ಮಾನ ಇದ್ದವರು ಮಾತ್ರ ಮಾನನಷ್ಟ ಮೊಕದ್ದಮೆ ಹಾಕಬೇಕು; ಬಿಎಸ್​ವೈ ಹೇಳಿಕೆಗೆ ಎಚ್​ಡಿಕೆ ತಿರುಗೇಟು

ಬಿಜೆಪಿ ಗೂಂಡಾ ಸಂಸ್ಕೃತಿಯಲ್ಲೆ ಚುನಾವಣೆ ನಡೆಸುತ್ತಿದೆ. ಭಯದ ವಾತಾವರಣ ಹುಟ್ಟಿಸಿ ಜನರನ್ನು ಬೆದರಿಸುತ್ತಿದೆ. ಎರಡು ಕಡೆ ನಮ್ಮ ಅಭ್ಯರ್ಥಿಗಳ ನಾಮಪತ್ರದ ವಾಪಸ್ ಪಡೆಯಲು ಇದೇ ಕಾರಣ. ಭಯದ ವಾತಾವರಣ ನಿರ್ಮಾಣ ಮಾಡುವ ಜನರನ್ನೇ ಬಿಎಸ್‌ವೈ ತಮ್ಮ ಹಿಂದೆ ಮುಂದೆ ಇಟ್ಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

HR Ramesh | news18-kannada
Updated:November 28, 2019, 6:28 PM IST
ಮಾನ ಇದ್ದವರು ಮಾತ್ರ ಮಾನನಷ್ಟ ಮೊಕದ್ದಮೆ ಹಾಕಬೇಕು; ಬಿಎಸ್​ವೈ ಹೇಳಿಕೆಗೆ ಎಚ್​ಡಿಕೆ ತಿರುಗೇಟು
ಮಾಜಿ ಸಿಎಂ ಕುಮಾರಸ್ವಾಮಿ
  • Share this:
ಹುಣಸೂರು: ಮಾನನಷ್ಟ ಮೊಕದ್ದಮೆ ಹೂಡುವ ಯಡಿಯೂರಪ್ಪನಿಗೆ ಮಾನ ಇದೇಯಾ? ಮೊಕದ್ದಮೆ ಹೂಡಿದರೆ ಅವರಿಗೆ ಮಂಗಳಾರತಿ ಆಗೋದು.  10 ಕೋಟಿ ಇಲ್ಲಿ, ಇನ್ನತ್ತು ಕೋಟಿ ಮುಂಬೈನಲ್ಲಿ‌ ಕೊಡ್ತಿನಿ ಅಂದಿರೋ ಕ್ಯಾಸೆಟ್‌ ಸಾಕ್ಷಿ ಇದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.

ಹುಣಸೂರಿನಲ್ಲಿ ಮಾತನಾಡಿದ ಎಚ್​ಡಿಕೆ, ನೈಟ್ ಕ್ಲಬ್ ಮಾಡೋರಿಂದ ಹಣ ಪಡೆದು ಮೈತ್ರಿ ಸರ್ಕಾರ ಕೆಡವಿದ್ರು. ಅಂತಹವರು ಯಡಿಯೂರಪ್ಪ ಜೊತೆ ಇರೋದನ್ನು ಸಾಕ್ಷಿ ಇಟ್ಕೊಂಡಿದ್ದೇನೆ.  ಮಾನ ಹೋಗಿರೋದು ಯಡ್ಯೂರಪ್ಪರದ್ದ ಬಿಜೆಪಿದಾ? ಜನರ ಮುಂದೆ ಡ್ರಾಮಾ ಆಡೋಕೆ ಈ ಮಾನನಷ್ಟ ಮೊಕದ್ದಮೆ ಹೇಳಿಕೆ. ಅವತ್ತಿನಿಂದ ಇಲ್ಲದೆ ಇರುವ ಮಾನ ಈಗ ಬಂತಾ. ಯಾರ ಮಾನ ಹೋಗಿದೆ ಅಂತ ಮೊದಲು ಜನರಿಗೆ ಸ್ಪಷ್ಟನೆ ನೀಡಲಿ ಎಂದು ಯಡಿಯೂರಪ್ಪ ಅವರ ಮಾನನಷ್ಟ ಮೊಕದ್ದಮೆ ಹೇಳಿಕೆಗೆ ಮಾಜಿ ಸಿಎಂ ಕುಮಾರ‌ಸ್ವಾಮಿ ತಿರುಗೇಟು ನೀಡಿದರು.

ಗೂಂಡಾಗಳನ್ನು ಹತ್ತಿಕ್ಕುತ್ತೇನೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್​ಡಿಕೆ, ಯಡಿಯೂರಪ್ಪ ಹೇಳಿರುವುದು ಅನರ್ಹ ಗೂಂಡಾ ಶಾಸಕರ ಬಗ್ಗೆಯಾ? ಅಥವಾ ತಮ್ಮ ಸುತ್ತ ಇಟ್ಟುಕೊಂಡಿರುವ ಗೂಂಡಾಗಳ ಬಗ್ಗೆಯಾ ಗೂಂಡಾಗಳನ್ನು ಇಟ್ಟುಕೊಂಡು ಯಡಿಯೂರಪ್ಪ ಚುನಾವಣೆ ಮಾಡುತ್ತಿದ್ದಾರೆ. ಇಂತಹ ಗೂಂಡಾಗಳ ಬೆದರಿಕೆಗೆ ನಮ್ಮ ಕಾರ್ಯಕರ್ತರು ಹೆದರುವುದಿಲ್ಲ ಎಂದರು.

ಮಹಾಲಕ್ಷ್ಮಿ ಲೇಔಟ್​ನಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಧಮ್ಕಿ ವಿಚಾರವಾಗಿ ಮಾತನಾಡಿದ ಎಚ್​ಡಿಕೆ, ಅಲ್ಲಿ ಧಮ್ಕಿ ಹಾಕೋದು ನಿರಂತರವಾಗಿ ನಡೆಯುತಿದೆ. ನಾಳೆ ಅಲ್ಲಿಗೆ ಹೋಗುತ್ತೇನೆ. 3ನೇ ತಾರೀಖಿನವರೆಗೂ ಅಲ್ಲೇ ಇದ್ದು, ಕಾರ್ಯಕರ್ತರಿಗೆ ವಿಶ್ವಾಸ ತುಂಬುತ್ತೇನೆ. ನಮ್ಮ ಕಾರ್ಯಕರ್ತರು ದಮ್ಕಿಗೆ ಹೆದರುವ ಪ್ರಶ್ನೆಯೇ ಇಲ್ಲ. ಆ ಹೇಮಂತ್ ಅನ್ನೋ ವ್ಯಕ್ತಿ ಗಡಿಪಾರು ಮಾಡಬೇಕು. ಅದಕ್ಕೆ ಬೇಕಾದ ಕಾನೂನು ಹೋರಾಟ ಮಾಡ್ತೇವೆ. ಬಿಜೆಪಿ ಗೂಂಡಾ ಸಂಸ್ಕೃತಿಯಲ್ಲೆ ಚುನಾವಣೆ ನಡೆಸುತ್ತಿದೆ. ಭಯದ ವಾತಾವರಣ ಹುಟ್ಟಿಸಿ ಜನರನ್ನು ಬೆದರಿಸುತ್ತಿದೆ. ಎರಡು ಕಡೆ ನಮ್ಮ ಅಭ್ಯರ್ಥಿಗಳ ನಾಮಪತ್ರದ ವಾಪಸ್ ಪಡೆಯಲು ಇದೇ ಕಾರಣ. ಭಯದ ವಾತಾವರಣ ನಿರ್ಮಾಣ ಮಾಡುವ ಜನರನ್ನೇ ಬಿಎಸ್‌ವೈ ತಮ್ಮ ಹಿಂದೆ ಮುಂದೆ ಇಟ್ಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ‘ಡಿಸೆಂಬರ್​​ 9ನೇ ತಾರೀಕು ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ‘; ಕಾಂಗ್ರೆಸ್​ ಟ್ರಬಲ್​​ ಶೂಟರ್​​ ಡಿಕೆ ಶಿವಕುಮಾರ್​​
First published: November 28, 2019, 6:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading