ಅಧಿಕಾರವೂ ಹೋಯ್ತು, ಅದೃಷ್ಟದ ರೂಮೂ ಹೋಯ್ತು; ತಾಜ್​ ವೆಸ್ಟೆಂಡ್​ನಿಂದ ಜೆಪಿ ನಗರದ ನಿವಾಸಕ್ಕೆ ಹೆಚ್​ಡಿಕೆ ಶಿಫ್ಟ್​

ಅಧಿಕಾರ ಹೋದ 22 ದಿನಗಳ ಬಳಿಕ ತಾಜ್ ವೆಸ್ಟೆಂಡ್​ ಹೋಟೆಲ್​ನ ಐಷಾರಾಮಿ ರೂಮನ್ನು ಖಾಲಿ ಮಾಡಿದ್ದಾರೆ. ಲಕ್ಷಾಂತರ ರೂ ಕೊಟ್ಟು ಐಷಾರಾಮಿ ಹೋಟೆಲ್​ನಲ್ಲಿ ಇರುವ ಬಗ್ಗೆ ಟೀಕಿಸಿದ್ದ ಬಿಜೆಪಿ ನಾಯಕರಿಗೆ ಉತ್ತರ ನೀಡಿದ್ದ ಹೆಚ್​.ಡಿ. ಕುಮಾರಸ್ವಾಮಿ, ಆ ಹೋಟೆಲ್​ ರೂಮಿನ  ವೆಚ್ಚವನ್ನು ಸ್ವಂತ ಹಣದಿಂದ ಭರಿಸುವುದಾಗಿ ಸ್ಪಷ್ಟಪಡಿಸಿದ್ದರು.

Sushma Chakre | news18
Updated:August 16, 2019, 10:04 AM IST
ಅಧಿಕಾರವೂ ಹೋಯ್ತು, ಅದೃಷ್ಟದ ರೂಮೂ ಹೋಯ್ತು; ತಾಜ್​ ವೆಸ್ಟೆಂಡ್​ನಿಂದ ಜೆಪಿ ನಗರದ ನಿವಾಸಕ್ಕೆ ಹೆಚ್​ಡಿಕೆ ಶಿಫ್ಟ್​
ಸಿಎಂ ಕುಮಾರಸ್ವಾಮಿ
  • News18
  • Last Updated: August 16, 2019, 10:04 AM IST
  • Share this:
ಬೆಂಗಳೂರು (ಆ. 16): ತಾಜ್ ವೆಸ್ಟೆಂಡ್​ ಹೋಟೆಲ್​ನ ರೂಂ ತಮಗೆ ಅದೃಷ್ಟ ತಂದುಕೊಟ್ಟಿದೆ. ಹೀಗಾಗಿ, ಅದನ್ನು ಖಾಲಿ ಮಾಡುವುದಿಲ್ಲ ಎಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಕೊನೆಗೂ ತಮ್ಮ ರೂಮನ್ನು ಖಾಲಿ ಮಾಡಿದ್ದಾರೆ. ವಿಪಕ್ಷಗಳು ಎಷ್ಟೇ ಟೀಕೆ ಮಾಡಿದ್ದರೂ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಆ ರೂಮನ್ನು ಖಾಲಿ ಮಾಡಿರಲಿಲ್ಲ. ಆದರೆ, ಇದೀಗ ರೂಮನ್ನು ಖಾಲಿ ಮಾಡಿದ್ದಾರೆ.

ಹೆಚ್​.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ  ತಾಜ್​ ವೆಸ್ಟೆಂಡ್​ ಹೋಟೆಲ್ ರೂಮನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದರು. ಸರ್ಕಾರಿ ಬಂಗಲೆಯನ್ನು ತಿರಸ್ಕರಿಸಿ ಐಷಾರಾಮಿ ಹೋಟೆಲ್​ ರೂಂನಲ್ಲಿ ತಂಗಿರುವುದಕ್ಕೆ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರನ್ನು ಟೀಕಿಸಿದ್ದರು. ಆ ರೂಂ ತಮ್ಮ ಅದೃಷ್ಟದ ರೂಂ ಎಂದು ಹೇಳಿಕೊಂಡಿದ್ದ ಹೆಚ್​.ಡಿ. ಕುಮಾರಸ್ವಾಮಿ ತಮ್ಮ ಆಪ್ತರ ಜೊತೆ ಚರ್ಚೆ ನಡೆಸಲು, ಮಹತ್ವದ ಮೀಟಿಂಗ್ ನಡೆಸಲು ಇದೇ ರೂಂ ಬಳಸುತ್ತಿದ್ದರು. ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ತಾಜ್​ ವೆಸ್ಟೆಂಡ್ ರೂಂನಲ್ಲಿ ವಾಸವಾಗಿದ್ದರು.

10 ಕೋಟಿ ದೇಣಿಗೆ ನೀಡಿದ ಸಂಸ್ಥೆ ಹೆಸರು ನೆರೆಪೀಡಿತ ಗ್ರಾಮಕ್ಕೆ ನಾಮಕರಣ; ರಾಜ್ಯವನ್ನು ಮಾರಾಟಕ್ಕೆ ಇಡಬೇಡಿ ಎಂದ ಜೆಡಿಎಸ್​

ಈ ಹಿಂದೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಹೆಚ್​.ಡಿ. ಕುಮಾರಸ್ವಾಮಿ, 'ನಾನು 2018ರ ವಿಧಾಸಭಾ ಚುನಾವಣೆಯ ಫಲಿತಾಂಶವನ್ನು ತಾಜ್ ವೆಸ್ಟೆಂಡ್​ ಹೋಟೆಲಿನ ರೂಂನಲ್ಲಿ ಕುಳಿತು ಟಿವಿಯಲ್ಲಿ ವೀಕ್ಷಿಸುತ್ತಿದ್ದೆ. ಅದೇ ಸಮಯದಲ್ಲಿ ಗುಲಾಂ ನಬಿ ಅಜಾದ್ ಕರೆ ಮಾಡಿ ನಾನೇ ಸಿಎಂ ಆಗಬೇಕೆಂದು ಮನವಿ ಮಾಡಿದರು. ಬಳಿಕ ಕಾಂಗ್ರೆಸ್​ ನಾಯಕರೊಂದಿಗೆ ಮಾತುಕತೆ ನಡೆಸಿ ಸಮ್ಮಿಶ್ರ ಸರ್ಕಾರ ರಚಿಸಲಾಯಿತು. ಹೀಗಾಗಿ, ಈ ರೂಂ ನನಗೆ ಅದೃಷ್ಟ ತಂದುಕೊಟ್ಟ ರೂಂ. ಆದ್ದರಿಂದ ನಾನು ಇಲ್ಲೇ ವಾಸವಾಗಿದ್ದೇನೆ ಎಂದು ಹೇಳಿದ್ದರು.

ಪ್ರಧಾನಿ ಮೋದಿ ಜೊತೆ ಇಂದು ಸಿಎಂ ಯಡಿಯೂರಪ್ಪ ಮಾತುಕತೆ; ರಾಜ್ಯ ಮಂತ್ರಿ ಮಂಡಲ ರಚನೆಗೆ ಸಿಗುತ್ತಾ ಗ್ರೀನ್​ ಸಿಗ್ನಲ್?

ಅಧಿಕಾರ ಹೋದ 22 ದಿನಗಳ ಬಳಿಕ ತಾಜ್ ವೆಸ್ಟೆಂಡ್​ ಹೋಟೆಲ್​ನ ಐಷಾರಾಮಿ ರೂಮನ್ನು ಖಾಲಿ ಮಾಡಿದ್ದಾರೆ. ಲಕ್ಷಾಂತರ ರೂ ಕೊಟ್ಟು ಐಷಾರಾಮಿ ಹೋಟೆಲ್​ನಲ್ಲಿ ಇರುವ ಬಗ್ಗೆ ಟೀಕಿಸಿದ್ದ ಬಿಜೆಪಿ ನಾಯಕರಿಗೆ ಉತ್ತರ ನೀಡಿದ್ದ ಹೆಚ್​.ಡಿ. ಕುಮಾರಸ್ವಾಮಿ, ಆ ಹೋಟೆಲ್​ ರೂಮಿನ  ವೆಚ್ಚವನ್ನು ಸ್ವಂತ ಹಣದಿಂದ ಭರಿಸುವುದಾಗಿ ಸ್ಪಷ್ಟಪಡಿಸಿದ್ದರು. ಅಧಿಕಾರ ಹೋದಮೇಲೂ ಕೆಲವು ದಿನಗಳ ಕಾಲ ಅದೇ ರೂಮಿನಲ್ಲಿ ಇರುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇಂದು ರೂ ಖಾಲಿ ಮಾಡಿ ಜೆಪಿ ನಗರದ ತಮ್ಮ ನಿವಾಸಕ್ಕೆ ಶಿಫ್ಟ್​ ಆಗಿದ್ದಾರೆ.

 
Loading...

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...