HDK ಬಾಡಿಗಾರ್ಡ್​ನಿಂದ‌ PSI ಅಭ್ಯರ್ಥಿ ಮೇಲೆ ಹಲ್ಲೆ! ಮಾಜಿ ಸಿಎಂ ಕಾರಿಗೆ ಮುತ್ತಿಗೆ ಯತ್ನ?

ಯುವಕ ಕಾರು ಹೋಗುವನ್ನು ಬೆನತ್ತಿ‌ಮುತ್ತಿಗೆ ಹಾಕಲು ಯತ್ನಿಸಿದ. ಇದನ್ನು ಕಂಡ ಎಚ್.ಡಿ.ಕೆ‌ ಬೆಂಗಾವಲಿಗ ಯುವನ‌ ಮೇಲೆ‌ ಹಲ್ಲೆ‌‌ಮಾಡಿದ ( ಹೊಡೆದ ) ಅಲ್ಲದೇ ಸ್ಥಳೀಯ ಪೊಲೀಸ್ ಕೂಡ ಯುವನಿಗೆ ಥಳಿಸಿದ್ದಾರೆ.

ಎಚ್​.ಡಿ ಕುಮಾರಸ್ವಾಮಿ

ಎಚ್​.ಡಿ ಕುಮಾರಸ್ವಾಮಿ

  • Share this:
ಧಾರವಾಡ(ಜೂ.05): ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರೊ ಅತಿಥಿ ಉಪನ್ಯಾಸಕ ಪ್ರತಿಭಟನೆ (Protest) ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿ ಬರುವಷ್ಟರಲ್ಲಿ ಪಿ.ಎಸ್.ಐ. ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಲ್ಲಿಗೆ ಬಂದ ಎರಡು ಬಣಗಳು ದೊಡ್ಡ ಹೈಡ್ರಾಮಾವನ್ನೇ (High drama) ಸೃಷ್ಟಿ ಮಾಡಿಬಿಟ್ಟವು. ಬಳಿಕ ಓರ್ವ ವಿದ್ಯಾರ್ಥಿಗೆ ಎಚ್.ಡಿ.ಕೆ‌ಬೆಂಗಾವಲಿಗ ಹಾಗೂ ಪೊಲೀಸರು ಹೊಡಿಯೋ ದೃಶ್ಯವು ನಡೆಯಿತು. ವೇತನ ಹೆಚ್ಚಳ, ಸೇವಾ ಭದ್ರತೆಗೆ ಆಗ್ರಹಿಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಆರು ದಿನಗಳಿಂದ ಅತಿಥಿ ಉಪನ್ಯಾಸಕರು ನಡೆಸುತ್ತಿರೋ ಪ್ರತಿಭಟನೆ ಸ್ಥಳದಲ್ಲಿ ನಡೆದ ಹೈಡ್ರಾಮಾ ಸೃಷ್ಟಿಯಾಗಲು ಕಾರಣ.

ಪಿಎಸ್ಐ ಪರೀಕ್ಷಾ ಅಕ್ರಮ ಸಂಬಂದಿಸಿದಂತೆ ಮರು ಪರಿಕ್ಷೆಯನ್ನು ನಡೆಸಲು ಸರ್ಕಾರ ಆದೆಶಿಸಿದೆ. ಇದರಿಂ‌ದ ಆಕ್ರೋಶಗೊಂಡ‌ ಒಂದು ಗುಂಪು ಮರು ಪರೀಕ್ಷೆ ನಡೆಸದಂತೆ‌ ಎಚ್.ಡಿ.ಕೆ ಗೆ ಮನವಿ ಮಾಡಲು ಮುಂದಾದರು ‌ಇತ್ತ ಮರು ಪರೀಕ್ಷೆ ಮಾಡಿ ಎಂದು‌ಮತ್ತೊಂದು ಗುಂಪು ಮನವಿ‌ಮಾಡಲು‌ಮುಂದಾಯುತು.‌ಇದೇ‌ ಸಂದರ್ಭದಲ್ಲಿ ಎಡರು ಗುಂಪುಗಳ ನಡುವೆ ಹೈಡ್ರಾಮಾ ಕ್ರೀಯೆಟ್ ಆಯಿತು.

ಮರು ಪರೀಕ್ಷೆ ಬೇಡ ಎಂದು ಕೇಳಿದ ಅಭ್ಯರ್ಥಿಗಳು

ಅತಿಥಿ ಉಪನ್ಯಾಸಕರು ಮುಷ್ಕರ ನಡೆಸುತ್ತಿರೊ ಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರ ಅಹವಾಲನ್ನು ಸ್ವೀಕರಿಸಿದರು. ಇದಾದ ಬಳಿಕ ಅದೇ ಸ್ಥಳಕ್ಕೆ ಇತ್ತೀಚಿಗೆ ನಡೆದ ಪಿ.ಎಸ್.ಐ. ಪರೀಕ್ಷೆಯಲ್ಲಿ ಆಯ್ಕೆಯಾಗಿರೋ ಅನೇಕ ಅಭ್ಯರ್ಥಿಗಳು ಬಂದು, ಮರು ಪರೀಕ್ಷೆ ಬೇಡ. ಅದನ್ನು ಮಾಡೋದ್ರಿಂದ ಪ್ರಾಮಾಣಿಕವಾಗಿ ಆಯ್ಕೆಯಾದ ತಮಗೆ ಅನ್ಯಾವಾಗುತ್ತೆ ಅಂತಾ ಹೇಳಿದರು.

ಇದನ್ನೂ ಓದಿ: KSRTC Bus: ಬಸ್ಸಿಗಾಗಿ ಸತತ ಐದು ವರ್ಷ ಹೋರಾಡಿ ಕೊನೆಗೂ ಜಯ ದಕ್ಕಿಸಿಕೊಂಡ ಮಹಿಳೆ; ಸಿಕ್ಕಿದ್ದು ಮಾತ್ರ 532ರೂ

ಇದೇ ವೇಳೆ ಮತ್ತೊಂದು ಗುಂಪು ಬಂದು, ತಮಗೆ ಅನ್ಯಾಯವಾಗಿದೆ. ಅಕ್ರಮವಾಗಿ ಆಯ್ಕೆಯಾದವರಿಗೆ ಅವಕಾಶ ಕೊಟ್ಟರೆ, ಕಷ್ಟಪಟ್ಟು ಓದಿದ ನಮ್ಮ ಪಾಡೇನು ಅಂತಾ ಕೇಳಿತು ಪ್ರಶ್ನೆ ಮಾಡಿದರು. ಈ ವೇಳೆ ಗರಂ ಆದ ಎಚ್ಡಿಕೆ, 545 ರಲ್ಲಿ ಪ್ರಾಮಾಣಿಕವಾಗಿ ಆಯ್ಕೆಯಾದವರಿಗೆ ಅನ್ಯಾಯವಾಗೋದಿಲ್ವಾ ಅಂತಾ ಪ್ರಶ್ನಿಸಿದರು.

ಮಾತಿನ ಚಕಮಕಿ

ಇದರಿಂದಾಗಿ ಯುಕವರ ಹಾಗೂ ಎಚ್ಡಿಕೆ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆ ಎರಡೂ ಗುಂಪುಗಳ ನಡುವೆ ಕೂಡ ಮಾತಿನ ಚಕಮಕಿ ಉಂಟಾಯಿತು. ಇದರಿಂದ ಗರಂ ಆದ ಕುಮಾರಸ್ವಾಮಿ, ಪಿ.ಎಸ್.ಐ. ಆಗೋರು ಈ ರೀತಿ ಮಾಡ್ತಾರಾ ಅಂತಾ ಪ್ರಶ್ನಿಸಿ, ಅಲ್ಲಿಂದ ಕುಲಪತಿಯನ್ನು ಭೇಟಿಯಾಗಲು ಹೊದರು.

ಅತ್ತ ಕುಮಾರಸ್ವಾಮಿ ಹೋಗುತ್ತಿದ್ದಂತೆಯೇ ಮರುಪರೀಕ್ಷೆ ಬಯಸೋ ಅಭ್ಯರ್ಥಿಗಳು ಎಚ್ಡಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರಕಾರ ಮರುಪರೀಕ್ಷೆ ನಡೆಸೋ ನಿರ್ಧಾರ ಪ್ರಕಟಿಸಿದಾಗ ಅದನ್ನು ಕುಮಾರಸ್ವಾಮಿ ಸ್ವಾಗತಿಸಿದ್ದರು. ಆದರೆ ಇದೀಗ ಮರುಪರೀಕ್ಷೆ ಬೇಡ ಅನ್ನೋರ ಪರ ಮಾತಾಡ್ತಾ ಇದ್ದಾರೆ. ನಾವು 56 ಸಾವಿರ ಅಭ್ಯರ್ಥಿಗಳಿಗೆ ಅಕ್ರಮದಿಂದ ಅನ್ಯಾಯವಾಗಿಲ್ಲವೇ ಅಂತಾ ಆಕ್ರೋಶ ವ್ಯಕ್ತಪಡಿಸಿ.

ಇದನ್ನೂ ಓದಿ: H.D Revanna: ರೌಡಿಗಳ ತಾಣವಾಗಿದೆ ಹಾಸನ ನಗರ ಪೊಲೀಸ್​ ಠಾಣೆ; ಕೊಲೆಯಾದ ದಿನ ಕೇಕ್ ಕಟ್​​, ಹೊಸ ಬಾಂಬ್ ಸಿಡಿಸಿದ ರೇವಣ್ಣ

ಕುಮಾರಸ್ವಾಮಿ ವಿರುದ್ಧ ಘೋಷಣೆ ಹಾಕಿದ ವಿದ್ಯಾರ್ಥಿಗಳು. ಅಲ್ಲಿಯೇ ಧರಣಿ ಕೂಡಲು ಯತ್ನಿಸಿದ ಎಲ್ಲರನ್ನು ಪೊಲೀಸರು ಗೇಟ್ ನಿಂದ ಹೊರಗೆ ಕಳಿಸಿದರು. ಕುಲಪತಿಯನ್ನು ಭೇಟಿಯಾಗಿ ಬಂದ ಕುಮಾರಸ್ವಾಮಿ ಅವರು ಕಾರಿನಲ್ಲಿ ಹೋಗುವಾಗ ಮರುಪರೀಕ್ಷೆ ಬಯಸೋ ಅಭ್ಯರ್ಥಿಗಳು ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ತಮ್ಮ ಮನವಿಯನ್ನು ತೆಗೆದುಕೊಳ್ಳಲು ನಿರಾಕರಿಸಿದರು ಅನ್ನೋ ಕಾರಣಕ್ಕೆ ಅವರ ಕಾರನ್ನು ಬೆನ್ಹತ್ತಿ ಹೋದರು.

ಯುವಕ ಕಾರ ಹೋಗುವನ್ನು ಬೆನತ್ತಿ‌ಮುತ್ತಿಗೆ ಹಾಕಲು ಯತ್ನಿಸಿದ. ಇದನ್ನು ಕಂಡ ಎಚ್.ಡಿ.ಕೆ‌ ಬೆಂಗಾವಲಿಗ ಯುವನ‌ ಮೇಲೆ‌ ಹಲ್ಲೆ‌‌ಮಾಡಿದ ( ಹೊಡೆದ ) ಅಲ್ಲದೇ ಸ್ಥಳೀಯ ಪೊಲೀಸ್ ಕೂಡ ಯುವನಿಗೆ ಥಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನೆರೆದಿದ್ದ ಯುವಕರು ಮೋದಿ ಮೋದಿ ಅಂತಾ ಘೋಷಣೆ ಹಾಕಿದರು. ಈ ವೇಳೆ ಉಪನಗರ ಠಾಣೆ ಪೊಲೀಸರು ಕುಮಾರಸ್ವಾಮಿ ಅವರನ್ನು ಅಲ್ಲಿಂದ ಕಳಿಸೋ ಹೊತ್ತಿಗೆ ಸುಸ್ತಾಗಿ ಹೋದರು.

ರೌಡಿಸಂ ನಡವಳಿಕೆ

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌.ಡಿ‌. ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಮನವಿ ಕೊಡಲು ಬಂದವರೋ ರೌಡಿಸಂ ರೀತಿ ನಡೆದುಕೊಳ್ಳಲು ಬಂದವರೋ ಅಥವಾ ಮನವಿ ಕೊಡಲು ಬಂದವರೊ,  ಧೋಂಬಿ ಎಬ್ಬಿಸಲು ಆಯೋಜನೆ ಮಾಡಿ ಯಾರೋ ಕಳುಹಿಸಿದ್ದಾರೆ.

ಅದಕ್ಕೆ ನಾನು ಪಾಲುದಾರ ಆಗಲಾ. ನಾನು ಬಹಳ ಜನರನ್ನು ನೋಡಿದ್ದೇನೆ, ಇಂತಹ ಆಟ ನನ್ನ ಹತ್ತಿರ ನಡೆಯೊಲ್ಲ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು. ಅಲ್ಲದೇ ಇದಕ್ಕೆಲ್ಲ ಬಿಜೆಪಿಯೇ ನೇರ ಕಾರಣ ಎಂದು ಆರೋಪ ಮಾಡಿದರು. ನಾನು ಅಲ್ಲಿಗೆ ಬರೋದು ಯಾರಿಗೆ ಗೊತ್ತು, ಯಾರು ಕಳುಹಿಸಿದವರು ಅವರನ್ನ ಅಲ್ಲಿಗೆ, ಏತಕ್ಕೆ ಆ ರೀತಿ ಮಾಡಬೇಕು ಎಂದು ಪ್ರಶ್ನಿಸಿದರು.

ಮನವಿ ಕೊಡೋಕೆ ಬಂದವರು ವಾಹನದ ಮೇಲೆ ನುಗ್ಗುತ್ತಾರಾ?

ಅಲ್ಲೊಬ್ಬ 54 ಸಾವಿರ ಜನ ಮಾನಸಿಕವಾಗಿ ನೊಂದಿದ್ದೇವೆ ಅಂದಾ, ಅವನು ಹೇಳುವ ವಿಧಾನವಾ ಅದು, ಆರಂಭದಲ್ಲೇ ಅವರ ಇಬ್ಬರ ಮನವಿ ಆಲಿಸಿದ್ದೆ. ಆ ಬಳಿಕ ಏತಕ್ಕೆ ಗುಂಪು ಕಟ್ಟಿ ನಿಲ್ಲಬೇಕಿತ್ತು. ಧೋಂಬಿಕೋರರು, ಗಲಭೆಕೋರರ ರೀತಿ ನುಗ್ಗಲು ಬಂದರು. ಸರ್ಕಾರ ನನ್ನ ಕೈಯಲ್ಲಿ ಇದೆಯಾ, ಈಗಾಗಲೇ ಸರ್ಕಾರ ಹೊಸ ಪರೀಕ್ಷೆಯ ತೀರ್ಮಾನ ಮಾಡಿದಲದೆ. ಈಗ ನನ್ನ ಬಳಿ ನ್ಯಾಯ ಕೇಳಲು ಬಂದರೆ ಹೇಗೆ. ವಿಡಿಯೋ ಬೇಕಾದರೆ ನೋಡಿ, ಮನವಿ ಕೊಡಲು ಬಂದವರು ವಾಹನದ ಮೇಲೆ ನುಗ್ಗುತ್ತಾರಾ ಎಂದ ಕುಮಾರಸ್ವಾಮಿ ನೆಟ್ಟಗೆ ಭದ್ರತೆ ಕೊಡಲು ಗೃಹ ಸಚಿವ ಅಗಿಲ್ಲ ಎಂದು ಆಡಳಿತ ಪಕ್ಷದ‌ನಾಯಕರ‌ ವಿರುದ್ಧ ಗುಡುಗಿದರು.

ಇನ್ನು ವೇಳೆ ಮಾಧ್ಯಮಗಳ ಮೇಲೆ ಗರಂ ಆದ ಕುಎ, ನೀವು ಪಾಲಿಟಿಕ್ಸ್ ಮಾಡಬೇಡಿ, ಪಾಲಿಟಿಕ್ಸ್ ನಾವು ಮಾಡುತ್ತೆವೆ. ಅದು ಏನು ಆಗಿದೆಯೋ ಆ ಚಿತ್ರ ಜನರಿಗೆ ತೋರಿಸಿ ಎಂದರು. ಮೋದಿ ಮೋದಿ ಘೋಷಣೆ ವಿಚಾರಕ್ಕೆ ಪ್ರಕ್ರಿಯೆ ನೀಡಿದ ಅವರು ಹಾಗಾದ್ರೆ ಯಾರು ಕಳುಹಿಸಿದ್ದರು ಅವರನ್ನು ಮೋದಿ ಹೆಸರು ಕೂಗಿದ್ದಾರೆ, ಹಾಗಿದ್ದರೆ ನ್ಯಾಯ ಕೇಳಲು ಮೋದಿ ಬಳಿ ಹೋಗಬೇಕಿತ್ತು ನನ್ನ ಬಳಿ ಯಾಕೆ ಬಂದರು ಎಂದು ಪ್ರಶ್ನಿಸಿದರು.
Published by:Divya D
First published: