ಕುಮಾರಸ್ವಾಮಿಯವರು ಒಮ್ಮೊಮ್ಮೆ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಾರೆ ; ಬಸವರಾಜ್ ಹೊರಟ್ಟಿ

ರಾಜಕೀಯದಲ್ಲಿ ಯಾವಾಗ ಏನಾಗುತ್ತೊ ಗೊತ್ತಾಗಲ್ಲಾ. ಸಿದ್ದರಾಮಯ್ಯನವರ ಮೇಲೆ ಕುಮಾರಸ್ವಾಮಿಯವರಿಗೆ ಪೂರ್ಣ ವಿಶ್ವಾಸವಿತ್ತು. ಆದರೂ ಸಮ್ಮಿಶ್ರ ಸರ್ಕಾರ ಉಳಿಯಲಿಲ್ಲ ಎಂದವರು ಹೇಳಿದ್ದಾರೆ.

G Hareeshkumar | news18-kannada
Updated:November 2, 2019, 3:22 PM IST
ಕುಮಾರಸ್ವಾಮಿಯವರು ಒಮ್ಮೊಮ್ಮೆ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಾರೆ ; ಬಸವರಾಜ್ ಹೊರಟ್ಟಿ
ವಿಧಾನ ಪರಿಷತ್​ ಸದಸ್ಯ ಬಸವರಾಜ್​​​​ ಹೊರಟ್ಟಿ
  • Share this:
ಹುಬ್ಬಳ್ಳಿ(ನ.02): ಬಿಜೆಪಿ ಸರ್ಕಾರ ಹೋಗಬಾರದು ಎನ್ನುವುದು ಕುಮಾರಸ್ವಾಮಿಯವರ ಮನಸ್ಸಿನಲ್ಲಿದೆ. ಒಮ್ಮೊಮ್ಮೆ ದುಡುಕುತ್ತಾರೆ, ಎಮೋಷನಲ್ ಆಗುತ್ತಾರೆ. ಹಿಂದೆ ಮುಂದೆ ವಿಚಾರ ಮಾಡದೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗಾಗಿ ಜೆಡಿಎಸ್ ಶಾಸಕರಲ್ಲಿ ಗೊಂದಲವಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಸಧ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಆಗಬಾರದು. ಬಿಜೆಪಿ ಸರ್ಕಾರ ಮುಂದುವರಿಯಲಿ ಎನ್ನುವುದು ಉತ್ತಮ ವಿಚಾರ. ಬಹುತೇಕ ಜೆಡಿಎಸ್ ಶಾಸಕರು ಬಿಜೆಪಿಗೆ ಬೆಂಬಲ ಕೊಡುವುದರ ಪರವಾಗಿ ನಿಲುವು ಹೊಂದಿದ್ದಾರೆ. ಕುಮಾರಸ್ವಾಮಿಯವರು ಎಲ್ಲರ ಸಭೆ ಕರೆದು ಒಟ್ಟಾಗಿ ಚರ್ಚಿಸಿ, ತೀರ್ಮಾನಿಸಬೇಕು ಎಂದು ತಿಳಿಸಿದರು.

ಉಪ ಚುನಾವಣೆಯಲ್ಲಿ ಕೆಲವು ಕಡೆ ಬಿಜೆಪಿಗೆ ಬೆಂಬಲ ಕೊಡಬೇಕು ಅನ್ನುವ ಚಿಂತನೆಯೂ ಇದೆ. ಅದಕ್ಕೆ ದೇವೇಗೌಡರು ಒಪ್ಪಬೇಕಲ್ಲಾ? ರಾಜಕೀಯದಲ್ಲಿ ಯಾವಾಗ ಏನಾಗುತ್ತೊ ಗೊತ್ತಾಗಲ್ಲಾ. ಸಿದ್ದರಾಮಯ್ಯನವರ ಮೇಲೆ ಕುಮಾರಸ್ವಾಮಿಯವರಿಗೆ ಪೂರ್ಣ ವಿಶ್ವಾಸವಿತ್ತು. ಆದರೂ ಸಮ್ಮಿಶ್ರ ಸರ್ಕಾರ ಉಳಿಯಲಿಲ್ಲ ಎಂದವರು ಹೇಳಿದ್ದಾರೆ.

ಟಿಪ್ಪು ಇತಿಹಾಸ ಪಠ್ಯದಿಂದ ತೆಗೆಯುವ ವಿಚಾರದಲ್ಲಿ ತಜ್ಞರ ಸಮಿತಿ ವರದಿ ಆದರಿಸಿ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ತರಾತುರಿ ನಿರ್ಧಾರ ಮಾಡುವುದು ತಪ್ಪು. ಯಾವುದೇ ಸರ್ಕಾರವಾದರೂ ಶಾಶ್ವತ ಇರಲ್ಲ. ಮಕ್ಕಳು ಮತ್ತು ಶಿಕ್ಷರಿಗೆ ಗೊಂದಲ ಮೂಡಿಸುವುದು ಸರಿಯಲ್ಲ ಎಂದರು.

ಇದನ್ನೂ ಓದಿ : ಬಿಜೆಪಿ ಸರ್ಕಾರದ ಮೇಲೆ ಅನುಕಂಪ ಇಲ್ಲ; ಸಿದ್ದರಾಮಯ್ಯ ಸಿಎಂ ಆದರೂ ಬೆಂಬಲಿಸುತ್ತೇನೆ: ಕುಮಾರಸ್ವಾಮಿ

ಯಾವುದೇ ಸರ್ಕಾರವಾದರೂ ಶಾಶ್ವತ ಇರಲ್ಲ. ಅನರ್ಹ ಶಾಸಕರು ಬಿಜೆಪಿ ಮೇಲೆ ನಂಬಿಕೆ ಇಟ್ಟು ರಾಜಿನಾಮೆ ಕೊಟ್ಟಿದ್ದಾರೆ. ಅನರ್ಹರ ವಿಚಾರದಲ್ಲಿ ಯಡಿಯೂರಪ್ಪನವರ ಹೇಳಿಕೆ ಸರಿಯಾಗಿದೆ. ಈ ವಿಚಾರದಲ್ಲಿ ಯಡಿಯೂರಪ್ಪನವರಿಗೆ ನನ್ನ ಬೆಂಬಲವಿದೆ. ಈಗಾಗಲೆ ಆಪರೇಷನ್ ಕಮಲ ಆಗಿಹೋಗಿದೆ. ಹೀಗಾಗಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಬಿಜೆಪಿ ಧರ್ಮ ಎಂದರು.

 

 
First published:November 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading