ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಹೆಂಡತಿ ಸರ್ವಮಂಗಳಮ್ಮ ವಿಧಿವಶ

ನಾಳೆ ಸ್ವಗ್ರಾಮ ದಾವಣಗೆರೆ ತಾಲೂಕಿನ ಕಾರಿಗನೂರಿಗೆ ದಿವಂಗತ ಜೆ.ಎಚ್. ಅವರ ಸಮಾಧಿ ಪಕ್ಕದಲ್ಲೇ ಸರ್ವಮಂಗಳಮ್ಮ ಅಂತ್ಯಸಂಸ್ಕಾರ ನೆರವೇರಲಿದೆ.

HR Ramesh | news18-kannada
Updated:November 9, 2019, 10:30 PM IST
ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಹೆಂಡತಿ ಸರ್ವಮಂಗಳಮ್ಮ ವಿಧಿವಶ
ಸರ್ವಮಂಗಳಮ್ಮ ಪಟೇಲ್.
HR Ramesh | news18-kannada
Updated: November 9, 2019, 10:30 PM IST
ದಾವಣಗೆರೆ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ಅವರ ಹೆಂಡತಿ ಸರ್ವಮಂಗಳಮ್ಮ ಪಟೇಲ್ (85)  ಶನಿವಾರ ರಾತ್ರಿ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರ್ವಮಂಗಳಮ್ಮ ಅವರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಪುತ್ರ ಮಾಜಿ ಶಾಸಕ ಮಹಿಮಾ ಪಟೇಲ್ ಮನೆಯಲ್ಲಿ ಕೊನೆಯುಸಿರೆಳೆದರು.

ಸರ್ವಮಂಗಳ ಪಟೇಲ್ ಅವರು ತ್ರಿಶೂಲ ಪಾಣಿ ಪಟೇಲ್, ಸತೀಶ್ ಪಟೇಲ್ ಮತ್ತು ಮಹಿಮಾ ಪಟೇಲ್ ಮೂವರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.

ಸರ್ವಮಂಗಳಮ್ಮ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ.

Loading...ನಾಳೆ ಸ್ವಗ್ರಾಮ ದಾವಣಗೆರೆ ತಾಲೂಕಿನ ಕಾರಿಗನೂರಿಗೆ ದಿವಂಗತ ಜೆ.ಎಚ್. ಅವರ ಸಮಾಧಿ ಪಕ್ಕದಲ್ಲೇ ಸರ್ವಮಂಗಳಮ್ಮ ಅಂತ್ಯಸಂಸ್ಕಾರ ನೆರವೇರಲಿದೆ.

ಇದನ್ನು ಓದಿ: ವಿಧಿ ತುಮಕೂರಿಗೆ ಎಳೆದುಕೊಂಡು ಬಂದು ಚುನಾವಣೆಯಲ್ಲಿ ಸೋಲುವಂತೆ ಮಾಡಿತು; ದೇವೇಗೌಡ

First published:November 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...