KS Eshwarappa ತಪ್ಪು ಮಾಡದೇ ಅನಿವಾರ್ಯವಾಗಿ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ: ಬಿ.ಎಸ್.ಯಡಿಯೂರಪ್ಪ

ಇನ್ನೆರಡು ತಿಂಗಳಲ್ಲಿ ತನಿಖೆ ಮುಗಿದರೆ, ಇವರ ಪಾತ್ರವೇನೂ ಇಲ್ಲ ಎಂಬುದು ತಿಳಿಯಲಿದೆ. ಅವರು ನಿರಪರಾಧಿಯಾಗಿ ಹೊರಗೆ ಬರುತ್ತಾರೆ.ಆಗ ಅವರಿಗೆ ಸಂಪುಟದಲ್ಲಿ ಸೇರಿಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ರಾಜೀನಾಮೆಯಿಂದ ಯಾವುದೇ, ಬಿಜೆಪಿಗೆ ಹಿನ್ನಡೆಯಾಗಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ.

ಬಿ. ಎಸ್.ಯಡಿಯೂರಪ್ಪ

ಬಿ. ಎಸ್.ಯಡಿಯೂರಪ್ಪ

  • Share this:
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Contractor Santosh Patil) ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಹಿನ್ನೆಲೆ ಕೆ.ಎಸ್.ಈಶ್ವರಪ್ಪ (KS Eshwarappa) ಅವರು ತಮ್ಮ ಸಚಿವ ಸ್ಥಾನಕ್ಕೆ ಇಂದು ಸಂಜೆ ರಾಜೀನಾಮೆ ಸಲ್ಲಿಸಲಿದ್ದಾರೆ. ಇಂದು ಬೆಳಗ್ಗೆ ಶಿವಮೊಗ್ಗದಲ್ಲಿ ಶುಭಶ್ರೀ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಆಗಮನಕ್ಕೂ ಮೊದಲೇ ಈಶ್ವರಪ್ಪ ಅವರು ಕಾರ್ಯಕ್ರಮದಿಂದ ತೆರಳಿದರು. ನಂತರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಮಾಧ್ಯಮಗಳ ಜೊತೆ ಮಾತನಾಡಿದರು. ಯಾವುದೇ ತಪ್ಪು ಮಾಡದ ಈಶ್ವರಪ್ಪ ಅವರು ಅನಿವಾರ್ಯವಾಗಿ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

ಎರಡು ಮೂರು ತಿಂಗಳಲ್ಲಿ ತನಿಖೆ ಪೂರ್ಣ ಮಾಡಿದರೆ ಈಶ್ವರಪ್ಪ ಅವರು ನಿರಪರಾಧಿ ಎಂಬುದು ತಿಳಿಯಲಿದೆ. ಅವರು ಮತ್ತೆ ಸಚಿವ ಸಂಪುಟಕ್ಕೆ ಈಶ್ವರಪ್ಪ ಸೇರಲು ಯಾವುದೇ ಅಡ್ಡಿ ಇರುವುದಿಲ್ಲ. ಅಪರಾಧ ಮಾಡದೇ ಇದ್ದರೂ ರಾಜೀನಾಮೆ ನೀಡಬೇಕಾಯಿತು. ಖಂಡಿತಾ ಈ ಪ್ರಕರಣ ಈಶ್ವರಪ್ಪ ಎದುರಿಸುತ್ತಾರೆ. ಪ್ರಕರಣದಿಂದ ಹೊರಬಂದು ಮತ್ತೆ ಸಚಿವರಾಗಲಿದ್ದಾರ. ತನಿಖೆ ಮುಗಿದ ಬಳಿಕ ಈಶ್ವರಪ್ಪ‌ ಅವರು ನಿರ್ದೋಷಿ ಎಂಬುದು ಸ್ಪಷ್ಟವಾಗಲಿದೆ ಎಂದು ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಯಾವುದೇ ತಪ್ಪು ಮಾಡದ ಈಶ್ವರಪ್ಪ, ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.. ಅನಿವಾರ್ಯವಾಗಿ, ಸಚಿವ ಸಂಪುಟಕ್ಕೆ ರಾಜಿನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಯಾವುದೋ ಒತ್ತಾಯಕ್ಕಾಗಿ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ಯಾವುದೇ ಅಪರಾಧವಿಲ್ಲದೇ ಇದ್ದರೂ, ರಾಜೀನಾಮೆ ನೀಡುವಂತಾಗಿದೆ.

ಇದನ್ನೂ ಓದಿ:  CM Bommai ಕಪ್ಪು ಚುಕ್ಕೆ, ಪೊಲೀಸರಿಗೆ ಕೆಲಸ ಮಾಡಲು ಬಿಡ್ತಿಲ್ಲ: DK Shivakumar ಹೇಳಿಕೆ

ರಾಜೀನಾಮೆಯಿಂದ ಪಕ್ಷಕ್ಕೆ ಹಿನ್ನಡೆ ಇಲ್ಲ

ಮುಂದಿನ ದಿನಗಳಲ್ಲಿ ಪ್ರಕರಣ ಎದುರಿಸುತ್ತಾರೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಇನ್ನೆರಡು ತಿಂಗಳಲ್ಲಿ ತನಿಖೆ ಮುಗಿದರೆ, ಇವರ ಪಾತ್ರವೇನೂ ಇಲ್ಲ ಎಂಬುದು ತಿಳಿಯಲಿದೆ. ಅವರು ನಿರಪರಾಧಿಯಾಗಿ ಹೊರಗೆ ಬರುತ್ತಾರೆ.ಆಗ ಅವರಿಗೆ ಸಂಪುಟದಲ್ಲಿ ಸೇರಿಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ರಾಜೀನಾಮೆಯಿಂದ ಯಾವುದೇ, ಬಿಜೆಪಿಗೆ ಹಿನ್ನಡೆಯಾಗಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ.

ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ: ಕಾರಜೋಳ ಪ್ರತಿಕ್ರಿಯೆ

ಕಾಂಗ್ರೆಸ್ ನವರು ಎಲ್ಲರದ್ದೂ ರಾಜೀನಾಮೆಯನ್ನು ಕೇಳ್ತಾರೆ.. ಪ್ರಧಾನ ಮಂತ್ರಿಯವರದ್ದು ಕೇಳ್ತಾರೆ. ಈಗ ಈಶ್ವರಪ್ಪನವರು ರಾಜೀನಾಮೆ ಕೊಡ್ತೀನಿ ಅಂತ ಹೇಳಿದ್ದಾರೆ. ತನಿಖೆ ಮಾಡಲಿ..ಸತ್ಯ ಗೊತ್ತಾಗಲಿ. ಇದರಲ್ಲಿ ಷಡ್ಯಂತ್ರ ಕಾಣ್ತಿದೆಯಂತೆ ಎಂದು ವರದಿ ಆಗುತ್ತಿದೆ.  ದೇಶದ ಮಾಜಿ ಪ್ರಧಾನಿ ದೇವೇಗೌಡರೇ ಹೇಳಿದ್ದಾರೆ. ನೀವೇ ಬರೆದಿದ್ದೀರಿ, ತೋರಿಸಿದ್ದೀರಿ..ಹೌದಲ್ವಾ. ನಾವು ಅರ್ಥ ಮಾಡಿಕೊಳ್ಳಬೇಕು, ಸತ್ಯ ಗೊತ್ತಿರಬೇಕು. ಇನ್ನೊಬ್ಬರ ಮುಖಕ್ಕೆ ಮಸಿ ಹಚ್ಚಬೇಕಾದ್ರೆ ನಮ್ಮ ಕೈಗೆ ಮಸಿ ಹಚ್ಚಿಕೊಳ್ಳಬೇಕಾಗುತ್ತೇ ಅನ್ನೋ ಸತ್ಯ ಗೊತ್ತಿರಬೇಕು.

ನಿಷ್ಪಕ್ಷಪಾತ ತನಿಖೆಯಾಗಿ ಸತ್ಯ ಹೊರ ಬರಲಿ

ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ಸಿಗರ ಕೈವಾಡ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾರಜೋಳ, ಪೂರ್ಣ ಪ್ರಮಾಣದ ಮಾಹಿತಿ ಇಲ್ಲದೆ ಮಾತನಾಡೋದು ನನ್ನ ಸಂಸ್ಕೃತಿ ಅಲ್ಲ. ಈ ಬಗ್ಗೆ ತನಿಖೆ ನಡೆಯುತ್ತೇ, ಇದರಲ್ಲಿ ಯಾರಿದಾರೆ ಇಲ್ಲಾ ಅನ್ನೋದು ಗೊತ್ತಾಗುತ್ತದೆ.  ಬೆಳಗಾವಿ ಜಿಲ್ಲಾ ಉಸ್ತುವಾರಿ ಇರೋದ್ರಿಂದ ಮೊದಲ ದಿನವೇ ಈ ಬಗ್ಗೆ ತನಿಖೆಯಾಗಲೆಂದು ನಾನೇ ಹೇಳಿದ್ದೀನಿ. ನಿಷ್ಪಕ್ಷಪಾತ ತನಿಖೆಯಾಗಿ ಸತ್ಯ ಹೊರ ಬರಲಿ ಎಂದು ಹೇಳಿದರು.

ಇದನ್ನೂ ಓದಿ:  PSI ನೇಮಕಾತಿಯಲ್ಲಿ BJP, RSS ಕಾರ್ಯಕರ್ತರ ನೇಮಕ, ಒಬ್ಬರಿಂದ 70 ರಿಂದ 80 ಲಕ್ಷ ಲಂಚ: Congress ಆರೋಪ

ಈಶ್ವರಪ್ಪ ರಾಜೀನಾಮೆ ನಮ್ಮ ಬೇಡಿಕೆ ಅಲ್ಲ

ಈಶ್ಚರಪ್ಪ ರಾಜೀನಾಮೆ (KS Eshwarappa Resignation) ನಮ್ಮ ಬೇಡಿಕೆ ಅಲ್ಲ. ಅವರ ಮೇಲೆ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿವೆ. 4 ಕೋಟಿ ರೂ. ಗೆ 40% ಕಮಿಷನ್ ಕೇಳಿರುವ ಆರೋಪವಿದೆ. ರಾಜೀನಾಮೆ ಕೊಡ್ತಾರೋ ಬಿಡ್ತಾರೊ ನಂಗೆ ಡೌಟಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಇದು ನಮ್ಮ ಪ್ರಮುಖ ಬೇಡಿಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
Published by:Mahmadrafik K
First published: