ಕನ್ನಡಿಗರೇ ದಾರಿ ತಪ್ಪಬೇಡಿ , ಶಾಂತಿಯ ತೋಟವಾದ ರಾಜ್ಯವನ್ನ ಹಾಳು ಮಾಡಿಕೊಳ್ಳಬೇಡಿ: HD Kumaraswamy ಮನವಿ

ಈ ರಾಜ್ಯ ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದೀರಿ. ಹಿಂದೂ ಯುವಕರಿಗೆ (Hindu Youths) ಕೈ ಮುಗಿದು ಹೇಳುತ್ತೇನೆ ರಾಜ್ಯ ಹಾಳು ಮಾಡಿಕೊಳ್ಳಬೇಡಿ. ಇಲ್ಲಿ ಯಾರು ಶಾಶ್ವತ ಅಲ್ಲ, ಕರ್ನಾಟಕ (Karnataka) ಶಾಂತಿಯ ತೋಟ ಹಾಳು ಮಾಡಬೇಡಿ. ಇಂತಹ ವ್ಯಕ್ತಿಗಳನ್ನು ಬಹಿಷ್ಕಾರ ಮಾಡಿ ಎಂದು ಆಗ್ರಹಿಸಿದರು.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ಮುಸ್ಲಿಮರ ಅಂಗಡಿ(Muslim Shops)ಗಳಲ್ಲಿ ಖರೀದಿ ಮಾಡದಂತೆ ಹರಿದಾಡುತ್ತಿರುವ ವಾಟ್ಸಪ್ ಸಂದೇಶ(Whatsapp Message)ಗಳನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಮಾಧ್ಯಮಗಳ ಮುಂದೆ ಓದಿದರು. ವಾಟ್ಸಪ್ ಸಂದೇಶಗಳಲ್ಲಿ ಹಣ್ಣು, ಕಿರಾಣಿ ಅಂಗಡಿಗಳು, ಎಲೆಕ್ಟ್ರಿಕ್ ಶಾಪ್ ಹೀಗೆ ಹಿಂದು ಅಂಗಡಿಗಳಿಗೆ ಹೋಗಿ ಅಂದಿದ್ದಾರೆ. ಸಭಾಧ್ಯಕ್ಷರು (Speaker) ಯಾವ ಪುರುಷಾರ್ಥಕ್ಕೆ ಚರ್ಚೆ ಇಟ್ಟುಕೊಂಡಿದ್ದಾರೆ ಅಂತ ಗೊತ್ತಾಗುತ್ತಿಲ್ಲ. ಈ ರಾಜ್ಯ ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದೀರಿ. ಹಿಂದೂ ಯುವಕರಿಗೆ (Hindu Youths) ಕೈ ಮುಗಿದು ಹೇಳುತ್ತೇನೆ ರಾಜ್ಯ ಹಾಳು ಮಾಡಿಕೊಳ್ಳಬೇಡಿ. ಇಲ್ಲಿ ಯಾರು ಶಾಶ್ವತ ಅಲ್ಲ, ಕರ್ನಾಟಕ (Karnataka) ಶಾಂತಿಯ ತೋಟ ಹಾಳು ಮಾಡಬೇಡಿ. ಇಂತಹ ವ್ಯಕ್ತಿಗಳನ್ನು ಬಹಿಷ್ಕಾರ ಮಾಡಿ ಎಂದು ಆಗ್ರಹಿಸಿದರು.

ಈದ್ಗಾ ಮೈದಾನದಲ್ಲಿ ಬಲಿ ತಗೊತಿದ್ರಿ. ಅದನ್ನು ದೇವೇಗೌಡರು ಸರಿ ಮಾಡಿದ್ರು.  ಉತ್ತರ ಭಾರತ ಬೇರೆ ಅಲ್ಲಿ ಮೊಘಲ್ ಆಡಳಿತ ಬಂತು ಅಂತ ಕರ್ನಾಟಕದಲ್ಲಿ ಹುಟ್ಟು ಹಾಕ್ತಿದ್ರಿ. ಇವರು ಹೀಗೆ ಮಾಡಲು ಕಾಂಗ್ರೆಸ್ ಕಾರಣ ಎಂದು ವಾಗ್ದಾಳಿ ನಡೆಸಿದರು.

ಈ ಸರ್ಕಾರ ಬರಲು ಕಾಂಗ್ರೆಸ್ ಕಾರಣವಾಗಿದೆ.  ನಮ್ಮ ಮನೆ ಬಾಗಿಲಿಗೆ ಬಂದು ಸಿಎಂ ಮಾಡಿದ್ರಿ. ಇಂತಹ ಪರಿಸ್ಥಿತಿ ಉದ್ಭವ ಆಗಲು ಕಾಂಗ್ರೆಸ್ ಒಂದು ಕಡೆ, ಬಿಜೆಪಿ ಒಂದು ಕಡೆ ಕಾರಣ. ಕನ್ನಡಿಗರೇ ದಾರಿ ತಪ್ಪಬೇಡಿ ಎಂದು ಕುಮಾರಸ್ವಾಮಿ ಮನವಿ ಮಾಡಿಕೊಂಡರು.

ಇದನ್ನೂ ಓದಿ:  ಮಾ.31ರಂದು ರಾಜ್ಯಕ್ಕೆ ರಾಹುಲ್ ಗಾಂಧಿ, ನವೆಂಬರ್ 27ಕ್ಕೆ ವಿಧಾನಸಭೆ ಚುನಾವಣೆನಾ?: DK Shivakumar ಹೇಳಿದ್ದೇನು?

ಈ ರಾಜ್ಯದಲ್ಲಿ ಸರ್ಕಾರ ಏನ್ ಮಾಡ್ತಿದೆ?

ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತೀರಾ? ದೇವಸ್ಥಾನ ಕಟ್ಟುವರು ಓಬಿಸಿ, ದಲಿತರು. ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆಯುವವರು ನೀವುಗಳು. ನೀವು ಮಜಾ ಮಾಡುವವರು. ನಾನು ಇಷ್ಟು ಕಠಿಣವಾಗಿ ಯಾವತ್ತೂ ಮಾತಾಡಿಲ್ಲ. ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಈ ರಾಜ್ಯದಲ್ಲಿ ಸರ್ಕಾರ ಇದೆಯಾ? ಏನ್ ಮಾಡ್ತಿದೆ ಸರ್ಕಾರ? ಆರೂವರೆ ಕೋಟಿ ಜನ ಕ್ಕೆ ನಿಮ್ಮ ಸರ್ಕಾರ ಅಲ್ಲವಾ ಎಂದು ಆಕ್ರೋಶ ಹೊರ ಹಾಕಿದರು.

ಪ್ರಚೋದನಕಾರಿ ಹೇಳಿಕೆ ನೀಡುವವರು ದೇಶ ಉಳಿಸಲ್ಲ

ಸಿಎಂ ವಿರುದ್ಧ ಮಾತಾಡಿದ್ದಕ್ಕೆ ಅರೆಸ್ಟ್ ಮಾಡಿದ್ದೀರಿ. ಪ್ರಚೋದನೆ ಮಾಡುವವರನ್ನು ಅರೆಸ್ಟ್ ಮಾಡಿ. ಈ ರೀತಿಯಲ್ಲಿ ಪ್ರಚೋದನೆ ಮಾಡಿದ್ರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನು ಅರೆಸ್ಟ್ ಮಾಡಿ, ಇವರು ದೇಶ ಉಳಿಸುವವರಲ್ಲ. ಅಮಾಯಕರು ದೇಶ ಉಳಿಸಿದರು. ಯಾವ ಯುವಕರು ಇಂತಹ ಹೇಳಿಕೆ ಪ್ರಚೋದನೆಗೆ ಒಳಗಾಗಬೇಡಿ. ಇದರಿಂದ ನಿಮ್ಮ ಭವಿಷ್ಯ ಹಾಳಾಗಲಿದೆ ಎಂದು ಮತ್ತೆ ಮತ್ತೆ ಹಿಂದೂ ಯುವಕರಲ್ಲಿ ಮನವಿ ಮಾಡಿಕೊಂಡರು.

ಹಲಾಲ್ ಮಾಂಸಕ್ಕೆ ಬಹಿಷ್ಕಾರ: ಸಿಟಿ ರವಿ ಪ್ರತಿಕ್ರಿಯೆ

ಇನ್ನೂ ಹಲಾಲ್ ಮಾಂಸಕ್ಕೆ ಹಿಂದೂ ಸಂಘಟನೆಗಳು ಬಹಿಷ್ಕಾರ ವಿಚಾರಕ್ಕೆ ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ಹಲಾಲ್ ಮಾಂಸ ಉಪಯೋಗಿಸಿ ಅಂತ ಹೇಗೆ ರೈಟ್ಸ್ ಇದೆಯೋ ಹಾಗೇ, ಅದನ್ನ ಬಹಿಷ್ಕರಿಸಿ ಅಂತ ಹೇಳುವ ರೈಟ್ಸ್ ನಮಗೆ ಇದೆ. ಹಲಾಲ್ ಅಂದ್ರೆ ಮುಸ್ಲಿಂರ ಧಾರ್ಮಿಕ ಕ್ರಿಯೆ. ಅದು ಅವರಿಗೆ ಪ್ರಿಯವಾಗಿರುತ್ತದೆ. ಅದನ್ನ ಎಲ್ಲರೂ ಒಪ್ಪಿಕೊಳ್ಳಬೇಕು ಅಂತೇನಾದ್ರು ಇದೆಯಾ ಎಂದು ಸಿ.ಟಿ.ರವಿ ಪ್ರಶ್ನೆ ಮಾಡಿದರು.

ಹಲಾಲ್ ಅನ್ನೋದು ಆರ್ಥಿಕ ಜಿಹಾದ್

ಹಲಾಲ್ ಇಲ್ಲದ ಮಾಂಸ ಅವರು ತಿನ್ನೋದಕ್ಕೆ ರೆಡಿಯಾದ್ರೆ ಹಲಾಲ್ ಆಗಿರುವ ಮಾಂಸ ಇವರು ತಿನ್ನುತ್ತಾರೆ. ಈ ಹಿಂದೆ ಇರುವಂತ ನಿಯಮಗಳನ್ನೆಲ್ಲ ಈಗ್ಲೂ ಒಪ್ಪಿಕೊಳ್ಳಲು ಆಗುತ್ತಾ?  ಹಲಾಲ್ ಅನ್ನೋದು ಒಂದು ಆರ್ಥಿಕ ಜಿಹಾದ್. ಆರ್ಥಿಕ ಜಿಹಾದ್ ಅಂದ್ರೆ‌‌ ಮುಸ್ಲಿಂರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಅಂತ ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಾರೆ. ಹಲಾಲ್ ಮಾಂಸವನ್ನ‌ ಉಪಯೋಗಿಸಬಾರದು ಅಂದ್ರೆ ತಪ್ಪೇನು?

ಇದನ್ನೂ ಓದಿ:  School Text Book: ಟಿಪ್ಪು ಸುಲ್ತಾನ್ ವೈಭವೀಕರಿಸಿರೋ ಅಂಶಗಳನ್ನ ತೆಗೆದುಹಾಕಬಹುದು, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಶಿಫಾರಸು

ಹಲಾಲ್ ಮಾಂಸ್ ಅವರ ದೇವರಿಗೆ ಒಪ್ಪಿಸಿದ್ದು ಅವರಿಗೆ ಪ್ರಿಯ, ನಮ್ಮ ದೇವರಿಗೆ ಎಂಜಲು. ಒಬ್ಬ ಹಿಂದು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಬಂದು ತಗೋತಾರಾ? ಮುಸ್ಲಿಮರ ಅಂಗಡಿಯಲ್ಲಿ ತಗೋಬೇಕು ಅಂತ ನೀವ್ ಯಾಕೆ ಹೇಳ್ತೀರಾ? ಹೇಳೋಕೆ ಏನ್ ರೈಟ್ಸ್ ಇದೆ ಎಂದ್ರು.
Published by:Mahmadrafik K
First published: