ನಾನೇನು ಮಲಗಿ ಮುಖ್ಯಮಂತ್ರಿಯಾಗಿಲ್ಲ - ದಿನಕ್ಕೆ 20 ಗಂಟೆ ಕೆಲಸ ಮಾಡಿ ಸಿಎಂ ಆಗಿದ್ದೇನೆ ; ಕುಮಾರಸ್ವಾಮಿ

ಮುಖ್ಯಮಂತ್ರಿ ಯಡಿಯೂರಪ್ಪನವರು ಒಂದು ಕಾಲದಲ್ಲಿ ನನ್ನ ಬಳಿ ಕೇವಲ‌ ಮಂತ್ರಿ ಮಾಡಿ ಎಂದು ಬಂದಿದ್ದರು. ಸಣ್ಣವನಾದರೂ ಬುದ್ದಿ ಹೇಳಿ ಕಳುಹಿಸಿದ್ದೇನೆ. ಬೆಂದ ಮನೆಯಲ್ಲಿ ಗಳ ಹಿಡಿಯುವವ ನಾನಲ್ಲ.

news18-kannada
Updated:November 30, 2019, 4:36 PM IST
ನಾನೇನು ಮಲಗಿ ಮುಖ್ಯಮಂತ್ರಿಯಾಗಿಲ್ಲ - ದಿನಕ್ಕೆ 20 ಗಂಟೆ ಕೆಲಸ ಮಾಡಿ ಸಿಎಂ ಆಗಿದ್ದೇನೆ ; ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ
  • Share this:
ಬೆಳಗಾವಿ(ನ.30): ನಾನೇನು ಮನೆಯಲ್ಲಿ ಮಲಗಿ ಮುಖ್ಯಮಂತ್ರಿಯಾಗಿಲ್ಲ. ನಾನೂ ದಿನಕ್ಕೆ 20 ಗಂಟೆ ಕೆಲಸ ಮಾಡಿ ಸಿಎಂ ಆಗಿದ್ದೇನೆ. ಜನರ ಕಷ್ಟಸುಖ ನೋಡಿದ್ದೇನೆ ಶಾಸಕರ ಬೆಂಬಲ‌ ಪಡೆದು ಸಿಎಂ ಆಗಿಲ್ಲ. ಯಾರನ್ನೂ ತಪ್ಪಿಸಿ ಸಿಎಂ ಆಗಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. 

ಕಾಗವಾಡದ ಮಲಾಬಾದದಲ್ಲಿ  ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಒಂದು ಕಾಲದಲ್ಲಿ ನನ್ನ ಬಳಿ ಕೇವಲ‌ ಮಂತ್ರಿ ಮಾಡಿ ಎಂದು ಬಂದಿದ್ದರು. ಸಣ್ಣವನಾದರೂ ಬುದ್ದಿ ಹೇಳಿ ಕಳುಹಿಸಿದ್ದೇನೆ. ಬೆಂದ ಮನೆಯಲ್ಲಿ ಗಳ ಹಿಡಿಯುವವ ನಾನಲ್ಲ. ಅಂದು ನಾನು ಅವರ ಮನೆಗೆ ಹೋಗಿರಲಿಲ್ಲ ಅವರೇ ನಮ್ಮ ಮನೆಗೆ ಬಂದಿದ್ದರು. ಎರಡು ಬಾರಿ ಸಿಎಂ ಆದಾಗ ನಾನು ಬಿಜೆಪಿ‌ ಕಾಂಗ್ರೆಸ್ ನಮ್ಮ ಬಳಿ ಬಂದಿದ್ದರು ಎಂದು ತಿಳಿಸಿದರು.

ಜೆಡಿಎಸ್ ಎಂದರೆ ವಿಶ್ವಾಸದ್ರೋಹಕ್ಕೆ ಇನ್ನೊಂದು ಹೆಸರೇ ಜೆಡಿಎಸ್ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿಕೆ ವಿಚಾರ ಮಾತನಾಡಿದ ಅವರು, ವಿಶ್ವಾಸದ್ರೋಹ ನಾನು ಮಾಡಿದ್ದೇನೋ? ಯಡಿಯೂರಪ್ಪ ಮಾಡಿದ್ದಾರೋ ಅದೆಲ್ಲ ಭಗವಂತ ನೋಡಿಕೊಳ್ತಾರೆ ಎಂದರು.

ಇದನ್ನೂಓದಿ : ಡಿ. 9ರ ನಂತರ ಸರ್ಕಾರ ಪತನ: ಮತ್ತೊಮ್ಮೆ ಭವಿಷ್ಯ ನುಡಿದ ಸಿದ್ದರಾಮಯ್ಯ

ಡಿ.9ರ ಬಳಿಕ ಯಾರು ಬೇಕಾದರೂ ಸಿಎಂ ಆಗಬಹುದು ಉಪ ಚುನಾವಣೆಯಲ್ಲಿ  ಬಿಜೆಪಿ, ಕಾಂಗ್ರೆಸ್​​ಗೆ ಸರಿಸಮಾನವಾಗಿ ಜೆಡಿಎಸ್ ಗೆಲುವು ಸಾಧಿಸಲಿದೆ. ರೈತರ ಸಾಲಮನ್ನಾ ನನಗೆ ಟ್ರಂಪ್ ಕಾರ್ಡ್ ಆಗಿದೆ. ಎಲ್ಲ ಕ್ಷೇತ್ರಗಳಲ್ಲಿ ಇದು ನೆರವಾಗುತ್ತಿದೆ ಎಂದರು.

First published:November 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading