ಕಾಂಗ್ರೆಸ್​ ಕಾರ್ಯಕರ್ತನಿಗೆ ಸಿದ್ದರಾಮಯ್ಯ ಕಪಾಳಮೋಕ್ಷ ; ವಿಡಿಯೋ ವೈರಲ್

ಸಿದ್ದರಾಮಯ್ಯ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ರವಿ ಮೊಬೈಲ್​ನಲ್ಲಿ ಯಾರ ಜೊತೆ ಮಾತನಾಡುತ್ತಿದ್ದರು, ಸಿದ್ದರಾಮಯ್ಯ ಮಾತನಾಡಲು ನಿರಾಕರಿಸಿದ್ದೇಕೆ ಎನ್ನುವುದು ಇನ್ನೂ ಗುಟ್ಟಾಗಿಯೇ ಉಳಿದಿದೆ.  

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಮೈಸೂರು (ಸೆ.4): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಕಷ್ಟು ಬಾರಿ ಕಾರ್ಯಕರ್ತರು ವಿರುದ್ಧ ಹರಿಹಾಯ್ದ ಉದಾಹರಣೆಗಳಿವೆ. ಮಾಧ್ಯಮದ ಜೊತೆ ಮಾತನಾಡುವಾಗ 'ಗಲಾಟೆ ಮಾಡಿದವರಿಗೆ ಕಪಾಳಕ್ಕೆ ಬಾರಿಸಿ' ಎಂದು ಸಿದ್ದರಾಮಯ್ಯ ಹೇಳಿದ್ದ ವಿಡಿಯೋ ಭಾರೀ ವೈರಲ್​ ಆಗಿತ್ತು. ಈಗ ಸಿದ್ದರಾಮಯ್ಯ ಮತ್ತೆ ಅಂತದ್ದೇ ಎಡವಟ್ಟು ಮಾಡಿಕೊಂಡಿದ್ದಾರೆ.

ಇಂದು ಸಿದ್ದರಾಮಯ್ಯ ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಎಚ್​ಎಎಲ್​ ವಿಶೇಷ ವಿಮಾನ ನಿಲ್ದಾಣದ ಮೂಲಕ ಮೈಸೂರಿಗೆ ತೆರಳಿದ್ದರು. ಈ ವೇಳೆ ಅವರು ಮಾಧ್ಯಮದ ಜೊತೆ ಮೈಸೂರಿನಲ್ಲಿ ಮಾತನಾಡಿದ್ದಾರೆ. ನಂತರ ಕಾರ್ಯಕರ್ತನ ಕೆನ್ನೆಗೆ ಸಿದ್ದು ಬಾರಿಸಿದ್ದಾರೆ.

ಕಾಂಗ್ರೆಸ್​ ಕಾರ್ಯಕರ್ತ ರವಿ ಎಂಬುವವರು ಯಾವುದೋ ವ್ಯಕ್ತಿಗೆ ಕರೆ​ ಮಾಡಿದ್ದರು. ಅದಾದ ನಂತರ ಹತ್ತಿರ ಬಂದ ಸಿದ್ದರಾಮಯ್ಯ ಅವರಿಗೆ ಮೊಬೈಲ್​ ನೀಡಲು ರವಿ ಮುಂದಾಗಿದ್ದರು. ಅಷ್ಟೇ ಅಲ್ಲ, ದೂರವಾಣಿ ಸಂಪಕರ್ಕದಲ್ಲಿರುವವರ ಜೊತೆ ಮಾತನಾಡುವಂತೆ ಕೋರಿದ್ದರು. ‘ನಾನು ಮಾತಾನಡುವುದಿಲ್ಲ ಹೋಗ್​’ ಎಂದು ಸಿದ್ದರಾಮಯ್ಯ ರವಿ ಕೆನ್ನೆಗೆ ಬಾರಿಸಿ, ಬದಿಗೆ ತಳ್ಳಿದ್ದಾರೆ.

ಇದನ್ನೂ ಓದಿ: ಮನುಷ್ಯತ್ವ ಇರೋರು ಹೀಗೆ ಮಾಡಲ್ಲ; ಡಿಕೆ ಶಿವಕುಮಾರ್​ ಬಂಧನಕ್ಕೆ ಸಿದ್ದರಾಮಯ್ಯ ಬೇಸರ

ಸದ್ಯ ಈ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ರವಿ ಮೊಬೈಲ್​ನಲ್ಲಿ ಯಾರ ಜೊತೆ ಮಾತನಾಡುತ್ತಿದ್ದರು, ಸಿದ್ದರಾಮಯ್ಯ ಮಾತನಾಡಲು ನಿರಾಕರಿಸಿದ್ದೇಕೆ ಎನ್ನುವುದು ಇನ್ನೂ ಗುಟ್ಟಾಗಿಯೇ ಉಳಿದಿದೆ.

ಮೈಸೂರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಬಂಧನವನ್ನು ಖಂಡಿಸಿದರು. “30-40 ವರ್ಷದಿಂದ ಡಿಕೆಶಿವಕುಮಾರ್​ ರಾಜಕಾರಣದಲ್ಲಿದ್ದಾರೆ.  ಚಿದಂಬರಂಗೂ ಹೀಗೆ ಮಾಡಿದರು. ಇದೀಗ ಡಿ ಕೆ ಶಿವಕುಮಾರಗೂ ಹೀಗೆ ಮಾಡಿದ್ದಾರೆ,” ಎಂದು ಕಿಡಿಕಾರಿದರು.“ಹಬ್ಬದ ದಿನವೂ ಡಿಕೆಶಿ ಅವರನ್ನು ಬಿಟ್ಟಿಲ್ಲ. ಅವರ ತಂದೆಯ ಕಾರ್ಯಕ್ರಮಕ್ಕೆ ಹೋಗಲೂ ಬಿಟ್ಟಿಲ್ಲ. ಮನುಷ್ಯತ್ವ ಇರುವ ಯಾರೂ ಹೀಗೆ ಮಾಡುವುದಿಲ್ಲ. ಡಿಕೆಶಿ ಕಣ್ಣೀರು ಹಾಕಿದ್ದರು. ಹಬ್ಬದ ದಿನದಂದಾದರೂ ಬಿಡಬಹುದಿತ್ತು,”ಎಂದು ಮರುಗಿದ್ದರು.

(ವರದಿ: ಪುಟ್ಟಪ್ಪ)
First published: