HOME » NEWS » State » FORMER CM HD KUMARASWAMY MOCKS AT CM BS YEDIYURAPPA ABOUT CABINET EXPANSION AT MYSORE LG

10 ಜನ ಮಂತ್ರಿಗಳಾದರೆ ಉಳಿದ ಬಿಜೆಪಿ ಶಾಸಕರೇನು ಕಡುಬು ತಿಂತಾರಾ?; ಕುಮಾರಸ್ವಾಮಿ ಕುಹಕ

ಮಂಡ್ಯದಲ್ಲಿ ನಾರಾಯಣಗೌಡ ಅಭಿವೃದ್ಧಿ ಮಾಡಿ‌ ತೋರಿಸಲಿ. ನಮ್ ಕೈಯಲ್ಲಂತೂ ಆಗಲಿಲ್ಲ, ಆ ಪುಣ್ಯತ್ಮನಾದರೂ ಮಾಡಲಿ. ಹೊಸ ಸಚಿವರು ಟೀಕೆ ಮಾಡುತ್ತಾರೋ, ಅಭಿವೃದ್ಧಿ ಮಾಡ್ತಾರೋ ಕಾದು ನೋಡೋಣ. ನಮ್ಮ ಪಕ್ಷಗಳಿಂದ ಹೊರ ಹೋದ ಶಾಸಕರಿಗೆ ತೃಪ್ತಿ ಆಗಿದೆ. ಅವರು ಈಗ ಶ್ರೀಮಂತರಾಗಿದ್ದಾರೆ ಎಂದು ಕುಟುಕಿದರು.

news18-kannada
Updated:February 6, 2020, 2:28 PM IST
10 ಜನ ಮಂತ್ರಿಗಳಾದರೆ ಉಳಿದ ಬಿಜೆಪಿ ಶಾಸಕರೇನು ಕಡುಬು ತಿಂತಾರಾ?; ಕುಮಾರಸ್ವಾಮಿ ಕುಹಕ
ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ
  • Share this:
ಮೈಸೂರು(ಫೆ.06): ಉಪಚುನಾವಣೆಯಲ್ಲಿ ಗೆದ್ದ 10 ಜನ ಮಂತ್ರಿಗಳಾಗಿ ಮಜಾ ಮಾಡುತ್ತಿದ್ದರೆ, ಬಿಜೆಪಿಯ 105 ಶಾಸಕರು ಕಡುಬು ತಿಂತಾರಾ? ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಕುಹಕವಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್​ವೈ ಸಂಪುಟ ವಿಸ್ತರಣೆ ಕುರಿತು ಲೇವಡಿ ಮಾಡಿದರು. ಸಿಎಂ ಯಡಿಯೂರಪ್ಪ ಮಧ್ಯಾಹ್ನಕ್ಕೊಂದು ಸಂಜೆಗೊಂದು ತೀರ್ಮಾನ ತೆಗೆದುಕೊಳ್ಳುತ್ತಾರೆ. ಮುಂದೆ ಏನಾಗಲಿದೆ ಕಾದು ನೋಡೋಣ. ಯಡಿಯೂರಪ್ಪ  ಸರ್ಕಾರ ಉಳಿಸಿಕೊಳ್ಳುವುದರಲ್ಲಿ ಎಕ್ಸ್​ಪರ್ಟ್​ ಇದ್ದಾರೆ. ಅವರಿಗೆ  ಸರ್ಕಾರ ಬೀಳಿಸೋದು, ರಚಿಸೋದು ಕರಗತವಾಗಿದೆ. ಆ ಅನುಭವದಲ್ಲಿ ಈ ಸರ್ಕಾರ ಉಳಿಸಿಕೊಳ್ತಾರೆಂಬ ವಿಶ್ವಾಸ ನನಗೆ ಇದೆ ಎಂದು ವ್ಯಂಗ್ಯ ಮಾಡಿದರು. ಇದೇ ವೇಳೆ ಸರ್ಕಾರ ಎಷ್ಟು ದಿನ ಇರುತ್ತೆ ಅಂತ ಹೇಳೋಕೆ ನಾನು ಭವಿಷ್ಯಕಾರನಲ್ಲ ಎಂದರು.

ರಾಜಕಾರಣಲ್ಲಿ ಕೆಲವೊಮ್ಮೆ ನಾವು ಸನ್ಯಾಸಿಗಳಾಗಿಯೂ ಇರಬೇಕಾಗುತ್ತೆ; ಎಂ.ಪಿ. ರೇಣುಕಾಚಾರ್ಯ

 ಇಂದಿನ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಯಾವುದೇ ಆಹ್ವಾನ ಬಂದಿಲ್ಲ. ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಬಹಳ ಕಷ್ಟ ಪಟ್ಟು, ಆಸೆ ಹೊತ್ತು ಮಂತ್ರಿಗಳಾಗಿದ್ದಾರೆ.  ಅವರಿಂದ ನಾನು ಒಳ್ಳೆಯ ಆಡಳಿತ ನಿರೀಕ್ಷೆ ಮಾಡುತ್ತೇನೆ ಎಂದು ಹೇಳಿದರು.

ಮಂಡ್ಯದಲ್ಲಿ ನಾರಾಯಣಗೌಡ ಅಭಿವೃದ್ಧಿ ಮಾಡಿ‌ ತೋರಿಸಲಿ. ನಮ್ ಕೈಯಲ್ಲಂತೂ ಆಗಲಿಲ್ಲ, ಆ ಪುಣ್ಯತ್ಮನಾದರೂ ಮಾಡಲಿ. ಹೊಸ ಸಚಿವರು ಟೀಕೆ ಮಾಡುತ್ತಾರೋ, ಅಭಿವೃದ್ಧಿ ಮಾಡ್ತಾರೋ ಕಾದು ನೋಡೋಣ. ನಮ್ಮ ಪಕ್ಷಗಳಿಂದ ಹೊರ ಹೋದ ಶಾಸಕರಿಗೆ ತೃಪ್ತಿ ಆಗಿದೆ. ಅವರು ಈಗ ಶ್ರೀಮಂತರಾಗಿದ್ದಾರೆ ಎಂದು ಕುಟುಕಿದರು.

ಶೇ. 5.15ರ ರಿಪೋ ದರ ಉಳಿಸಿಕೊಂಡ ಆರ್​ಬಿಐ; ಶೇ. 6ರ ಜಿಡಿಪಿ ದರದ ಅಂದಾಜು
Youtube Video
First published: February 6, 2020, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories