HD Kumarswamy: ಬೆಳಗಾವಿ ಮರಾಠಿಗರದ್ದಲ್ಲ, ವೀರ ಕನ್ನಡಿಗರದ್ದು: ಠಾಕ್ರೆಗೆ ಎಚ್​ಡಿ ಕುಮಾರಸ್ವಾಮಿ ತಿರುಗೇಟು

ಬೆಳಗಾವಿಯ ಸುವರ್ಣಸೌಧ, ಕೇವಲ ಶಕ್ತಿಸೌಧವಲ್ಲ. ಅದು ಮಹಾರಾಷ್ಟ್ರದ ವಿಸ್ತರಣಾವಾದವನ್ನು ವಿರೋಧಿಸಲು ನಿಂತಿರುವ ಕನ್ನಡಿಗರ ಸ್ವಾಭಿಮಾನಿ ಸೌಧ

ಹೆಚ್.ಡಿ. ಕುಮಾರಸ್ವಾಮಿ

ಹೆಚ್.ಡಿ. ಕುಮಾರಸ್ವಾಮಿ

  • Share this:
     ಬೆಂಗಳೂರು (ಜ. 27): ಬೆಳಗಾವಿ ಮರಾಠಿಗರದ್ದಲ್ಲ. ಅದು ವೀರ ಕನ್ನಡಿಗರದ್ದು ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಗೆ ತಿರುಗೇಟು ನೀಡಿದ್ದಾರೆ. ಮರಾಠಿ ಮಾತನಾಡುವ ಕರ್ನಾಟಕದ ಗಡಿ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಉದ್ಧವ್​ ಠಾಕ್ರೆ ಆಗ್ರಹಿಸಿದ್ದರು. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಇನ್ನು ಸುಪ್ರೀಂಕೋರ್ಟ್​ನಲ್ಲಿರುವಾಗಲೇ ಬೆಳಗಾವಿಯಲ್ಲಿ ವಿಧಾನಸೌಧ ನಿರ್ಮಿಸಿ, ಬೆಳಗಾಂ ಹೆಸರು ಬದಲಾಯಿಸಲಾಗಿದೆ. ಇದು ನ್ಯಾಯಾಂಗ ನಿಂದನೆ. ನಮ್ಮ ಪ್ರದೇಶವನ್ನು ಗೆಲ್ಲುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಠಾಕ್ರೆ ತಿಳಿಸಿದ್ದರು. ಠಾಕ್ರೆಯ ಈ ಮಾತುಗಳಿಗೆ ಸರಣಿ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಎಚ್​ಡಿಕೆ, ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷ ಬೆಳಗಾವಿ ವಿಚಾರದಲ್ಲಿ ಸುಖಾ ಸುಮ್ಮನೆ ವಿವಾದ ಸೃಷ್ಟಿಸುತ್ತಿದ್ದರಿಂದಲೇ ನನ್ನ ಸರ್ಕಾರದ ಅವಧಿಯಲ್ಲಿ ಅಲ್ಲಿ ವಿಧಾನಸೌಧ ನಿರ್ಮಿಸಿ, ಅಧಿವೇಶನ ನಡೆಸಿದೆವು ಎಂದಿದ್ದಾರೆ.



    ಬೆಳಗಾವಿಯ ಸುವರ್ಣಸೌಧ, ಕೇವಲ ಶಕ್ತಿಸೌಧವಲ್ಲ. ಅದು ಮಹಾರಾಷ್ಟ್ರದ ವಿಸ್ತರಣಾವಾದವನ್ನು ವಿರೋಧಿಸಲು ನಿಂತಿರುವ ಕನ್ನಡಿಗರ ಸ್ವಾಭಿಮಾನಿ ಸೌಧ ಎಂದಿದ್ದಾರೆ



    ಬೆಳಗಾವಿ ನಮ್ಮದು ಎನ್ನುತ್ತಿರುವ ಮಹಾರಾಷ್ಟ್ರ ಈ ಹಿಂದೆ ಕೂಡ ಇದೇ ರೀತಿ ಗಡಿ ಕ್ಯಾತೆ ತೆಗೆದು ಸಮಿತಿ ರಚನೆ ಮಾಡಲು ಪಟ್ಟು ಹಿಡಿದಿತು. ಆಗ ರಚನೆಯಾಗಿದ್ದೆ ಮಹಾಜನ ಸಮಿತಿ. ಈ ಸಮಿತಿ ಕೂಡ ಬೆಳಗಾವಿ ಕರ್ನಾಟಕದ್ದೇ ಎಂದು ಸ್ಪಷ್ಟವಾಗಿ ತಿಳಿಸಿದೆ, ಇದನ್ನು ಒಪ್ಪದ ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯದಲ್ಲಿರುವ ಪ್ರಕರಣವೊಂದರ ಬಗ್ಗೆ ಇಲ್ಲ ಸಲ್ಲದ್ದನ್ನು ಮಾತಾಡುತ್ತಿರುವ ಉದ್ಧವ ಠಾಕ್ರೆ, ವಿಚಾರಣೆಯ ದಿಕ್ಕನ್ನೇ ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

    ಇದನ್ನು ಓದಿ: ಮತ್ತೆ ಗಡಿ ಕ್ಯಾತೆ ತೆಗೆದ ಠಾಕ್ರೆ; ಕರ್ನಾಟಕ ಗಡಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ಎಂದ ಮಹಾ ಸಿಎಂ

    ಅಕ್ಕಪಕ್ಕದ ರಾಜ್ಯದ ಮರಾಠಿ-ಕನ್ನಡಿಗರು ಅಣ್ಣ-ತಮ್ಮಂದಿರಂತೆ ಸೌಹರ್ದದಿಂದ ಇರಬೇಕು. ಗಡಿ ಪ್ರದೇಶಗಳು ಎರಡು ಭಾಷೆಗಳ ಸಂಗಮ .ಅದನ್ನೇ ಬಳಸಿಕೊಂಡು ಈ ರೀತಿ ದ್ವೇಷ ಬಿತ್ತುವ ಕೆಲಸ ಮಾಡಬಾರದು ಎಂದು ಎಚ್ಚರಿಸಿದ್ದಾರೆ.



    ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಉದ್ಧವ್​ ಠಾಕ್ರೆ ಮೊದಲು ಇತಿಹಾಸ ಓದಲಿ. ಅದರಲ್ಲಿ ಮಹಾರಾಷ್ಟ್ರ ಕೂಡ ಕನ್ನಡದ ರಾಜರಿಂದಲೇ ಆಳಲ್ಪಟ್ಟಿತು ಎಂಬ ಸಂಗತಿ ಅವರಿಗೆ ತಿಳಿಯಲಿದೆ. ಇದಕ್ಕಾಗಿ ಚರಿತ್ರೆ ಓದಬೇಕು ಎಂದು ಸಲಹೆ ನೀಡಿದ್ದಾರೆ.

    ಪದೇ ಪದೇ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವ ಉದ್ಧವ್​ ಠಾಕ್ರೆಗೆ ಬೆಳಗಾವಿ ನಮ್ಮದು ಎಂಬುದನ್ನು ಮನದಟ್ಟು ಮಾಡುಬ ಕಾರ್ಯ ನಡೆಸಬೇಕಾಗಿದೆ. ಈ ಹಿಂದೆ ಶಿವಸೇನೆಯೊಂದಿಗೆ ಅಧಿಕಾರ ಹಂಚಿಕೊಂಡಿದ್ದ ಕಾಂಗ್ರೆಸ್​ ಈ ಕೆಲಸ ಮಾಡಬೇಕು. ರಾಜ್ಯ ಕಾಂಗ್ರೆಸ್​ ನಾಯಕರು ಕೂಡ ಈ ಕಾರ್ಯಕ್ಕೆ ಮುಂದಾಗಬೇಕು. ಸದಾ ಗಡಿ ವಿಚಾರದಲ್ಲಿ ವಿವಾದ ಹುಟ್ಟುಹಾಕುತ್ತಿರುವ ಅವರ ಭ್ರಮೆಗೆ ಚಿಕಿತ್ಸೆ ಕೊಡಿಸಬೇಕು ಎಂದಿದ್ದಾರೆ.
    Published by:Seema R
    First published: