ನಾರಾಯಣಗೌಡ ಬಾಂಬೆ ಕಳ್ಳ; ವೇದಿಕೆಯಲ್ಲೇ ಕಣ್ಣೀರು ಹಾಕಿದ ಕುಮಾರಸ್ವಾಮಿ

 ಬಿಎಸ್​ವೈಗೆ ಈಗ ಜಿಲ್ಲೆಯ ಅಭಿವೃದ್ದಿ ಬಗ್ಗೆ‌ ನೆನಪಾಗಿದೆ. ಈಗ ನೀವು ಏನೂ ಕೇಳಿದರೂ ಕೊಡುತ್ತೇನೆ ಅಂತಿದ್ದಾರೆ. 2008ರಲ್ಲಿ ಅವರು ಸಿಎಂ ಆಗಿದ್ದಾಗ ಯಾಕೆ ಈ ಕ್ಷೇತ್ರ ಅಭಿವೃದ್ಧಿ ಮಾಡಲಿಲ್ಲ. ಅವರು ದುಡ್ಡು ಹೊಡೆದು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಟೀಕಿಸಿದರು.

Latha CG | news18-kannada
Updated:November 27, 2019, 2:09 PM IST
ನಾರಾಯಣಗೌಡ ಬಾಂಬೆ ಕಳ್ಳ; ವೇದಿಕೆಯಲ್ಲೇ ಕಣ್ಣೀರು ಹಾಕಿದ ಕುಮಾರಸ್ವಾಮಿ
ಕುಮಾರಸ್ವಾಮಿ
  • Share this:
ಮಂಡ್ಯ,(ನ.27): ಮಾಜಿ ಸಿಎಂ ಕುಮಾರಸ್ವಾಮಿ ಇಂದು ಕೆ.ಆರ್.ಪೇಟೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಬಿ.ಎಲ್​. ದೇವರಾಜು ಪರ ಮತಯಾಚನೆ ಮಾಡುತ್ತಿದ್ದಾರೆ. ಕಿಕ್ಕೇರಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಎಚ್​​ಡಿಕೆ ವೇದಿಕೆಯಲ್ಲೇ ಗಳಗಳನೆ ಅತ್ತರು.

"ನನಗೆ ನಿಮ್ಮ ಪ್ರೀತಿ ಸಾಕು, ಯಾವ ಸಿಎಂ ಹುದ್ದೆಯೂ ಬೇಡ ಎಂದು ವೇದಿಕೆಯಲ್ಲಿಯೇ ಕಣ್ಣೀರಾಕಿ ಜನರ ಬಳಿ ಮತಯಾಚಿಸಿದರು. ಮೈತ್ರಿ ಸರ್ಕಾರದ ವೇಳೆ ನಾನು ಮೊದಲನೇ ದಿನದಿಂದಲೂ ನೆಮ್ಮದಿಯಿಂದ ಕೆಲಸ‌ಮಾಡಲಿಲ್ಲ. ಪರಮೇಶ್ವರ್ ನಮ್ಮ ಪಕ್ಷದವರನ್ನು ಕೋತಿ ಅಂತಾರೆ. ನಾನು ಆ ಪಕ್ಷದವರ ಜೊತೆ ಇದ್ದಾಗ ಗುಲಾಮನಾಗಿ ಕೆಲಸ ಮಾಡಿದೆ. ಕಣ್ಣೀರಾಕುತ್ತಲೇ ಜನರಿಗೆ ತನ್ನ ಸಂದರ್ಭ ವಿವರಿಸಿ ಮತಯಾಚನೆ ಮಾಡಿದರು.

ಸಿಎಂ ಬಿಎಸ್​ವೈ ವಿರುದ್ಧ ವಾಗ್ದಾಳಿ

ಬಿಜೆಪಿ ಹಾಗೂ ಅನರ್ಹರ ವಿರುದ್ಧ ಎಚ್​ಡಿಕೆ ವಾಗ್ದಾಳಿ ನಡೆಸಿದರು. "ಈ ಚುನಾವಣೆ ಅಗತ್ಯ ಇರಲಿಲ್ಲ, ಇವರ ಹಪಾಹಪಿಗೆ ನಾರಾಯಣಗೌಡ ರಾಜೀನಾಮೆ ಕೊಟ್ಟಿದ್ದಾನೆ. ಉತ್ತರಕರ್ನಾಟಕದಲ್ಲಿ ನೆರೆ ಸಂಕಷ್ಟ ಇದ್ದರೂ ಈ ಅನರ್ಹ ಶಾಸಕರು ರಾಜೀನಾಮೆ ಕೊಟ್ಟು ಸರ್ಕಾರ ಬೀಳಿಸಿದರು. ಯಡಿಯೂರಪ್ಪನ ಅಧಿಕಾರ ದಾಹಕ್ಕಾಗಿ ಕುತಂತ್ರದಿಂದ ನನ್ನನ್ನು ಸಿಎಂ ಸ್ಥಾನದಿಂದ ತೆಗೆದರು. ಇದರಿಂದ ನನಗೇನು ಬೇಜಾರಿಲ್ಲ. ಸಿಎಂ ಆಗಲು ಯಡಿಯೂರಪ್ಪ ಇವರನ್ನು ಕುರಿ, ಕೋಳಿ, ಹಸುಗಳನ್ನು ಕೊಂಡಂತೆ ಖರೀದಿ ಮಾಡಿದರು. ಇದು ಯಡಿಯೂರಪ್ಪನವರ ಹುಟ್ಟುಚಾಳಿ. ಇವರು ತನ್ನ ಚಾಳಿಗೆ ಶಾಸಕರನ್ನು ಕೋಟಿ ಕೋಟಿ ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಅವರು ಖರೀದಿ ಮಾಡಿದ ಹಣ ಪಾಪದ ಹಣ. ನಾನು ಸಿ.ಎಂ. ಆಗಿದ್ದಾಗ ಪಾಪದ ಹಣ ಮಾಡಬಹುದಿತ್ತು. ಆದರೆ ನಮ್ಮ ತಂದೆ ತಾಯಿ ಪಾಪದ ಹಣ ಮಾಡುವ ಬುದ್ದಿ ಹೇಳಿಕೊಡಲಿಲ್ಲ," ಎಂದರು.

ಹಣ ಖರ್ಚು ಮಾಡೋದ್ರಲ್ಲಿ ಬಿಜೆಪಿಯವರ ಜತೆ ಸ್ಪರ್ಧೆ ಅಸಾಧ್ಯ; ಸಿದ್ದರಾಮಯ್ಯ

 ಬಿಎಸ್​ವೈಗೆ ಈಗ ಜಿಲ್ಲೆಯ ಅಭಿವೃದ್ದಿ ಬಗ್ಗೆ‌ ನೆನಪಾಗಿದೆ. ಈಗ ನೀವು ಏನೂ ಕೇಳಿದರೂ ಕೊಡುತ್ತೇನೆ ಅಂತಿದ್ದಾರೆ. 2008ರಲ್ಲಿ ಅವರು ಸಿಎಂ ಆಗಿದ್ದಾಗ ಯಾಕೆ ಈ ಕ್ಷೇತ್ರ ಅಭಿವೃದ್ಧಿ ಮಾಡಲಿಲ್ಲ. ಅವರು ದುಡ್ಡು ಹೊಡೆದು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಟೀಕಿಸಿದರು.

ನಾರಾಯಣಗೌಡ ವಿರುದ್ಧ ಕಿಡಿನಾರಾಯಣಗೌಡರಿಗೆ  ಟಿಕೆಟ್ ಕೊಟ್ಟಿದ್ದರಲ್ಲಿ ನನ್ನದು ಮತ್ತು ನಮ್ಮ ಕುಟುಂಬದ ತಪ್ಪಿದೆ. ಆತನನ್ನು ಕರೆತಂದು ಟಿಕೆಟ್ ಕೊಟ್ಟೆವು, ನೀವು ನಮ್ಮ ಕುಟುಂಬದ ಮೇಲಿನ ಪ್ರೀತಿಗೆ ಗೆಲ್ಲಿಸಿ ಕೊಟ್ಟಿರಿ. 2018ರಲ್ಲಿ ನನ್ನ ಕುಟುಂಬದ ವಿರೋಧ ಕಟ್ಟಿಕೊಂಡು ಟಿಕೆಟ್ ನೀಡಿದೆ. ಈಗ ಈತ ನನ್ನ ಮೇಲೆ ಇಲ್ಲ ಸಲ್ಲದ ಆರೋಪದ ಹೇಳಿಕೆ ನೀಡುತ್ತಿದ್ದಾನೆ. ನಾನು ಬಜೆಟ್ ಮಂಡಿಸಲು ಸಿದ್ದತೆ ನಡೆಸುತ್ತಿದ್ದರೆ, ಆತ ಆಸ್ಪತ್ರೆಯಲ್ಲಿ ನಾಟಕ ಆಡ್ಕೊಂಡು ಮಲಗಿದ್ದ ಗಿರಾಕಿ. ಆತ ಆ ಸಮಯದಲ್ಲಿ ನನಗೆ ಒಂದು ಪತ್ರ ಬರೆದಿದ್ದ ಎಂದು ಓದುತ್ತಾ ಅಳುತ್ತಾ ಭಾವುಕರಾದರು.

ಮಾಜಿ ಸಚಿವ ಚಲುವರಾಯಸ್ವಾಮಿ ವಿರುದ್ದ ಕೂಡ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು. "ಆತ ಹೇಳಿದ್ದಂತೆ ನಾನು ತಪ್ಪು ಮಾಡಿದ್ರೆ ಕ್ಷಮೆ ಕೇಳಲು ಸಿದ್ದ. ಆದರೆ ನಾನು ಯಾವತ್ತು ತಪ್ಪು ಮಾಡಿಲ್ಲ. ನಾನು ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆ ಮುಚ್ಚಿಲ್ಲ ಹೊಸ ಕಾರ್ಖಾನೆಗೆ 450 ಕೋಟಿ ಹಣ ಮೀಸಲಿಟ್ಟಿದ್ದೆ. ನಿಮ್ಮ ತಾಕತ್ತಿದ್ದರೆ ಆ ಹಣದಲ್ಲಿ ಸಕ್ಕರೆ ಕಾರ್ಖಾನೆ ಕಟ್ಟಿ ತೋರಿಸಿ. ನಾನು ಇದಕ್ಕೆ ನಾನು‌ ಕ್ಷಮೆ ಕೇಳಬೇಕಾ?," ಎಂದು ಚಲುವರಾಯಸ್ವಾಮಿಗೆ ತಿರುಗೇಟು ನೀಡಿದರು.

ಮಹಾರಾಷ್ಟ್ರದಲ್ಲಿ ಸ್ಪೀಕರ್ ಹುದ್ದೆ ಬದಲು 13 ಸಚಿವ ಸ್ಥಾನದ ಮೇಲೆ ಕಾಂಗ್ರೆಸ್ ಕಣ್ಣು

ನಾನು ಅಮೇರಿಕಾಕ್ಕೆ ಹೋಗಿದ್ದಾಗ ನನ್ನ ಸರ್ಕಾರ ತೆಗೆದಿದ್ದಾರೆ. ಅವತ್ತು ಎಲ್ಲರೂ ಸರ್ಕಾರ ತೆಗೀತಾರೆ ಅಂತಾ ಹೇಳಿದ್ದರು. ಅದು ನಾನು‌ ಕೇಳದೆ ದೇವರು ಕೊಟ್ಟ ಅಧಿಕಾರ ಅಂತೆ. ನಾರಾಯಣಗೌಡ ಈಗ ಸೀರೇ ಕೊಟ್ಟು ಮಗಳ ಮದುವೆ ಹೆಸರಲ್ಲಿ ಬೀಗರೂಟ ಹಾಕಿಸಿದ್ದಾನೆ ಎಂದು ಹೇಳಿದರು.

ಡಿ.9 ನಂತರ ರಾಜ್ಯದಲ್ಲಿ ರಾಜಕೀಯ ಧೃವೀಕರಣ ಆಗುತ್ತದೆ ಎನ್ನುವ ಮೂಲಕ ರಾಜ್ಯ ಸರ್ಕಾರ ಪತನದ ಸುಳಿವು ಬಿಚ್ಚಿಟ್ಟರು. ಡಿ.9ರ ನಂತರ ರಾಜಕೀಯ ಶುದ್ದೀಕರಣ ನಡೆಯುತ್ತದೆ. ನಾವು ಬಿಜೆಪಿ ಸರ್ಕಾರ ಸ್ಥಿರವಾಗಿರುತ್ತೆ ಎಂದು ಹೇಳಿಲ್ಲ. ಸರ್ಕಾರ ಸ್ಥಿರವಾಗಿರುತ್ತೆ ಅಂತಾ ಹೇಳಿದ್ದು. ಅದು ಯಾವ ಸರ್ಕಾರ ಎನ್ನುವುದು ಫಲಿತಾಂಶದ ಬಳಿಕ ಗೊತ್ತಾಗುತ್ತದೆ. ನಮ್ಮ ಮೈತ್ರಿ ಸರ್ಕಾರ ತೆಗೆದ ತಪ್ಪಿಗೆ ಮಹಾರಾಷ್ಟ್ರದಲ್ಲಿ ಅವರ ಸರ್ಕಾರ ಹೋಗಿದೆ ಎಂದರು.

ಸಿದ್ದರಾಮಯ್ಯ ಕೂಡ ಅನ್ನಭಾಗ್ಯ ಅಕ್ಕಿ ವಿಚಾರದಲ್ಲಿ ನನಗೆ ಕಿರುಕುಳ ನೀಡಿದ್ದರು ಎಂದರು.

ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್  ಯಡಿಯೂರಪ್ಪ ಕಾಮಧೇನು ಅಂತಾರೆ.  ಆತ ಕಾಮಧೇನು‌ ಆಗಿರೋದು ರಾಜ್ಯದ ಆರುವರೆ ಕೋಟಿ ಜನರಿಗಿಲ್ಲ ಈ ತರಹದ ಬಾಂಬೆ ಕಳ್ಳರಿಗೆ. ಇನ್ನೊಬ್ಬ ಕಳ್ಳ ಬೆಳಗಾವಿ ಸಾಹುಕಾರ ಅಂತ ಇದ್ದಾನೆ. ಆತ ರೈತರ ಕಬ್ಬು ಹಣ ಕೊಡದೆ ಅವರಿಂದ ಸಾಹುಕಾರ ಆಗಿದ್ದಾನೆ. ಯಡಿಯೂರಪ್ಪ ನನ್ನ ಪ್ರಾಣಕೊಟ್ಟು ನಿಮ್ಮನ್ನು ಉಳಿಸಿಕೊಳ್ಳುತ್ತೇನೆ ಎನ್ನುತ್ತಾರೆ. ನೀವು ಪ್ರಾಣ ಕೊಡಬೇಕಾಗಿರೋದು ಈ ರಾಜ್ಯದ ಜನರಿಗಾಗಿ ಪ್ರಾಣಕೊಡಿ ಅವರಿಗಲ್ಲ.

ಬಿಜೆಪಿ 15 ಕ್ಷೇತ್ರಗಳಲ್ಲಿ ಒಂದನ್ನೂ ಗೆಲ್ಲುವುದು ಕಷ್ಟ; ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​

ದೀಪಾವಳಿ ಹಬ್ಬದ ನಾನು ನಮ್ಮ ಮನೆಯಲ್ಲಿ ಹಬ್ಬ ಮಾಡಲಿಲ್ಲ. ಅವತ್ತು ಬೆಳಗಾವಿಯ ಹಳ್ಳಿಗೆ ಹೋಗಿದ್ದೆ. ಅಲ್ಲಿನ ಲಿಂಗಾಯತ ಜನರ ಸಂಕಷ್ಟ ನೋಡಿ ತುಂಬಾ ದುಃಖ ಆಯಿತು.  ಅಂತದ್ದರಲ್ಲಿ ಯಡಿಯೂರಪ್ಪ ಲಿಂಗಾಯಿತ ಜನರನ್ನು ಬಿಜೆಪಿ ಗೆ ಓಟ್ ಹಾಕಿ‌ ಅಂತಾರೆ. ಇಂತಹ ಜಾತಿ ರಾಜಕಾರಣ ಮಾಡೋ ರಾಜಕಾರಣಿ ಬೇಕಾ.? ಈಗ ಅದೇನೋ ಗೆದ್ದರೆ ಮಂತ್ರಿಯಾಗಿ ಬಿಡುತ್ತಾರೆ ಅಂತಾರೆ. ಸರ್ಕಾರ ಇದ್ದರೆ ತಾನೆ, ಈತ ಮಂತ್ರಿಯಾಗೋದು ಎನ್ನುವ ಮೂಲಕ ಸರ್ಕಾರದ ಪತನದ ಬಗ್ಗೆ ಎಚ್​ಡಿಕೆ ಭವಿಷ್ಯ ನುಡಿದರು.

ಹಾಸನದ ಪ್ರೀತಂ ಗೌಡ ವಿರುದ್ದ ಕೂಡ ಎಚ್​ಡಿಕೆ ವಾಗ್ದಾಳಿ ನಡೆಸಿದರು. ಆತನನ್ನು ಮುಂದಿನ ಸಲ ನೋಡಿಕೊಳ್ಳುತ್ತಾರೆ. ನೀವು ಕುತ್ತಿಗೆ ಕುಯ್ದು ಅವತ್ತು ನನಗೆ ಮಾಡಿದ ಕುತಂತ್ರಕ್ಕೆ ಇವತ್ತು ಆ ದೇವರು ಮಹಾರಾಷ್ಟ್ರದಲ್ಲಿ ತೋರಿಸಿದ್ದಾನೆ. 24 ಗಂಟೆಯಲ್ಲಿ ನಿಮ್ಮ ಬಿಜೆಪಿ ಸರ್ಕಾರ ಪತನವಾಗಿ ಪ್ರತಿಕಾರ ತೀರಿಸಿದ್ದಾನೆ ಆ ದೇವರು ಎಂದರು.

ಮಹಾರಾಷ್ಟ್ರ ರಾಜಕಾರಣ​ ಕರ್ನಾಟಕಕ್ಕೂ ಅನ್ವಯಿಸುತ್ತೆ; ಫಲಿತಾಂಶದ ಬಳಿಕ ಏನು ಬೇಕಾದರೂ ಆಗಬಹುದು; ದೇವೇಗೌಡ

 

First published:November 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ