ಬಿಜೆಪಿಯವರು ನೈಟ್ ಕ್ಲಬ್, ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರಿಂದ ಹಣ ಪಡೆದು ಅನರ್ಹರಿಗೆ ಕೊಟ್ಟಿದ್ದಾರೆ; ಎಚ್​​ಡಿಕೆ ಹೊಸ ಬಾಂಬ್​​

ನಾನು ಸರ್ಕಾರ ಕಾಪಾಡುತ್ತೇನೆ ಎಂದು ಹೇಳಿದ್ದೇನೆ. ಆದರೆ ಯಾವ ಸರ್ಕಾರ ಅಂತಾ ಹೇಳಿಲ್ಲ. ಒಟ್ಟಾರೆ ಸರ್ಕಾರ ಕಾಪಾಡ್ತೇನೆ. ಯಾವ ಸರ್ಕಾರ ಅನ್ನೋದನ್ನು ಡಿ.9ರ ನಂತರ ತೀರ್ಮಾನ ಮಾಡ್ತೇನೆ. ನಾನು ಬಿಜೆಪಿ ಸರ್ಕಾರ ಉಳಿಸುತ್ತೇನೆ ಎಂದು ಹೇಳಿಲ್ಲ. ನನ್ನ ಮಾತಿನ‌ ಅರ್ಥ ರಾಜಕೀಯದಲ್ಲಿ ಅತ್ಯಂತ ಸೂಕ್ಷ್ಮವಾಗಿ ಗ್ರಹಿಸೋರು ಯಾರು ಇದ್ದಾರೆ ಅವರಿಗೆ ನನ್ನ ಮಾತಿನ ಅರ್ಥ ಗೊತ್ತಾಗುತ್ತೆ.

Latha CG | news18-kannada
Updated:November 24, 2019, 3:49 PM IST
ಬಿಜೆಪಿಯವರು ನೈಟ್ ಕ್ಲಬ್, ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರಿಂದ ಹಣ ಪಡೆದು ಅನರ್ಹರಿಗೆ ಕೊಟ್ಟಿದ್ದಾರೆ; ಎಚ್​​ಡಿಕೆ ಹೊಸ ಬಾಂಬ್​​
ಹೆಚ್​.ಡಿ. ಕುಮಾರಸ್ವಾಮಿ
  • Share this:
ಬೆಂಗಳೂರು(ನ.24): ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿಯವರು ಅನರ್ಹ ಶಾಸಕರಿಗೆ ಕೊಟ್ಯಂತರ ರೂ ಕೊಟ್ಟಿದ್ದಾರೆ. ನೈಟ್ ಕ್ಲಬ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರಿಂದ ಹಣ ಪಡೆದು ಆ ಹಣವನ್ನೇ ಅನರ್ಹ ಶಾಸಕರಿಗೆ ಕೊಟ್ಟಿದ್ದಾರೆ. ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ನೈಟ್ ಕ್ಲಬ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಿಲ್ಲಿಸಲು ಕ್ರಮ ಕೈಗೊಂಡಿದ್ದೆ. ಈಗ ಅದನ್ನು ಪುನರ್ ಪ್ರಾರಂಭಿಸಲು ದಂಧೆಕೋರರಿಗೆ ಸಹಾಯ ಮಾಡುವುದಾಗಿ ಬಿಜೆಪಿಯವರು ವಾಗ್ದಾನ ಮಾಡಿ ಹಣ ವಸೂಲಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್​ ಸಿಡಿಸಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಋಣ ಮುಕ್ತ ಕಾಯ್ದೆ ಜಾರಿಗೊಳಿಸಿದ್ದೆ. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಅದನ್ನು ಸ್ಥಗಿತಗೊಳಿಸಿದ್ದಾರೆ. ನಾನು ಸಿಎಂ ಆಗಿದ್ದಾಗ ಯಶವಂತಪುರ ಕ್ಷೇತ್ರಕ್ಕೆ 418 ಕೋಟಿ ರೂ.ಅನುದಾನ ನೀಡಿದ್ದೆ. ಅದನ್ನು ಸ್ವಾರ್ಥಕ್ಕೆ ಬಳಸಿಕೊಂಡಿರುವ ಎಸ್.ಟಿ.ಸೋಮಶೇಖರ್, ಎಚ್​ಡಿಕೆ ಅನುದಾನವನ್ನೇ ಕೊಟ್ಟಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.

ಸಿದ್ದರಾಮಯ್ಯರನ್ನು ಹೊಗಳಿದರೆ ನನಗೇನು ಲಾಭ?; ವಸ್ತು ಸ್ಥಿತಿ ಹೇಳುವುದು ನನ್ನ ಗುಣ; ಹೆಚ್.ವಿಶ್ವನಾಥ್​

ಎಸ್.ಟಿ.ಸೋಮಶೇಖರ್ ಅವರು ಬಿಜೆಪಿಯ ಶೋಭಾಕರಂದ್ಲಾಜೆ, ಆರ್.ಅಶೋಕ್ ಮತ್ತು ಜಗ್ಗೇಶ್ ವಿರುದ್ದ ಯಾವೆಲ್ಲ ಶಬ್ದಗಳನ್ನು ಬಳಸಿದರು ಎಂದು ವಾಟ್ಸಪ್ ನಲ್ಲೂ ಹರಿದಾಡುತ್ತಿದೆ. ಈಗ ಸ್ವಾರ್ಥಕ್ಕಾಗಿ ಅವರು ಬಿಜೆಪಿ ಸೇರಿದ್ದಾರೆ. ಅನರ್ಹರನ್ನು ಎಂದೂ ಗೆಲ್ಲಿಸಬೇಡಿ ಎಂದು ಕರೆ ನೀಡಿದರು.

ನಾನು ಬಿಜೆಪಿ ಸರ್ಕಾರ ಉಳಿಸುತ್ತೇನೆ ಎಂದು ಹೇಳಿಲ್ಲ

ನಾನು ಸರ್ಕಾರ ಕಾಪಾಡುತ್ತೇನೆ ಎಂದು ಹೇಳಿದ್ದೇನೆ. ಆದರೆ ಯಾವ ಸರ್ಕಾರ ಅಂತಾ ಹೇಳಿಲ್ಲ. ಒಟ್ಟಾರೆ ಸರ್ಕಾರ ಕಾಪಾಡ್ತೇನೆ. ಯಾವ ಸರ್ಕಾರ ಅನ್ನೋದನ್ನು ಡಿ.9ರ ನಂತರ ತೀರ್ಮಾನ ಮಾಡ್ತೇನೆ. ನಾನು ಬಿಜೆಪಿ ಸರ್ಕಾರ ಉಳಿಸುತ್ತೇನೆ ಎಂದು ಹೇಳಿಲ್ಲ. ನನ್ನ ಮಾತಿನ‌ ಅರ್ಥ ರಾಜಕೀಯದಲ್ಲಿ ಅತ್ಯಂತ ಸೂಕ್ಷ್ಮವಾಗಿ ಗ್ರಹಿಸೋರು ಯಾರು ಇದ್ದಾರೆ ಅವರಿಗೆ ನನ್ನ ಮಾತಿನ ಅರ್ಥ ಗೊತ್ತಾಗುತ್ತೆ. ಅಶೋಕ್ ನವಂತವರಿಗೆ ಪಾಪ ಏನು ಗೊತ್ತಾಗುತ್ತೆ? ಆರ್ ಅಶೋಕ್ ಇನ್ನೂ ಪಾಠ ಕಲಿಯೋದು ಇದೆ ಎಂದು ವ್ಯಂಗ್ಯ ಮಾಡಿದರು.

ಸಾರ್ವತ್ರಿಕ ಚುನಾವಣೆಗೆ ಹೋಗೋಕೆ ಆಗುವುದಿಲ್ಲ. ಮೂರುವರೆ ವರ್ಷಗಳ ಕಾಲ ಸರ್ಕಾರ ಇರಬೇಕು. ಜನರು ಕಷ್ಟದಲ್ಲಿ ಇದ್ದಾರೆ. ನಾವು ಚುನಾವಣೆ ನಡೆಸಿಕೊಂಡು ಹೋದರೆ, ಜನರ ಕಷ್ಟ ಕೇಳೋದು ಯಾರು.? ನಾವು ಕಷ್ಟ ಪಟ್ಟು  ಶ್ರಮ ಪಟ್ಟು ಮೇಲೆ ಬಂದಿದ್ದೇವೆ ಎಂದರು.ಶ್ರೀರಾಮುಲು ಯಡವಟ್ಟು; ಸುಪ್ರೀಂಕೋರ್ಟ್ 17 ಶಾಸಕರನ್ನು ಅನರ್ಹರೆಂದು ಹೇಳೇ ಇಲ್ಲ ಎಂದ ಸಚಿವ

First published:November 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ