• Home
  • »
  • News
  • »
  • state
  • »
  • BSY: ನಾವು ಮುಸ್ಲಿಂ ಬಾಂಧವರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ: ಬಿಎಸ್‌ವೈ

BSY: ನಾವು ಮುಸ್ಲಿಂ ಬಾಂಧವರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ: ಬಿಎಸ್‌ವೈ

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

ಮುಂದಿನ ಚುನಾವಣೆಯ ಹೊತ್ತಿಗೆ ಮುಸ್ಲಿಂ ಬಾಂಧವರನ್ನು ಕೂಡ ನಮ್ಮ ಜೊತೆ ಕರೆದುಕೊಂಡು ಹೋಗುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇವೆ. ಈ ಬಗ್ಗೆ ನರೇಂದ್ರ ಮೋದಿ ಸಲಹೆಯನ್ನು ನೀಡಿದ್ದಾರೆ. ಈಗಾಗಲೇ ನಾವು ಮುಸ್ಲಿಂ ಬಾಂಧವರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

  • News18 Kannada
  • 5-MIN READ
  • Last Updated :
  • Shimoga, India
  • Share this:

ಶಿವಮೊಗ್ಗ: ಬಿ ಎಸ್ ಯಡಿಯೂರಪ್ಪ ( BS Yediyurappa ) ಕರ್ನಾಟಕ ಬಿಜೆಪಿಯ (Karnataka BJP ) ಅಗ್ರಗಣ್ಯ ನಾಯಕ ಅನ್ನೋದರಲ್ಲಿ ಎರಡು ಮಾತಿಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್‌ವೈ (BSY) ಅವರನ್ನು ಕೆಳಗಿಳಿಸಿದ ಮೇಲೂ ಅವರ ವರ್ಚಸ್ಸು ಮಾತ್ರ ಇನ್ನೂ ಕುಂದಿಲ್ಲ. ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಮಾತು ಕೇಳಿ ಬಂದಾಗಲೆಲ್ಲ ಅವರ ಅನಿವಾರ್ಯತೆ ಪಕ್ಷಕ್ಕೆ ಎದುರಾಗುತ್ತಲೇ ಇರುತ್ತದೆ. ಇದೀಗ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಎದುರುಗೊಳ್ಳುತ್ತಿರುವ ಹೊತ್ತಿನಲ್ಲೇ ಭ್ರಷ್ಟಾಚಾರ, (Corruption) ಕಮಿಷನ್ (40% Commission) ಮುಂತಾದ ಆರೋಪಗಳಿಂದ ಕಂಗೆಟ್ಟಿರುವ ಬಿಜೆಪಿಗೆ ಬಿಎಸ್‌ವೈ ಅನಿವಾರ್ಯತೆ ಎದುರಾಗಿದೆ. ಅದಕ್ಕಾಗಿಯೇ ಹೈಕಮಾಂಡ್ ಲೆವೆಲ್‌ನಲ್ಲಿ ನಡೆದ ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾಜಿ ಸಿಎಂ ಬಿಎಸ್‌ವೈ ಭಾಗವಹಿಸಿ ಬಂದಿದ್ದಾರೆ.


ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡು ಬಂದ ನಂತರ ಬಹಳ ಉತ್ಸಾಹದಿಂದಿರುವ ಬಿಎಸ್‌ ಯಡಿಯೂರಪ್ಪ ಶಿವಮೊಗ್ಗದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ್ದಾರೆ. ಕಾರ್ಯಕಾರಣಿಯ ಕುರಿತಂತೆ ಬಿ ಎಸ್‌ ವೈ ಅವರು, ‘ಎರಡು ದಿನ ಬಹಳ ಒಳ್ಳೆಯ ಸಭೆ ಆಗಿದೆ. ದೇಶದ ಮುಂದಿನ ಪರಿಸ್ಥಿತಿಗಳೇನು ಹಾಗೂ ಮುಂದಿನ ಚುನಾವಣೆ ಗೆಲ್ಲುವ ಬಗ್ಗೆ ಚರ್ಚೆ ನಡೆಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಸುಮಾರು ಒಂದು ಗಂಟೆಗಳ ಕಾಲ ನಮಗೆ ಮಾರ್ಗದರ್ಶನ ನೀಡಿದರು. ಬಹಳ ಉತ್ಸಾಹದಿಂದ ನಾವೆಲ್ಲರೂ ವಾಪಸ್ ಬಂದಿದ್ದೇವೆ ಎಂದು ಹೇಳಿದರು.


ಇದನ್ನೂ ಓದಿ: Yadgir: ಯಾದಗಿರಿಗೆ ಮೋದಿ: ಜನವರಿ 19ರಂದು ಹುಣಸಗಿಯ ಶಾಲಾ-ಕಾಲೇಜುಗಳಿಗೆ ರಜೆ


ಅಮಿತ್‌ ಶಾ, ನರೇಂದ್ರ ಮೋದಿ ರಾಜ್ಯಕ್ಕೆ ಹೆಚ್ಚಿನ ಸಮಯ ಕೊಡ್ತಾರೆ


ಮುಂದುವರಿದು ಮಾತನಾಡಿದ ಬಿಎಸ್‌ವೈ, ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲೇಬೇಕು. ಇದಕ್ಕೆ ನರೇಂದ್ರ ಮೋದಿ ಅವರು ಹಾಗೂ ಅಮಿತ್ ಶಾ ಅವರು ಇನ್ನು ಮುಂದೆ ನಮ್ಮ ರಾಜ್ಯಕ್ಕೆ ಹೆಚ್ಚಿನ ಸಮಯವನ್ನು ಕೊಡುತ್ತಾರೆ. ಆ ಸಮಯವನ್ನ ಸದುಪಯೋಗಪಡಿಸಿಕೊಂಡು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ 150 ಸ್ಥಾನವನ್ನು ಗೆಲ್ಲುತ್ತೇವೆ. ನಾವು ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ತರುತ್ತೇವೆ ಎಂದು ಬಿಜೆಪಿಯ ರಾ‍ಷ್ಟ್ರೀಯ ನಾಯಕರಿಗೆ ಭರವಸೆಯನ್ನು ಕೊಟ್ಟು ಬಂದಿದ್ದೇವೆ. ಆ ವಿಶ್ವಾಸ ನನಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನರೇಂದ್ರ ಮೋದಿ ಅವರು ಅನೇಕ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದರು.




ಮುಸ್ಲಿಮರನ್ನು ಜೊತೆಗೆ ಕರೆದುಕೊಂಡು ಹೋಗ್ತೇವೆ


ಇನ್ನು, ಸ್ಥಳೀಯ ಕಾರ್ಯಕರ್ತರು ಹಾಗೂ ಶಾಸಕರು ಹೆಚ್ಚಿನ ಕೆಲಸ ಮಾಡಬೇಕು ಎಂದು ಹೇಳಿದ ಬಿಎಸ್‌ ಯಡಿಯೂರಪ್ಪ, ಮನೆ ಮನೆಗೆ ಕಾರ್ಯಕರ್ತರು ಭೇಟಿ ಮಾಡಬೇಕು ಎನ್ನುವ ಹೆಚ್ಚಿನ ಕೆಲಸವನ್ನು ಕೊಟ್ಟಿದ್ದಾರೆ. ಈಗಾಗಲೇ ನಾವು ಕೆಲಸವನ್ನು ಪ್ರಾರಂಭಿಸಿದ್ದೇವೆ. ಮುಸ್ಲಿಂ ಬಾಂಧವರನ್ನು ಕೂಡ ನಮ್ಮ ಜೊತೆ ಕರೆದುಕೊಂಡು ಹೋಗುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇವೆ. ಈ ಬಗ್ಗೆ ನರೇಂದ್ರ ಮೋದಿ ಸಲಹೆಯನ್ನು ನೀಡಿದ್ದಾರೆ. ಈಗಾಗಲೇ ನಾವು ಮುಸ್ಲಿಂ ಬಾಂಧವರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ. ಹಾಗೆ ನಮ್ಮ ಬಗ್ಗೆ ಅವರಿಗೂ ಗೌರವವಿದೆ ಎಂದು ಹೇಳಿದರು.


ಇದನ್ನೂ ಓದಿ: BJP ಯಡಿಯೂರಪ್ಪ ಅಧಿಕಾರ ಕಿತ್ತುಕೊಳ್ಳಬಹುದು ಆದ್ರೆ, ಅವ್ರ ಶಕ್ತಿ ಕಿತ್ತುಕೊಳ್ಳಲು ಆಗಲ್ಲ- ಜನಾರ್ದನ ರೆಡ್ಡಿ


ಇನ್ನು, ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿಎಸ್‌ ಯಡಿಯೂರಪ್ಪ, ಏರ್ಪೋರ್ಟ್ ಕೆಲಸ ಎಲ್ಲಾ ಪೂರ್ಣ ಆಗಿದೆ. ಪ್ರಧಾನಿಗಳು ಒಂದು ದಿನ ಸಮಯವನ್ನು ಕೊಡಬಹುದು. ಮುಂದಿನ ತಿಂಗಳು 27ರ ಒಳಗೆ ಏರ್ಪೋರ್ಟ್ ಉದ್ಘಾಟನೆ ಆಗಲಿದೆ. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ ಎಂದು ಹೇಳಿದರು.

Published by:Avinash K
First published: