ಸ್ವಾಭಿಮಾನ ಎತ್ತಿ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ, ಜೆಡಿಎಸ್ ಪಕ್ಷಕ್ಕೆ ಮತ ಹಾಕಬೇಡಿ ; ಸಿದ್ದರಾಮಯ್ಯ

ಡಿಸೆಂಬರ್ 9 ರಂದು ಯಡಿಯೂರಪ್ಪನವರ ಸರ್ಕಾರ ಪತನ ಆಗಲಿದೆ‌. ರಮೇಶ್ ಜಾರಕಿಹೊಳಿ ಕನಸು ಭಗ್ನ ಆಗಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

G Hareeshkumar | news18-kannada
Updated:November 30, 2019, 10:43 PM IST
ಸ್ವಾಭಿಮಾನ ಎತ್ತಿ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ, ಜೆಡಿಎಸ್ ಪಕ್ಷಕ್ಕೆ ಮತ ಹಾಕಬೇಡಿ ; ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಬೆಳಗಾವಿ(ನ.30): ಸ್ವಾಭಿಮಾನ ಎತ್ತಿ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಜೆಡಿಎಸ್ ಪಕ್ಷಕ್ಕೆ ಮತ ಹಾಕಬೇಡಿ. ಅಶೋಕ್​​​​ ಪೂಜಾರಿ ನನ್ನ ಬಳಿ ಬಂದು ಟಿಕೆಟ್ ಕೇಳಿದ್ರು. ಜೆಡಿಎಸ್​ ಬಿಟ್ಟು ಬಿಜೆಪಿಗೆ ಹೋದ್ರು. ಅಲ್ಲಿಂದ ಜೆಡಿಎಸ್​​ಗೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಳೆದ ವರ್ಷ ಸಿಎಂ ಆಗಿದ್ದಾಗ ಕುಮಾರಸ್ವಾಮಿಯವರು ಹೋಗಿರಲಿಲ್ಲ. ಇದನ್ನ ಜನ ತಿಳಿದುಕೊಳ್ಳಬೇಕು. ಕೆಜೆಪಿ ಕಟ್ಟಿದ ಟಿಪ್ಪು ಜಯಂತಿ ಮಾಡಿ ಸಿಎಂ ಯಡಿಯೂರಪ್ಪ ನವರು ಇಲ್ಲಿನ ಜನರನ್ನು ಮರೆತಿದ್ದಾರೆ. ಡಿಸೆಂಬರ್ 9 ರಂದು ಯಡಿಯೂರಪ್ಪನವರ ಸರ್ಕಾರ ಪತನ ಆಗಲಿದೆ‌. ರಮೇಶ್ ಜಾರಕಿಹೊಳಿ ಕನಸು ಭಗ್ನ ಆಗಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

10 ಸಚಿವ ಸಂಪುಟ ಸಭೆಗಳಿಗೆ  ಹೋಗದೇ ರಮೇಶ್ ನಮ್ಮ ಮರ್ಯಾದೆ  ಹಾಳು ಮಾಡಿದ. ಬಂದಾಗೆಲ್ಲ ನನ್ನನ್ನು ಲೀಡರ್ ಮಾಡ್ತಿನಿ ಅಂತಾನೇ ಇದ್ದ. ಲಖನ್ ನನ್ನು ಸತೀಶ್ ಮೇಲೆ ಎತ್ತು ಕಟ್ಟಿದ್ದನು. ನಾನೇ ಸಹೋದರರು ಜಗಳ ಬೇಡ ಎಂದು ಹೇಳಿದೆ. ಗೋಕಾಕ್ ಅಭಿವೃದ್ಧಿಯಾಗಿದ್ರೆ ನಾನು ಕೊಟ್ಟ ಹಣದಿಂದ ಆಗಿದೆ. ರಮೇಶ್ ಜಾರಕಿಹೊಳಿ‌ಯಿಂದ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಹೇಳಿದರು.

ರಮೇಶ್ ಪ್ರವಾಹ ಸಂತ್ರಸ್ತರ ನೋವು ಕೇಳಲಿಲ್ಲ. ಆದರೆ ರಮೇಶ್ ಜಾರಕಿಹೊಳಿ‌ ಮುಂಬೈನ 7 ಸ್ಟಾರ್ ಹೋಟೆಲ್ ನಲ್ಲಿ ಇದ್ದರು ಇಂತಹ ಶಾಸಕ ಯಾರಿಗೂ ಬೇಡ. ಸತೀಶ್ ಜಾರಕಿಹೊಳಿ ನನ್ನ ದೀರ್ಘ ಕಾಲದ ಸ್ನೇಹಿತ. 10 ಸಂಪುಟ ಸಭೆಗೆ ಗೈರಾದ ನಂತರ ರಮೇಶ್​​ ಅವರನ್ನು ತೆಗೆದು ಸತೀಶ್ ಅವರನ್ನು ಮಂತ್ರಿ ಮಾಡಿದೆ. ಸತೀಶ್ ನಂಬಿದವರಿಗೆ ಯಾವತ್ತು ಮೋಸ ಮಾಡಲ್ಲ. 2004 ರಲ್ಲಿ ಬಾಲಚಂದ್ರ ಜಾರಕಿಹೊಳಿ‌ ಟಿಕೆಟ್ ಕೊಡಿ ಎಂದು ಸತೀಶ್ ಒತ್ತಡ ಹಾಕಿದ್ರು. ನಾನು ದೇವೇಗೌಡರ ಜತೆಗೆ ಜಗಳ ಆಡಿ ಬಾಲಚಂದ್ರ ಟಿಕೆಟ್ ಕೊಡಿಸಿದೆ. ಸತೀಶ್ ಹೇಳಿದ್ರು ಅಂತ ಲಖನ್ ಜಾರಕಿಹೊಳಿ‌ ಟಿಕೆಟ್ ಕೊಡಿಸಿದೆ ಎಂದರು.

ಇದನ್ನೂ ಓದಿ : ನಿಮ್ಮ ಕೈಲಿ ಆಗದಿದ್ದರೆ ಬಿಟ್ಟುಹೋಗಿ; ನಾವೇ ಬಂದು ಖಜಾನೆ ಭರ್ತಿ ಮಾಡ್ತೇವೆ ; ಸಿದ್ದರಾಮಯ್ಯ

2008 ರಲ್ಲಿ ಯಡಿಯೂರಪ್ಪನವರು ಪಕ್ಷಾಂತರ ಮಾಡಿಸಿದ್ರು. ಈಗಲೂ ಯಡಿಯೂರಪ್ಪ ಕುದುರೆ ವ್ಯಾಪಾರ ಮಾಡಿ ಸಿಎಂ ಆಗಿದ್ದಾರೆ. ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುವ ಅವಶ್ಯಕತೆ ಇಲ್ಲ. ನಾಲ್ಕು ತಿಂಗಳಲ್ಲಿ ಯಡಿಯೂರಪ್ಪ ಮಾಡಿರುವ ಸಾಧನೆ ಏನು ? ಈಗ ಯಡಿಯೂರಪ್ಪ ಖಜಾನೆ ಖಾಲಿಯಾಗಿದೆ ಎಂದು ಬಿಎಸ್​ವೈ ವಿರುದ್ದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
First published: November 30, 2019, 10:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading