ಗುರುವಿಗೆ ಟೋಪಿ ಹಾಕಿ ಹೋಗಿ ಈಗ ನೀವೇ ನಮ್ಮ ಗುರು ಅಂತಾರೆ: ಅರ್ಹ ಶಾಸಕರ ಸಿದ್ದರಾಮಯ್ಯ ಭೇಟಿಗೆ ಎಚ್​ಡಿಕೆ ವ್ಯಂಗ್ಯ

ಬಿಜೆಪಿ ಸರ್ಕಾರವನ್ನು ನಾನಂತೂ ತೊಂದರೆ ಮಾಡಲ್ಲ. ನಾನು ಯಾವ ಶಾಸಕರನ್ನು ಖರೀದಿ ಮಾಡಲ್ಲ. ಬಿಜೆಪಿಯ ಸಂಸ್ಕೃತಿಯೇ ಆಪರೇಷನ್ ಮಾಡುವಂತದ್ದು, ಅವರು ಮಾಡಲಿ.  ಪಕ್ಷ ಬಿಟ್ಟು ಹೋಗುವವರನ್ನು ಹಿಡಿದಿಟ್ಟುಕೊಂಡು ಇರೋಕೆ ಆಗಲ್ಲ

news18-kannada
Updated:December 18, 2019, 3:48 PM IST
ಗುರುವಿಗೆ ಟೋಪಿ ಹಾಕಿ ಹೋಗಿ ಈಗ ನೀವೇ ನಮ್ಮ ಗುರು ಅಂತಾರೆ: ಅರ್ಹ ಶಾಸಕರ ಸಿದ್ದರಾಮಯ್ಯ ಭೇಟಿಗೆ ಎಚ್​ಡಿಕೆ ವ್ಯಂಗ್ಯ
ಮಾಜಿ ಸಿಎಂ ಕುಮಾರಸ್ವಾಮಿ
  • Share this:
ಬೆಂಗಳೂರು(ಡಿ. 18): ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಸೋಲು ಆಯ್ತು ಅಂತಾ ಪಕ್ಷವೇ ಮುಳುಗಿ ಹೋಯ್ತು ಅಂತಲ್ಲ. ಎಸ್ ಎಂ ಕೃಷ್ಣ ನಮ್ಮ ಸರ್ಕಾರವನ್ನು ಅಸಹ್ಯ ಸರ್ಕಾರ ಎಂದಿದ್ರು ಇವಾಗ ಬಿಜೆಪಿ ಸರ್ಕಾರ‌ ಪವಿತ್ರ ಸರ್ಕಾರ ಅಂದಿದ್ದಾರೆ. ಇವಾಗ ಪವಿತ್ರ ಸರ್ಕಾರ ಬಂದಿದೆ ಎಂದು ಮಾಜಿ ಸಿಎಂ ಎಸ್ ಎಂ ಕೃಷ್ಣ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.

ಯಾವ ಶಾಸಕರೂ ಜೆಡಿಎಸ್ ತೊರೆಯುವುದಿಲ್ಲ. ನನ್ನ ಷಷ್ಠಿ ಪೂಜೆಗೆ ಮಾಜಿ ಸಚಿವ ಜಿಟಿ ದೇವೇಗೌಡರು ಬಿಟ್ಟು ಎಲ್ಲರು ಬಂದಿದ್ದಾರೆ. ಎಲ್ಲರೂ ಬಂದು ಊಟ ಮಾಡಿಕೊಂಡು ಹೋಗಿದ್ದಾರೆ. ಬಿಜೆಪಿ ಸರ್ಕಾರವನ್ನು ನಾನಂತೂ ತೊಂದರೆ ಮಾಡಲ್ಲ. ನಾನು ಯಾವ ಶಾಸಕರನ್ನು ಖರೀದಿ ಮಾಡಲ್ಲ. ಬಿಜೆಪಿಯ ಸಂಸ್ಕೃತಿಯೇ ಆಪರೇಷನ್ ಮಾಡುವಂತದ್ದು, ಅವರು ಮಾಡಲಿ.  ಪಕ್ಷ ಬಿಟ್ಟು ಹೋಗುವವರನ್ನು ಹಿಡಿದಿಟ್ಟುಕೊಂಡು ಇರೋಕೆ ಆಗಲ್ಲ. ಆದರೂ ಶಾಸಕರು ಪಕ್ಷ ಬಿಟ್ಟು ಹೋಗಲ್ಲ ಎಂಬ ವಿಶ್ವಾಸ ಇದೆ ಎಂದರು.

ಯಾರು ಯಾರು ಎಲ್ಲಿ ಬೇಕಾದರೂ ಹೋಗಲಿ

ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ವಿಚಾರವಾಗಿ ಮಾತನಾಡಿದ ಅವರು, ಮಧು ಬಂಗಾರಪ್ಪ ಅವರ ಮನೆಯಲ್ಲಿ ತೊಂದರೆಗಳು ಇರ್ತವೆ. ಅವರು ಕಾಂಗ್ರೆಸ್ ಸೇರೋದು ಗೊತ್ತಿಲ್ಲ. ಯಾರು ಎಲ್ಲಿ ಬೇಕಾದರೂ ಹೋಗಲಿ. ನನಗೆ ಅದನ್ನು ಕಟ್ಟಿಕೊಂಡು ಏನು ಆಗಬೇಕು. ಈಗ ಗೆದ್ದು ಹೋದವರು ಆಸ್ಪತ್ರೆಗೆ ಹೋಗಿ ನೀವೇ ನನ್ನ ಗುರು ಅಂತಾ ಹೇಳಿಲ್ವೇ. ಆ ಗುರುಗಳಿಗೆ ಅವರೇ ಟೋಪಿ ಹಾಕಿ ಹೋಗಿರೋರು. ಇವಾಗ ಅಲ್ಲಿ ಹೋಗಿ ನೀವೇ ನಮ್ಮ ಗುರು ಅಂತಾ ಹೇಳ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನೂತನವಾಗಿ ಗೆದ್ದ ಶಾಸಕರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

ಕೆಆರ್ ಪೇಟೆಯಲ್ಲಿ ಜೆಡಿಎಸ್‌ ಮಾತ್ರವಲ್ಲ ಕಾಂಗ್ರೆಸ್ ಕೂಡ ಸೋತಿದೆ. ಮಂಡ್ಯದಲ್ಲಿ
ಬಿಜೆಪಿ ಈಗ ಅರಳಿದೆ. ಮುಂದೆ ಹಾಗೇ ಮುದುಡಿ ಹೋಗುತ್ತೆ ಎಂದು ಎಚ್ಡಿಕೆ ವ್ಯಂಗ್ಯವಾಡಿದರು.

ಇದನ್ನೂ ಓದಿ : ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಗೆ ನಮ್ಮ ವಿರೋಧ : ಮಾಜಿ ಸಿಎಂ ಕುಮಾರಸ್ವಾಮಿಮಹದಾಯಿ ಮತ್ತು ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯವನ್ನು ಬಿಜೆಪಿ ಪೇಟೆಂಟ್ ತೆಗೆದುಕೊಂಡಿದೆ. ಪಾಪ ಉತ್ತರ ಕರ್ನಾಟಕ ಅಭಿವೃದ್ಧಿಗೆ ನಾವು ಏನು ಮಾಡೇ ಇಲ್ಲ ಏನು ಮಾಡೋದು ಎಂದು ಹೇಳಿ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಸೋಲಿಗೆ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

 
First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ