• Home
  • »
  • News
  • »
  • state
  • »
  • BY Vijayendraಗೆ ಒಳ್ಳೆಯ ಭವಿಷ್ಯ ಇದೆ, ಎಲ್ಲೇ ನಿಂತರೂ ಗೆಲ್ತಾರೆ: ಪುತ್ರನ ಬಗ್ಗೆ BSY ಮೆಚ್ಚುಗೆ ಮಾತು

BY Vijayendraಗೆ ಒಳ್ಳೆಯ ಭವಿಷ್ಯ ಇದೆ, ಎಲ್ಲೇ ನಿಂತರೂ ಗೆಲ್ತಾರೆ: ಪುತ್ರನ ಬಗ್ಗೆ BSY ಮೆಚ್ಚುಗೆ ಮಾತು

ಬಿವೈ ವಿಜಯೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ

ಬಿವೈ ವಿಜಯೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ

ವಿಜಯೇಂದ್ರಗೆ MLC ಮಾಡಲಾಗಲಿಲ್ಲ ಎಂದು ಕಾಂಗ್ರೆಸ್ ಟೀಕೆ ವಿಚಾರ ಖಾರವಾಗಿಯೇ ತಿರುಗೇಟು ನೀಡಿದರು. ಒಂದೇ ಕುಟುಂಬದವರಿಗೆ ಹೀಗೆ ಮಾಡಬಾರದು ಎಂದು ಪಕ್ಷ ತೀರ್ಮಾನ ತೆಗೆದುಕೊಂಡಿದೆ. ವಿಧಾನಸಭೆ ಚುನಾವಣೆಗೆ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ. ವಿಜಯೇಂದ್ರ ಎಲ್ಲೆ ನಿಂತರು ಗೆದ್ದು ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದೆ ಓದಿ ...
  • Share this:

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಅವರು ವಾಯವ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರ ಹಿನ್ನೆಲೆ ವಿಜಯಪುರಕ್ಕೆ (Vijayapura) ಭೇಟಿ ನೀಡಿರುವ ಯಡಿಯೂರಪ್ಪನವರು ಮಾಧ್ಯಮಗಳ ಜೊತೆ  ಮಾತನಾಡಿದರು. ಪರಿಷತ್ ಚುನಾವಣಾ ಪ್ರಚಾರಕ್ಕೆ (MLC Election Campaign) ಆಗಮಿಸಿದ್ದೇನೆ. ವಾಯವ್ಯ ಶಿಕ್ಷಕರ ಹಾಗೂ ಪದವೀಧರರ ಎರಡೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ರಾಜ್ಯಸಭಾ ಚುನಾವಣೆಯಲ್ಲಿ (Rajysabha Elections) ಮೂರು ಕಡೆ ಸ್ಪರ್ದೆ ಮಾಡಿದ್ದೇವೆ. ಮೂರೂ‌ ಸ್ಥಾನಗಳಲ್ಲಿ ‌ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಲೆಹರ್ ಸಿಂಗ್ (Lehar Singh) ಅವರೂ ದೊಡ್ಡ ಅಂತರದಿಂದ ಗೆಲ್ಲುತ್ತಾರೆ ಎಂದು ನುಡಿದರು.


ರಾಜ್ಯಸಭಾ ಚುನಾವಣೆಯಲ್ಲಿ ಆತ್ಮಸಾಕ್ಷಿ ಮತದಾನ ಆಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸಿದ್ದರಾಮಯ್ಯ ಯಾವುದೇ ಭ್ರಮೆಯಲ್ಲಿದ್ದಾರೆ. ಆತ್ಮಸಾಕ್ಷಿ ಅನ್ನೋ ಶಬ್ದಕ್ಕೆ ಅವರಿಗೆನೋ ಸಂಬಂಧವೇ ಇಲ್ಲಾ. ಆತ್ಮಸಾಕ್ಷಿ ಅನ್ನುವಂಥದ್ದು ಸಿದ್ದರಾಮಯ್ಯ ಅವರಿಗೆ ಎಲ್ಲಿದೆ ಎಂದು ಪ್ರಶ್ನೆ ಮಾಡಿದರು.


ಮೂವರು ಅಭ್ಯರ್ಥಿಗಳು ಗೆಲ್ತಾರೆ


ಆತ್ಮಸಾಕ್ಷಿ ಮತ ಯಾರಿಗೆ ಎಂಬ ಆ ಪ್ರಶ್ನೆ ಉದ್ಭವ ಆಗಲ್ಲ. ಸಿದ್ದರಾಮಯ್ಯನವರಿಗೆ ಎಲ್ಲಾ ಗೊತ್ತಿದೆ.ಈ ರೀತಿ ಹೇಳಿಕೆ ಕೊಡುವದರ ಮೂಲಕ ಪ್ರಚಾರಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಉಪಯೋಗವಾಗಲ್ಲ. ನೂರಕ್ಕೆ ನೂರರಷ್ಟು‌ ಲೆಹರ್ ಸಿಂಗ್ ಸೇರಿದಂತೆ ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಪುನರುಚ್ಚಿಸಿದರು.


ಇದನ್ನೂ ಓದಿ:  Text Book Row: ಸಂಶೋಧಕನಿಗೆ ಸತ್ಯವೇ ಮುಖ್ಯ, ನನ್ನದು ಎರಡೂ ಕಡೆಗೂ ಒಪ್ಪಿಗೆಯಾದ ಪಂಥವಿರಬೇಕು; ರೋಹಿತ್ ಚಕ್ರತೀರ್ಥ


ವಿಜಯೇಂದ್ರಗೆ ಒಳ್ಳೆಯ ಭವಿಷ್ಯವಿದೆ


ಇದೇ ವೇಳೆ ಪುತ್ರ ವಿಜಯೇಂದ್ರ ಭವಿಷ್ಯದಲ್ಲಿ ಸಿಎಂ ಆಗೋ ಲಕ್ಷಣಗಳಿದ್ದಾವೆ ಮಾತು ವಿಚಾರಕ್ಕೆ ಪ್ರತಿಕ್ರಿಯಿಸಿ,  ನಾವು ಆ ಥರಾ ಮಾತನಾಡಿಲ್ಲಾ ಯಾರೋ ಅವರ ಸ್ನೇಹಿತರು ಆತ್ಮೀಯರು ಹೇಳಿದ್ದಾರೆ. ಅದಕ್ಕೆಲ್ಲಾ ನಾ ರಿಯಾಕ್ಷನ್ ಕೊಡಕಾಗೋದಿಲ್ಲಾ ಒಳ್ಳೆಯ ಭವಿಷ್ಯವಿದೆ, ಕೆಲಸಾ ಮಾಡುತ್ತಿದ್ದಾನೆ. ಒಳ್ಳೆಯ ಕೆಲಸಾ ಮಾಡಿ ಮುಂದೆ ಬರಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.


140 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ


ಸಿದ್ದರಾಮಯ್ಯ ಅವರಿಂದ ನನಗೆ ಯಾವುದೇ ಸರ್ಟಿಫಿಕೇಟ್ ಬೇಕಿಲ್ಲ. ಬಿಜೆಪಿ ನನಗೆ ಕೊಟ್ಟ ಸ್ಥಾನಮಾನ ಬೇರೆಯವರಿಗೆ ಸಿಕ್ಕಿಲ್ಲ. ನಾಲ್ಕು ಬಾರಿ ಸಿಎಂ ಆಗಿದ್ದೆ ಎಲ್ಲ ಅವಕಾಶ ಸಿಕ್ಕಿವೆ. ಸಿಎಂ ಸ್ಥಾನಕ್ಕೆ ನಾನಾಗಿಯೇ ರಾಜೀನಾಮೆ ಕೊಟ್ಟು ಬಂದಂತವ. ಅದೇ ಗೌರವ ಪಕ್ಷ, ಜನರು ಇಟ್ಟುಕೊಂಡಿದ್ದಾರೆ. ಪಕ್ಷ‌ ಅಧಿಕಾರಕ್ಕೆ ಬರಲು ಎಲ್ಲ ಪ್ರಯತ್ನವನ್ನ ಮಾಡುವೆ. ಮುಂದಿನ ವಿಧಾನಸಭೆಯಲ್ಲಿ 140 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ವಿಜಯೇಂದ್ರ ಎಲ್ಲೇ ನಿಂತ್ರು ಗೆಲ್ತಾರೆ


ವಿಜಯೇಂದ್ರಗೆ MLC ಮಾಡಲಾಗಲಿಲ್ಲ ಎಂದು ಕಾಂಗ್ರೆಸ್ ಟೀಕೆ ವಿಚಾರ ಖಾರವಾಗಿಯೇ ತಿರುಗೇಟು ನೀಡಿದರು. ಒಂದೇ ಕುಟುಂಬದವರಿಗೆ ಹೀಗೆ ಮಾಡಬಾರದು ಎಂದು ಪಕ್ಷ ತೀರ್ಮಾನ ತೆಗೆದುಕೊಂಡಿದೆ. ವಿಧಾನಸಭೆ ಚುನಾವಣೆಗೆ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ. ವಿಜಯೇಂದ್ರ ಎಲ್ಲೆ ನಿಂತರು ಗೆದ್ದು ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಆರೋಗ್ಯ ಚೆನ್ನಾಗಿದ್ರೆ 10 ವರ್ಷಗಳ ಕಾಲ ಓಡಾಡುತ್ತೇನೆ. ರಾಜ್ಯದಲ್ಲೆಡೆ ಪ್ರವಾಸ ಮಾಡಿ ಪಕ್ಷ ಕಟ್ಟುವೆ. ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನೇತೃತ್ವ ಇರಲಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಚುನಾವಣೆ ಗೆಲ್ಲುತ್ತೇವೆ ಎಂದು ತಿಳಿಸಿದರು.


ಇದನ್ನೂ ಓದಿ:  Belagavi: ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ- ಕೈ, ಕೇಸರಿ ನಾಯಕರ ಮತಬೇಟೆ ಜೋರು


ಮುಂದೆ ವಿಜಯೇಂದ್ರಗೆ ಒಳ್ಳೆಯ ಭವಿಷ್ಯ ಇದೆ. ಒಳ್ಳೆಯ ಅವಕಾಶ ಸಿಗಲಿದೆ. ವಿಜಯೇಂದ್ರ ಇನ್ನೂ ಯುವಕ ಇದ್ದಾನೆ. ಓಡಾಡಿ ಕೆಲಸ ಮಾಡ್ತಿದ್ದಾನೆ.  ಯುವಕರಲ್ಲಿ ವಿಜಯೇಂದ್ರ ಬಗ್ಗೆ ದೊಡ್ಡ ವಿಶ್ವಾಸವಿದೆ ಎಂದು ಪುತ್ರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಬೆಂಕಿ ಹಚ್ಚೋದೇ ಬಿಜೆಪಿಯ ಕೆಲಸ


ಹುಬ್ಬಳ್ಳಿಯಲ್ಲಿ  ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬೆಂಕಿ ಹಚ್ಚೋದೇ ಬಿಜೆಪಿಯ ಕೆಲಸ. ಬಿಜೆಪಿ ಈಗ ಸಾಂಸ್ಕೃತಿಕ ಭಯೋತ್ಪಾದನೆ ಮಾಡುತ್ತಿದೆ. ಪಠ್ಯ ಪುಸ್ತಕ ವಿಚಾರದಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.


ಚಲುವಾದಿ ನಾರಾಯಣ ಸ್ವಾಮಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಮತ್ತಯ ಆರ್ ಎಸ್ ಎಸ್ ಜನ್ಮ ತಾಳಿ 97 ವರ್ಷ ಆಯ್ತು. ಈವರೆಗೂ ದಲಿತರನ್ನ ಹಿಂದುಳಿದವರನ್ನ ಅಧ್ಯಕ್ಷರನ್ನಾಗಿ ಮಾಡಿಲ್ಲ ಎಂಬ ಪ್ರಶ್ನೆ ಕೇಳಿದ್ದೆ ಎಂದರು.

Published by:Mahmadrafik K
First published: