ಚಾಲಕರ ಜೊತೆಗಿನ ಸಂವಾದದಲ್ಲಿ ಕಣ್ಣೀರಿಟ್ಟ ಮಾಜಿ ಸಿಎಂ ಕುಮಾರಸ್ವಾಮಿ


Updated:February 14, 2018, 4:07 PM IST
ಚಾಲಕರ ಜೊತೆಗಿನ ಸಂವಾದದಲ್ಲಿ ಕಣ್ಣೀರಿಟ್ಟ ಮಾಜಿ ಸಿಎಂ ಕುಮಾರಸ್ವಾಮಿ
ಕಣ್ಣೀರು ಹಾಕಿದ ಮಾಜಿ ಸಿಎಂ ಕುಮಾರಸ್ವಾಮಿ

Updated: February 14, 2018, 4:07 PM IST
ಬೆಂಗಳೂರು(ಫೆ.14): ಕಾರು ಚಾಲಕನ ಕುಟುಂಬದ ಸಂಕಷ್ಟ ಕಂಡು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಹಾಕಿದ ಘಟನೆ ಬೆಂಗಳೂರಿನ ಟೌನ್ ಹಾಲ್​ನಲ್ಲಿ ನಡೆಯುತ್ತಿದ್ದ ಆಟೋ-ಕಾರು ಲಾರಿ ಚಾಲಕರು ಮತ್ತು ಮಾಲೀಕರ ಜೊತೆಗಿನ ಸಂವಾದದ ಸಂದರ್ಭ ನಡೆದಿದೆ.

ಹೊಸಕೋಟೆ ಮೂಲದ ಎಮ್ಮಂಡ್ ಹಳ್ಳಿ ಮೂಲದ ಆಟೋ ಚಾಲಕ ಸಂಪಂಗಿ ಮಗಳ ಚಿಕಿತ್ಸೆಗೆ ಕುಮಾರಸ್ವಾಮಿ 30 ಲಕ್ಷ ರೂ. ನೆರವು ನೀಡಿದ್ದರಂತೆ. ಸಂವಾದದ ಸಂದರ್ಭ ಸಂಪಂಗಿ ಮತ್ತು ಅವರ ಪತ್ನಿ ಸಂಧ್ಯಾರಾಣಿ, ಕುಮಾರಸ್ವಾಮಿಯವರನ್ನ ಅಭಿನಂದಿಸಿದರು. ಕುಮಾರಸ್ವಾಮಿ ದೇವರಂತೆ ಬಂದು ನಮ್ಮ ಕುಟುಂಬವನ್ನ ಕಾಪಾಡಿದರು. ಇಲ್ಲದಿದ್ದರೆ ಕುಟುಂಬದವರೆಲ್ಲ ಆತ್ಮಹತ್ಯೆಗೆ ಮುಂದಾಗಿದ್ದೆವು. ನನ್ನ ಮಗಳು ಮೋನಿಕಾಗೆ ರೋಗ ನಿರೋಧಕ ಶಕ್ತಿ ಇರಲಿಲ್ಲ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾಗ ದೇವರಂತೆ ಬಂದ ಕುಮಾರಸ್ವಾಮಿ 30 ಲಕ್ಷ ರೂ. ಖರ್ಚುಮಾಡಿ ಬೋನ್ ಮ್ಯಾರೋಟ್ರಾಸ್ಪರೆಂಟ್ ಚಿಕಿತ್ಸೆ ಕೊಡಿಸಿದರು ಎಂದು ಕೃತಜ್ಱತೆ ಸಲ್ಲಿಸಿದರು.
ಈ ಸಂದರ್ಭ ವೇದಿಕೆ ಮೇಲೆ ಕುಳಿತಿದ್ದ ಕುಮಾರಸ್ವಾಮಿ ಚಾಲಕ ಮತ್ತು ಆತನ ಪತ್ನಿಯ ಮಾತು ಕೇಳಿ ಕಣ್ಣೀರು ಸುರಿಸಿದರು.

ಇದೇವೇಳೆ, ಮಾತನಾಡಿದ ಸಂಪಂಗಿ, ಈ ಜನ್ಮವನ್ನು ಬಡವರಿಗಾಗಿ ಮುಡಿಪಿಟ್ಟಿದ್ದೇನೆ. ಪ್ರಾಮಾಣಿಕವಾಗಿ ಬದುಕುವ ಬಡವರು ನೆಮ್ಮದಿಯಿಂದ ಬದುಕಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಲು ನನ್ನ ಈ ಜನ್ಮವನ್ನು ಮುಡಿಪಿಟ್ಟಿದ್ದೇನೆ. ಕುಮಾರಸ್ವಾಮಿ ನಮ್ಮ ಕುಟುಂಬಕ್ಕೆ ದೇವರು ಎಂದು ಕೊಂಡಾಡಿದರು.

ಇದೇವೇಳೆ, ಬಂಡಾಯ ಶಾಸಕರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಕುಮಾರಸ್ವಾಮಿ, ನಾಗಮಂಗಲದಿಂದ ಬಂದ ಕುಟುಂಬದ ನೋವಿನ ಕತೆ ಬಿಚ್ಚಿಟ್ಟರು. ಆ ಕುಟುಂಬಕ್ಕೆ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಮಾಡಿದ್ದೆ. ಆದರೆ, ನಾಗಮಂಗಲ, ಮಾಗಡಿ ಕ್ಷೇತ್ರಗಳಲ್ಲಿ ಕೆಲವು ಅಭ್ಯರ್ಥಿಗಳು ಚುನಾವಣೆಗಾಗಿ 50-100 ಕೋಟಿ ಖರ್ಚು ಮಾಡಲು ಸಿದ್ದವಾಗಿದ್ದಾರೆ. ಆದರೆ, ಬಡವರಿಗೆ ನೂರಿನ್ನೂರು ಸಹಾಯ ಮಾಡಲು ಅವರಿಂದ ಆಗಲ್ಲ ಎಂದು ಟಾಂಗ್ ನೀಡಿದರು.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ