B S Yediyurappa: ರಾಜ್ಯ ಪ್ರವಾಸಕ್ಕೆ ಹೊಸ ಕಾರು ಖರೀದಿಸಿದ ಮಾಜಿ ಸಿಎಂ ಯಡಿಯೂರಪ್ಪ

1 ಕೋಟಿ ರೂಪಾಯಿ ಬೆಲೆ ಬಾಳುವ ದುಬಾರಿ ಟಯೋಟಾ ವೆಲ್​ಫೈರ್​ ಕಾರನ್ನು ಬಿಎಸ್​ ಯಡಿಯೂರಪ್ಪ ಖರೀದಿ ಮಾಡಿದ್ದಾರೆ. ಇದೇ ಕಾರಿನಲ್ಲಿ ನಿನ್ನೆ ಏರ್​ಪೋರ್ಟ್​​ನಿಂದ ಕಾವೇರಿ ನಿವಾಸಕ್ಕೆ ಆಗಮಿಸಿದ್ದರು.

ಟಯೋಟಾ ವೆಲ್​ಫೈರ್​ ಕಾರು

ಟಯೋಟಾ ವೆಲ್​ಫೈರ್​ ಕಾರು

  • Share this:
    ಬೆಂಗಳೂರು(ಆ.24): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿದೇಶ  ಪ್ರವಾಸ ಮುಗಿಸಿ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದಾರೆ. ಇನ್ನೊಂದು ತಿಂಗಳಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಿರುವ ಬಿಎಸ್​ವೈ, ಅದಕ್ಕಾಗಿ ನೂತನ ಕಾರೊಂದನ್ನು ಖರೀದಿಸಿದ್ದಾರೆ. 1 ಕೋಟಿ ರೂಪಾಯಿ ಬೆಲೆ ಬಾಳುವ ದುಬಾರಿ ಟಯೋಟಾ ವೆಲ್​ಫೈರ್​ ಕಾರನ್ನು ಬಿಎಸ್​ ಯಡಿಯೂರಪ್ಪ ಖರೀದಿ ಮಾಡಿದ್ದಾರೆ. ಇದೇ ಕಾರಿನಲ್ಲಿ ನಿನ್ನೆ ಏರ್​ಪೋರ್ಟ್​​ನಿಂದ ಕಾವೇರಿ ನಿವಾಸಕ್ಕೆ ಆಗಮಿಸಿದ್ದರು. ಬಿಳಿಯ ಬಣ್ಣದ KA -05- ND - 4545 ನೊಂದಣಿ ಸಂಖ್ಯೆಯ ಹೊಸ ಟಯೋಟಾ ವೆಲ್‌ಫೈರ್ ವಾಹನ ಇದಾಗಿದೆ.

    ನಿನ್ನೆ ವಿದೇಶದಿಂದ ಆಗಮಿಸಿದ ಬಿಎಸ್​ವೈ ಅವರನ್ನು ಬರಮಾಡಿಕೊಳ್ಳಲು ಅವರ ಸಿಬ್ಬಂದಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಕಾರು ತಂದಿದ್ದರು.  ಕಳೆದ ಗುರುವಾರ ಬಿಎಸ್​ವೈ ತಮ್ಮ ಕುಟುಂಬದ ಜೊತೆ ಮಾಲ್ಡೀವ್ಸ್ ಗೆ ಪ್ರವಾಸಕ್ಕೆ ತೆರಳಿದ್ದರು. ಐದು ದಿನಗಳ ಪ್ರವಾಸ ಮುಗಿಸಿ ನಿನ್ನೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ರಾತ್ರಿ 8.15 ಕ್ಕೆ ಎಸ್‌ವೈ ಹಾಗೂ ಕುಟುಂಬ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ರಾಜಕೀಯ ಜಂಜಾಟ ಮರೆತು ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡಿದ್ದರು.

    ಇದನ್ನೂ ಓದಿ:Bengaluru Crime: ಬೆಂಗಳೂರಿನಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

    ಮಾಲ್ಡೀವ್ಸ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಿಎಂ ಬಿಎಸ್ವೈ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಇನ್ನೂ 20- 25 ದಿನಗಳ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ಜಿಲ್ಲಾವಾರು‌ ಭೇಟಿ ನೀಡಿ ಕಾರ್ಯಕರ್ತರ ಜೊತೆ ಸಭೆ ಮಾಡುತ್ತೇನೆ. ಒಂದು ಜಿಲ್ಲೆಗೆ ಒಂದು ದಿನ ಹೋಗುತ್ತೇನೆ. ಬಹಳ ವರ್ಷಗಳ ಬಳಿಕ ನಾನು ವಿದೇಶ ಪ್ರವಾಸ ಹೋಗಿದ್ದೆ.  ಸ್ನೇಹಿತರು, ಕುಟುಂಬಸ್ಥರ ಒತ್ತಾಯದ ಮೇರೆಗೆ ಹೋಗಿದ್ದೆ. ಮಾಲ್ಡೀವ್ಸ್ ಒಳ್ಳೆಯ ಸ್ಥಳ, ಎಲ್ಲರೂ ನೋಡುವಂತದ್ದು, ನಾನು ಕೂಡ ಖುಷಿ ಪಟ್ಟೆ ಎಂದು ಹೇಳಿದರು.

    ಇದನ್ನೂ ಓದಿ:Bengaluru: ಬಾಯ್ಲರ್​ ಸ್ಪೋಟ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೆ ಮತ್ತಿಬ್ಬರು ಸಾವು, ಕಂಪನಿ ಮಾಲೀಕ ನಾಪತ್ತೆ

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
    Published by:Latha CG
    First published: