ಯಡಿಯೂರಪ್ಪ ಕೇವಲ 17 ಅನರ್ಹ ಶಾಸಕರಿಗೆ ಕಾಮಧೇನು ಹೊರತು ರಾಜ್ಯದ ಜನರಿಗೆ ಅಲ್ಲ ; ಕುಮಾರಸ್ವಾಮಿ ವ್ಯಂಗ್ಯ

ವಿಶ್ವನಾಥ್​ ಅವರು ಕುರುಬ ಸಮಾಜದವರೆಲ್ಲರು ನನಗೆ ಮತ ಹಾಕಿ ನಾನು ಸಚಿವನಾಗ್ತಿನಿ ಅಂತಾರೆ. ಡಿಸೆಂಬರ್​ 9 ರ ನಂತರ ಸಿಎಂ ಯಡಿಯೂರಪ್ಪ ಇದ್ರೆ ತಾನೇ ವಿಶ್ವನಾಥ್ ಮಂತ್ರಿಯಾಗೋದು. ಸುಮ್ಮನೆ ಅವರಿಗೆ ಮತ ಹಾಕಿ ನಿಮ್ಮ ವೋಟು ವ್ಯರ್ಥ ಮಾಡಬೇಡಿ ಎಂದು ಕುರುಬ ಸಮಾಜದವರಿಗೆ ಮಾಜಿ ಸಿಎಂ ಕುಮಾರ‌ಸ್ವಾಮಿ ಕರೆ ನೀಡಿದರು.

news18-kannada
Updated:December 2, 2019, 9:17 PM IST
ಯಡಿಯೂರಪ್ಪ ಕೇವಲ 17 ಅನರ್ಹ ಶಾಸಕರಿಗೆ ಕಾಮಧೇನು ಹೊರತು ರಾಜ್ಯದ ಜನರಿಗೆ ಅಲ್ಲ ; ಕುಮಾರಸ್ವಾಮಿ ವ್ಯಂಗ್ಯ
ಕುಮಾರಸ್ವಾಮಿ ಹಾಗೂ ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ಮೈಸೂರು(ಡಿ.02): ಸಿಎಂ ಯಡಿಯೂರಪ್ಪನವರು ರಾಜ್ಯದ ಜನರಿಗೆ ಕಾಮಧೇನು ಅಲ್ಲ. ಅವರು ಕೇವಲ 17 ಜನ ಅನರ್ಹ ಶಾಸಕರಿಗೆ ಮಾತ್ರ ಕಾಮಧೇನು. ಕಾಂಗ್ರೆಸ್ ಮತ ಕೊಟ್ಟರೆ ಅದೇಲ್ಲೊ‌ ಒಂದು ಕಡೆ ಬಿಜೆಪಿಗೆ ಲಾಭ ಆಗುತ್ತೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಮತ ನೀಡಬೇಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ಸಮಾವೇಶಕ್ಕೆ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೇಳಿದ ಕುಮಾರ‌ಸ್ವಾಮಿಯವರು, ನನಗೆ ಅನಾರೋಗ್ಯದ ಹಿನ್ನಲೆಯಲ್ಲಿ ತಡವಾಗಿ ಬಂದೆ. ಹೆಲಿಕ್ಯಾಪ್ಟರ್‌ ತುರ್ತು ಭೂಸ್ಪರ್ಶ ಆದಾಗ ನನ್ನ ಭಯವಾಗಿತ್ತು. ಮೂರು ಪ್ರಮುಖ ಸಭೆಯಲ್ಲಿ ಭಾಗಿಯಾಗೋದು ಹೇಗೆ ಅಂತ ಎದೆ ಹೊಡೆದು ಹೋಗಿತ್ತು. ಆದರೆ ಈ ಜನಸಾಗರ ನೋಡಿ ನನಗೆ ಸಂತಸವಾಯಿತು ಎಂದರು.

ವಿಶ್ವನಾಥ್​ ಅವರು ಕುರುಬ ಸಮಾಜದವರೆಲ್ಲರು ನನಗೆ ಮತ ಹಾಕಿ ನಾನು ಸಚಿವನಾಗ್ತಿನಿ ಅಂತಾರೆ. ಡಿಸೆಂಬರ್​ 9 ರ ನಂತರ ಸಿಎಂ ಯಡಿಯೂರಪ್ಪ ಇದ್ರೆ ತಾನೇ ವಿಶ್ವನಾಥ್ ಮಂತ್ರಿಯಾಗೋದು. ಸುಮ್ಮನೆ ಅವರಿಗೆ ಮತ ಹಾಕಿ ನಿಮ್ಮ ವೋಟು ವ್ಯರ್ಥ ಮಾಡಬೇಡಿ ಎಂದು ಕುರುಬ ಸಮಾಜದವರಿಗೆ ಮಾಜಿ ಸಿಎಂ ಕುಮಾರ‌ಸ್ವಾಮಿ ಕರೆ ನೀಡಿದರು.

ಜೆಡಿಎಸ್‌ ಕಾರ್ಯಕರ್ತರ ಅಲೆಯಲ್ಲಿ ಕಾಂಗ್ರೆಸ್ ಬಿಜೆಪಿ ಕೊಚ್ಚಿ ಹೋಗಲಿದೆ ಎನ್ನುವ ವಿಶ್ವಾಸ ನನಗೆ ಇದೆ. 17 ಕ್ಷೇತ್ರಗಳಲ್ಲಿ ಹುಣಸೂರು ನಂಬರ್​ 1 ಕ್ಷೇತ್ರವಾಗಿದೆ. ಇಷ್ಟು ಉತ್ಸಾಹವನ್ನ‌ ನಾನು ಇನ್ನೆಲ್ಲೂ ನೋಡಿಲ್ಲ. ನಾನು ಈ ಕ್ಷೇತ್ರಕ್ಕೆ 160 ಕೋಟಿ ರೂಪಾಯಿ ರಸ್ತೆಗಳನ್ನ ಮಾಡಿಸಿಕೊಟ್ಟಿದ್ದೇನೆ ಇದು ಅನ್ಯಾಯನಾ? ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ : ಕುದುರೆ ವ್ಯಾಪಾರ ಮಾಡಿದ್ದೇ ಸಿಎಂ ಯಡಿಯೂರಪ್ಪನವರ ದೊಡ್ಡ ಸಾಧನೆ ; ಹೆಚ್​.ಡಿ. ದೇವೇಗೌಡ ಲೇವಡಿ

ಹುಣಸೂರಿನಲ್ಲಿ ಕಾಂಗ್ರೆಸ್ ಬೆಂಬಲ ಕೊಡ್ತಿನಿ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ಹಾಗಾದ್ರೆ 89 ವಯಸ್ಸಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್‌ಗೆ ಸಹಾಯ ಮಾಡೋಕೆ ಬಂದಿದ್ರಾ.? ನಾನು, ರೇವಣ್ಣ, ಪ್ರಜ್ವಲ್ ರಲ್ಲ ಸುಮ್ಮನೆ ಬಂದಿದ್ವಾ? ನಾವ್ಯಾಕೆ ಹೊಂದಾಣಿಕೆ ಮಾಡಿಕೊಳ್ಳಬೇಕು. ನಿಮ್ಮ ಆರ್ಶಿವಾದ ಇದ್ದರೆ ಸಾಕು. ಮುಂದೆ ನಿಮ್ಮ ಸಮಸ್ಯೆಗಳನ್ನ ನಾನೇ ಅಲಿಸುತ್ತೇನೆ. ಕಾಂಗ್ರೆಸ್ ಮತ ಕೊಟ್ಟರೆ ಅದೇಲ್ಲೊ‌ ಒಂದು ಕಡೆ ಬಿಜೆಪಿಗೆ ಲಾಭ ಆಗುತ್ತೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಮತ ನೀಡಬೇಡಿ ಎಂದು ತಿಳಿಸಿದರು.

ನಮ್ಮ‌ ಪಕ್ಷ ಎಲ್ಲಂದರಲ್ಲಿ ಛತ್ರಿ ಹಿಡಿಯೋ ಪಕ್ಷವಲ್ಲಶ್ರೀನಿವಾಸ್ ಪ್ರಸಾದ್ ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದಾರೆ. ಈವರೆಗೆ ನಾನು ಛತ್ರಿ ಹಿಡಿದುಕೊಂಡು ಯಾರ ಮನೆ ಬಾಗಿಲಿಗೆ ಹೋಗಿಲ್ಲ, ಬದಲು, ನಿಮ್ಮ ಛತ್ರಿ ತೆರೆಯಿರಿ ಎಂದು ಕಾಂಗ್ರೆಸ್ ಹಾಗೂ ಬಿಜೆಪಿಯವರೇ ನಮ್ಮ ಬಳಿಯೇ ಬಂದಿದ್ದರು ಎಂದರು

ಇದನ್ನೂ ಓದಿ : ಕುಮಟಳ್ಳಿಯನ್ನು ಗೆಲ್ಲಿಸಿ ಅಥಣಿ ಮತದಾರರು ಗಂಡಸರು ಎಂದು ತೋರಿಸಿ: ಲಕ್ಷ್ಮಿ ಹೆಬ್ಬಾಳ್ಕರ್​​ಗೆ ಯತ್ನಾಳ ತಿರುಗೇಟು

ಸಿದ್ದರಾಮಯ್ಯನವರು ಕೊಟ್ಟಿದ್ದ ಭರವಸೆಯನ್ನು ನಾನು ಈಡೇರಿಸಿದ್ದೇನೆ. 4ಕೆಜಿ ಇದ್ದ ಅಕ್ಕಿಯನ್ನ 7ಕೆಜಿಗೆ ಏರಿಸಿ ಭಾಷಣ ಮಾಡಿದ್ರು. ಸಮ್ಮಿಶ್ರ ಸರ್ಕಾರ ಬಂದಾಗ 800 ಕೋಟಿ ಹೆಚ್ಚುವರಿಯಾಗಿ ಸರ್ಕಾರಕ್ಕೆ ಹೊರೆಯಾಯ್ತು. ಎಲ್ಲಿಂದ ತರಲಿ ಅಂತ ಕೇಳಿದ್ದಕ್ಕೆ‌ ಏನಾದ್ರು ಮಾಡಿ ಅಂತ ಸಿದ್ದರಾಮಯ್ಯ ಅಂದಿದ್ದರು. ಸಾಲ‌ಮನ್ನಾದ ಜೊತೆ ಸಿದ್ದರಾಮಯ್ಯ ಅವರ ಭರವಸೆಯನ್ನು ಈಡೇರಿಸಿದೆ ಎಂದು ತಿಳಿಸಿದರು.

 
First published: December 2, 2019, 8:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading