ, ಈಗ ಹಲಾಲ್ ತಿಂದರೆ ತೊಂದರೆ ಆಗುತ್ತಾ, ಈಗ ನಮ್ಮ ದೇವರು ಮೆಚ್ಚಲ್ವಾ? ನಮ್ಮ ಹಿಂದೂ ದೇವರು ಕನಸಲ್ಲಿ ಬಂದು ಹೇಳಲಿಲ್ಲವಲ್ಲ, ಹಲಾಲ್ ತಿಂದಾಗ  ಹಲವಾರು ವರ್ಷಗಳಿಂದ ಹಲಾಲ್ ನಡೆಯುತ್ತಿದೆ, ಈಗಿನದ್ದಲ್ಲ, ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ಜನ ಸತ್ತರೂ. ಬಿಜೆಪಿ ಸರ್ಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲು ಆಗಲಿಲ್ಲ. ಆಗ ಎಲ್ಲಿದ್ದರೂ ವಿಶ್ವ ಹಿಂದೂ ಪರಿಷತ್ – ಭಜರಂಗದಳದವರು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ನಾಳೆ ತುಮಕೂರಿಗೆ Amit Shah; ಸಿದ್ದಗಂಗಾ ಮಠದಲ್ಲಿ ಸಿದ್ಧತೆ ಪರಿಶೀಲನೆ ನಡೆಸಿದ ಸಿಎಂ

ಸಿಎಂಗೆ ಗಂಡಸ್ತನವಿದ್ರೆ ಹಲಾಲ್​ ಬಗ್ಗೆ ಮಾತಾಡಲಿ

ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೆ, ಸಿಎಂ ಬೊಮ್ಮಾಯಿಗೆ ಗಂಡಸ್ತನ ಇದ್ದರೆ  ಏನು ಗೊತ್ತಿಲ್ಲದಂತೆ ಮೌನವಾಗಿರಬಾರದು, ಅದರ ಅರ್ಥ ಏನು ಸಮಾಜ ಹೊಡೆಯುವ ಶಕ್ತಿಗಳಿಗೆ ಹ್ಯಾಂಡ್ ಬಿಲ್ ಹಂಚುತ್ತಿದ್ದಾರೆ. ಯಾವ ಸಂವಿಧಾನಕ್ಕೆ ಗೌರವಿಸುತ್ತಿದ್ದೀರಿ, ಯಾಕೆ ಅಂಬೇಡ್ಕರ್ ಜಯಂತಿ ಆಚರಿಸುತ್ತೀರಿ ನನಗೆ ಓಟ್ ಮುಖ್ಯವಲ್ಲ, ಈ ನಾಡು ಶಾಂತಿಯಿಂದ ಬದುಕಬೇಕು . ನಾನು ಮೌನವಾಗಿರಲು ಸಾಧ್ಯವಿಲ್ಲ ಕಾಂಗ್ರೆಸ್ ನವರಿಗೆ ಮಾತನಾಡಲು ತಾಕತ್ತಿಲ್ಲ, ಹಿಂದೂಗಳು ಓಟ್ ಹಾಕ್ತಾರೋ ಇಲ್ಲವೋ ಎಂಬ ಭಯ ಉತ್ತರಪ್ರದೇಶದಲ್ಲಿ ನಿಮ್ಮ ಆಟ ಆಡಿಕೊಳ್ಳಿ, ಇಲ್ಲಿ ಬೇಡ ಎಂದು ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.

ಗಂಡಸ್ತನದ ಪ್ರಶ್ನೆಯೇ ಇಲ್ಲಾ

ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತುಮಕೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ಇದರಲ್ಲಿ ಗಂಡಸ್ತನದ ಪ್ರಶ್ನೆಯೇ  ಇಲ್ಲಾ, ನಮ್ಮ ಸರ್ಕಾರ ಯಾವುದೇ ವಿಚಾರವನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸಿದೆ. ಯಾವುದೇ ರೀತಿ ಸಾಮರಸ್ಯ ಕೆಡದಂತೆ, ಶಾಂತಿ ಸುವ್ಯವಸ್ಥೆ ಕಾಪಾಡಿದ್ದೇವೆ. ಈಗ ನಾನು ಕುಮಾರಸ್ವಾಮಿ ಹೇಳಿದಕ್ಕೆಲ್ಲಾ ಉತ್ತರ ಕೊಡೋಕೆ ಆಗಲ್ಲಾ. ನನ್ನ ಕರ್ತವ್ಯ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು. ಅದನ್ನೇ ಮಾಡುತಿದ್ದೇನೆ ಎಂದ್ರು‌.

ಇದನ್ನೂ ಓದಿ: HD Kumaraswamy: ಮಾಧ್ಯಮಗಳ ವಿರುದ್ಧ ಗರಂ ಆಗಿದ್ದೇಕೆ ಎಚ್‌.ಡಿ ಕುಮಾರಸ್ವಾಮಿ? ಮಾಜಿ ಸಿಎಂ ಆರೋಪವೇನು ಗೊತ್ತಾ?

‘ಗಂಡಸ್ತನ ಯಾವುದಕ್ಕೆ ಬಳಸಬೇಕು ಅವ್ರಿಗೆ ಗೊತ್ತಿದೆ’

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ. ಗಂಡಸ್ತನ ಯಾವ ಯಾವುದಕ್ಕೆ ಬಳಸಬೇಕು ಎಂದು ಕುಮಾರಸ್ವಾಮಿಗೆ ಗೊತ್ತಿದೆ. ಒಂದು ಕಡೆ ಬಳಸಬೇಕೋ, ಎರಡು ಕಡೆ ಬಳಸಬೇಕೋ, ಮೂರು ಕಡೆ ಬಳಸಬೇಕೋ ಎಂಬುದು ಅವ್ರು ಗೆ ಗೊತ್ತು. ಆದರೆ ಒಬ್ರು ಮುಖ್ಯಮಂತ್ರಿ ಯಾಗಿದ್ದವರು, ಮತ್ತೊಬ್ಬ ಮುಖ್ಯಮಂತ್ರಿ ಗಂಡಸ್ತನ ಬಗ್ಗೆ ಪ್ರಶ್ನೆ ಮಾಡೋದು ಸರಿಯಲ್ಲ ಅಂತ ಈಶ್ವರಪ್ಪ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಶಾಸಕ ಅಭಯ ಪಾಟೀಲ್ ಸಹ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.  ಮುಖ್ಯಮಂತ್ರಿ ಬಗ್ಗೆ ಈ ರೀತಿ ಮಾತನಾಡೋದು ಘನತೆ, ಗೌರವ ಅಲ್ಲ. ಯಾರನ್ನು ಮೆಚ್ಚಿಸಲು ಈ ರೀತಿ ಮಾತನಾಡಬಾರದು ಎಂದು ಹೇಳಿದ್ದಾರೆ.
Published by:Pavana HS
First published: