ಜಿಟಿಡಿ ವಿರುದ್ದದ ಸ್ಪರ್ಧೆಗಾಗಿ ಮೈಮುಲ್ ಚುನಾವಣಾ ಅಖಾಡಕ್ಕಿಳಿದ ಮಾಜಿ ಸಿಎಂ ಕುಮಾರಸ್ವಾಮಿ

ನಾನು ಯಾವುದೇ ಪ್ರತಿಷ್ಠೆಗೋಸ್ಕರ ಈ ಚುನಾವಣೆಯಲ್ಲಿ ಭಾಗಿಯಾಗುತ್ತಿಲ್ಲ,  ಇಲ್ಲಿನ ವ್ಯವಸ್ಥೆ ಸರಿಪಡಿಸಲು ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದೇನೆ. ಇಲ್ಲಿನ ಹಳೆಯ ವ್ಯವಸ್ಥಾಪನ ಮಂಡಳಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಒಂದೊಂದು ಉದ್ಯೋಗಕ್ಕೆ 20 ರಿಂದ 45 ಲಕ್ಷ ಹಣ ಪಡೆದಿದ್ದಾರೆ. ಬರೋಬ್ಬರಿ 50 ಕೋಟಿಗು ಹೆಚ್ಚು ಹಣ ಖರ್ಚು ಮಾಡ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ಮೈಸೂರು(ಮಾ.11): ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ನಡುವಿನ ಮುಸುಕಿನ ಗುದ್ದಾಟ ಮತ್ತೆ ಮುಂದುವರೆದಿದ್ದು, ಜಿ.ಟಿ.ದೇವೇಗೌಡ ಯಾವ ಪಾರ್ಟಿಯಲ್ಲಿದ್ದಾರೋ ನನಗೆ ಗೊತ್ತಿಲ್ಲ ಅಂತ ಹೇಳುವ ಮೂಲಕ,ಕುಮಾರಸ್ವಾಮಿ ಜಿಟಿಡಿ ಜೆಡಿಎಸ್‌ ಬಿಡುವುದನ್ನ ಪರೋಕ್ಷವಾಗಿ ವಿವರಿಸಿದ್ದಾರೆ. ಹೌದು, ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಹೆಚ್ಡಿಕೆಗೆ ಮೈಮುಲ್ ವಿಚಾರವಾಗಿ ನಿಮ್ಮದೆ ಪಕ್ಷದ ಶಾಸಕರ ವಿರುದ್ದ ನೀವು ಹೋರಾಟ ಮಾಡ್ತಿದ್ದೀರಲ್ಲ ಸರ್, ಜಿ.ಟಿ.ದೇವೇಗೌಡರು ಜೆಡಿಎಸ್ ಶಾಸಕರಲ್ಲವೇ ಸರ್  ಅಂತ ಪ್ರಶ್ನಿಸಿದಾಗ, ನನಗೆ ಗೊತ್ತಿಲ್ಲ ಬ್ರದರ್‌ ಎಂದು ಪತ್ರಕರ್ತರ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ.

ಜಿ.ಟಿ.ದೇವೆಗೌಡ ಈಗ ಎಲ್ಲಿದ್ದಾರೆ ಅಂತ ನನಗೆ ಗೊತ್ತಿಲ್ಲ. ಅವರು ನಮ್ಮ ಪಕ್ಷದ ಸಿಂಬಲ್‌ನಿಂದ ಗೆದ್ದರಿಬಹುದು, ಅವರು ಚುನಾವಣೆಯಲ್ಲಿ ಗೆಲ್ಲಲು ನನ್ನ ಕಾಣಿಕೆಯೂ ಇರಬಹುದು.  ಆದ್ರೆ ನಮ್ಮ ಸಭೆಗಳಿಗೆ ಬರ್ತಿಲ್ಲ, ನಮ್ಮ ಪಕ್ಷದ ಚಟುವಟಿಕೆಗಳಿಂದ ದೂರ ಇದ್ದಾರೆ ಅವರು ಯಾವ ಪಾರ್ಟಿಯಲ್ಲಿದ್ದಾರೆ ಅಂತ ಅವರೇ ಹೇಳಬೇಕಿದೆ. ಈಗ ಎಲ್ಲಿದ್ದಾರೆ ಮುಂದೆ ಎಲ್ಲಿರ್ತಾರೆ ಅನ್ನೋದನ್ನ ಅವರೇ ಸ್ಪಷ್ಟ ಪಡಿಸಬೇಕು ಎಂದು ಹೇಳುವ ಮೂಲಕ ಬಹುತೇಕ ಜಿಟಿಡಿ ಜೆಡಿಎಸ್ ಬಿಡುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದರು.

ಮೈಸೂರಿನ ಮೈಮುಲ್ ಚುನಾವಣೆಯಲ್ಲಿ ನಾನು ನೇರವಾಗಿ ಭಾಗಿಯಾಗುತ್ತೇನೆ, ಮತ ಕೇಳಲು ನಾನು ಪಿರಿಯಾಪಟ್ಟಣ, ಹೆಚ್‌.ಡಿ.ಕೋಟೆ, ಹುಣಸೂರಿಗೆ ಭೇಟಿ ನೀಡಿ ಸಹಕಾರಿ ಕ್ಷೇತ್ರದ ಚುನಾವಣಾ ಪ್ರಚಾರಕ್ಕು ಭಾಗಿಯಾಗುತ್ತೇನೆ ಎಂದು ಹೇಳಿದ ಮಾಜಿ ಸಿಎಂ ಹೆಚ್‌ಡಿಕೆ, ಇದೆ ಶನಿವಾರ ಮೈಮುಲ್ ಚುನಾವಣಾ ಪ್ರಚಾರಕ್ಕಾಗಿ  ಮೈಸೂರಿಗೆ ಬರ್ತಿನಿ ಎಂದು ತಿಳಿಸಿದರು.

Maha Shivaratri 2021: ದೇಶದೆಲ್ಲೆಡೆ ಇಂದು ಶಿವರಾತ್ರಿ‌ ಸಂಭ್ರಮ; ದಕ್ಷಿಣ ಕಾಶಿ ಉಪ್ಪಿನಂಗಡಿಯಲ್ಲಿ ಮಖೆ‌ ಶಿವರಾತ್ರಿ ಜಾತ್ರೆ

ನಾನು ಯಾವುದೇ ಪ್ರತಿಷ್ಠೆಗೋಸ್ಕರ ಈ ಚುನಾವಣೆಯಲ್ಲಿ ಭಾಗಿಯಾಗುತ್ತಿಲ್ಲ,  ಇಲ್ಲಿನ ವ್ಯವಸ್ಥೆ ಸರಿಪಡಿಸಲು ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದೇನೆ. ಇಲ್ಲಿನ ಹಳೆಯ ವ್ಯವಸ್ಥಾಪನ ಮಂಡಳಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಒಂದೊಂದು ಉದ್ಯೋಗಕ್ಕೆ 20 ರಿಂದ 45 ಲಕ್ಷ ಹಣ ಪಡೆದಿದ್ದಾರೆ. ಬರೋಬ್ಬರಿ 50 ಕೋಟಿಗು ಹೆಚ್ಚು ಹಣ ಖರ್ಚು ಮಾಡ್ತಿದ್ದಾರೆ. ಅದಕ್ಕೆ ದುಡ್ಡು ಕೊಟ್ಟವರು ಕೆಲಸಕ್ಕಾಗಿ ಕಾಯುತ್ತಿರುವವರ ಪರಿಸ್ಥಿತಿ ಏನಾಗಿದೇಯೋ.  ಈ ಮೈಮುಲ್ ಚುನಾವಣೆಯಲ್ಲಿ ಸ್ವಚ್ಚೇಚ್ಚಾರವಾಗಿ ಅಕ್ರಮ ನಡೆದಿದೆ ಇಂತಹ ಅನುಭವ ನನಗೆ ಆಗಿರಲಿಲ್ಲ. ರಾಮನಗರ ಮೈಸೂರಿನಲ್ಲಿ ಇತ್ತೀಚೆಗೆ ಸಹಕಾರಿ ಕ್ಷೇತ್ರದ ಚುನಾವಣೆಗಳು ನನಗೆ ಅನುಭವ ನೀಡಿವೆ ಹಾಗಾಗಿ ಚುನಾವಣೆಯಲ್ಲಿ ನಮ್ಮ ಪಕ್ಷದ ಸಿಂಡಿಕೇಟ್ ಮಾಡಿಕೊಳ್ಳಬೇಕಿದೆ. ನಮ್ಮ ಹಳೆ ನಾಯಕರನ್ನ ನಂಬಿಕೊಳ್ಳದೆ ಕಾರ್ಯಕರ್ತರ ಮೂಲಕ ಚುನಾವಣೆ ನಡೆಸುತ್ತೇವೆ ಈ ಮೈಮುಲ್ ಚುನಾವಣೆಯಲ್ಲಿ ಜೆಡಿಎಸ್‌ ಸಿಂಡಿಕೇಟ್ ಮಾಡಿಕೊಂಡು ಸ್ಪರ್ಧೆಗೆ ಬರ್ತಿವಿ ಎಂದು ತಿಳಿಸಿದರು.

ಹರದನಹಳ್ಳಿ ಆಂಜನೇಯ ಸೇವಾ ಸೋಸೈಟಿಯಿಂದ ನಮ್ಮ ಕುಟುಂಬದ ರಾಜಕಾರಣ ಆರಂಭ ಆಯ್ತು, ಅಲ್ಲಿಂದ ಕೆಂಪುಕೋಟೆವರೆಗೂ ನಮ್ಮ ಕುಟುಂಬ ರಾಜಕಾರಣ ಮಾಡಿದ್ದೇವೆ.  ಈಗಲೂ ಸಹ ದೊಡ್ಡ ಚುನಾವಣೆ ಇರಲಿ, ಸಣ್ಣ ಚುನಾವಣೆ ಇರಲಿ ನಮ್ಮ ಜವಬ್ದಾರಿ ನಿರ್ವಹಿಸುತ್ತೇವೆ,  ಸೋಲು ಗೆಲುವು ಬೇರೆ ವಿಚಾರ.  ಕಾರ್ಯಕರ್ತರಿಗೆ ಉತ್ಸಹ ತುಂಬಲು ನಾವು ಪ್ರತಿ ಚುನಾವಣೆಯಲ್ಲಿ ಭಾಗಿಯಾಗಿದ್ದೇನೆ. ಇದು ನಮ್ಮ ಕುಟುಂಬದ ಗುಣ.  ಅದೆ ಕಾರಣದಿಂದ ಮೈಮುಲ್ ಚುನಾವಣೆಯಲ್ಲಿ ಭಾಗಿಯಾಗಿದ್ದೇವೆ, ಇಲ್ಲಿ ಯಾರ ಪ್ರತಿಷ್ಠೆಯ ವಿರುದ್ದವೂ ನಾವು ಚುನಾವಣೆ ನಡೆಸುತ್ತಿಲ್ಲ. ಕಾರ್ಯಕರ್ತರಿಗೆ ಉತ್ಸಹ ತುಂಬು ಶಕ್ತಿ ಎಷ್ಟಿದೆ ಅಂತ ತೋರಿಸಲು ಈ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಹಿಂದೆ ನಮ್ಮ ಸೋದರ ರೇವಣ್ಣ ಮಾತ್ರ ಈ ಚುನಾವಣೆ ನೋಡಿಕೊಳ್ಳುತ್ತಿದ್ದರು. ಈಗೀಗ ನಾನು ಭಾಗಿಯಾಗುತ್ತಿದ್ದೇನೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
Published by:Latha CG
First published: