• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Arun Kumar Puttila: ಬಿಎಸ್‌ವೈ ಕರೆ ಮಾಡಿದ್ರೂ ಡೋಂಟ್‌ಕೇರ್ ಎಂದ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ!

Arun Kumar Puttila: ಬಿಎಸ್‌ವೈ ಕರೆ ಮಾಡಿದ್ರೂ ಡೋಂಟ್‌ಕೇರ್ ಎಂದ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ!

ಅರುಣ್ ಕುಮಾರ್ ಪುತ್ತಿಲ-ಬಿಎಸ್‌ವೈ

ಅರುಣ್ ಕುಮಾರ್ ಪುತ್ತಿಲ-ಬಿಎಸ್‌ವೈ

ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಆಗಿರೋದ್ರಿಂದ ಅರುಣ್ ಕುಮಾರ್ ಪುತ್ತಿಲ ಅವರಿಗೆ ನಾಮಪತ್ರ ವಾಪಸ್ ತೆಗೆಯಲು ಪಕ್ಷದ ವರಿಷ್ಠರು ಇನ್ನಿಲ್ಲದ ಶ್ರಮ ಹಾಕಿದ್ದು, ಕೊನೆಯ ಅಸ್ತ್ರವಾಗಿ ಸ್ವತಃ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಮೂಲಕ ಒತ್ತಡ ಹಾಕಿಸಲು ಪ್ರಯತ್ನ ಪಟ್ಟಿದ್ದಾರೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Puttur, India
  • Share this:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ (Assembly Election 2023) ಭಾರೀ ಕುತೂಹಲ ಕೆರಳಿಸಿದೆ. ಎಂಟು ಕ್ಷೇತ್ರಗಳ ನಾಲ್ಕೈದು ಕ್ಷೇತ್ರಗಳು ಟಫ್‌ ಫೈಟ್ ಕೊಡುತ್ತಿದ್ದು, ಕೆಲವೆಡೆ ಕಾಂಗ್ರೆಸ್ ಬಿಜೆಪಿ (BJP) ಮಧ್ಯೆ ನೆಕ್ ಟು ನೆಕ್ ಫೈಟ್ ಇದ್ದರೆ ಮತ್ತೆ ಕೆಲವಡೆ ನಿರಾಯಾಸವಾಗಿ ಗೆಲ್ಲುವ ಸಾಧ್ಯತೆಯೂ ಇದೆ. ಆದರೆ ಪುತ್ತೂರು (Puttur) ವಿಧಾನಸಭಾ ಕ್ಷೇತ್ರ ಮಾತ್ರ ಇದೆಲ್ಲದಕ್ಕೂ ಭಿನ್ನವಾಗಿ ಕಾಣುತ್ತಿದೆ.


ಬಿಜೆಪಿ ಕಾರ್ಯಕರ್ತರು ಸೇರಿದಂತೆ ಅನೇಕರು ಈ ಬಾರಿ ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್ ಅರುಣ್ ಕುಮಾರ್ ಪುತ್ತಿಲ ಅಥವಾ ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಸಿಗುತ್ತೆ ಅಂದ್ಕೊಂಡಿದ್ದರು. ಆದರೆ ಎಲ್ಲರ ನಿರೀಕ್ಷೆ ಹುಸಿ ಮಾಡಿದ್ದ ಬಿಜೆಪಿ ಹೈಕಮಾಂಡ್‌ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಿ ಎಲ್ಲರಿಗೂ ಶಾಕ್ ನೀಡಿತ್ತು. ಇದು ಪಕ್ಷದ ಕಾರ್ಯಕರ್ತರು ಸೇರಿದಂತೆ ಟಿಕೆಟ್‌ ಆಕಾಂಕ್ಷಿಗಳಿಗೂ ಅಸಮಾಧಾನ ತರಿಸಿತ್ತು.


ಆ ಪೈಕಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದುತ್ವ ಪರ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ್ಲ ಬಂಡಾಯವೆದ್ದು ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಚುನಾವಣೆಗೆ ಬಂಡಾಯವಾಗಿ ಸ್ಪರ್ಧಿಸಿರುವ ಅರುಣ್ ಕುಮಾರ್ ಪುತ್ತಿಲ ಅವರ ನಾಮಪತ್ರ ವಾಪಸ್ ಪಡೆಯಲು ಸಾಕಷ್ಟು ಪ್ರಯತ್ನ ಪಟ್ಟರೂ ಅದು ಯಶಸ್ವಿಯಾಗಿಲ್ಲ.


ಇದನ್ನೂ ಓದಿ: Bhagirathi Murulya: ಹಾಲಿ ಸಚಿವ ಅಂಗಾರ ಜಾಗಕ್ಕೆ ಹೊಸ ಮುಖ ಎಂಟ್ರಿ! ಯಾರಿದು ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ?


ಬಿಎಸ್‌ವೈ ಕರೆಗೂ ಡೋಂಟ್‌ ಕೇರ್‌!


ಈಗಾಗಲೇ ಒಂದು ಹಂತದ ಪ್ರಚಾರ ಕಾರ್ಯ ಮುಕ್ತಾಯದಲ್ಲಿರುವ ಅರುಣ್ ಕುಮಾರ್ ಪುತ್ತಿಲ ಅವರು ತಾನು ಚುನಾವಣೆಗೆ ಸ್ಪರ್ಧಿಸಿಯೇ ಸಿದ್ಧ ಎಂದು ಹೇಳಿದ್ದರು. ಪಕ್ಷದ ಯಾವುದೇ ನಾಯಕರು ಕರೆ ಮಾಡಿ ಮನವೊಲಿಸಿದ್ದರೂ ಅದಕ್ಕೆ ಜಗ್ಗಿರಲಿಲ್ಲ. ಹೀಗಾಗಿ ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಆಗಿರೋದ್ರಿಂದ ಅರುಣ್ ಕುಮಾರ್ ಪುತ್ತಿಲ ಅವರಿಗೆ ನಾಮಪತ್ರ ವಾಪಸ್ ತೆಗೆಯಲು ಪಕ್ಷದ ವರಿಷ್ಠರು ಇನ್ನಿಲ್ಲದ ಶ್ರಮ ಹಾಕಿದ್ದು, ಕೊನೆಯ ಅಸ್ತ್ರವಾಗಿ ಸ್ವತಃ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಮೂಲಕ ಒತ್ತಡ ಹಾಕಿಸಲು ಪ್ರಯತ್ನ ಪಟ್ಟಿದ್ದಾರೆ.


ಇಂದು ಬೆಳಗ್ಗೆ ಬಿಜೆಪಿಯಿಂದ ಬಂಡಾಯ ಎದ್ದಿರುವ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಕರೆ ಮಾಡಿರುವ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ನಾಮಪತ್ರ ವಾಪಸ್ ಪಡೆಯುವಂತೆ ವಿನಂತಿ ಮಾಡಿದ್ದಾರೆ. ಅಲ್ಲದೇ, ಮುಂದಿನ ದಿನಗಳಲ್ಲಿ ನಿಮಗೆ ಪಕ್ಷದಲ್ಲಿ ಜವಾಬ್ದಾರಿಯುತ ಹುದ್ದೆ ನೀಡುವ ಬಗ್ಗೆ ಭರವಸೆಯನ್ನೂ ನೀಡಿದ್ದಾರೆ. ಆದರೆ ಯಡಿಯೂರಪ್ಪ ಮಾತಿಗೂ ಡೋಂಟ್‌ಕೇರ್ ಎಂದಿರುವ ಅರುಣ್ ಕುಮಾರ್ ಪುತ್ತಿಲ, ತಾನು ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ತೆಗೆಯುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ತಾನು ಚುನಾವಣೆಯಲ್ಲಿ ಗೆದ್ದರೆ ಬಿಜೆಪಿ ಪಕ್ಷವನ್ನೇ ಬೆಂಬಲಿಸುತ್ತೇನೆ ಎಂದು ಬಿಎಸ್‌ವೈಗೆ ಉತ್ತರ ನೀಡಿದ್ದಾರೆ.


ಇದನ್ನೂ ಓದಿ: Election Boycott: ಸುಳ್ಯ ಶಾಸಕ ಅಂಗಾರ ವಿರುದ್ಧ ಭುಗಿಲೆದ್ಧ ಆಕ್ರೋಶ; ಹತ್ತಾರು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರದ ವಾರ್ನಿಂಗ್!



ಕೊನೆಗೆ ತನ್ನ ಮಾತಿಗೆ ಜಗ್ಗದ ಕಾರಣ ಶುಭಾಶಯ ತಿಳಿಸಿ ಬಿಎಸ್‌ ಯಡಿಯೂರಪ್ಪ ಕರೆ ಕಟ್ ಮಾಡಿದ್ದಾರೆ. ಇದಕ್ಕೂ ಮೊದಲು ಅರುಣ್ ಕುಮಾರ್ ಪುತ್ತಿಲಗೆ ಕರೆ ಮಾಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಾಮಪತ್ರ ವಾಪಸ್ ಪಡೆದು ಪಕ್ಷವನ್ನು ಬೆಂಬಲಿಸುವಂತೆ ವಿನಂತಿ ಮಾಡಿದ್ದಾರೆ. ಶೋಭಾ ವಿನಂತಿಗೂ ಅರುಣ್ ಕುಮಾರ್ ಪುತ್ತಿಲ ಸಾಧ್ಯವೇ ಇಲ್ಲ ಎಂದು ಹೇಳಿದ್ದರು.

top videos
    First published: