ಮೈಸೂರು(ಮಾ.05): ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ, ನರಸಿಂಹರಾಜ ಕ್ಷೇತ್ರದ ಮಾಜಿ ಶಾಸಕ ತನ್ವೀರ್ ಸೇಠ್ ರಾಜಕೀಯವಾಗಿ ತಬ್ಬಲಿಯಾದರೆ ಅವರಿಗೆ ಜೆಡಿಎಸ್ ರಕ್ಷಣೆ ಕೊಡಲಿದೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ತನ್ವೀರ್ ಅವರಿಗೆ ಈಗ ಯಾರ ರಕ್ಷಣೆಯ ಅವಶ್ಯಕತೆ ಇಲ್ಲ, ಅವರನ್ನ ಸೋಲಿಸಲು ನಾವು ಪ್ರಯತ್ನ ಪಟ್ಟಿದ್ದೇವೆ, ಬೇರೆಯವರು ಪ್ರಯತ್ನಿಸಿದ್ದಾರೆ. ಆದ್ರೆ ನರಸಿಂಹರಾಜ ಕ್ಷೇತ್ರದಲ್ಲಿ ಅವರದ್ದೆ ಆದ ಶಕ್ತಿ ಇದೆ. ಮೈಸೂರು ಪಾಲಿಕೆಯಲ್ಲಿ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನ ಮೇಯರ್ ಮಾಡಲು ಸಹಕರಿಸಿದ ತನ್ವೀರ್‌ಗೆ ರಾಜಕೀಯವಾಗಿ ಅನಾನುಕೂಲ ಆದ್ರೆ ಅವರ ಜೊತೆ ಜೆಡಿಎಸ್ ಇರಲಿದೆ ಎಂದು ಸ್ಪಷ್ಟನೆ ನೀಡಿದರು.
ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ನಿರ್ಧಾರವನ್ನ ಕೋಮುವಾದಿಗಳನ್ನ ದೂರ ಇಡಲು ತೆಗೆದುಕೊಂಡ ನಿರ್ಧಾರ ಅಂತ ಸ್ವತಃ ತನ್ವೀರ್‌ಸೇಠ್ ಹೇಳಿದ್ದಾರೆ. ಕೋಮುವಾದ, ಜಾತ್ಯಾತೀತವಾದ ಎಲ್ಲ ಡೋಂಗಿ, ನಾನು ಇದ್ಯಾವುದರ ಬಗ್ಗೆ ಮಾತನಾಡೋಲ್ಲ. ಕೆಟ್ಟ ಶಕ್ತಿಗಳನ್ನ ದೂರ ಇಡುವ ನಿಟ್ಟಿನಲ್ಲಿ ಅವರ ನಿರ್ಧಾರ ಸರಿಯಾಗಿದೆ, ತನ್ವೀರ್ ಜೊತೆಯಲ್ಲಿ ನಾವು ಇದ್ದೀವಿ ಅಂತ ಭರವಸೆ ನೀಡಿದರು. ಬಿಜೆಪಿ ದೂರ ಇಡಬೇಕು, ಜೆಡಿಎಸ್ ದೂರ ಇಡಬೇಕು ಅಂತ ಹೇಳುವವರು, ತನ್ವೀರ್ ಸೇಠ್ ನಿರ್ಧಾರದ ಬಗ್ಗೆ ಸರ್ಟಿಫಿಕೇಟ್ ಕೊಡಲು ಹೊರಟಿದ್ದಾರೆ. ಇದೆಲ್ಲವನ್ನು ನಾನು ಗಮನಿಸಿದ್ದೇನೆ ಅಂತ ತನ್ವೀರ್ ವಿರುದ್ದ ಕತ್ತಿ ಮಸೆಯುತ್ತಿರುವ ಸಿದ್ದರಾಮಯ್ಯನವರ ಹೆಸರು ಹೇಳದೆ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಮೇಯರ್ ಚುನಾವಣೆ ವಿಚಾರದಲ್ಲಿ ಜೆಡಿಎಸ್ ತನ್ವೀರ್ ಜೊತೆಗಿದೆ ಎಂದು ಹೇಳುವ ಮೂಲಕ, ಶಾಸಕ ತನ್ವೀರ್ ಸೇಠ್‌ರನ್ನ ಪರೋಕ್ಷವಾಗಿ ಜೆಡಿಎಸ್‌ಗೆ ಆಹ್ವಾನ ನೀಡಿದರು.
Crime News: ಹದಿಹರೆಯದ ಮಗಳು ಅನ್ಯ ವ್ಯಕ್ತಿಯೊಂದಿಗೆ ಸಂಬಂಧ; ಆಕೆಯ ತಲೆ ಕತ್ತರಿಸಿ ರಸ್ತೆಗೆ ತಂದ ಅಪ್ಪ..!
ಮೈಸೂರು ಮೇಯರ್ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕ ತನ್ವೀರ್‌ಸೇಠ್‌ಗೆ ನೋಟಿಸ್ ನೀಡಲಾಗಿದ್ದು, ಶಾಸಕ ಡಿಕೆಶಿ ಸಹ ಸಿದ್ದರಾಮಯ್ಯರ ಸಿಟ್ಟಿಗೆ ಮಣಿದು ಶರಣಾದಂತೆ ಕಾಣುತ್ತಿದ್ದಾರೆ. ಈ ನಡುವೆ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಶಾಸ ತನ್ವೀರ್ ಏಕಾಂಗಿಯಾದ್ರಾ ಅನ್ನೋ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಇದೀಗ ಜೆಡಿಎಸ್ ಒಬ್ಬೊಬ್ಬರೇ ನಾಯಕರು ತನ್ವೀರ್‌ರನ್ನ ಪಕ್ಷಕ್ಕೆ ಪರೋಕ್ಷವಾಗಿ ಆಹ್ವಾನ ಮಾಡುತ್ತಿರೋದು ಕುತೂಹಲ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ