• Home
  • »
  • News
  • »
  • state
  • »
  • HD Kumaraswamy: ನಾವು ಸಹಕಾರ ನೀಡದಿದ್ರೆ ಹೆಣ್ಣೆದೆ ಸಿಎಂ ಆಗ್ತಿದ್ರು; ಅಶೋಕ್ ಗಂಡೆದೆ ಹೇಳಿಕೆಗೆ HDK ತಿರುಗೇಟು

HD Kumaraswamy: ನಾವು ಸಹಕಾರ ನೀಡದಿದ್ರೆ ಹೆಣ್ಣೆದೆ ಸಿಎಂ ಆಗ್ತಿದ್ರು; ಅಶೋಕ್ ಗಂಡೆದೆ ಹೇಳಿಕೆಗೆ HDK ತಿರುಗೇಟು

ಎಚ್​ ಡಿ ಕುಮಾರಸ್ವಾಮಿ

ಎಚ್​ ಡಿ ಕುಮಾರಸ್ವಾಮಿ

ಜನರಿಂದ ಲೂಟಿ ಮಾಡಿದ ಹಣವನ್ನು ಹಂಚಲು ಬರ್ತಾರೆ. ಒಂದು ಮತಕ್ಕೆ 2000, ಮತ್ತೆ ಕುಕ್ಕರ್ ಅಂತಾ ಬರ್ತಾರೆ. ಇದೆಲ್ಲದರ ಹಣ ರಾಜ್ಯದ ಜನರಿಂದ ಲೂಟಿ ಮಾಡಿರೋದು. ಆದರೆ ನಾವು ಯಾರು ದುಡ್ಡು ಲೂಟಿ ಹೊಡೆದಿಲ್ಲ. ಭಾರತ್ ಜೋಡೋದಿಂದ ಜನರ ಸಮಸ್ಯೆಗಳ ಅರ್ಥ ಆಗಲ್ಲ ಎಂದು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ವಾಗ್ದಾಳಿ ನಡೆಸಿದರು.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಪಾಪದ ಕೊಡ ತುಂಬಿದೆ ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ (Former CM HD Kumarasamy) ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಗೆ (Assembly Election 2023) ಜೆಡಿಎಸ್ (JDS) ಭರ್ಜರಿ ತಯಾರಿ ನಡೆಸುತ್ತಿದ್ದು, ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದೆ. ಇಂದು ಬೆಳಗ್ಗೆ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪಂಚರತ್ನ ಯೋಜನೆಗೆ ಚಾಲನೆ ನೀಡಲಾಯ್ತು. ಪಂಚರತ್ನ ಯಾತ್ರೆಯ (Pancharatna Yatre) ವಾಹನಗಳಿಗೆ ಪೂಜೆ ಸಲ್ಲಿಸಲಾಯ್ತು. ಮಧ್ಯಾಹ್ನ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ.  ನವೆಂಬರ್ 1ರಂದು ಕೋಲಾರದ ಮುಳಬಾಗಿಲಿನಲ್ಲಿ ಪಂಚರತ್ನ ಕಾರ್ಯಕ್ರಮದ ಮೊದಲ ಸಮಾವೇಶ ನಡೆಯಲಿದೆ.


ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ  ಮಾತನಾಡಿದ ಹೆಚ್​.ಡಿ.ಕುಮಾರಸ್ವಾಮಿ, ಕಾಂಗ್ರೆಸ್​ನವರು ಯಾವ ಜೋಡೋ ಆದರೂ ಮಾಡಿಕೊಳ್ಳಲಿ. ಬಿಜೆಪಿ ಅವರು ಯಾವ ಸಂಕಲ್ಪ ಯಾತ್ರೆ ಆದರೂ ಮಾಡಿಕೊಳ್ಳಲಿ. 2023ಕ್ಕೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರೋದು‌ ನಿಶ್ಚಿತ ಎಂದು ಹೇಳಿದರು.


ನಾನು ಹಣ ಲೂಟಿ ಹೊಡೆದಿಲ್ಲ


ಜನರಿಂದ ಲೂಟಿ ಮಾಡಿದ ಹಣವನ್ನು ಹಂಚಲು ಬರ್ತಾರೆ. ಒಂದು ಮತಕ್ಕೆ 2000, ಮತ್ತೆ ಕುಕ್ಕರ್ ಅಂತಾ ಬರ್ತಾರೆ. ಇದೆಲ್ಲದರ ಹಣ ರಾಜ್ಯದ ಜನರಿಂದ ಲೂಟಿ ಮಾಡಿರೋದು. ಆದರೆ ನಾವು ಯಾರು ದುಡ್ಡು ಲೂಟಿ ಹೊಡೆದಿಲ್ಲ. ಭಾರತ್ ಜೋಡೋದಿಂದ ಜನರ ಸಮಸ್ಯೆಗಳ ಅರ್ಥ ಆಗಲ್ಲ ಎಂದು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ವಾಗ್ದಾಳಿ ನಡೆಸಿದರು.


ಇವಾಗ ಏನೋ ಕಾಂಗ್ರೆಸ್ ನಾಯಕರು ಪಟ್ಟಿ ಮಾಡ್ತಾರಂತೆ. ಆದರೆ ಅವರಿಂದ ಏನು ಕೂಡ ಜನರ ಸಮಸ್ಯೆ ನಿವಾರಣೆ ಮಾಡೋಕೆ ಆಗಲ್ಲ ಎಂದು ಟಾಂಗ್ ನೀಡಿದರು.


ಸಹಕಾರ ಕೊಡದಿದ್ರೆ ಹೆಣ್ಣೆದೆ ಸಿಎಂ ಆಗ್ತಿದ್ರು


ಗಂಡೆದೆ ಮುಖ್ಯಮಂತ್ರಿಗಳು ಎಂಬ ಸಚಿವ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ ಅವರು, ನಾವು ಅವರಿಗೆ ಸಹಕಾರ ಕೊಟ್ಟಿಲ್ಲ ಅಂದಿದ್ರೆ ಅವರು ಹೆಣ್ಣೆದೆ ಮುಖ್ಯಮಂತ್ರಿಗಳು ಆಗಬೇಕಿತ್ತು. ಆದರೆ ಹೆಣ್ಣು ಮಕ್ಕಳ ಮೇಲೆ ನನಗೆ ಗೌರವ ಇದೆ. ಸ್ವಾಮೀಜಿಯನ್ನು ಯಾಕೆ ಗಂಡೆದೆ ಅಂತಾ ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಫ್ರೀಡಂ ಪಾರ್ಕ್​ನಲ್ಲಿ 257 ದಿನ ಕೂರಿಸಿದ್ರು ಎಂದು ಪ್ರಶ್ನೆ ಮಾಡಿದರು.


ಸ್ವಾಮೀಜಿಯನ್ನು ಹೋರಾಟಕ್ಕೆ ಬಿಡದೇ ಮೀಸಲಾತಿ ಹೆಚ್ಚಿಸುವ ತೀರ್ಮಾನವನ್ನು ಗಂಡೆದೆ ಮುಖ್ಯಮಂತ್ರಿ ಗಳು ಮಾಡಬೇಕಿತ್ತು.  ವಿಪಕ್ಷಗಳು ಸಹಕಾರ ಕೊಟ್ಟಿದ್ದಕ್ಕೆ ಮುಖ್ಯಮಂತ್ರಿಗಳು ಗಂಡೆದೆ ಆಗಬೇಕಿತ್ತು ಎಂದು ಕಿಡಿ ಕಾರಿದ್ದಾರೆ.


pancharatna program, jds pancharatna, hd kumaraswamy tweets, kannada news, karnataka news, ಪಂಚರತ್ನ ಕಾರ್ಯಕ್ರಮ, ಜೆಡಿಎಸ್ ಚುನಾವಣೆ ತಯಾರಿ
ಎಚ್​ ಡಿ ಕುಮಾರಸ್ವಾಮಿ


ಇದು ನನ್ನ ಕನಸಿನ ಕಾರ್ಯಕ್ರಮ


ಇಂದು ಅತ್ಯಂತ ಪ್ರಶಸ್ತವಾದ ಘಳಿಗೆ, ಇವತ್ತೆ ರಥಯಾತ್ರೆಗೆ ಚಾಲನೆ ಕೊಟ್ಟಿದ್ದೇನೆ‌. ದೇವೆಗೌಡರು ಈ ಹಿಂದೆ ಇಲ್ಲಿಂದಲೇ ಪೂಜೆ ಸಲ್ಲಿಸಿ ರಥಯಾತ್ರೆ ಆರಂಭಿಸಿ ಯಶಸ್ವಿಯಾಗಿದ್ದು ನೆನಪಲ್ಲಿದೆ.  ನಾಳೆ ಗಾಂಧಿನಗರ ಅಣ್ಣಮ್ಮ ದೇಗುಲದಲ್ಲಿ ಎರಡನೇ ದಿನದ ಕಾರ್ಯಕ್ರಮ ಇಟ್ಕೊಂಡಿದ್ದೀವಿ. ಪಂಚರತ್ನ ಯೋಜನೆ ನನ್ನ ಕನಸಿನ ಕಾರ್ಯಕ್ರಮ ಅದರಲ್ಲಿ ಎರಡು ಮಾತಿಲ್ಲ ಎಂದರು.


ಇದರಿಂದ ಪಕ್ಷಕ್ಕೆ ಶಕ್ತಿ ಒಂದೆಡೆ, ರಾಜ್ಯದ ಅಭಿವೃದ್ಧಿಗೆ ಪೂರಕ.  ಗುರುವಾರವೇ ಅಮೃತ ಘಳಿಗೆ, ಅವತ್ತೇ ನಮ್ಮ 123 ಅಭ್ಯರ್ಥಿಗಳನ್ನ ಕರೆದೊಯ್ದು ಚಾಮುಂಡೇಶ್ವರಿ ಆಶೀರ್ವಾದ ಪಡೆದಿದ್ದೇವೆ. ನನ್ನ ತಂದೆಗೆ ರಕ್ಷಣೆ ಕೊಟ್ಟಿದ್ದು ಶಿವ, ಇತ್ತೀಚೆಗೆ ಪುನರ್ಜನ್ಮ ಕೊಟ್ಟಿದ್ದು ಶಿವ. ಹೀಗಾಗಿ ಗವಿಗಂಗಾಧರೇಶ್ವರ ದೇಗುಲದಿಂದ ಯಾತ್ರೆಗೆ ಚಾಲನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.


ಇದನ್ನೂ ಓದಿ: Praveen Nettar: ಪ್ರವೀಣ್ ನೆಟ್ಟಾರು ಕೇಸ್​ನಲ್ಲಿ ಅವರಿಬ್ಬರ ಕೈವಾಡ ರಿವೀಲ್?  PFI ಮುಖಂಡರು ಅಲ್ಲಿಗೆ ಹೋಗಿದ್ದು ಹತ್ಯೆಗಾ?


ಪಂಚರತ್ನ ಜನತೆಗೆ ಪೂರಕವಾದ ಕಾರ್ಯಕ್ರಮ


ಕಳೆದ ಗುರುವಾರ ನಮ್ಮ ಪಕ್ಷದ 126 ಸಂಭಾವನೀಯ ಅಭ್ಯರ್ಥಿಗಳ ಜೊತೆಗೆ ನಾಡದೇವತೆ ಚಾಮುಂಡಿ ಪೂಜೆ ಮಾಡಿದ್ದೇವೆ. ನಾನು ನಂಬುವ ದೇವತೆ ನಾಡದೇವೆತೆ ಚಾಮುಂಡೇಶ್ವರಿ. ನಮ್ಮ ತಂದೆ ಶಿವನನ್ನ ಪೂಜಿಸುತ್ತಾರೆ. ಹಾಗಾಗಿ ಇಂದು ಇಲ್ಲಿಯೂ ಪೂಜೆ ಮಾಡಿ ಚಾಲನೆ ನೀಡಿದ್ದೇವೆ.


ಪಂಚರತ್ನ ಕಾರ್ಯಕ್ರಮ ನಾಡಿನ ಜನತೆಗೆ ಪೂರಕವಾದ ಕಾರ್ಯಕ್ರಮವಾಗಿದೆ. ನಾಡಿನ ಜನತೆಯ ಅಭಿವೃದ್ಧಿ ಮಾಡೋದು ಹೇಗೆ ಅಂತ ತೋರಿಸುವ ಕಾರ್ಯಕ್ರಮ ಇದಾಗಿದೆ. ನಮ್ಮ ಕಾರ್ಯಕ್ರಮಗಳ ಜನಸ್ನೇಹಿ ಕಾರ್ಯಕ್ರಮಗಳು ಇದರಲ್ಲಿವೆ.  ಇಲ್ಲಿಯವರೆಗೂ ಸರ್ಕಾರ ಗಮನ ಕೊಡದೇ ಇದ್ದಿದ್ದು ಏನಿದೆ? ರೈತರ ಸಾಲಮನ್ನಾ ಮಾಡಿದಾಗ ದುಡ್ಡು ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ರು. ಆರೋಗ್ಯ, ಶಿಕ್ಷಣ, ವಸತಿ ನೀಡುವ ಕೆಲಸ ಮಾಡ್ತೀವಿ.


ಇದನ್ನೂ ಓದಿ:  Raichur: ಹರಿದ 20 ರೂ ನೋಟಿಗಾಗಿ ಮಹಿಳೆಯರಿಬ್ಬರ ಜಗಳ; ಸಣ್ಣ ಮ್ಯಾಟರ್ ದುರಂತದಲ್ಲಿ ಅಂತ್ಯ


ಸಿದ್ದು, ಡಿಕೆಶಿ ಪ್ರವಾಸಕ್ಕೆ ಲೇವಡಿ


ಇದೇ ವೇಳೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಅವರಿಂದ ಪ್ರತ್ಯೇಕ ರಾಜ್ಯ ಪ್ರವಾಸದ ಕುರಿತು ಪ್ರತಿಕ್ರಿಯಿಸಿ, ಇವರ ಪ್ರತ್ಯೇಕ ಪ್ರವಾಸದಿಂದ ನನಗೆ ಯಾವುದೇ ಆತಂಕ ಇಲ್ಲ. ಪಾದಾಯತ್ರೆ ,ಜೋಡೊ ಟ್ರಾಕ್ಟರ್‌ ಜಾಥಾ ಎಲ್ಲಾ ನೋಡಿದ್ದಾರೆ. ಐದು ವರ್ಷಗಳಲ್ಲಿ ಮಾಡದವರು ಈಗ ಏನೋ ಮಾಡಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.


JDS ಪಂಚರತ್ನ ಯೋಜನೆ


1.ಉಚಿತ ಶಿಕ್ಷಣ
2. ಆರೋಗ್ಯ
3. ರೈತರ ಉನ್ನತಿ
4. ಯುವಜನತೆಗೆ ಸ್ವ ಉದ್ಯೋಗ
5. ಪ್ರತಿ ಕುಟುಂಬಕ್ಕೂ ಸ್ವಂತ ಮನೆ

Published by:Mahmadrafik K
First published: