ಯಡಿಯೂರಪ್ಪನವರೇ ನೀವು ಹೋರಾಟದಿಂದ ಬಂದವರು, ಯಾರನ್ನೋ ಮೆಚ್ಚಿಸಲು ಕೆಲಸ ಮಾಡಬೇಡಿ; ಎಚ್​ಡಿಕೆ

ಸದನದಲ್ಲಿ ಮತ್ತೆ ಮಿಣಿ ಮಿಣಿ ಪೌಡರ್ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ ಅವರು, ಮಿಣುಗುವ ವಸ್ತುವನ್ನು ನಾನು ಮಿಣಿಮಿಣಿ ಪೌಡರ್ ಎಂದು ಕರೆದೆ. ಅದನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಲಾಯಿತು. ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪತ್ತೆ ಪ್ರಕರಣ ಕೂಡ ಪೊಲೀಸರ ಸೃಷ್ಟಿ ಎಂದರು.

ಸಿಎಂ ಬಿಎಸ್​ ಯಡಿಯೂರಪ್ಪ ಮತ್ತು ಎಚ್​ಡಿ ಕುಮಾರಸ್ವಾಮಿ

ಸಿಎಂ ಬಿಎಸ್​ ಯಡಿಯೂರಪ್ಪ ಮತ್ತು ಎಚ್​ಡಿ ಕುಮಾರಸ್ವಾಮಿ

  • Share this:
ಬೆಂಗಳೂರು: ಮಂಗಳೂರಿನಲ್ಲಿ ಗಲಭೆ ನಡೆಸಲು ಕೇರಳದಿಂದ 2-3 ದಿನದ ಹಿಂದೆಯೇ ಕೆಲವರು ಬಂದು ಪೂರ್ವ ತಯಾರಿ ಮಾಡಿಸಿದ್ದರು ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ‌. ಇದು ಗೊತ್ತಿದ್ದೂ ಪ್ರತಿಭಟನೆ ನಡೆಸಲು ಪೊಲೀಸರು ಏಕೆ ಅನುಮತಿ ನೀಡಿದರು. ಹೋಗಲಿ ಕೇರಳದಿಂದ ಗಲಭೆ ಎಬ್ಬಿಸಲು ಬಂದಿದ್ದ ಎಷ್ಟು ಜನರನ್ನು ಬಂಧಿಸಲಾಗಿದೆ. ಕೇರಳದಿಂದ ಬಂದಿದ್ದ ಎಷ್ಟು ಜನರು ಗಾಯಗೊಂಡಿದ್ದಾರೆ ಎಂಬುದರ ಮಾಹಿತಿ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಸದನದಲ್ಲಿ ಮಾತನಾಡಿದ ಎಚ್​ಡಿಕೆ ಅವರು, ಮಂಗಳೂರಿನ ಗೋಲಿಬಾರ್​ಗೂ ಮುನ್ನ ಲಾಠಿ ಚಾರ್ಜ್ ಮಾಡಲಾಗಿದೆ. ಲಾಠಿ ಚಾರ್ಜ್ ಬಳಿಕ ರಸ್ತೆಗಳಲ್ಲಿ ಓಡಾಡುತ್ತಿದ್ದವರನ್ನು  ಬಲವಂತವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸರು ಗೃಹ ಸಚಿವರ ಆಣತಿ‌ ಮೇರೆಗೆ ಕೆಲಸ ಮಾಡುತ್ತಿದ್ದರಾ? ಅಥವಾ ಬೇರೆಯವರ ಸೂಚನೆ ಮೇರೆಗೆ ಕೆಲಸ ಮಾಡ್ತಿದ್ರಾ? ಎಂದು ಪ್ರಶ್ನಿಸಿದರು.

ಮಂಗಳೂರು ಗಲಭೆ ಸಮಯದಲ್ಲಿ ಪ್ರತಿಭಟನಾಕಾರರು ಮುಖಕ್ಕೆ ಬಟ್ಟೆಕಟ್ಟಿಕೊಂಡಿದ್ದರು ಎಂದು ಹೇಳುತ್ತಾರೆ. ಅಶ್ರುವಾಯು ಪ್ರಯೋಗ ಅಥವಾ ಗೋಲಿಬಾರ್ ಆದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುವುದು ಸಹಜ‌. ಧೂಳು, ಹೊಗೆಯಿಂದ ರಕ್ಷಣೆ ಪಡೆಯಲು ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕಾಗುತ್ತದೆ. ಅಂದು ಬೆಳಗ್ಗೆ ನಡೆದ ಪ್ರತಿಭಟನೆಯಲ್ಲಿ ಯಾರಾದರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ರಾ.‌ ಹಾಜಿ ರಸ್ತೆಯಲ್ಲಿ ಅಪಾರ್ಟ್​ಮೆಂಟ್ ನಿರ್ಮಾಣ ನಡೆಯುತ್ತಿತ್ತು. ಅದರ ವೇಸ್ಟ್ ಮೆಟೀರಿಯಲ್ ಸಾಗಿಸುತ್ತಿದ್ದ ವ್ಯಕ್ತಿ ಗಲಾಟೆ ಶುರುವಾದ ಕಾರಣ ವಾಹನವನ್ನು ಅಲ್ಲೇ ನಿಲ್ಲಿಸಿ ತೆರಳಿದ್ದ ಹೊರತು ಕಲ್ಲು ತೂರಾಟಕ್ಕೆ ಪೂರೈಕೆ ಮಾಡಲು ತಂದಿದ್ದಲ್ಲ. ಹೋಗಲಿ ಇದುವರೆಗೆ ಆ ವಾಹನವನ್ನು ಯಾಕೆ ಸೀಜ್ ಮಾಡಿಲ್ಲ. ಚಾಲಕನನ್ನು ಏಕೆ ಬಂಧಿಸಿಲ್ಲ ಎಂದು ಹೇಳಿದರು.

ಕೆಲವು ಸಂಘಟನೆಗಳ ಒತ್ತಾಯಕ್ಕೆ ಮಣಿದು ಗೋಲಿಬಾರ್​ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವುದನ್ನು ತಡೆ ಹಿಡಿಯಲಾಗಿದೆ. ಯಡಿಯೂರಪ್ಪನವರೇ, ಯಾವುದೋ ಒಂದು ಸಂಘ, ಸಂಘಟನೆಗಳನ್ನು ಮೆಚ್ಚಿಸಲಿಕ್ಕೆ ನೀವು ಕೆಲಸ ಮಾಡುವಂತಾಗಬಾರದು. ಹೋರಾಟದಿಂದ ಈ ಹಂತಕ್ಕೆ ಬಂದಿದ್ದೀರಿ. ಜನಪರವಾಗಿ ಕೆಲಸ ಮಾಡಿ. ಯಾವುದೋ ಸಂಘಟನೆ ಮೆಚ್ಚಿಸಲು ಕೆಲಸ ಮಾಡಬೇಡಿ. ತಪ್ಪು ಮಾಡಿದ ಇಬ್ಬರು ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಿದ್ರೆ ಸರ್ಕಾರಕ್ಕೆ ಮುಜುಗರ ತಪ್ಪುತ್ತಿತ್ತು. ನೀವು ಸಿಎಂ ಆಗಿರೋದು ಯಾರೋ ಸಂಘಟನೆಗಳ ಕೃಪೆಯಿಂದ ಅಲ್ಲ. ಕಳೆದ ಕೆಲವು ದಿನಗಳಿಂದ ಪಡುತ್ತಿರುವ ಕಷ್ಟ ನಾನು ಗಮನಿಸಿದ್ದೇನೆ‌. ಕೊನೆ ದಿನಗಳಲ್ಲಿ ನೀವು ಕಪ್ಪುಚುಕ್ಕೆ ಇಟ್ಟುಕೊಂಡು ಹೋಗಬೇಡಿ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ. ಜನ ಸಾಮಾನ್ಯರ ಪರವಾಗಿರಿ ಎಂದು ಬಿಎಸ್​ವೈಹೆ ಹೇಳಿದರು.

ಇದನ್ನು ಓದಿ: ಕೊಟ್ಟ ಮಾತು ಉಳಿಸಿಕೊಂಡ ಸಿದ್ದರಾಮಯ್ಯ: ಬಾದಾಮಿ ಅಭಿವೃದ್ದಿಗೆ 600 ಕೋಟಿ. ರೂ ಅನುದಾನ ತರುವಲ್ಲಿ ಯಶಸ್ವಿ

ಸದನದಲ್ಲಿ ಮತ್ತೆ ಮಿಣಿ ಮಿಣಿ ಪೌಡರ್ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ ಅವರು, ಮಿಣುಗುವ ವಸ್ತುವನ್ನು ನಾನು ಮಿಣಿಮಿಣಿ ಪೌಡರ್ ಎಂದು ಕರೆದೆ. ಅದನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಲಾಯಿತು. ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪತ್ತೆ ಪ್ರಕರಣ ಕೂಡ ಪೊಲೀಸರ ಸೃಷ್ಟಿ.  ಬಾಂಬ್ ಪತ್ತೆಯಾದ ನಂತರ ಅದನ್ನು ಕಂಟೈನರ್ ನಲ್ಲಿ ತೆಗೆದುಕೊಂಡು ಹೋಗಿ ಸ್ಪೋಟಿಸಿದರು. ಅದರಿಂದ ಒಂದು ಮರಳು ಮೂಟೆಯೂ ಅಲ್ಲಾಡಲಿಲ್ಲ‌. ಅಂದರೆ ಅದೇನು ಎಂದು ಯಾರಿಗಾದರೂ ಗೊತ್ತಾಗುತ್ತದೆ ಎಂದು ಹೇಳಿದರು.
First published: