• Home
 • »
 • News
 • »
 • state
 • »
 • ಎಚ್​​ಡಿಕೆ, ಪ್ರಕಾಶ್​​​ ರಾಜ್​​​, ನಿಜಗುಣಾನಂದ ಸ್ವಾಮಿ ಸೇರಿದಂತೆ 15 ಮಂದಿಗೆ ಕೊಲೆ ಬೆದರಿಕೆ

ಎಚ್​​ಡಿಕೆ, ಪ್ರಕಾಶ್​​​ ರಾಜ್​​​, ನಿಜಗುಣಾನಂದ ಸ್ವಾಮಿ ಸೇರಿದಂತೆ 15 ಮಂದಿಗೆ ಕೊಲೆ ಬೆದರಿಕೆ

ಮಾಜಿ ಸಿಎಂ ಎಚ್​​ಡಿಕೆ, ಪ್ರಕಾಶ್​ ರಾಜ್​​​, ನಿಜಗುಣಾನಂದ ಸ್ವಾಮೀಜಿ

ಮಾಜಿ ಸಿಎಂ ಎಚ್​​ಡಿಕೆ, ಪ್ರಕಾಶ್​ ರಾಜ್​​​, ನಿಜಗುಣಾನಂದ ಸ್ವಾಮೀಜಿ

ದಾವಣಗೆರೆಯಿಂದ ಈ ಅನಾಮಧೇಯ ಪೋಸ್ಟ್‌ ಬೆಳಗಾವಿಯ ಬೈಲೂರು ಮಠಕ್ಕೆ ಬಂದಿದೆ. ಸದ್ಯ ನಿಜಗುಣಾನಂದ ಸ್ವಾಮಿಗಳು ಈ ಬಗ್ಗೆ ಜೇವರ್ಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 • Share this:

  ಬೆಂಗಳೂರು(ಜ.24): ಬೆಳಗಾವಿಯ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಹಲವು ಪ್ರಗತಿಪರರಿಗೆ ಕೊಲೆ ಬೆದರಿಕೆ ಬಂದಿದೆ. "ನಿಮ್ಮನ್ನು ಈ ತಿಂಗಳಾಂತ್ಯಕ್ಕೆ 29ನೇ ತಾರೀಕಿನಂದು ಸಂಹಾರ ಮಾಡುತ್ತೇವೆ" ಎಂದು ದಾವಣೆಗೆರೆಯಿಂದ ಅಪರಿಚಿತ ವ್ಯಕ್ತಿಯೋರ್ವ ನಿಜಗುಣಾನಂದ ಸ್ವಾಮೀಜಿ ಬೇಲೂರು ಮಠಕ್ಕೆ ಕೊಲೆ ಬೆದರಿಕೆ ಪತ್ರ ರವಾನಿಸಿದ್ದಾನೆ ಎನ್ನಲಾಗುತ್ತಿದೆ.


  ನಿಜಗುಣಾನಂದ ಸ್ವಾಮೀಜಿ ಜೊತೆಗೆ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಮತ್ತು ನಟ ಪ್ರಕಾಶ್​​ ರಾಜ್​​ ಸೇರಿದಂತೆ ಹಲವರನ್ನು ಸಂಹಾರ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಇವರ ಜತೆಗೆ ಬಜರಂಗದಳದ ಮಾಜಿ ನಾಯಕ ಮಹೇಂದ್ರ ಕುಮಾರ್‌, ನಿಡುಮಾಮಿಡಿ ಶ್ರೀ ಮಠದ ವೀರಭದ್ರ ಸ್ವಾಮೀಜಿ, ನಟ ಚೇತನ್​​ ಕುಮಾರ್​​, ಬಿ.ಟಿ ಲಲಿತಾ ನಾಯಕ್​​, ಮಹೇಶ್​​ ಚಂದ್ರಗುರು, ಪ್ರೊ. ಭಗವಾನ್‌, ಮಾಜಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್​​ ಅಮಿನ್‌ ಮಟ್ಟು, ಪತ್ರಕರ್ತ ಅಗ್ನಿ ಶ್ರೀಧರ್‌, ಬೃಂದಾ ಕಾರಟ್‌ ಸೇರಿದಂತೆ 15 ಜನರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.


  ದಾವಣಗೆರೆಯಿಂದ ಈ ಅನಾಮಧೇಯ ಪೋಸ್ಟ್‌ ಬೆಳಗಾವಿಯ ಬೈಲೂರು ಮಠಕ್ಕೆ ಬಂದಿದೆ. ಸದ್ಯ ನಿಜಗುಣಾನಂದ ಸ್ವಾಮಿಗಳು ಈ ಬಗ್ಗೆ ಜೇವರ್ಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


  ಇದನ್ನೂ ಓದಿ: ಪತ್ಥಲ್​ಗಡ್ ಹೋರಾಟದ ಉಗ್ರಾವತಾರ: ಆದೇಶ ಮೀರಿದವರ ದಮನ; ಹತ್ಯೆಯಾದವರ ಸಂಖ್ಯೆ ಏಳಕ್ಕಿಂತಲೂ ಹೆಚ್ಚು


  ಇನ್ನು ಹಲವು ವರ್ಷಗಳಿಂದ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುತ್ತಿದ್ದೇನೆ. ಮೂಢನಂಬಿಕೆ, ಕಂದಚಾರದಲ್ಲಿ ತೊಡಗದಂತೆ ಜಾಗೃತಿ ಮೂಡಿಸುತ್ತಿದ್ದೇನೆ. ಇದನ್ನು ಬಲಪಂಥೀಯ ಶಕ್ತಿಗಳು ಸಹಿಸುತ್ತಿಲ್ಲ. ಹಾಗಾಗಿಯೇ ನನ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ಧಾರೆ. ಯಾರ ಬೆದರಿಕೆಗೂ ನಾನು ಬಗ್ಗಲ್ಲ ಎಂದರು ಸ್ವಾಮೀಜಿ.


  ಇನ್ನು, ಕೊಲೆ ಬೆದರಿಕೆ ಪಟ್ಟಿಯಲ್ಲಿರುವ ಅನೇಕರು ಪ್ರಗತಿಪರ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಜಾರಿಯಾದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ(ಎನ್​​ಆರ್​ಸಿ) ವಿರುದ್ಧ ಹಲವರು ಬಹಿರಂಗವಾಗಿ ಮಾತಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿ ಸೇರಿದಂತೆ ನಟ ಪ್ರಕಾಶ್​ ರಾಜ್​ ಕೂಡ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರುತ್ತಲೇ ಇದ್ದಾರೆ. ಹಾಗಾಗಿ ಯಾರೋ ಸೈದ್ದಾಂತಿಕ ಭಿನ್ನಾಭಿಪ್ರಾಯದ ಕಾರಣ ಹೀಗೆ ಕೊಲೆ ಬೆದರಿಕೆ ಹಾಕಲಾಗಿದೆ ಎನ್ನುತ್ತಾರೆ ಯುವ ಹೋರಾಟಗಾರ ರಾಜೇಶ್​​​.

  Published by:Ganesh Nachikethu
  First published: