‘ಒಕ್ಕಲಿಗರನ್ನು ಪಾಕಿಸ್ತಾನಿಗಳು ಎಂದು ಅವಮಾನಿಸಿದ ಬಿಜೆಪಿ‘: ಎಚ್​​.ಡಿ ಕುಮಾರಸ್ವಾಮಿ

ಇನ್ನು ಒಕ್ಕಲಿಗರು ಅಧಿಕಾರಕ್ಕೆ ಬರುವುದನ್ನು; ಹೋರಾಟ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ. ಒಕ್ಕಲಿಗ ನಾಯಕತ್ವ ಅಭದ್ರಗೊಳಿಸುವ ಪ್ರಯತ್ನ ಮಾಡುವ ಬಿಜೆಪಿ‌ 'ಪಾಕಿಸ್ತಾನಿ' ಎನ್ನುವ ಮೂಲಕ ನಮ್ಮ ಸಮುದಾಯಕ್ಕೆ ಅಪಮಾನ ಮಾಡಿದ್ದನ್ನು ಉಲ್ಲೇಖಿಸಿದ್ದೇನೆ. ಅಂತೆಯೇ ಒಕ್ಕಲಿಗರ ಜೀನ್ ಈ ಮಣ್ಣಿನಲ್ಲಿದೆ ಎಂಬುದನ್ನು ತಿಳಿಸಿದ್ದೇನೆ ಅಷ್ಟೇ ಎಂದು ತಮ್ಮ ಹಿಂದಿನ ಟ್ವೀಟ್​​ ಬಗ್ಗೆ ಎಚ್​​​ಡಿಕೆ ಸಮರ್ಥಿಸಿಕೊಂಡರು.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ.

 • Share this:
  ಬೆಂಗಳೂರು(ಜ.26): ಮಾಜಿ ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ಸರಣಿ ಟ್ವೀಟ್​​ ಮಾಡುವ ಮೂಲಕ ಕಿಡಿಕಾರಿದ್ದಾರೆ. "ನಾನು ಒಕ್ಕಲಿಗ ಎಂಬ ಹೆಸರನ್ನು ಬಳಸಬಾರದು ಎಂದು ಡಿಸಿಎಂ ಅಶ್ವಥ್ ​ನಾರಾಯಣ ಹೇಳಿದ್ದಾರೆ. ಹಾಗೆಯೇ ನಾನು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದೇನೆ ಎಂಬ ಆರೋಪ ಎಸಗಿದ್ದಾರೆ. ಹೀಗೆ ಒಂದು ಸಮುದಾಯದ ನಾಯಕನನ್ನು ಟೀಕಿಸಲು ಅದೇ ಸಮುದಾಯದ ವ್ಯಕ್ತಿಯನ್ನು ಬಿಜೆಪಿ ಬಳಸಿಕೊಳ್ಳುತ್ತದೆ ಎಂಬುದು  ಡಿಸಿಎಂ ಅಶ್ವಥ್ ​ನಾರಾಯಣರೇ ಸಾಕ್ಷಿ ಎಂದು ಟ್ವೀಟ್​​ ಮುಖೇನ ಕುಟುಕಿದ್ದಾರೆ.

  ಇತ್ತ ಬೆಳೆ ಮತ್ತು ಒಡವೆ ಸಾಲಗಳ ಬಡ್ಡಿಗೆ ನೀಡಬೇಕಾದ ಸಬ್ಸಿಡಿ ನಿಲ್ಲಿಸಿರುವ ಸರ್ಕಾರ ರೈತರನ್ನು ಲೇವಾದೇವಿದಾರರಿಗೆ ಶರಣಾಗುವಂತೆ ಮಾಡಿದೆ. ಅತ್ತ ಬ್ಯಾಂಕುಗಳಲ್ಲಿ ಇರುವ ಬಡವರ ಚಿನ್ನವನ್ನು ಹರಾಜಿನ‌ ಮೂಲಕ‌ ಕೇಂದ್ರ ಸರ್ಕಾರ ಲಪಟಾಯಿಸುತ್ತಿದೆ ಎಂದು ಮತ್ತೊಂದು ಟ್ವೀಟ್​​ನಲ್ಲಿ ಮಾಜಿ ಸಿಎಂ ಎಚ್​​​.ಡಿ ಕುಮಾರಸ್ವಾಮಿ ಆರೋಪಿಸಿದರು.

  ಇನ್ನು ಒಕ್ಕಲಿಗರು ಅಧಿಕಾರಕ್ಕೆ ಬರುವುದನ್ನು; ಹೋರಾಟ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ. ಒಕ್ಕಲಿಗ ನಾಯಕತ್ವ ಅಭದ್ರಗೊಳಿಸುವ ಪ್ರಯತ್ನ ಮಾಡುವ ಬಿಜೆಪಿ‌ 'ಪಾಕಿಸ್ತಾನಿ' ಎನ್ನುವ ಮೂಲಕ ನಮ್ಮ ಸಮುದಾಯಕ್ಕೆ ಅಪಮಾನ ಮಾಡಿದ್ದನ್ನು ಉಲ್ಲೇಖಿಸಿದ್ದೇನೆ. ಅಂತೆಯೇ ಒಕ್ಕಲಿಗರ ಜೀನ್ ಈ ಮಣ್ಣಿನಲ್ಲಿದೆ ಎಂಬುದನ್ನು ತಿಳಿಸಿದ್ದೇನೆ ಅಷ್ಟೇ ಎಂದು ತಮ್ಮ ಹಿಂದಿನ ಟ್ವೀಟ್​​ ಬಗ್ಗೆ ಸಮರ್ಥಿಸಿಕೊಂಡರು.

  ಒಕ್ಕಲಿಗರ ಜೀನ್ ಕರ್ನಾಟಕದ ಮಣ್ಣಿನಲ್ಲಿದೆ ಎಂದು ಹೇಳಿದರೆ ಅಶ್ವತ್ಥ ನಾರಾಯಣ ಮತ್ತು ಬಿಜೆಪಿಗರಿಗೆ ಏಕೆ ಕಣ್ಣು ಉರಿ? ಎಂದು ಪ್ರಶ್ನಿಸಿದ ಎಚ್​​​.ಡಿ ಕುಮಾರಸ್ವಾಮಿ, ನಿಮ್ಮ ಜೀನ್ ಪಾಕಿಸ್ತಾನದಲ್ಲಿದೆ ಎಂಬ ಮರುಕವೇ? ಎಂದರು. ನಿಮ್ಮ ಸಿದ್ಧಾಂತ ಪ್ರತಿಪಾದಕರ ಜೀನ್ 'ನಾಜಿ' ಮೂಲದ್ದು ಎಂಬ ಬೇಸರವೇ? ಈ ಮಣ್ಣಿನವರಾದ 'ನಾವು' ನಮ್ಮ ಅಸ್ಮಿತೆ ಬಗ್ಗೆ ಮಾತಾಡುತ್ತೇವೆ. ಇದನ್ನು ನಿಮ್ಮಿಂದ ತಡೆಯಲು ಸಾಧ್ಯವೇ? ಎಂದು ಬಿಜೆಪಿಗೆ ಸವಾಲ್​ ಎಸೆದರು.

  ಇದನ್ನೂ ಓದಿ: ‘ಬಿಜೆಪಿ ದೂಷಿಸುವುದು ಕೆಲವರಿಗೆ ಫ್ಯಾಷನ್​‘: ಎಚ್​​ಡಿಕೆ ಕೊಲೆ ಬೆದರಿಕೆ ಆರೋಪಕ್ಕೆ ಸಿ.ಟಿ ರವಿ ತಿರುಗೇಟು

  ನನ್ನ ಧರ್ಮದ ಬಗ್ಗೆ ಅಪಾರ ಗೌರವ ಇಟ್ಟುಕೊಂಡೂ ಇತರ ಧರ್ಮಗಳ ಮೇಲೆ ಅಷ್ಟೇ ಗೌರವ ಹೊಂದುವುದು ನಾನು ನಂಬಿದ ಜಾತ್ಯತೀತತೆ. ಇದರಲ್ಲಿ ಒಕ್ಕಲಿಗ ಅಸ್ಮಿತೆಯೂ ಇದೆ. ಇತರ ಸಮಾಜದ ಮೇಲಿನ ಗೌರವವೂ ಇದೆ. ನಿತ್ಯ ಅನ್ಯಧರ್ಮಗಳ‌ ಮೇಲೆ ದಾಳಿ ಮಾಡುವ, ಜಾತಿಗಳನ್ನು ಮತಕ್ಕಾಗಿ ಬಳಸಿಕೊಳ್ಳುವ ನಿಮ್ಮ ಪಕ್ಷದವರಿಂದ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು ಡಿಸಿಎಂ ಅಶ್ವಥ್​ ನಾರಾಯಣ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

  ಬಿಜೆಪಿ ನಾಯಕರೇ ನಾನು ಒಕ್ಕಲಿಗ ಅಸ್ಮಿತೆಯ ಬಗ್ಗೆ ಮಾತನಾಡಿದ್ದೇನೆ. ಬಿ.ಎಸ್​​ ಯಡಿಯೂರಪ್ಪರಂತೆ ಚುನಾವಣಾ ವೇದಿಕೆ ಮೇಲೆ ನಿಂತು 'ನನ್ನ ಜಾತಿಯ ಒಂದು‌ ಮತವೂ ಬೇರೆ ಪಕ್ಷಕ್ಕೆ ಹೋಗಬಾರದು' ಎಂದು ಆಜ್ಞೆ ಮಾಡಿಲ್ಲವಲ್ಲ. ಹೀಗೆ ಮತಕ್ಕಾಗಿ ಜಾತಿಯನ್ನು ದುಡಿಸಿಕೊಂಡವರು ಯಡಿಯೂರಪ್ಪ. ಅಧಿಕಾರಕ್ಕಾಗಿ ಧರ್ಮಗಳನ್ನು ಒಡೆದವರು ಮೋದಿ, ನಾನಲ್ಲ ಎಂದು ಮತ್ತೊಂದು ಟ್ವೀಟ್​​ನಲ್ಲಿ ಸಿಡಿಮಿಡಿಗೊಂಡಿದ್ಧಾರೆ.
  First published: