• Home
  • »
  • News
  • »
  • state
  • »
  • H D Kumaraswamy: ನನಗೆ 20 ವರ್ಷ ಅಧಿಕಾರ ಬೇಡ, ಬರೀ 5 ವರ್ಷ ಅವಕಾಶ ಕೊಟ್ಟು ನೋಡಿ

H D Kumaraswamy: ನನಗೆ 20 ವರ್ಷ ಅಧಿಕಾರ ಬೇಡ, ಬರೀ 5 ವರ್ಷ ಅವಕಾಶ ಕೊಟ್ಟು ನೋಡಿ

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

H D Kumaraswamy: ರಾಜ್ಯದ ಜನ ಪ್ರಾದೇಶಿಕ ಪಕ್ಷಕ್ಕೆ ಒಲವು ತೋರಿಸಿ ಒಂದು ಬಾರಿ ನನಗೆ ಅಧಿಕಾರಿ ನೀಡಿ ನೋಡಿಲಿ. ಅವರ ಕಣ್ಮುಂದೆಯೇ ಎಲ್ಲಾ ಕೆಲಸ ಆಗುವುದನ್ನು ನೋಡುತ್ತಾರೆ. ಯಾವ ಸರ್ಕಾರಿ ಕಚೇರಿಗೂ ಹೋಗಿ ಎಡತಾಕುವ ತಲೆನೋವು ಇಲ್ಲದಂಥಾ ಆಡಳಿತ ಕೊಡುವ ಜವಾಬ್ಧಾರಿ ನನ್ನದು ಎಂದು ಈ ಸಂದರ್ಭದಲ್ಲಿ ಎಚ್ಡಿಕೆ ಹೇಳಿದರು.

ಮುಂದೆ ಓದಿ ...
  • Share this:

ಗದಗ: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (H D Kumaraswamy) ಈಗಾಗಲೇ ಮುಂದಿನ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಮಾತನಾಡುತ್ತಿದ್ದಾರೆ. ಹೋದ ಕಡೆಯಲ್ಲೆಲ್ಲಾ ಪಕ್ಷ ಸಂಘಟನೆ (JDS), ಕಾರ್ಯಕರ್ತರಿಗೆ ಬಲ ತುಂಬುವುದು, ಉಳಿದ ಪಕ್ಷಗಳಿಗಿಂತ ಜೆಡಿಎಸ್ ಗೆಲುವು ಕರ್ನಾಟಕದ ಪಾಲಿಗೆ ಯಾಕೆ ಲಾಭದಾಯಕ ಎನ್ನುವ ವಿಚಾರಗಳನ್ನೆಲ್ಲಾ ಆಗಾಗ ಸಂದರ್ಭ ಒದಗಿ ಬಂದಾಗೆಲ್ಲಾ ವಿವರಿಸುತ್ತಲೇ ಇರುತ್ತಾರೆ. ಇಂದು ಆಗಿದ್ದು ಕೂಡಾ ಅದೇ.. ಗದಗ ಜಿಲ್ಲೆಯ ಸುಗ್ನಳ್ಳಿ ಗ್ರಾಮದ ಅಲದಮ್ಮನ ಕೆರೆ ಭೂಮಿ ಪೂಜೆ ಕಾರ್ಯಕ್ರಮ ಇಂದು ನಿಗದಿಯಾಗಿತ್ತು. ಆದರೆ ಧಿಡೀರನೇ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಇದರಿಂದ ಎಚ್ ಡಿ ಕುಮಾರಸ್ವಾಮಿ ಬೆಂಬಲಿಗರು ಸಿಕ್ಕಾಪಟ್ಟೆ ಕೋಪಗೊಂಡಿದ್ದರು. ಆದ್ರೆ ಅದನ್ನೆಲ್ಲಾ ಬದಿಗಿಟ್ಟು ಕುಮಾರಣ್ಣ ರಾಜಕೀಯ ಮಾತನಾಡಿದರು.


ತಾನು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಮಾಡುತ್ತಿದ್ದುದು ಎಲ್ಲರಿಗೂ ಗೊತ್ತಿರುವ ವಿಚಾರ. ಆಗಲೇ ಸುಗ್ನಳ್ಳಿ ಕೆರೆಯ ಅಭಿವೃದ್ಧಿಗೆ ಅನುದಾನ ಒದಗಿಸಿದ್ದೆ. ಈಗ ಕೆರೆ ಹೂಳೆತ್ತುವ ಮತ್ತು ಅಭಿವೃದ್ಧಿ ಸಂಬಂಧಿತ ಕೆಲಸಗಳಿಗೆ ಗುದ್ದಲಿ ಪೂಜೆ ಮಾಡುವ ಕಾರ್ಯಕ್ರಮಗೆ ನನಗೆ ಆಹ್ವಾನ ನೀಡಿದ್ದರು, ನಾನು ಅದಕ್ಕಾಗಿ ಬಂದಿದ್ದೆ. ಶಿರಹಟ್ಟಿಯ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಖುದ್ದು ಈ ಆಹ್ವಾನ ನೀಡಿದ್ದರು. ಉಸ್ತುವಾರಿ ಸಚಿವರಾದ ಸಿ ಸಿ ಪಾಟೀಲ್ ಜೊತೆಯೂ ತಾನು ಮಾತನಾಡಿದ ನಂತರವೇ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಗದಗಕ್ಕೆ ಆಗಮಿಸಿದ್ದೆ. ಆದರೆ ಅನಿರೀಕ್ಷಿತವಾಗಿ ನಿನ್ನೆ ರಾತ್ರಿ ಈ ಕಾರ್ಯಕ್ರಮ ರದ್ದಾಗಿದೆ.


ಹೀಗೆ ಧಿಡೀರನೆ ಕಾರ್ಯಕ್ರಮ ಯಾಕೆ ರದ್ದಾಗಿದೆ ಎಂದು ನನಗೂ ಗೊತ್ತಿಲ್ಲ, ಆದರೆ ಅಭಿವೃದ್ಧಿಯ ಕೆಲಸದಲ್ಲಿ ರಾಜಕೀಯ ಮಾಡಬೇಡಿ ಎಂದು ಜನಪ್ರತಿನಿಧಿಗಳಿಗೆ ಸಲಹೆ ನೀಡುತ್ತೇನೆ ಎಂದು ಎಚ್ಡಿಕೆ ಹೇಳಿದ್ರು. ಇದರೊಂದಿಗೆ ಜನ ತಮ್ಮನ್ನು ಯಾರು ಆಳಬೇಕು ಎನ್ನುವುದನ್ನು ಸರಿಯಾಗಿ ನಿರ್ಧರಿಸಬೇಕು ಎಂದು ಈ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿ ವಿವರವಾಗಿ ತಿಳಿಸಿದರು.


ಇದನ್ನೂ ಓದಿ: ಮುಂದಿನ ಚುನಾವಣೆಗೆ ಎಚ್​ಡಿಕೆ ಮಾಸ್ಟರ್ ಪ್ಲಾನ್; ಚನ್ನಪಟ್ಟಣದಲ್ಲಿ ಸದ್ದಿಲ್ಲದೇ ಸಾಗ್ತಿವೆ ಅಭಿವೃದ್ಧಿ ಕಾರ್ಯಗಳು


ಹಿಂದಿನ 75 ವರ್ಷಗಳಿಂದ ಎಲ್ಲರೂ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರವನ್ನೇ ನೋಡಿದ್ದೀರಿ. ಅವರೊಂದಿಗೆ ಜಂಟಿಯಾಗಿ ಸರ್ಕಾರ ನಡೆಸುವುದು, ಸಮ್ಮಿಶ್ರ ಸರ್ಕಾರ ನಡೆಸುವುದು ಖಂಡಿತಾ ಸಾಧ್ಯವಿಲ್ಲ. ಸ್ವತಂತ್ರವಾಗಿ ಸರ್ಕಾರ ಮಾಡುವ ಅವಕಾಶವನ್ನು ಜನ ಕೊಡಬೇಕು. ಹೆಚ್ಚು ಕೇಳುತ್ತಿಲ್ಲ, ನಾನೇನು 20 ವರ್ಷದ ಅಧಿಕಾರ ಕೇಳುತ್ತಿಲ್ಲ.. ಕೇವಲ 5 ವರ್ಷ ನನಗೆ ಕೊಡಿ. ಒಂದೇ ಒಂದು ಚುನಾವಣೆ ಪರೀಕ್ಷೆಯನ್ನು ಜನ ಮಾಡಲಿ. ನಿಮ್ಮ ಬದುಕನ್ನು ಒಳ್ಳೆಯ ರೀತಿಯಲ್ಲಿ ಮಾಡುವೆ ಎಂದು ಎಚ್ಡಿಕೆ ಭರವಸೆ ನೀಡಿದರು.


ಈಗಾಗಲೇ ಜನರಿಗೆ ಅನುಕೂಲವಾಗುವಂಥಾ ಅನೇಕ ಯೋಜನೆಗಳನ್ನು ನಾನು ಸಿದ್ಧಪಡಿಸಿದ್ದೇನೆ. ಬಿಜೆಪಿ ಅಥವಾ ಕಾಂಗ್ರೆಸ್ ಯಾವ ಸರ್ಕಾರ ಬಂದರೂ ಜನರಿಗೆ ಪ್ರಯೋಜನವಾಗುವಂಥದ್ದು ಏನನ್ನೂ ಮಾಡಿಲ್ಲ. ನಾನು ಜನರಿಗೆ ಪ್ರಯೋಜನವಾಗುವಂಥಾ ಯೋಜನಗಳನ್ನು ಸಿದ್ಧಪಡಿಸಿಕೊಂಡು ಇಟ್ಟಿದ್ದೇನೆ. ನನಗೆ ಬೇಕಾಗಿರುವುದು ಒಂದು ಅವಕಾಶ ಮಾತ್ರ. ರಾಜ್ಯದ ಜನ ಪ್ರಾದೇಶಿಕ ಪಕ್ಷಕ್ಕೆ ಒಲವು ತೋರಿಸಿ ಒಂದು ಬಾರಿ ನನಗೆ ಅಧಿಕಾರಿ ನೀಡಿ ನೋಡಿಲಿ. ಅವರ ಕಣ್ಮುಂದೆಯೇ ಎಲ್ಲಾ ಕೆಲಸ ಆಗುವುದನ್ನು ನೋಡುತ್ತಾರೆ. ಯಾವ ಸರ್ಕಾರಿ ಕಚೇರಿಗೂ ಹೋಗಿ ಎಡತಾಕುವ ತಲೆನೋವು ಇಲ್ಲದಂಥಾ ಆಡಳಿತ ಕೊಡುವ ಜವಾಬ್ಧಾರಿ ನನ್ನದು ಎಂದು ಈ ಸಂದರ್ಭದಲ್ಲಿ ಎಚ್ಡಿಕೆ ಹೇಳಿದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: