ಪೌರತ್ವ ಕಾಯ್ದೆ: ‘ಜನರ ಪ್ರತಿಭಟನೆ ಹಕ್ಕು ಕಿತ್ತುಕೊಂಡ ಬಿಜೆಪಿ ಸರ್ಕಾರ‘; ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ

ಪ್ರಜಾಪ್ರಭುತ್ವ ತೋರಿದ ಹಾದಿಯನ್ನು(ಬೇರೆ ವಿಧಾನ) ಬಳಸಿಕೊಂಡು ರಚನೆಯಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಜೆಗಳ ಪ್ರತಿಭಟನೆಗೆ ಗೌರವ ಕೊಡಬೇಕು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಶಾಂತಿಯುತ ಹೋರಾಟಕ್ಕೆ ಅವಕಾಶ ನೀಡಬೇಕು ಎಂದು ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ.

 • Share this:
  ಬೆಂಗಳೂರು(ಡಿ.19): ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬೀದಿಗಿಳಿದ ಪ್ರತಿಭಟನಕಾರರ ಬಂಧಿಸುವ ಮೂಲಕ ಜನರ ಹಕ್ಕುಗಳನ್ನು ಬಿಜೆಪಿ ಸರ್ಕಾರ ಹತ್ತಿಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿ ಟ್ವೀಟ್​​ ಮೂಲಕ ಕುಟಕಿದ್ದಾರೆ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಜೆಪಿ ಸರ್ಕಾರದ ಆದೇಶದ ಮೇರೆಗೆ ರಾಜ್ಯಾದ್ಯಂತ ಬಹುತೇಖ ಕಡೆ 144 ಸೆಕ್ಷನ್​​ ಜಾರಿಗೊಳಿಸಿದ ಪೊಲೀಸರ ನಡೆ ಖಂಡಿಸಿ ಎಚ್​​.ಡಿ ಕುಮಾರಸ್ವಾಮಿ ಹೀಗೆ ಟ್ವೀಟ್​​ ಮಾಡಿದ್ಧಾರೆ.

  ಇನ್ನು ವಾದ, ವಿವಾದ, ಸಂವಾದ ಪ್ರಜಾಪ್ರಭುತ್ವದ ಮೂಲಭೂತ ಲಕ್ಷಣ. ಹೀಗಾಗಿಯೇ ಪ್ರತಿಭಟಿಸುವುದು, ಅಭಿಪ್ರಾಯ ವ್ಯಕ್ತಪಡಿಸುವುದು ಭಾರತದಲ್ಲಿ ಸಾಂವಿಧಾನಿಕ ಹಕ್ಕು. ಆದರೆ ನಿಷೇಧಾಜ್ಞೆ, ಲಾಠಿ ಚಾರ್ಜ್‌, ಬಂಧನಗಳ ಮೂಲಕ ಬಿಜೆಪಿ ಸರ್ಕಾರ ಸಂವಿಧಾನವೇ ನೀಡಿರುವ ಹಕ್ಕುಗಳನ್ನು ಹತ್ತಿಕ್ಕುತ್ತಿದೆ ಎಂದು ಟ್ವೀಟ್​​ನಲ್ಲಿ ಎಚ್​​.ಡಿ ಕುಮಾರಸ್ವಾಮಿ ಆರೋಪಿಸಿದ್ಧಾರೆ.

  ಸಂವಿಧಾನವನ್ನೇ ಬದಲಿಸಲು ಹೊರಟ ಬಿಜೆಪಿ ಸಂವಿಧಾನದ ಹಕ್ಕುಗಳನ್ನು ಗೌರವಿಸುವುದಿಲ್ಲ ಎಂಬುದು ನಿರೀಕ್ಷಿತವೇ. ಆದರೂ, ಪ್ರಜಾಪ್ರಭುತ್ವ ತೋರಿದ ಹಾದಿಯನ್ನು(ಬೇರೆ ವಿಧಾನ) ಬಳಸಿಕೊಂಡು ರಚನೆಯಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಜೆಗಳ ಪ್ರತಿಭಟನೆಗೆ ಗೌರವ ಕೊಡಬೇಕು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಶಾಂತಿಯುತ ಹೋರಾಟಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟವೂ ಮತ್ತಷ್ಟು ತೀವ್ರಗೊಂಡಿದೆ. ಭಾರತದ ರಾಜಧಾನಿ ದೆಹಲಿ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ಕರ್ನಾಟಕದಲ್ಲೂ ಎನ್​​ಆರ್​​ಸಿ ವಿರುದ್ಧ ಹೋರಾಟದ ಕಿಚ್ಚು ಹಬ್ಬಿದೆ. ಇಂದು ಎಡಪಕ್ಷಗಳು ನೀಡಿದ ರಾಷ್ಟ್ರವ್ಯಾಪಿ ಬಂದ್ ಕರೆಗೆ ಕಾಂಗ್ರೆಸ್​ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡಿದೆ. ಕರ್ನಾಟಕದಲ್ಲಿ 144 ಸೆಕ್ಷನ್​​​ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ನಿಷೇದಾಜ್ಞೆ ಲೆಕ್ಕಿಸದೆ ರಾಜ್ಯಾದ್ಯಂತ ಅಲ್ಪಸಂಖ್ಯಾತ ಮತ್ತು ಪ್ರಗತಿಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ. ಇನ್ನೂ ಬೆಂಗಳೂರಿನ ಟೌನ್​​ ಹಾಲ್​​​ ಮುಂಭಾಗ ನಡೆಸುತ್ತಿದ್ದ ಪ್ರತಿಭಟನೆ ಮಾತ್ರ ತಾತ್ಕಲಿಕವಾಗಿ ಹಿಂಪಡೆಯಲಾಗಿದೆ.

  ಇದನ್ನೂ ಓದಿ: ಪೌರತ್ವ ಕಾಯ್ದೆ ವಿರುದ್ಧ ಜನ ಬೀದಿಗಿಳಿದಿದ್ದಾರೆ: ಪ್ರತಿಭಟನಾಕಾರರ ಕೂಗು ಕೇಳಿಸಿಕೊಳ್ಳಿ; ಕಾಂಗ್ರೆಸ್​​ ಶಾಸಕಿ ಸೌಮ್ಯ ರೆಡ್ಡಿ

  ಈಗಾಗಲೇ ಪೌರತ್ವ ತಿದ್ದುಪಡಿ ಕಾಯ್ದೆಯೂ ದೇಶಾದ್ಯಂತ ಆಕ್ರೋಶದ ಜ್ವಾಲೆ ಹೊತ್ತಿ ಉರಿಸುತ್ತಿದೆ. ಬೆಂಗಳೂರಿನಲ್ಲಿ ಅದೇ ಪೌರತ್ವದ ಬೆಂಕಿಗೆ ರಾಜ್ಯ ಸರ್ಕಾರದ 144 ಸೆಕ್ಷನ್​​ ಕ್ರಮವೂ ತುಪ್ಪ ಸುರಿದಂತಾಗಿದೆ. ಇಂದು ಡಿಸೆಂಬರ್ 19ನೇ ತಾರೀಕಿನಂದು ನಗರದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಕ್ರಮ ತಡೆಯಲು ರಾಜ್ಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಇದರಿಂದ ಕೆರಳಿರುವ ಸಂಘಟನೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿವೆ.

  ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುವ ಮುನ್ನವೇ ರಾಜ್ಯಾದ್ಯಂತ ನಿಷೇಧಾಜ್ಞೆ ಘೋಷಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಇದೇ ವಕೀಲರ ಸಂಘ ಹೈಕೋರ್ಟ್ ಮೊರೆ ಹೋಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ವಕೀಲರು ಆರೋಪಿಸಿದ್ದಾರೆ. ಈ ಅರ್ಜಿ ವಿಚಾರಣೆ ಡಿಸೆಂಬರ್​​​ 21ಕ್ಕೆ ನಡೆಸಲು ರಾಜ್ಯ ಹೈಕೋರ್ಟ್ ಸಮ್ಮತಿಸಿದೆ ಎನ್ನಲಾಗಿದೆ.
  Published by:Ganesh Nachikethu
  First published: