• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Jagadish Shettar: ಕಾಂಗ್ರೆಸ್ ಬಾವುಟ ಹಿಡಿದ ಮಾಜಿ ಸಿಎಂ; ಶೆಟ್ಟರ್ ಹಾಕಿದ 'ಪಂಚ' ಷರತ್ತುಗಳೇನು?

Jagadish Shettar: ಕಾಂಗ್ರೆಸ್ ಬಾವುಟ ಹಿಡಿದ ಮಾಜಿ ಸಿಎಂ; ಶೆಟ್ಟರ್ ಹಾಕಿದ 'ಪಂಚ' ಷರತ್ತುಗಳೇನು?

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ಜಗದೀಶ್ ಶೆಟ್ಟರ್, ಮಾಜಿ ಸಿಎಂ

Operation Congress: ಬಿಜೆಪಿಯಿಂದ ಹೊರ ಬಂದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

  • News18 Kannada
  • 4-MIN READ
  • Last Updated :
  • Karnataka, India
  • Share this:

ಬೆಂಗಳೂರು: ಟಿಕೆಟ್ ಸಿಗದ ಹಿನ್ನೆಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಇಂದು ಅಧಿಕೃತವಾಗಿ ಕಾಂಗ್ರೆಸ್ (Congress) ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, (Congress President Mallikarjun Kharge), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar), ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ನೇತೃತ್ವದಲ್ಲಿ ಶೆಟ್ಟರ್ ಕಾಂಗ್ರೆಸ್ ಬಾವುಟ ಹಿಡಿದರು. ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ನಾಯಕರ ಜೊತೆ ಸುದೀರ್ಘ ಎರಡು ಗಂಟೆ ಚರ್ಚೆ ನಡೆಸಿದ್ದರು. ಪಕ್ಷ ಸೇರ್ಪಡೆಗೆ ಶೆಟ್ಟರ್​ ಹಾಕಿದ್ದ ಷರತ್ತುಗಳನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ ಎನ್ನಲಾಗಿದೆ.


ಜಗದೀಶ್ ಶೆಟ್ಟರ್ ಧಾರವಾಡ-ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್​ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇತ್ತ ಜಗದೀಶ್ ಶೆಟ್ಟರ್ ವಿರುದ್ಧ ಬಿಜೆಪಿಯಿಂದ ಮಹೇಶ್ ಟೆಂಗಿನಕಾಯಿ (Mahesh Tenginkai) ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ.


ಮಾಜಿ ಸಚಿವ ಎಂಬಿ ಪಾಟೀಲ್ ಜೊತೆ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದರು. ಕೆಪಿಸಿಸಿ ಕಚೇರಿ ಮುಂದೆ ಮಾತನಾಡಿದ ಡಿಕೆ ಶಿವಕುಮಾರ್ ನಗುತ್ತಲೇ ಶೆಟ್ಟರಾ ಬಂದ್ರಾ ಎಂದು ಮಾಧ್ಯಮದವರನ್ನೇ ಕೇಳಿದರು.


ಕಾಂಗ್ರೆಸ್ ನಾಯಕರ ಜೊತೆ ಜಗದೀಶ್ ಶೆಟ್ಟರ್ ಸಭೆ


ಯಾವುದೇ ಆಫರ್ ನೀಡಿಲ್ಲ ಎಂದ ಡಿಕೆಶಿ


ನಾವು ಯಾವುದೇ ಆಫರ್​ಗಳನ್ನು ನೀಡಿಲ್ಲ. ಕಾಂಗ್ರೆಸ್ ತತ್ವ ಸಿದ್ದಾಂತಗಳನ್ನು ಒಪ್ಪಿ ಶೆಟ್ಟರ್​ ಪಕ್ಷಕ್ಕೆ ಬಂದಿದ್ದಾರೆ. ಬಿಜೆಪಿಯಲ್ಲಿ ಹಿರಿಯ ನಾಯಕರಾದ ಯಡಿಯೂರಪ್ಪ, ಶೆಟ್ಟರ್, ಸವದಿ ಅವರನ್ನು ಕಡೆಗಣನೆ ಮಾಡಲಾಗ್ತಿದೆ ಎಂದು ಹೇಳಿದರು.


ನಮ್ಮಲ್ಲಿ ಚೇರ್​​ಗಳಿಲ್ಲ 


ಬಿಜೆಪಿಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಆದವರು ತುಂಬಾ ಜನರು ಬರುತ್ತಿದ್ದಾರೆ. ಆದ್ರೆ ನಮ್ಮಲ್ಲಿ ಚೇರ್​ಗಳಿಲ್ಲ. ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಕಡೆಗಣನೆ ಮಾಡಲಾಗುತ್ತಿದೆ. ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಸಂಪೂರ್ಣವಾಗಿ ಮಾತನಾಡುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.


ಇನ್ನು ಕೆಪಿಸಿಸಿ ಕಚೇರಿಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೊದಲು ಪಕ್ಷಕ್ಕೆ ಸೇರ್ಪಡೆ ಆಗಲಿ ನೋಡೋಣ ಎಂದು ಹೇಳಿದರು.


ಕಾಂಗ್ರೆಸ್ ನಾಯಕರ ಜೊತೆ ಜಗದೀಶ್ ಶೆಟ್ಟರ್ ಸಭೆ


ಶೆಟ್ಟರ್​ ಹಾಕಿದ ಷರತ್ತುಗಳೇನು?


1.ಕಾಂಗ್ರೆಸ್​​​​​ನಲ್ಲಿ ನನ್ನ ಘನತೆಗೆ ಧಕ್ಕೆ ಆಗಬಾರದು?
2.ಕಾಂಗ್ರೆಸ್​​ ಪಕ್ಷದ ಘನತೆಗೂ ನಾನು ಧಕ್ಕೆ ತರಲ್ಲ?
3.ಹುಬ್ಬಳ್ಳಿ ವಿಚಾರದಲ್ಲಿ ನನ್ನ ನಿರ್ಧಾರಕ್ಕೆ ಗೌರವಿಸಬೇಕು?
4.ನನ್ನ ಆಪ್ತರು ಬರ್ತಾರೆ ಅವರಿಗೂ ಸ್ಥಾನಮಾನ ಸಿಗಬೇಕು?
5.ಪಕ್ಷ ಅಧಿಕಾರಕ್ಕೆ ಬಂದ್ರೆ ನನ್ನ ಗೌರವಕ್ಕೆ ತಕ್ಕ ಹುದ್ದೆ ನೀಡಬೇಕು?


ಇದನ್ನೂ ಓದಿ: Karnataka Election 2023: ಸಿಎಂ, ಸಚಿವರು, ಶಾಸಕರನ್ನು ಬದಲಾಯಿಸೋ ಧೈರ್ಯ ಮೋದಿಗೆ ಮಾತ್ರ ಇದೆ -ಬಸವರಾಜ ಬೊಮ್ಮಾಯಿ


ನಾವು ಅವರ ಜೊತೆ ಸಂಪರ್ಕದಲ್ಲಿ ಇಲ್ಲ


ಜಗದೀಶ್ ಶೆಟ್ಟರ್ ಜೆಡಿಎಸ್ ಸೇರ್ತಾರಾ ಎಂಬ ಪ್ರಶ್ನೆಗೆ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.




ನಮ್ಮದು ಕಾರ್ಯಕರ್ತರ ಸಣ್ಣ ಪಕ್ಷ. ಅಂತಹ ದೊಡ್ಡ ನಾಯಕರನ್ನ ಆಹ್ವಾನ ಕೊಟ್ಟು ಕರೆಯುವ ಮಟ್ಟಕ್ಕೆ ನಮ್ಮ ಪಕ್ಷ ಇಲ್ಲ. ನಾವು ಅವರ ಜೊತೆ ಸಂಪರ್ಕದಲ್ಲಿಯೂ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

First published: