B S Yediyurappa: ಕೂಸು ಹುಟ್ಟುವ ಮುನ್ನವೇ ಕುಲಾವಿ; HDK, ಡಿಕೆಶಿ ಕಿತ್ತಾಟಕ್ಕೆ ಯಡಿಯೂರಪ್ಪ ಟಾಂಗ್

ಎರಡೂ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡ್ತಾರೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿ ಇಡೀ ಇಂಡಿಯಾದ ಅಭಿವೃದ್ಧಿ ಎಂದು ಕೆ.ಆರ್.ಪೇಟೆಯಲ್ಲಿ ಸಿಎಂ ಬಸವರಾಜ ಬೊಮ್ಮಯಿ ಹೇಳಿದ್ದಾರೆ.       

ಬಿ ಎಸ್ ಯಡಿಯೂರಪ್ಪ

ಬಿ ಎಸ್ ಯಡಿಯೂರಪ್ಪ

  • Share this:
ಮಂಡ್ಯ  (ಜು.21): ಹಳೇ ಮೈಸೂರು ಭಾಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM  ಪ್ರವಾಸ ಕೈಗೊಂಡಿದ್ದಾರೆ. ಕೆ.ಆರ್​  ಪೇಟೆಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿದ್ದ ಬಿ.ಎಸ್ ಯಡಿಯೂರಪ್ಪ, ಹೆಸರು ಹೇಳದೆ, ಡಿ.ಕೆ ಶಿವಕುಮಾರ್ (D.K Shivakumar)​ ಹಾಗೂ ಹೆಚ್​.ಡಿ ಕುಮಾರಸ್ವಾಮಿ (H.D Kumaraswamy) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.​ ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಗೆಲುವನ್ನು ಯಾರೂ ತಡೆಯೋಕೆ ಆಗಲ್ಲ, ಯಾರೋ ಇಬ್ಬರು ಮುಖ್ಯಮಂತ್ರಿ ಆಗ್ತಿವಿ ಅಂತ ಕಿತ್ತಾಡ್ತಿದ್ದಾರೆ. ಅವರ ಹೆಸರು ನಾನು ಹೇಳೊದಿಲ್ಲ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುತ್ತಿದ್ದಾರೆ ಎಂದ್ರು. 

ಬಿಜೆಪಿ ಗೆಲುವು ತಡೆಯಲು ಸಾಧ್ಯವಿಲ್ಲ-BSY

ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಗೆಲುವನ್ನು ಯಾರೂ ತಡೆಯೋಕೆ ಆಗಲ್ಲ, ಯಾರೋ ಇಬ್ಬರು ಮುಖ್ಯಮಂತ್ರಿ ಆಗ್ತಿವಿ ಅಂತ ಕಿತ್ತಾಡ್ತಿದ್ದಾರೆ. ಅವರ ಹೆಸರು ನಾನು ಹೇಳೊದಿಲ್ಲ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುತ್ತಿದ್ದಾರೆ.

ಮುಂದೆ ಬಿಜೆಪಿ ಅಧಿಕಾರಕ್ಕೆ ಬರೋದ್ರಲ್ಲಿ ಯಾವುದೇ ಅನುಮಾನ ಇಲ್ಲ, ನಮ್ಮೂರಿನಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ಆಗ್ತಿರೋದು ನನಗೆ ತುಂಬಾ ಸಂತೋಷ ತಂದಿದೆ. ನನ್ನ ತವರಿನಲ್ಲಿ ಇಷ್ಟು ಜನ ಸೇರಿ ಕಾರ್ಯಕ್ರಮ ಮಾಡ್ತಿರೋದು ನನಗೆ ಆನಂದ ತಂದಿದೆ. ಮುಂದಿನ ಚುನಾವಣೆಯಲ್ಲಿ ನಾರಾಯಣ ಗೌಡರ ವಿರುದ್ಧ ನಿಂತವರು ಠೇವಣಿ ಕಳೆದುಕೊಳ್ಳುವಂತೆ ನೀವು ನೋಡಿಕೊಳ್ಳಬೇಕು ಎಂದು ಕೆ ಆರ್ ಪೇಟೆಯಲ್ಲಿ ಮಾಜಿ ಸಿಎಂ ಬಿಎಸ್ ಯಡ್ಡಿಯೂರಪ್ಪ ಹೇಳಿದ್ದಾರೆ

ಸಿಎಂ ಕುರ್ಚಿಗಾಗಿ ಕಿತ್ತಾಟ- ಬೊಮ್ಮಾಯಿ

ಇತ್ತ ಸಿಎಂ ಬಸವರಾಜ ಬೊಮ್ಮಾಯಿ ಸಹ ಡಿ.ಕೆ ಶಿವಕುಮಾರ್​ ಹಾಗೂ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ರು. ಸಿಎಂ‌ ಕುರ್ಚಿಗಾಗಿ ಅವರಿಬ್ಬರ ಪೈಪೋಟಿ ಜಗತ್ಜಾಹೀರಾತಾಗಿದೆ. ಅದರ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಕುಮಾರಸ್ವಾಮಿ ಮೊದಲನಿಂದಲೂ ಸಿಎಂ ಆಗಲು ಅವಕಾಶ ಕೊಡಿ ಅಂತಿದ್ದಾರೆ. ಈಗ ಡಿ.ಕೆ ಶಿವಕುಮಾರ್ ಈ ಬಾರಿ ನನಗೆ ಅವಕಾಶ ನೀಡಿ ಅಂತಿದ್ದಾರೆ. ಮತ್ತೊಬ್ಬರು ಇನ್ನೊಮ್ಮೆ ಸಿಎಂ‌ ಆಗಲು ಅವಕಾಶ ಕೊಡಿ ಅಂತಿದ್ದಾರೆ. ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ ಅವರೇ ತೀರ್ಮಾನ ಮಾಡ್ತಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: Karnataka Politics: ಸಿಎಂ ಕುರ್ಚಿಗೆ ಡಿಕೆಶಿ-ಹೆಚ್​ಡಿಕೆ ಫೈಟ್, ರಾಮನಗರದಲ್ಲೇ ಸವಾಲಿಗೆ ಸವಾಲ್

ಮಂಡ್ಯ ಅಭಿವೃದ್ಧಿ ಇಡೀ ಇಂಡಿಯಾದ ಅಭಿವೃದ್ಧಿ

ಎರಡೂ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡ್ತಾರೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿ ಇಡೀ ಇಂಡಿಯಾದ ಅಭಿವೃದ್ಧಿ ಎಂದು ಕೆ.ಆರ್.ಪೇಟೆಯಲ್ಲಿ ಸಿಎಂ ಬಸವರಾಜ ಬೊಮ್ಮಯಿ ಹೇಳಿದ್ದಾರೆ.              ಕೆ.ಆರ್ ಪೇಟೆಯ ಜನರನ್ನ ನೋಡಿ ಸಂತೋಷವಾಗಿದೆ. ಕೆ.ಆರ್ ಪೇಟೆ ಅಭಿವೃದ್ಧಿ ಪರ್ವ ನಡೆಯುತ್ತಿದೆ. 3 ವರ್ಷದ ಹಿಂದೆ ನೀವು ತೆಗೆದುಕೊಂಡು ನಿರ್ಣಯಕ್ಕೆ ಸಾಕ್ಷಿಯಾಗಿದ್ದೀರಾ.

ಯಡಿಯೂರಪ್ಪ ಅವರ ಹುಟ್ಟುರು ಅಭಿವೃದ್ಧಿಯತ್ತ ಹೋಗ್ತಿದೆ. ಅವರ ಕನಸನ್ನು ನಾರಾಯಣ್ ಗೌಡ್ರು ನೆನಸು ಮಾಡಿದ್ದಾರೆ. ನಾರಾಯಣ್ ಗೌಡರು ಯಾಕೆ ರಾಜೀನಾಮೆ ಕೊಟ್ರು ಅನ್ನೊ ಪ್ರಶ್ನೆ ಇತ್ತು. ಅವರು ಯಾಕೆ ರಾಜೀನಾಮೆ ಕೊಟ್ರು ಅನ್ನೊದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ.  ಕೆ.ಆರ್.ಪೇಟೆ ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ರು.

ಎರಡೂ ಪಕ್ಷಗಳಿಂದ ಸ್ವಾರ್ಥ ರಾಜಕಾರಣ

ರಾಜಕಾರಣದಲ್ಲಿ ಎರಡೂ ತರಹದ ರಾಜಕಾರಣ ಇದೆ. ಅಧಿಕಾರಕ್ಕಾಗಿ ರಾಜಕಾರಣ, ಜನರಿಗಾಗಿ ರಾಜಕಾರಣ. ಎರಡೂ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣವನ್ನ ಲಾಭ ಮಾಡಿಕೊಂಡ್ರು. ಯಡಿಯೂರಪ್ಪ ಅವರು ಸಿಎಂ ಆದ ಸಂದರ್ಭದಲ್ಲಿ ಕೋವಿಡ್ ವಿರುದ್ದ ಹೋರಾಟ ಮಾಡಿದ್ರು. ರಾಜ್ಯದ ಬೊಕ್ಕಸದ ಹಣ ಕೊಟ್ಟು ಕೋವಿಡ್ ನಿರ್ವಹಣೆ ಮಾಡಿದ್ರು.

ಇದನ್ನೂ ಓದಿ: Dakshina Kannada: ಹಿಂದುಳಿದ ವರ್ಗದ ಅರ್ಹರಿಗೆ ಸಾಲ ಸೌಲಭ್ಯ; ಕೂಡಲೇ ಹೀಗೆ ಅರ್ಜಿ ಸಲ್ಲಿಸಿ

ಸಕಾಲದಲ್ಲಿ ಉತ್ತಮ ನಿರ್ಣಯ ತೆಗೆದುಕೊಂಡು  ವ್ಯಾಕ್ಸಿನೇಷನ್‌ ನೀಡಿ ಕೋವಿಡ್ ನಿರ್ವಹಣೆ ಮಾಡಿದ್ದಾರೆ. ಯಡಿಯೂರಪ್ಪ ಅವರು ಹಾಗೂ ಮೋದಿ ಅವರನ್ನ ನೆನೆಯಬೇಕು. ಲಕ್ಷಾಂತರ ಜನರ ಜೀವ ಉಳಿಸಿದ್ದಾರೆ. ಇದು ಜನಪರ ಇರುವ ಆಡಳಿತ ಜನರ ರಾಜಕಾರಣ. ನಾರಾಯಣ ಗೌಡ್ರು ಮೇಲೆ ಸದಾಕಾಲ ನಿಮ್ಮ ಆಶೀರ್ವಾದ ಇರಬೇಕು. ನಮ್ಮ ಸರ್ಕಾರ ಯಡಿಯೂರಪ್ಪ ಅವರು ತೋರಿಸಿದ ದಾರಿಯಲ್ಲಿ ಸಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
Published by:Pavana HS
First published: