HOME » NEWS » State » FORMER CM HD KUMARASWAMY SLAMMED AT BJP GOVERNMENT GNR

ಸರ್ಕಾರ ಉಳಿಸೋದರಲ್ಲಿ ಬಿಎಸ್​​ವೈ ನಿಪುಣ; ಯಾವಾಗ ಬೀಳುತ್ತೆ ಎನ್ನಲು ನಾನು ಕೋಡಿಶ್ರೀ ಅಲ್ಲ: ಎಚ್​​ಡಿಕೆ

ನಾನು ಬೆಂದ ಮನೆಯಲ್ಲಿ ಗಳ ಹಿರಿಯಲು ಹೋಗುವುದಿಲ್ಲ. ಸರ್ಕಾರದಲ್ಲಿ ಯಾವಾಗ ಬೇಕಾದರೂ ಅನಾಹುತಗಳಾಗಬಹುದು. ಹಾಗಾಗಿ ಮುಂದೆ ಯಾವಾಗ ಚುನಾವಣೆ ಬಂದರೂ ಎದುರಿಸಲು ಸಿದ್ದರಿದ್ದೇವೆ. ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾನು ಚುನಾವಣಾ ಹೋರಟಕ್ಕೆ ಸದಾ ಸಿದ್ದ ಎಂದು ಶಪಥ ಮಾಡಿದರು.

news18-kannada
Updated:February 6, 2020, 5:13 PM IST
ಸರ್ಕಾರ ಉಳಿಸೋದರಲ್ಲಿ ಬಿಎಸ್​​ವೈ ನಿಪುಣ; ಯಾವಾಗ ಬೀಳುತ್ತೆ ಎನ್ನಲು ನಾನು ಕೋಡಿಶ್ರೀ ಅಲ್ಲ: ಎಚ್​​ಡಿಕೆ
ಸಿಎಂ ಬಿಎಸ್​ ಯಡಿಯೂರಪ್ಪ ಮತ್ತು ಎಚ್​ಡಿ ಕುಮಾರಸ್ವಾಮಿ
  • Share this:
ಮೈಸೂರು(ಫೆ.06): ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಇನ್ನೆಷ್ಟು ದಿನ ಇರುತ್ತೆ ಅಂತಾ ಭವಿಷ್ಯ ನುಡಿಯೋಕೆ ನಾನು ಕೋಡಿ ಮಠದ ಸ್ವಾಮೀಜಿಯಲ್ಲ ಎಂದು ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಮೈಸೂರಿನ ಸುತ್ತೂರು ಮಠದಲ್ಲಿ ಮಾತಾಡಿದ ಎಚ್​​.ಡಿ ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪ ಸರ್ಕಾರ ಹೇಗೆ ಉಳಿಸಿಕೊಳ್ಳಬೇಕು ಎನ್ನುವುದರಲ್ಲಿ ನಿಸ್ಸೀಮರು. ಸರ್ಕಾರ ಹೇಗೆ ಬೀಳಿಸಬೇಕು ಮತ್ತು ಹೇಗೆ ಉಳಿಸಬೇಕು ಎಂಬುದು ಕರಗತ ಆಗಿದೆ. ಅದೇ ಅನುಭವದಲ್ಲಿ ಯಡಿಯೂರಪ್ಪ ಸರ್ಕಾರ ಉಳಿಸಿಕೊಳ್ತಾರೆಂಬ ವಿಶ್ವಾಸ ನನಗೆ ಇದೆ. ಸರ್ಕಾರ ಎಷ್ಟು ದಿನ ಇರುತ್ತೆ ಎಂದು ಹೇಳೋಕೆ ನಾನು ಭವಿಷ್ಯಕಾರನಲ್ಲ ಎಂದರು.

ಹಲವು ದಿನಗಳ ನಂತರ ಸುತ್ತೂರು ಮಠಕ್ಕೆ ಆಗಮಿಸಿದ್ದೇನೆ. ಇಲ್ಲಿನ ಕೋಡಿ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಇದಕ್ಕೇನು ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನನ್ನ ಮಗ ನಿಖಿಲ್​​ ಮದುವೆಗೆ ಆಹ್ವಾನಿಸಲು ಬಂದಿರಲಿಲ್ಲ. ನಿಖಿಲ್​​ ಮದುವೆಗೆ ಆಹ್ವಾನಿಸಲು ಮತ್ತೊಮ್ಮೆ ಮಗ ಮತ್ತು ಹೆಂಡತಿಯೊಂದಿಗೆ ಬರುತ್ತೇನೆ. ಈಗ ಕೇವಲ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು ಮಾಜಿ ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿ.

ಸರ್ಕಾರ ಸುಸೂತ್ರವಾಗಿ ನಡೆಯುವ ಬಗ್ಗೆ ಯಡಿಯೂರಪ್ಪರನ್ನೇ ಕೇಳಬೇಕು. ನನ್ನನ್ನು ಕೇಳುವುದರಿಂದ ಯಾವುದೇ ಪ್ರಯೋಜನೆ ಇಲ್ಲ. ಇವತ್ತಿನ ಪರಿಸ್ಥಿತಿ ನೋಡಿದರೆ ಜನಾಭಿಪ್ರಾಯಕ್ಕೆ ಅನುಗುಣವಾಗಿ ನಡೆಯುವ ಸರ್ಕಾರ ಇದಾಗಿಲ್ಲ ಅನಿಸುತ್ತದೆ. ಯಾರದೋ ಮುಲಾಜಿಗೊಳಗಾದ ಸರ್ಕಾರ ಇದು. ಈ ಸರ್ಕಾರದ ಮೇಲೆ ಬಿಜೆಪಿ ಹೈಕಮಾಂಡ್​​ಗೂ ಒಲವಿಲ್ಲ ಎಂದು ಕುಹಕವಾಡಿದರು.

ಇದನ್ನೂ ಓದಿ: ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದಂತಿದೆ ಈಗಿನ ಸಂದರ್ಭ: ಶತಾಯುಷಿ ದೊರೆಸ್ವಾಮಿ

ಇನ್ನು, ಮಾಜಿ ಸಚಿವ ಎಚ್​​. ವಿಶ್ವನಾಥ್​​ ಬಗ್ಗೆ ಚರ್ಚೆ ಮಾಡುವ ಅಗತ್ಯ ನನಗಿಲ್ಲ. ಮೈತ್ರಿ ಸರ್ಕಾರ ಪತನ ಮಾಡುವ ಸಲುವಾಗಿಯೇ ಬಿಜೆಪಿಗೆ ಹೋದೆವು ಎಂದು ಅವರೇ ಹೇಳಿದ್ದಾರೆ. ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಸರ್ಕಾರ ಬೀಳಿಸಿ ಉತ್ತಮ ಸಾಧನೆ ಮಾಡಿದ್ಧಾರೆ. ಆದರೀಗ ಸಮ್ಮಿಶ್ರ ಸರ್ಕಾರದ ಬಗ್ಗೆ ಎಚ್​​. ವಿಶ್ವನಾಥ್​​​​ ಪುಸ್ತಕ ಬರೆಯಲಿದ್ದಾರಂತೆ. ಯಾರನ್ನು ಪ್ರೇರೇಪಿಸಲು ಪುಸ್ತಕ ಬರೆಯುತ್ತಾರೋ ಗೊತ್ತಿಲ್ಲ. ಖಂಡಿತಾ ಜನರೇ ಮುಂದಿನ ದಿನಗಳಲ್ಲಿ ಚರಿತ್ರೆ ಬರೆಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ: ‘ಪಕ್ಷ ದ್ರೋಹಿಗಳು ಮಂತ್ರಿಯಾಗಿದ್ದು ಸಂತಸ ತಂದಿಲ್ಲ; ನನ್ನ ಪಾಲಿಗವರು ಅನರ್ಹರು‘ - ಸಿದ್ದರಾಮಯ್ಯ

ನಾನು ಬೆಂದ ಮನೆಯಲ್ಲಿ ಗಳ ಹಿರಿಯಲು ಹೋಗುವುದಿಲ್ಲ. ಸರ್ಕಾರದಲ್ಲಿ ಯಾವಾಗ ಬೇಕಾದರೂ ಅನಾಹುತಗಳಾಗಬಹುದು. ಹಾಗಾಗಿ ಮುಂದೆ ಯಾವಾಗ ಚುನಾವಣೆ ಬಂದರೂ ಎದುರಿಸಲು ಸಿದ್ದರಿದ್ದೇವೆ. ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾನು ಚುನಾವಣಾ ಹೋರಟಕ್ಕೆ ಸದಾ ಸಿದ್ದ ಎಂದು ಶಪಥ ಮಾಡಿದರು.
Youtube Video
First published: February 6, 2020, 5:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories