• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • HD Kumaraswamy: ನರೇಂದ್ರ ಮೋದಿ ಮಂಡ್ಯಕ್ಕಲ್ಲ ರಾಜ್ಯದ ಯಾವ ಭಾಗಕ್ಕೆ ಬಂದರೂ ನಮಗೆ ಚಿಂತೆ ಇಲ್ಲ: ಎಚ್‌ಡಿಕೆ

HD Kumaraswamy: ನರೇಂದ್ರ ಮೋದಿ ಮಂಡ್ಯಕ್ಕಲ್ಲ ರಾಜ್ಯದ ಯಾವ ಭಾಗಕ್ಕೆ ಬಂದರೂ ನಮಗೆ ಚಿಂತೆ ಇಲ್ಲ: ಎಚ್‌ಡಿಕೆ

ಎಚ್‌.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಎಚ್‌.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ)

ನಾವು ಭ್ರಷ್ಟಾಚಾರಕ್ಕೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ ಎಂದ ಎಚ್‌ಡಿ ಕುಮಾರಸ್ವಾಮಿ, ನಾನು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯಕ್ಕೆ ಹಲವಾರು ಯೋಜನೆ ಕೊಟ್ಟೆ. ಇದೇ ಬಿಜೆಪಿ ನಾಯಕರು ಮಂಡ್ಯ ಬಜೆಟ್ ಎಂದು ಆಗ ಹಾಸ್ಯ ಮಾಡಿದ್ರು. ಮೈತ್ರಿ ಸರ್ಕಾರದಲ್ಲಿ ಕೊಟ್ಟ ಹಣವನ್ನು ಬೇರೆ ಕಡೆಗೆ ಡೈವರ್ಟ್ ಮಾಡಿದ್ರು ಎಂದು ಹೇಳಿದರು.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Hassan, India
  • Share this:

ಹಾಸನ: ನರೇಂದ್ರ ಮೋದಿ (Narendra Modi) ಅವರು ಮಂಡ್ಯಕ್ಕಲ್ಲ (Mandya) ರಾಜ್ಯದ ಯಾವುದೇ ಭಾಗಕ್ಕೆ ಬಂದರೂ ನಮಗೆ ಅದರ ಚಿಂತೆ ಇಲ್ಲ, ಮೋದಿ ಅವರು ಜನರನ್ನ ತಾತ್ಕಾಲಿಕವಾಗಿ ಮಾತಿನಲ್ಲಿ ಖುಷಿಪಡಿಸಲು ಹೋದರೂ ಅವರ ಮಾತಿಗೆ ಯಾರು ಮರುಳಾಗೋದಿಲ್ಲ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಹಾಸನದ (Hassan) ಹಿರಿಸಾವೆಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನರೇಂದ್ರ ಮೋದಿ ಅವರು ಮಂಡ್ಯಕ್ಕೆ ಬಂದ ತಕ್ಷಣ ದಳಪತಿಗಳಲ್ಲಿ ತಳಮಳ ಎಂಬ ಮಾತು ಕೇಳಿದ್ದೇನೆ. ನಮಗೆ ಯಾವುದೇ ತಳಮಳವಿಲ್ಲ ಅವರು ಬಂದಿದ್ದು ಗೊತ್ತಿಲ್ಲ ಹೋಗಿದ್ದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.


ನರೇಂದ್ರ ಮೋದಿ ಅವರು ಬಂದಿದ್ದರಿಂದ ಜನತಾದಳಕ್ಕೆ ಯಾವುದೇ ತಳಮಳವೂ ಇಲ್ಲ, ಯಾವುದೇ ಭೀತಿಯೂ ಇಲ್ಲ. ನಾವು ಇವತ್ತು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡುವ ನೈತಿಕತೆಯನ್ನು ಉಳಿಸಿಕೊಂಡಿದ್ದೇವೆ. ಜೆಡಿಎಸ್‌ನವರ ಬಗ್ಗೆ ಮಾತನಾಡುವುದಕ್ಕೆ ಮೋದಿ ಅವರ ಹತ್ರ ಸಬ್ಜೆಕ್ಟ್ ಇಲ್ಲ. ಜೆಡಿಎಸ್ ಬಗ್ಗೆ ಮಾತನಾಡುವುದಕ್ಕೆ ಅವರ ಬಳಿ ಸರಕು ಇಲ್ಲದಿರುವುದರಿಂದ ನಾನು ಮುಖ್ಯಮಂತ್ರಿ ಇದ್ದಾಗಿನಿಂದ ಹಿಡಿದು ದೇವೇಗೌಡ್ರು ಪ್ರಧಾನ ಮಂತ್ರಿ ಇದ್ದಾಗಿನವರೆಗೂ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.


ಇದನ್ನೂ ಓದಿ: JDS Ticket Crisis: ಗೊಂದಲದ ನಡುವೆಯೂ ಹಾಸನದಲ್ಲಿ ರೇವಣ್ಣ ಪ್ರಚಾರ; ಮುಖಂಡರ ತುರ್ತು ಸಭೆ ಕರೆದ ಎಚ್‌ಡಿ ಕುಮಾರಸ್ವಾಮಿ


ನಾವು ಭ್ರಷ್ಟಾಚಾರಕ್ಕೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ ಎಂದ ಎಚ್‌ಡಿ ಕುಮಾರಸ್ವಾಮಿ, ನಾನು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯಕ್ಕೆ ಹಲವಾರು ಯೋಜನೆ ಕೊಟ್ಟೆ. ಇದೇ ಬಿಜೆಪಿ ನಾಯಕರು ಮಂಡ್ಯ ಬಜೆಟ್ ಎಂದು ಆಗ ಹಾಸ್ಯ ಮಾಡಿದ್ರು. ಮೈತ್ರಿ ಸರ್ಕಾರದಲ್ಲಿ ಕೊಟ್ಟ ಹಣವನ್ನು ಬೇರೆ ಕಡೆಗೆ ಡೈವರ್ಟ್ ಮಾಡಿದ್ರು ಎಂದು ಹೇಳಿದರು.


ಇನ್ನು ನರೇಂದ್ರ ಮೋದಿಗೆ ರೌಡಿಶೀಟರ್ ಒಬ್ಬನನ್ನು ಪರಿಚಯ ಮಾಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಎಚ್‌ಡಿ ಕುಮಾರಸ್ವಾಮಿ, ನಿನ್ನೆ ದಿನ ಮೋದಿಯವರು ತಲೆಬಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುವವನಿಗೆ, ಕಾನೂನು ಬಾಹಿರ ಚಟುವಟಿಕೆ ನಡೆಸುವ ಅಂಡರ್‌ವರ್ಲ್ಡ್‌ ಡಾನ್‌ಗಳಿಗೆ ತಲೆಬಾಗಿ ನಮಸ್ಕರಿಸುವ ದೃಶ್ಯ ನೋಡಿದಾಗ ಬಿಜೆಪಿಯ ವ್ಯವಸ್ಥೆ ಯಾವ ಡ್ರೈವರ್ ಸಿಂಗ್ ವ್ಯವಸ್ಥೆಗೆ ಬಂದಿದೆ ಅಂತಾ ಅನ್ನಿಸಿದೆ ಎಂದು ಹೇಳಿದರು.


ಇದನ್ನೂ ಓದಿ: Siddaramaiah: ಯಡಿಯೂರಪ್ಪನಿಗೆ ಮೋಸ ಮಾಡಿದ್ಯಾರ್‌ರೀ? ಇದೇ ಎಚ್‌ಡಿ ಕುಮಾರಸ್ವಾಮಿ: ಸಿದ್ದರಾಮಯ್ಯ ಕಿಡಿ


ಇನ್ನು ಬಿಜೆಪಿಯವರು ಒಕ್ಕಲಿಗರನ್ನ ಟಾರ್ಗೆಟ್ ಮಾಡಿಕೊಂಡು ಉರಿಗೌಡ ನಂಜೇಗೌಡ ಪದ ಬಳಕೆ ಮಾಡುತ್ತಿರುವ ವಿಚಾರಕ್ಕೆ ರಿಯಾಕ್ಟ್ ಮಾಡಿದ ಎಚ್‌ಡಿಕೆ, ನೋಡಿ ಈ ಸಮಾಜದ ಗೌರವವನ್ನು ಹಾಳು ಮಾಡುವಂತದ್ದು ಅದು. ಆ ವ್ಯಕ್ತಿಗಳು ಟಿಪ್ಪುವನ್ನು ಕೊಂದಿರುವ ಇತಿಹಾಸವಿಲ್ಲ. ಆ ಇತಿಹಾಸವನ್ನು ಸೃಷ್ಟಿ ಮಾಡಿರುವವರು ಬಿಜೆಪಿಯವರು. ಇತಿಹಾಸ ಸೃಷ್ಟಿ ಮಾಡಿ ನಮ್ಮ ಸಮಾಜದ ಹೆಸರನ್ನು ಹಾಳು ಮಾಡಿ ಸಮಾಜಕ್ಕೆ ಅಗೌರವ ಸಲ್ಲಿಸುತ್ತಿದ್ದಾರೆ. ಒಕ್ಕಲಿಗರು ಅದನ್ನ ಪ್ರತಿಭಟಿಸಬೇಕು ಮತ್ತು ಧಿಕ್ಕರಿಸಬೇಕಾಗುತ್ತದೆ ಎಂದು ಕರೆ ನೀಡಿದರು.


ಇದೇ ವೇಳೆ ಫೆ. 14ಕ್ಕೆ ಜೆಡಿಎಸ್‌ನ ಎರಡನೇ ಪಟ್ಟಿ ರಿಲೀಸ್ ವಿಚಾರಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಅಂತಿಮ ಪಟ್ಟಿ ಸಿದ್ಧವಾಗುತ್ತಿದೆ. ನಾನು ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡುತ್ತೇನೆ ಎಂದಿದ್ದೇನೆ. ನಾನು ಅದಕ್ಕೆ ಬದ್ಧ ಪಂಚರತ್ನ ಯಾತ್ರೆಯನ್ನು 18ನೇ ತಾರೀಕು ಖಾಲಿ ಇಟ್ಟಿದ್ದೇನೆ. ನಾನು ಯಾವ ಕಾರಣಕ್ಕೆ ಖಾಲಿ ಇಟ್ಟಿದ್ದೇನೆ ಎಂಬುದು ನಿಮಗೂ ಅರ್ಥ ಆಗಿರಬಹುದು. ಅಷ್ಟರಲ್ಲಿ ಎಲ್ಲಾ ಸುಗಮವಾದ ತೀರ್ಮಾನವಾದ್ರೆ 18 ರ ಕಾರ್ಯಕ್ರಮ ಮುಂದುವರೆಯುತ್ತದೆ ಎಂದು ಹೇಳಿದರು.

Published by:Avinash K
First published: