Jagadish Shettar: ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಗ್ತಾರಾ? ಶೆಟ್ಟರ್ ಹೇಳಿದ್ದು ಹೀಗೆ

ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್​ದಲ್ಲಿ ಏನು ಆಗಿಲ್ಲಾ ಅಂತಾರೆ. ಹಾಗಿದ್ದರೆ ನೀವು ಹೆದರುತ್ತೀರಿ ಯಾಕೆ ಎಂದು ಪ್ರಶ್ನಿಸಿದ ಶೆಟ್ಟರ್, ಕೋರ್ಟ್ ಕಛೇರಿ ಇವೆ ಹೋರಾಟ ಮಾಡಲಿ. ಅದನ್ನೆಲ್ಲ ಬಿಟ್ಟು ರಾಜಕೀಯಕ್ಕಾಗಿ ಕುಂಟು ನೆಪ ಹುಡುಕುವುದು ಬೇಡ ಎಂದರು.

ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿಗಳು

ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿಗಳು

  • Share this:
ಹುಬ್ಬಳ್ಳಿ – ದಾವಣಗೆರೆಯಲ್ಲಿ (Davanagere) ಮಾಡಿದ ಸಿದ್ದರಾಮೋತ್ಸವದಿಂದ (Siddarmotsava) ಕಾಂಗ್ರೆಸ್​ಗೆ (Congress) ಸೈಡ್ ಎಫೆಕ್ಟ್ ಆಗಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಭವಿಷ್ಯ ನುಡಿದಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಸಿದ್ದರಾಮೋತ್ಸವ ಮಾಡಿದ್ದು ಬಿಜೆಪಿಗೆ (BJP) ಏನು ವ್ಯತ್ಯಾಸ ಆಗಲ್ಲ. ಅದರೆ ಕಾಂಗ್ರೆಸ್​ಗೆ ಸೈಡ್ ಎಫೆಕ್ಟ್ ಆಗುತ್ತದೆ. ಬಿಜೆಪಿಗೆ ಏನು ತೊಂದರೆ ಆಗುವುದಿಲ್ಲ. ಈ ಹಿಂದೆ ಸಿದ್ದರಾಮೋತ್ಸವದಂತಹ ಸಮಾವೇಶಗಳು, ಕಾರ್ಯಕ್ರಮಗಳು (Programme) ಆಗಿ ಹೋಗಿವೆ. ಅವುಗಳಿಂದ ಬಿಜೆಪಿಗೆ ಏನು ಬಿಸಿ ತಟ್ಟಿಲ್ಲಾ ಎಂದು ಹೇಳಿದರು.

ಡಿಕೆಶಿ, ಜಮೀರ್ ಹೆದರಬೇಕು ಯಾಕೆ?

ಇಡಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶೆಟ್ಟರ್, ಜಮೀರ್ ಅಹ್ಮದ್ ಮತ್ತು ಡಿಕೆಶಿ ತಪ್ಪು ಮಾಡಿಲ್ಲಾ ಅಂದ್ರೆ ಯಾಕೆ ಹೆದರಬೇಕು. ನೀವು ಸಾಚಾ ಇದ್ರೆ ಕಾನೂನು ಹೋರಾಟ ಮಾಡಿ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್​ದಲ್ಲಿ ಏನು ಆಗಿಲ್ಲಾ ಅಂತಾರೆ. ಹಾಗಿದ್ದರೆ ನೀವು ಹೆದರುತ್ತೀರಿ ಯಾಕೆ ಎಂದು ಪ್ರಶ್ನಿಸಿದ ಶೆಟ್ಟರ್, ಕೋರ್ಟ್ ಕಛೇರಿ ಇವೆ ಹೋರಾಟ ಮಾಡಲಿ. ಅದನ್ನೆಲ್ಲ ಬಿಟ್ಟು ರಾಜಕೀಯಕ್ಕಾಗಿ ಕುಂಟು ನೆಪ ಹುಡುಕುವುದು ಬೇಡ ಎಂದರು.

ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ

ಮಂಗಳೂರು ಹತ್ಯೆ, ಸಿದ್ಧರಾಮೋತ್ಸವದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ಕುರಿತು ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಅವರ ಭೇಟಿಯಿಂದ ಯಾವುದೇ ರಾಜಕೀಯ ಬದಲಾವಣೆಗಳಾಗಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಸುದ್ದಿಯೂ ಊಹಾಪೋಹ.

ಇದನ್ನೂ ಓದಿ:  National Flag: ಬಿಬಿಎಂಪಿಯಿಂದ ದೋಷಪೂರಿತ ತ್ರಿವರ್ಣ ಧ್ವಜ ಹಂಚಿಕೆ; ಎಡವಟ್ಟಿಗೆ ತೇಪೆ ಹಚ್ಚಿದ ಪಾಲಿಕೆ!

ಅಮಿತ್ ಶಾ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಪಕ್ಷದ ಬಗ್ಗೆ ಚರ್ಚೆ ಮಾಡಿ ಹೋಗಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ಲಾಸ್ಟಿಕ್ ನಿಷೇಧದ ವಿಚಾರದಲ್ಲಿ ವ್ಯಾಪಾರಸ್ಥರಿಗೆ ದೌರ್ಜನ್ಯ ಮಾಡಬಾರದು

ಪ್ಲಾಸ್ಟಿಕ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ವ್ಯಾಪಾರಸ್ಥರಿಗೆ ಯಾವುದೇ ರೀತಿಯ ದೌರ್ಜನ್ಯ ಮಾಡಬಾರದು. ಏಕೆಂದರೆ ಈಗ ತಾನೇ ಕೊರೋನಾ ದಿಂದ ವ್ಯಾಪಾರಿಗಳು ಸುಧಾರಣೆ ಯಾಗುತ್ತಿದ್ದಾರೆಂದು ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಸುವ ಕಂಪನಿಗಳನ್ನು ಬ್ಯಾನ್ ಮಾಡಿ. ಜನರಲ್ಲಿ ಜಾಗೃತಿ ಅವಶ್ಯಕವಾಗಿದೆ. ಸಮಯ ನಿಗದಿ ಮಾಡಿದರೆ ಅಷ್ಟರಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಬ್ಯಾನ್ ಮಾಡುವ ತೀರ್ಮಾನವನ್ನು ಸ್ವತಃ ಪಡೆಯಬೇಕು.

ಬೇರೆ ರಾಜ್ಯದಿಂದ‌ ಬರುವ ಪ್ಲಾಸ್ಟಿಕ್ ಬಳಸಬೇಡಿ. ಅಧಿಕಾರಿಗಳು ಮೂಲ ಪ್ಲಾಸ್ಟಿಕ್ ಬಳಕೆ ಮಾಡುವರನ್ನು ಹಿಡಿದು ದಂಡ ಹಾಕಿ. ಆದರೆ ಸಣ್ಣ ವ್ಯಾಪಾರಿಗಳಿಗೆ ಹಾಗೂ ಹೋಟೆಲ್ ಮೇಲೆ ಹೊರೆ ಮಾಡಬೇಡಿ ಎಂದು ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪ್ಲಾಸ್ಟಿಕ್ ನಿಷೇಧದ ಕುರಿತು ಸಭೆ

ರಾಜ್ಯದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಗೊಳಿಸಿರೋ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ ಸಭಾ ಭವನದಲ್ಲಿ ಸಭೆ ನಡೆಸಲಾಯಿತು. ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ನೇತೃತ್ವದಲ್ಲಿ ಸಭೆ ನಡೆಯಿತು. ಪ್ಲಾಸ್ಟಿಕ್ ಸಂಪೂರ್ಣ ನಿಷೇಧಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಇದನ್ನೂ ಓದಿ:  Kodagu Rains: ವರುಣಾರ್ಭಟ; ಕಾವೇರಿಯ ರುದ್ರ ಪ್ರತಾಪ, ಸಂಪರ್ಕ ಕಡಿತ, ಮನೆ ಕುಸಿತ , ಜನಜೀವನ ಅಸ್ತವ್ಯಸ್ತ

ಅವಳಿ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಇದನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ, ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಉಪ ಮೇಯರ್ ಉಮಾ ಮುಕುಂದ, ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು
Published by:Mahmadrafik K
First published: