ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಕ್ಷೇತ್ರದಲ್ಲಿ ಅಬ್ಬರಿಸಿ ಬೊಬ್ಬರಿದ ಮಾಜಿ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ ಪ್ರಚಾರದ ವೇಳೆ ಅಭಿಮಾನಿಗಳು ಕುರಿ ಹಾಗೂ ಕಂಬಳಿ ನೀಡಿ ಸನ್ಮಾನಿಸಿದ್ರು. ದಾರಿಯುದ್ದಕ್ಕೂ ಬರುವ ಗ್ರಾಮಗಳಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಿದ್ರು. ತಮ್ಮ ಪ್ರಚಾರದುದ್ದಕ್ಕೂ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ವಿರುದ್ದ ವಾಗ್ದಾಳಿ ನಡೆಸಿದ್ರು.

news18-kannada
Updated:November 28, 2019, 6:35 PM IST
ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಕ್ಷೇತ್ರದಲ್ಲಿ ಅಬ್ಬರಿಸಿ ಬೊಬ್ಬರಿದ ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಹಾಗೂ ಆನಂದ್​ ಸಿಂಗ್​
  • Share this:
ಬಳ್ಳಾರಿ(ನ.28) : ಗಣಿನಾಡು ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ  ಉಪ ಚುನಾವಣಾ ಅಖಾಡ ಜಿದ್ದಾಜಿದ್ದಿಗೆ ಸಾಕ್ಷಿಯಾಗುತ್ತಿದೆ. ನಾಯಕರ ಅಬ್ಬರದ ಪ್ರಚಾರ ಚುನಾವಣಾ ಅಖಾಡವನ್ನ ರಂಗೇರಿಸಿದೆ. ಕೈ ಅಭ್ಯರ್ಥಿ ಪರ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಿದ್ರೆ, ಇತ್ತ ಬಿಜೆಪಿಯ ಫೈರ್ ಬ್ರಾಂಡ್ ಕಟೀಲ್ ಆನಂದ್ ಸಿಂಗ್ ಪರ ಪ್ರಚಾರಕ್ಕಿಳಿದಿದ್ರು.

ವಿಜಯನಗರ ಕ್ಷೇತ್ರದ ಉಪ ಚುನಾವಣಾ ಅಖಾಡ ದಿನದಿನಕ್ಕೆ ರಣರೋಚಕವಾಗುತ್ತಿದೆ. ಇವತ್ತು ಈ ರಣಕಣದಲ್ಲಿ ಕಾಂಗ್ರೆಸ್ ನ ಮಾಸ್ ಲೀಡರ್ ಟಗುರು ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. ವಿಜಯನಗರ ಕ್ಷೇತ್ರದ ಗಾದಿಗನೂರು ಗ್ರಾಮದಿಂದ ಪ್ರಚಾರ ಆರಂಭಿಸಿದ ಸಿದ್ದರಾಮಯ್ಯಗೆ ಅದ್ದೂರಿ ಸ್ವಾಗತ ಸಿಕ್ಕಿತ್ತು. ಸಾವಿರಾರು ಜನರ ಮಧ್ಯೆ ಸಿದ್ದರಾಮಯ್ಯ ಬೃಹತ್ ರೋಡ್ ಶೋ ನಡೆಸಿದ್ರು. ಅಭಿಮಾನಿಗಳು ಹೂವಿನ ಸುರಿಮಳೆಗೈದರು. ಇನ್ನೂ ಸಿದ್ದರಾಮಯ್ಯ ನೋಡಲು ಶಾಲಾ ವಿದ್ಯಾರ್ಥಿಗಳು ಮುಗಿಬಿದ್ದಿದ್ದರು.

ಭುವನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಸಿಬ್ಬಂದಿಗಳು ಸಿದ್ದರಾಮಯ್ಯ ಕಾರು ತಪಾಸಣೆ ಮಾಡಿದ್ರು. ಅದರೆ ಸಿಬ್ಬಂದಿಗಳು ಸಿದ್ದರಾಮಯ್ಯ ಹಿಂಬಾಲಕರ ಕಾರು ತಪಾಸಣೆ ಮಾಡಲು ಮುಂದಾದರೂ ಹಾಗೇ ಮುಂದುವರೆದರು. ಸಿದ್ದರಾಮಯ್ಯ ಪ್ರಚಾರದ ವೇಳೆ ಅಭಿಮಾನಿಗಳು ಕುರಿ ಹಾಗೂ ಕಂಬಳಿ ನೀಡಿ ಸನ್ಮಾನಿಸಿದ್ರು. ದಾರಿಯುದ್ದಕ್ಕೂ ಬರುವ ಗ್ರಾಮಗಳಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಿದ್ರು. ತಮ್ಮ ಪ್ರಚಾರದುದ್ದಕ್ಕೂ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ವಿರುದ್ದ ವಾಗ್ದಾಳಿ ನಡೆಸಿದ್ರು.

ಇದನ್ನೂ ಓದಿ :  ಒಂದೇ ಗಂಟೆಯಲ್ಲಿ ಸಚಿವರ ಪಟ್ಟಿಯಲ್ಲಿದ್ದ ನನ್ನ ಹೆಸರು ನಾಪತ್ತೆ: ಮಂತ್ರಿಗಿರಿ ಕೈ ತಪ್ಪಿದ ರಹಸ್ಯ ಬಿಚ್ಚಿಟ್ಟ ವಿಶ್ವನಾಥ್​​

ಆನಂದ್ ಸಿಂಗ್ ಒಬ್ಬ ಅಯೋಗ್ಯ ಅನರ್ಹ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿ ಬಿಜೆಪಿ ಪಕ್ಷಕ್ಕೆ ಮಾರಾಟವಾಗಿದ್ದಾರೆ ಅಂತಾ ಸಿದ್ದು ಗುಟುರು ಹಾಕಿತು. ಭುವನಹಳ್ಳಿ ಗಾದಿಗನೂರು, ಧರ್ಮಸಾಗರ, ಪಿಕೆ ಹಳ್ಳಿ, ಮಲಪನಗುಡಿಯಲ್ಲಿ ರೋಡ್ ಶೋ ನಡೆಸಿದ್ರು. ಕಮಲಾಪುರ ಪಟ್ಟಣ ಹಾಗೂ ಹೊಸಪೇಟೆ ನಗರದ ವಿಜಯನಗರ ಕಾಲೇಜ್ ಮೈದಾನದಲ್ಲಿ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅಬ್ಬರದ ಪ್ರಚಾರ ನಡೆಸಿದರು.

ಇನ್ನೂ ಇಷ್ಟು ದಿನ ಕೈ ಅಭ್ಯರ್ಥಿ ಪರ ಪ್ರಚಾರದಲ್ಲಿ ಕಾಣಿಸಿಕೊಳ್ಳದ ಕೈ ಶಾಸಕರು ಪ್ರತ್ಯಕ್ಷವಾಗಿದ್ರು. ಅದ್ರಲ್ಲೂ ಕಂಪ್ಲಿ ಶಾಸಕ ಜೆಎನ್ ಗಣೇಶ್ ಹಗರಿಬೊಮ್ಮನಹಳ್ಳಿ ಶಾಸಕ ಭೀಮನಾಯ್ಕ ಜೋಡೆತ್ತುಗಳ ಎಂಟ್ರಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಸ್ವಲ್ಪ ಟೆನ್ಶನ್ ಶುರುವಾಗಿದೆ. ಇತ್ತ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಪರ ಅಬ್ಬರದ ಪ್ರಚಾರ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೊಸಪೇಟೆ ನಗರದ ಚಿತ್ತವಾಡಗಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ರು.

ಪ್ರಚಾರದ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನಾವಣಾ ಬಳಿಕ ಸಿದ್ದರಾಮಯ್ಯ ವಿಕ್ಷ ಸ್ಥಾನ ಕಳೆದುಕೊಳ್ಳುತ್ತಾರೆ, ಮಾನಸಿಕವಾಗಿ ಭಯ ಸಿದ್ದರಾಮಯ್ಯ ಅವರಿಗೆ ಕಾಡುತ್ತಿದೆ. ಅಲ್ಲದೇ ಅಸಂವಿಧಾನಿಕ ಪದ ಬಳಿಸಿದ ಸಿದ್ದರಾಮಯ್ಯ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಅಂತಾ ವಾಗ್ದಾಳಿ ನಡೆಸಿದ್ರು.ಇದನ್ನೂ ಓದಿ : ಬಿಜೆಪಿಯ 15 ಶಾಸಕರು ನಮ್ಮ ಸಂಪರ್ಕದಲ್ಲಿ, ಚುನಾವಣೆ ಬಳಿಕ ಅವರ ಹೆಸರು ಬಹಿರಂಗ; ಶಾಸಕ ಶಿವಣ್ಣ

ಸಿದ್ದರಾಮಯ್ಯ ಹಾಗೂ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅಬ್ಬರದ ಪ್ರಚಾರದ ಬಳಿಕ ವಿಜಯನಗರ ಬೈ ಎಲೆಕ್ಷನ್ ಅಖಾಡ ರಂಗೇರಿದೆ. ನಾಯಕರ ಏಟು-ಎದಿರೇಟು ಆರೋಪ- ಪ್ರತ್ಯಾರೋಪ ಚುನಾವಣಾ ರಣಕಣ ರೋಚಕ ಹಂತಕ್ಕೆ ತಲುಪಿದೆ.
First published: November 28, 2019, 6:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading