Ashwath Narayan ಪರೀಕ್ಷೆ ಬರೆಯದವರಿಗೂ ಸರ್ಟಿಫಿಕೇಟ್ ಕೊಡಿಸಿದ್ರು: HD Kumaraswamy ಆರೋಪ

ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಯನ್ನು ರಾಜ್ಯದ ಜನ ನೋಡ್ತಾ ಇದ್ದಾರೆ. ರಾಜ್ಯದಲ್ಲಿ ಉತ್ತಮ ಸರ್ಕಾರ ಆಡಳಿತಕ್ಕೆ ಬರಬೇಕು. ನಾಡಿನ‌ ಜನತೆಯ ಜೊತೆ ಚೆಲ್ಲಾಟ ಆಡ್ತಾ ಇದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
PSI Recruitment Scam: ರಾಜ್ಯ ರಾಜಕಾರಣದಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರಕರಣ ಸಂಬಂಧ ಹಲವರ ಬಂಧನವಾಗಿದೆ. ಆದ್ರೆ ಬಂಧನಕ್ಕೊಳಗಾದವರು ಮಧ್ಯವರ್ತಿಗಳು, ಅದರಲ್ಲಿರುವ ಪ್ರಮುಖರು ಹೊರಗೆ ಇದ್ದಾರೆ ಎಂದು ಕಾಂಗ್ರೆಸ್ (Congress) ಆರೋಪಿಸಿದೆ. ಈ ನಡುವೆ ಸಚಿವ ಆಶ್ವಥ್ ನಾರಾಯಣ್ (Minister Ashwath Narayan) ಅವರ ಹೆಸರು ಸಹ ಅಕ್ರಮ ನೇಮಕಾತಿಯಲ್ಲಿ ತಳುಕು ಹಾಕಿಕೊಂಡಿದೆ. ಇಂದು ಮಾಧ್ಯಮಗಳ ಜೊತೆ ಪಿಎಸ್ಐ ಅಕ್ರಮ ನೇಮಕಾತಿ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಮಾತನಾಡಿದ್ದಾರೆ. ಸರ್ಕಾರ (BJP Government) ಎಲ್ಲಾದಕ್ಕೂ ಮೌನವಾಗಿದೆ. ಮೌನಂ ಸಮ್ಮತಿ ಲಕ್ಷಣಂ ಅನ್ನುವ ಅಂತಿದೆ. ಮೌನದಿಂದ ಎಲ್ಲದಕ್ಕೂ ಸಮ್ಮತಿ ಅನ್ನೋ ಹಾಗಿದೆ ಎಂದು ಆರೋಪಿಸಿದರು.

ಅಶ್ವಥ್ ನಾರಾಯಣ್ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ. ದಾಖಲೆ ಇಟ್ಟು ಮಾತನಾಡಿ ಎಂದು ಹೇಳಿದ್ದೇನೆ. ಸರ್ಟಿಫಿಕೇಟ್ ಕೊಡಿಸೋದರಲ್ಲಿ ಅಶ್ವಥ್ ನಾರಾಯಣ್ ಏನು ಅನ್ನೋದು ಗೊತ್ತಿರಬೇಕಲ್ಲವಾ? ಪರೀಕ್ಷೆ ಬರೆಯದ ನರ್ಸ್ ಗಳಿಗೆ ಸರ್ಟಿಫಿಕೇಟ್ ಕೊಟ್ಟಿದ್ದರು. ಅದನ್ನಾದ್ರೂ ಮಾತನಾಡಬೇಕಲ್ಲ? ದಾಖಲೆ ಇಟ್ಟು ಮಾತನಾಡಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಯನ್ನು ರಾಜ್ಯದ ಜನ ನೋಡ್ತಾ ಇದ್ದಾರೆ. ರಾಜ್ಯದಲ್ಲಿ ಉತ್ತಮ ಸರ್ಕಾರ ಆಡಳಿತಕ್ಕೆ ಬರಬೇಕು. ನಾಡಿನ‌ ಜನತೆಯ ಜೊತೆ ಚೆಲ್ಲಾಟ ಆಡ್ತಾ ಇದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

KPSC ಓಪನ್ ಮಾರ್ಕೆಟ್ ಮಾಡಿದ್ರು

ಕಾಂಗ್ರೆಸ್ ಸರ್ಕಾರದಲ್ಲಿ ಕೆಪಿಎಸ್ ಸಿ ಶುದ್ಧ ಮಾಡ್ತೀವಿ ಅಂತ ಹೇಳಿದವರು ಅದನ್ನ ಓಪನ್ ಮಾರ್ಕೆಟ್ ಮಾಡಿದ್ದರು. ಎಸಿ ಗೆ ಇಷ್ಟು ಡಿವೈಎಸ್ ಪಿ ಗೆ ಇಷ್ಟು ಅಂತ ಹಣ ಫಿಕ್ಸ್ ಆಗಿತ್ತು. ಪಿಎಸ್ಐ ನೇಮಕಾತಿ ಅಕ್ರಮದ ಕುರಿತು ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆವಿದೆ. ಕಮಿಷನ್ ಬಗ್ಗೆ ಮಾತನಾಡುವ ನೈತಿಕತೆ ಇಬ್ಬರಿಗೂ ಇಲ್ಲ ಎಂದು ಕಿಡಿ ಕಾರಿದರು.

ಇದನ್ನೂ ಓದಿ:  Super 30 Programme:  ರಾಜ್ಯದ ಪ್ರತಿ ಜಿಲ್ಲೆಯ ಒಂದು ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೂಪರ್ 30 ಕಾರ್ಯಕ್ರಮ

ಕೆಪಿಎಸ್ ಸಿ ಮೆಂಬರ್ ಮಾಡಿಕೊಂಡು ಅಮಾಯಕರ ಬಳಿ ಹಣ ಪೀಕಿಸುತ್ತಿದ್ದರು. ಎಷ್ಟೋ ಜನ ನನ್ನ ಬಳಿ ಬರ್ತಾ ಇದ್ದಾರ. ಪ್ರಾಮಾಣಿಕ ಅಧಿಕಾರಿಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುವುದು ಗೊತ್ತಿದೆ. ಕಾಂಗ್ರೆಸ್ ನಾಯಕರು ಮಾಡಿದ್ದನ್ನು ಇವರು ಮುಂದು ವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ನನ್ನ ಮೇಲೂ ಒತ್ತಡ ಹಾಕಿದ್ರು!

ನಮ್ಮ ಸರ್ಕಾರದಲ್ಲಿ ಹೀಗೆ ಆಗುತ್ತಿರಲಿಲ್ಲ. ನನ್ನ ಮೇಲೂ ಕೆಪಿಎಸ್ ಸಿ ಮೆಂಬರ್ ಮಾಡಲು ಸಿದ್ದರಾಮಯ್ಯ ಒತ್ತಡ ಹಾಕಿದ್ದರು. ಆದರೆ ನಾನು ಅವರ ಬಗ್ಗೆ ಗೊತ್ತಿರೋದಕ್ಕೆ ಮಾಡಲಿಲ್ಲ. ಹುದ್ದೆ ವಿಚಾರದಲ್ಲಿ ಇವರು ಎಷ್ಟೆಲ್ಲ ಮಾಡಿದ್ದಾರೆ ಗೊತ್ತಿದೆ ಎಂದು ಸಿದ್ದರಾಮಯ್ಯನವರ ವಿರುದ್ಧ ಗಂಭೀರ ಆರೋಪ ಮಾಡಿದರು.

ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡಿ

ದುಡ್ಡು ಕೊಟ್ಟು ಬಂದವರು ನ್ಯಾಯಯುತವಾಗಿ ಕೆಲಸ ಮಾಡ್ತಾರಾ? ಬಡವರ ಹೊಟ್ಟೆ ಮೇಲೆ ಹೊಡೆಯುತ್ತಾರೆ. ಇದೆಲ್ಲವನ್ನು ಜನ ಅರಿತುಕೊಳ್ಳಬೇಕಿದೆ. ದಾಖಲೆ ಸಮೇತ ಜನರ ಮುಂದೆ ಮಾಹಿತಿ ಇಟ್ಟಿದ್ದೇನೆ. ಆದರೆ ಅದರ ಪ್ರತಿಫಲ ಏನಾಯ್ತು? ಈ‌ ನಾಡಿನಿಂದ ಎರಡು ರಾಷ್ಟ್ರೀಯ ಪಕ್ಷಗಳನ್ನು ಹೊರಗಿಡಿ. ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿಕೊಂಡರು.

ಪಿಎಸ್ಐ ಹಗರಣವನ್ನು 15 ದಿನ ಗುಂಡಿ ತೋಡಿ ಮುಚ್ಚಿ ಹಾಕ್ತಾರೆ. ಪೊಲೀಸ್ ಹಗರಣವನ್ನು ಮುಚ್ಚಿ ಹಾಕ್ತಾರೆ. ಕಾಂಗ್ರೆಸ್ ಅವಧಿಯಲ್ಲಿ ಪಿಯುಸಿ ಪೇಪರ್ ಲೀಕ್ ಆಗಿತ್ತು. ಅಗ ಶಿವಕುಮಾರ್ ಎಂಬಾತನನ್ನು ಅರೆಸ್ಟ್ ಮಾಡಿದ್ರು. ಈಗ ಅವನು ಹೊರಗೆ ಇದ್ದಾರೆ. ಡ್ರಗ್ಸ್ ಕೇಸ್ ನಡೆದಾಗ ಮಾಜಿ ಸಿಎಂ ಇದ್ದಾರೆ ಅಂತ ಹೇಳಿದ್ರು. ಆಗ ಯಾರು ಅಂತ ನಾನೇ ಕೇಳಿದೆ. ಆದ್ರೆ ಯಾರು ಅಂತ ಹೇಳಲಿಲ್ಲ ಎಂದು ಹಳೆಯ ಅಕ್ರಮಗಳನ್ನು ಹೊರಗೆ ಎಳೆದು ತಂದರು.

ಇದನ್ನೂ ಓದಿ:  PSI Recruitment Scam: ಸಿಐಡಿ ವಿಚಾರಣೆಗೆ ಹಾಜರಾಗ್ತಾರಾ ಪ್ರಿಯಾಂಕ್ ಖರ್ಗೆ?

ಡ್ರಗ್ಸ್ ಕೇಸ್ ಏನಾಯ್ತು?

ಡ್ರಗ್ಸ್ ಕೇಸ್ ಏನ್ ಆಯ್ತು. ಲಾಟರಿ ಕೇಸ್ ಏನ್ ಆಯ್ತು. ಯಾವ ಕೇಸ್ ಗಳು ತಾರ್ಕಿಕ ಅಂತ್ಯ ಕಾಣಲ್ಲ. ಪಿಎಸ್ಐ ಕೇಸ್ ಕೂಡಾ ಮುಚ್ಚಿ ಹಾಕ್ತಾರೆ. ಕಾಂಗ್ರೆಸ್ ಅವಧಿಯಲ್ಲಿ KPSC ಅಧ್ಯಕ್ಷರು ಹಣ ತಗೊಂಡಿದ್ದಾರೆ. ಅ ಹಣವನ್ನು ಇನ್ನು ವಾಪಸ್ ಸಿಕ್ಕಿಲ್ಲ. ನನ್ನ ಬಳಿ ಹಣ ಕೊಡಿಸಿ ಅಂತ ಬಂದಿದ್ದರು. ಕಾಂಗ್ರೆಸ್ ಹಾಕಿಕೊಟ್ಟ ಪೌಂಢೇಷನ್ ಬಿಜೆಪಿ ದೊಡ್ಡದಾಗಿ ಮುಂದುವರಿಸಿದೆ ಎಂದರು.
Published by:Mahmadrafik K
First published: