ಅತಂತ್ರದ ಭೀತಿಯಲ್ಲಿ ಮೈತ್ರಿ ಸರ್ಕಾರ: ಅಪ್ಪ-ಮಕ್ಕಳ ಮೇಲೆ ಮುನಿಸಿಕೊಂಡರಾ ಸಿದ್ದರಾಮಯ್ಯ?

ಪದೇಪದೆ ಶಾಸಕರ ಮನವೊಲಿಸೋದು ಕಷ್ಟ. ಅವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಜೆಡಿಎಸ್​ ಯಾವುದೇ ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಸಿಎಂ ಕುಮಾರಸ್ವಾಮಿಯ ಸರ್ಕಾರವನ್ನು ಉಳಿಸಲು ಹರಸಾಹಸ ಪಡದಿರಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

Sushma Chakre | news18
Updated:July 2, 2019, 11:38 AM IST
ಅತಂತ್ರದ ಭೀತಿಯಲ್ಲಿ ಮೈತ್ರಿ ಸರ್ಕಾರ: ಅಪ್ಪ-ಮಕ್ಕಳ ಮೇಲೆ ಮುನಿಸಿಕೊಂಡರಾ ಸಿದ್ದರಾಮಯ್ಯ?
ಸಿಎಂ ಕುಮಾರಸ್ವಾಮಿ- ಸಿದ್ದರಾಮಯ್ಯ- ದೇವೇಗೌಡ
  • News18
  • Last Updated: July 2, 2019, 11:38 AM IST
  • Share this:
ಬೆಂಗಳೂರು (ಜು.2): ಕಾಂಗ್ರೆಸ್​ ಪಕ್ಷದ ಇಬ್ಬರು ಶಾಸಕರು ರಾಜೀನಾಮೆ ನೀಡಿರುವುದರಿಂದ ಮೈತ್ರಿ ಸರ್ಕಾರದ ನಾಯಕರಿಗೆ ತಲೆನೋವು ಶುರುವಾಗಿದೆ. ಅತ್ತ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅಮೆರಿಕ ಪ್ರವಾಸದಲ್ಲಿರುವಾಗಲೇ ರಾಜ್ಯದಲ್ಲಿ ಹಲವಾರು ರಾಜಕೀಯ ಬೆಳವಣಿಗೆಗಳು ನಡೆದಿವೆ. ಇನ್ನೊಂದೆಡೆ ಅಪ್ಪ-ಮಕ್ಕಳ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನಿಸಿಕೊಂಡಿದ್ದು, ಮೈತ್ರಿ ಪಕ್ಷವನ್ನು ಉಳಿಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿವೆ.

ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು ಮತ್ತು ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಮೇಲೆ ಮುನಿಸಿಕೊಂಡಿದ್ದಾರೆ. ದೇವೇಗೌಡರ ಇತ್ತೀಚಿನ ವರ್ತನೆಗಳಿಗೆ ಸಿದ್ದರಾಮಯ್ಯ ಬೇಸತ್ತಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಮತ್ತು ಸಚಿವ ಡಿ.ಕೆ. ಶಿವಕುಮಾರ್​ ಭೇಟಿ ಸಂದರ್ಭದಲ್ಲೂ ಈ ಬಗ್ಗೆ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದರು.

ದೆಹಲಿಗೆ ತೆರಳಿದ ರಮೇಶ್​ ಜಾರಕಿಹೊಳಿ; ಅತೃಪ್ತ ಕೈ ಶಾಸಕರ ರಾಜೀನಾಮೆಗೆ ತಯಾರಾಗುತ್ತಿದೆಯಾ ವೇದಿಕೆ?

ಕೋಪಕ್ಕೆ ಕಾರಣವೇನು?:

ತಮ್ಮ ರಾಜಕೀಯ ಗುರುವಾದ ದೇವೇಗೌಡರ ಮೇಲೆ ಸಿದ್ದರಾಮಯ್ಯ ಮುನಿಸಿಕೊಳ್ಳಲು ಕಾರಣವೂ ಇದೆ. ಇದುವರೆಗೂ 6 ಬಾರಿ ಆಪರೇಷನ್ ಕಮಲ ನಡೆದಿದೆ. ಆಪರೇಷನ್ ಕಮಲ ಸಂದರ್ಭದಲ್ಲಿಕೊನೇ ಕ್ಷಣದಲ್ಲಿ ಕಸರತ್ತು ನಡೆಸಿ ಸರ್ಕಾರ ಉಳಿಸಿದ್ದು ಇದೇ ಸಿದ್ದರಾಮಯ್ಯ. ಆದರೆ, ಕೆಲಸ ಆದಮೇಲೆ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ಬಹಿರಂಗವಾಗಿಯೇ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಸಾರ್ವಜನಿಕವಾಗಿ‌ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ವಿಲನ್ ಎಂದು ಬಿಂಬಿಸಿರುವುದಕ್ಕೂ ಅವರು ಕೋಪಗೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಆಪರೇಷನ್ ಕಮಲ ವಿಚಾರದಲ್ಲಿ ಸೈಲೆಂಟಾದ ಡಿಕೆಶಿ; ಟ್ರಬಲ್ ಶೂಟರ್ ಮೌನಕ್ಕೆ ಕಾರಣವೇನು?

ದೇವೇಗೌಡ

Loading...

ಜೆಡಿಎಸ್​- ಕಾಂಗ್ರೆಸ್​ ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯನವರ ಮಾತಿಗೆ ಕಿಮ್ಮತ್ತಿನ ಬೆಲೆಯಿಲ್ಲ.  ಅವರ ಆಪ್ತ ಶಾಸಕರಿಗೂ ಮನ್ನಣೆಯಿಲ್ಲ. ಚಿಕ್ಕಪುಟ್ಟ ವಿಷಯಕ್ಕೆಲ್ಲ ಸಿದ್ದರಾಮಯ್ಯನವರ ವಿರುದ್ಧ ದೇವೇಗೌಡರು ಹೈಕಮಾಂಡ್ ‌ಗೆ ದೂರು ನೀಡಿದ್ದರಿಂದಲೂ ಅವರು ಅಸಮಾಧಾನಗೊಂಡಿದ್ದರು. ಸದ್ಯದಲ್ಲೇ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಹೇಳಿದ್ದ ದೇವೇಗೌಡರು ಅದಕ್ಕೆ ಸಿದ್ದರಾಮಯ್ಯನವರೇ ಕಾರಣವಾಗುತ್ತಾರೆ ಎಂದು ಹೇಳಿ ದೊಡ್ಡ ಡ್ಯಾಮೇಜ್​ ಮಾಡಿದ್ದರು.

HD Kumaraswamy02
ಹೆಚ್​.ಡಿ. ಕುಮಾರಸ್ವಾಮಿ.


ಅಂಬೇಡ್ಕರ್​ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಪಾದಯಾತ್ರೆಗೆ ನಿರ್ಧರಿಸಿರುವುದು ಸಿದ್ದರಾಮಯ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೆಲ್ಲ ಮಾಡಿ ಈಗ ಮತ್ತೆ ಸರ್ಕಾರವನ್ನು ಉಳಿಸಿಕೊಡಿ‌ ಎಂದು ಕೇಳೋದು, ಸರ್ಕಾರ ಸೇಫ್ ಆದಮೇಲೆ‌ ಮತ್ತೆ ತಮ್ಮ ವಿರುದ್ಧವೇ ಷಡ್ಯಂತ್ರ ರೂಪಿಸೋದು, ಸರ್ಕಾರದ ಬಿದ್ದು ಹೋದರೆ ಸಿದ್ದರಾಮಯ್ಯನವರೇ ಬೀಳಿಸಿದರು ಎಂಬ ಅಪವಾದ ಹೊರಿಸೋದು. ಇದೇ ಕಾರಣಕ್ಕೆ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಅಖಾಡಕ್ಕಿಳಿದ ಟ್ರಬಲ್ ಶೂಟರ್; ಮತ್ತೆ ಆನಂದ್​ ಸಿಂಗ್ ಮನವೊಲಿಸುತ್ತಾರಾ ಸಚಿವ ಡಿಕೆ ಶಿವಕುಮಾರ್ ?

ಈ ಎಲ್ಲ ಕಾರಣಗಳಿಂದ ಈ ಬಾರಿ ಹೆಚ್ಚು ರಿಸ್ಕ್​ ತೆಗೆದುಕೊಳ್ಳದಿರಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಪದೇಪದೆ ಶಾಸಕರ ಮನವೊಲಿಸೋದು ಕಷ್ಟ. ಅವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಜೆಡಿಎಸ್​ ಯಾವುದೇ ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಸಿಎಂ ಕುಮಾರಸ್ವಾಮಿಯ ಸರ್ಕಾರವನ್ನು ಉಳಿಸಲು ಹರಸಾಹಸ ಪಡದಿರಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಒಬ್ಬೊಬ್ಬರಾಗಿ ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಿರುವುದರಿಂದ ಸಿದ್ದರಾಮಯ್ಯನವರ ನಿರ್ಧಾರದ ಮೇಲೇ ಮೈತ್ರಿ ಸರ್ಕಾರದ ಭವಿಷ್ಯ ನಿಂತಿದೆ ಎನ್ನಲಾಗುತ್ತಿದೆ.

ವರದಿ: ಚಿದಾನಂದ ಪಟೇಲ್

 

First published:July 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...