ಅನರ್ಹರಿಗಾಗಿ ಪ್ರಾಣ ಕೊಡಲು ಮುಂದಾಗಿರುವ ಸಿಎಂ ನಿಮಗೆ ಬೇಕಾ?; ಜನರಿಗೆ ಕುಮಾರಸ್ವಾಮಿ ಪ್ರಶ್ನೆ

ಗೋಕಾಕ್ ನಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ನನ್ನ ಸಮುದಾಯ ಏನಾದರೂ ಆಗಲಿ, ಬೇರೆಯವರು ಗೆಲ್ಲಲಿ ಎಂದು ಹೇಳುತ್ತಾರೆ. ಇವರು ಎಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದನ್ನು ನೀವೇ ನೋಡಿ.

news18-kannada
Updated:November 24, 2019, 11:55 AM IST
ಅನರ್ಹರಿಗಾಗಿ ಪ್ರಾಣ ಕೊಡಲು ಮುಂದಾಗಿರುವ ಸಿಎಂ ನಿಮಗೆ ಬೇಕಾ?; ಜನರಿಗೆ ಕುಮಾರಸ್ವಾಮಿ ಪ್ರಶ್ನೆ
ಬಿ.ಎಸ್.ಯಡಿಯೂರಪ್ಪ ಮತ್ತು ಎಚ್​.ಡಿ.ಕುಮಾರಸ್ವಾಮಿ
  • Share this:
ಬೆಂಗಳೂರು(ನ.24): ರಾಜ್ಯದಲ್ಲಿ ಉಪಚುನಾವಣೆಗೆ ದಿನಗಣನೆ ಶುರುವಾಗಿದೆ. 15 ಕ್ಷೇತ್ರಗಳಲ್ಲಿ ಉಪಸಮರದ ಕಾವು ರಂಗೇರುತ್ತಿದೆ. ಯಶವಂತಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಟ್ಟಿದ್ದಾರೆ. ಜೆಡಿಎಸ್​ ಅಭ್ಯರ್ಥಿ ಜವರಾಯೀಗೌಡ ಪರ ಕಳೆದ ಮೂರು ದಿನಗಳಿಂದಲೂ ಪ್ರಚಾರ ನಡೆಸುತ್ತಿದ್ದಾರೆ.  

ಪ್ರಚಾರದ ವೇಳೆ ಮಾತನಾಡಿದ ಅವರು, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. "ನಾನು ಯಾವತ್ತೂ ಕೂಡ ಜಾತಿಯ ಹೆಸರಲ್ಲಿ ರಾಜಕಾರಣ ಮಾಡಿಲ್ಲ. ಇವಾಗಿನ ಸಿಎಂ‌ ಯಡಿಯೂರಪ್ಪರನ್ನು ಬಡ ಜನರು ಭೇಟಿ ಮಾಡೋಕೆ ಆಗುವುದಿಲ್ಲ. ದುಡ್ಡೇ ಕೊಟ್ಟಿಲ್ಲ ಎಂದು ಈ ಭಾಗದ ಶಾಸಕರು ಹೇಳಿದ್ದಾರೆ. ನಾನು ಅವರಿಗೆ ಸವಾಲು ಹಾಕುತ್ತೇನೆ. ಈ ಬಗ್ಗೆ ಚರ್ಚೆಗೆ ಸಿದ್ದನಿದ್ದೇನೆ. ನೂರಾರು ಕೋಟಿ ಈ ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದೇನೆ. ಈ ಅಭ್ಯರ್ಥಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ," ಎಂದು ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.

ಉಮೇಶ ಕತ್ತಿಗೆ ಸಚಿವ ಸ್ಥಾನ ಕೊಡದಿದ್ದರೆ ಅವರು ನನ್ನ ಬಿಡಬೇಕಲ್ಲ; ಸಿಎಂ ಯಡಿಯೂರಪ್ಪ

ಸಿಎಂ ಪ್ರಾಣ ಕೊಡಬೇಕಿರುವುದು ರಾಜ್ಯದ ಜನತೆಗೆ; ಅನರ್ಹರಿಗಲ್ಲ

"ಬಿಜೆಪಿ ಸರ್ಕಾರವನ್ನು ಪುನಃ ಅಧಿಕಾರಕ್ಕೆ ತರಬೇಕೆಂದು 17 ಶಾಸಕರಿಗೆ ಆಮಿಷ ಒಡ್ಡಿ ನಮ್ಮ‌ ಸರ್ಕಾರ ತೆಗೆದಿದ್ದಾರೆ. ನಿನ್ನೆ ಸಿಎಂ ಯಡಿಯೂರಪ್ಪ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರದ ವೇಳೆ ಜನರ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ.  ಆದರೆ ಅನರ್ಹರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಹೇಳುತ್ತಿದ್ಧಾರೆ. ಪ್ರಾಣ ಬೇಕಾದರೂ ಕೊಟ್ಟು ಅಭ್ಯರ್ಥಿ ಗೆಲ್ಲಿಸುತ್ತೇನೆ  ಎಂದು ಸಿಎಂ ಹೇಳಿದ್ದಾರೆ. ಅವರು ಪ್ರಾಣ ಕೊಡಬೇಕಾಗಿರೋದು ಈ ರಾಜ್ಯದ ಜನರ ಸಮಸ್ಯೆಗಳಿಗಾಗಿ. ಆದರೆ ಇವರ ಬಾಯಲ್ಲಿ ಅನರ್ಹರ ಆಮಿಷಕ್ಕೆ ಒಳಗಾಗಿರುವ ಶಾಸಕರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಹೇಳಿದ್ದಾರೆ. ಇಂತಹ ಸಿಎಂ ನಿಮಗೇ ಬೇಕಾ?," ಎಂದು ಜನರಿಗೆ ಪ್ರಶ್ನೆ ಮಾಡಿದರು.

"ಗೋಕಾಕ್ ನಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ನನ್ನ ಸಮುದಾಯ ಏನಾದರೂ ಆಗಲಿ, ಬೇರೆಯವರು ಗೆಲ್ಲಲಿ ಎಂದು ಹೇಳುತ್ತಾರೆ. ಇವರು ಎಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದನ್ನು ನೀವೇ ನೋಡಿ," ಎಂದರು.

ಹೆಣ್ಣಾಗಿ ನಾನೇ 1,200 ಕೋಟಿ ರೂ. ಅನುದಾನ ತಂದಿದ್ದೇನೆ; ಗಂಡಸ್ಸಾಗಿ ನೀವೆಷ್ಟು ತರಬಹುದಿತ್ತು; ಮಹೇಶ್​​ ಕುಮಟಳ್ಳಿಗೆ ಹೆಬ್ಬಾಳ್ಕರ್​​ ಪ್ರಶ್ನೆ "ಈ ಪಾಪದ ಸರ್ಕಾರವನ್ನು ಮುಂದುವರೆಸಬೇಕಾ? ಅಥವಾ ಅನರ್ಹರಿಗೆ ಶಿಕ್ಷೆ ಕೊಟ್ಟು ಪ್ರಜಾಪ್ರಭುತ್ವ ಉಳಿಸಬೇಕಾ...? ಎನ್ನುವುದನ್ನು ತೀರ್ಮಾನ ಮಾಡಿ. ಡಿಸೆಂಬರ್ 9ರ ನಂತರ ಆಗುವ ಹೊಸ ರಾಜಕೀಯ ಧ್ರುವೀಕರಣಕ್ಕೆ ಸಹಕಾರ ಕೊಡಿ," ಎಂದು ಮನವಿ ಮಾಡಿದರು.

ಯಾರೋ ಒಬ್ಬನ ಗುಲಾಮನಾಗಿ ಕೆಲಸ ಮಾಡಿದರೆ ಸರಿ ಇರಲ್ಲ

"ಇಲ್ಲಿನ ಪೊಲೀಸರೊಬ್ಬರು ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡ್ತಿದ್ದಾರೆಂಬ ಮಾಹಿತಿ ಬಂದಿದೆ. ಆ ಪೊಲೀಸ್ ಅಧಿಕಾರಿಗೆ‌ ನಾನು ಹೇಳುತ್ತಿದ್ದೇನೆ. ನಿಮ್ಮ ನಡವಳಿಕೆ ಬದಲಿಸಿಕೊಳ್ಳಿ. ಯಾರೋ ಒಬ್ಬನ ಗುಲಾಮನಾಗಿ ಕೆಲಸ ಮಾಡಿದರೆ ಸರಿ ಇರಲ್ಲ. ನಾನು ಇವಾಗ ಅಧಿಕಾರದಲ್ಲಿ ಇಲ್ಲದೇ ಇರಬಹುದು. ಆದರೆ ‌ನಾನು‌ ಏನು‌ ಮಾಡಬೇಕೋ ಅದನ್ನು‌ ಮಾಡುತ್ತೇನೆ. ಚುನಾವಣೆ ಆಗುವವರೆಗೂ ಆ ಅಧಿಕಾರಿಯನ್ನು ಬೇರೆ ಕಡೆ ಎತ್ತಂಗಡಿ ಮಾಡಿಸಲು ಬದ್ದನಿದ್ದೇನೆ. ನೀವು ಸರ್ಕಾರದಿಂದ ಸಂಬಳ ಪಡೆಯುವುದು. ಯಾವನೋ ಒಬ್ಬ ವ್ಯಕ್ತಿಯಿಂದ ಅಲ್ಲ ಎಂದು ಪೊಲೀಸ್ ಅಧಿಕಾರಿಗೆ," ಮಾಜಿ ಸಿಎಂ ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟರು.

ಹೊಸಕೋಟೆ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಪರ ಪ್ರಚಾರ ಮಾಡುತ್ತೀರಾ? ಎಂಬ ಪ್ರಶ್ನೆಗೆ, "ಶರತ್ ‌ಬಚ್ಚೇಗೌಡ ಈಗಾಗಲೇ ಅಲ್ಲಿನ ಜನರ ಹೃದಯ ಗೆದ್ದಿದ್ದಾರೆ. ಅವರು ಅಲ್ಲಿ ಗೆದ್ದೇ ಗೆಲ್ಲುತ್ತಾರೆ. ಸದ್ಯಕ್ಕೆ ನನ್ನ ಅವಶ್ಯಕತೆ ಬೇಡ ಅನಿಸುತ್ತದೆ. ಒಂದು ವೇಳೆ ಬೇಕು ಅಂದರೆ ಹೋಗುತ್ತೇನೆ ಎಂದರು.

ಹೊಸಪೇಟೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಯಶವಂತಪುರ ಒಂದೇ ಅಲ್ಲ, 14 ಕ್ಷೇತ್ರಗಳಲ್ಲೂ ಪ್ರಚಾರ‌ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ. ಅದರಂತೆ 14 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುವಲ್ಲಿ ಯಶಸ್ವಿ ಆಗಿದ್ದೆ.  ಆದರೆ ಯಡಿಯೂರಪ್ಪ
ಧಾರ್ಮಿಕ ‌ಸಂಸ್ಥೆಗಳನ್ನು ಉಪಯೋಗಪಡಿಸಿಕೊಂಡು ನಮ್ಮ ಅಭ್ಯರ್ಥಿಗಳ ನಾಮಪತ್ರ ವಾಪಸ್​ ಪಡೆದಿದ್ಧಾರೆ.ಈಗ 12 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ‌‌. ಹೀಗಾಗಿ ಇಷ್ಟು ಅಭ್ಯರ್ಥಿಗಳನ್ನು ಗೆಲ್ಲಿಸುವ ಸವಾಲು ನನ್ನ ಮೇಲೆ ಇದೆ ಎಂದು ಎಚ್​ಡಿಕೆ ಹೇಳಿದರು.

First published:November 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading