ಸಿಎಂಗೆ ಚಪ್ಪಲಿ ತೊಡಿಸಿ ಸಿಂಗ್ ಸ್ವಾಮಿನಿಷ್ಟೆ; ಆನಂದ್ ವಿರುದ್ಧ ಹೆಚ್​​ಡಿಕೆ ಕೋಪ; ಯಾರಿಗೆ ವಿಜಯ ಮಾಲೆ?

ಒಕ್ಕಲಿಗರು ಪ್ರಾಬಲ್ಯವಿರುವ ಮಹಾಲಕ್ಷ್ಮಿ‌ ಲೇಔಟ್ ನಲ್ಲಿ ಲಿಂಗಾಯತರಿಗೆ ಟಿಕೆಟ್ ಕೊಟ್ಟಿದ್ದೇವೆ. ಆದರೆ ಬೇರೆ ಪಕ್ಷಗಳಿಗೆ ಓಟು ಹಾಕಬೇಡಿ ಎಂದೇಳುವ ಸಿಎಂ ಯಡಿಯೂರಪ್ಪ ಕೇವಲ ಒಂದು ಸಮುದಾಯಕ್ಕೆ ಸೀಮಿತವೇ ಎಂದು ಪ್ರಶ್ನೆ ಮಾಡಿದರು.

news18-kannada
Updated:November 25, 2019, 5:09 PM IST
ಸಿಎಂಗೆ ಚಪ್ಪಲಿ ತೊಡಿಸಿ ಸಿಂಗ್ ಸ್ವಾಮಿನಿಷ್ಟೆ; ಆನಂದ್ ವಿರುದ್ಧ ಹೆಚ್​​ಡಿಕೆ ಕೋಪ; ಯಾರಿಗೆ ವಿಜಯ ಮಾಲೆ?
ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್​ ಹಾಗೂ ಸಿಎಂ ಯಡಿಯೂರಪ್ಪ
  • Share this:
ಬಳ್ಳಾರಿ (ನ.25): ಗಣಿನಾಡು ಹೊಸಪೇಟೆಯಲ್ಲಿಂದು ಮದಗಜಗಳ ಮತಬೇಟೆ ಬಲು ಜೋರಾಗಿತ್ತು. ಸಿಎಂ ಯಡಿಯೂರಪ್ಪ - ಮಾಜಿ ಸಿಎಂ ಹೆಚ್ ಡಿ ಕೆ ಒಂದೇ ಊರಿನಲ್ಲಿ ನಡೆಸಿದ ಪ್ರಚಾರ ಸಭೆಯಲ್ಲಿ ಪರಸ್ಪರ ವಾಗ್ದಾಳಿ ನಡೆಸಿದರು. ಖುದ್ದು ಯಡಿಯೂರಪ್ಪ ಅಸಮಾಧಾನಗೊಂಡ ನಾಯಕರ ಮನವೊಲಿಸಿದರು. ಈ ವೇಳೆ ಆನಂದ್ ಸಿಂಗ್ ಸಿಎಂ ಅವರ ಚಪ್ಪಲಿ ಸೇವೆ ಮಾಡಿ ಸ್ವಾಮಿನಿಷ್ಟೆ ಮಾಡಿದರೆ, ಅದೇ ಸಿಂಗ್ ವಿರುದ್ಧ ಹೆಚ್ ಡಿ ಕೆ ಬೆನ್ನಿಗೆ ಚೂರಿ ಹಾಕಿದರು ಎಂದೇಳಿ ಮಾತಿನಲ್ಲಿಯೇ ತಿವಿದರು.

ಪ್ರತಿ ಅಗಳಿನಲ್ಲಿಯೂ ನಿಮ್ಮ ಹೆಸರಿದೆ ಎಂದೇಳಿ ಸಿಂಗ್ ಬೆನ್ನಿಗೆ ಚೂರಿ ಹಾಕಿದ ಆನಂದ್ ಸಿಂಗ್ ಎಂದೇಳಿ ಜರಿದ ಹೆಚ್ ಡಿ  ಕುಮಾರಸ್ವಾಮಿ ಯವರು, ಜಯನಗರ ಕ್ಷೇತ್ರ ಉಪ ಚುನಾವಣೆ‌ ಹಿನ್ನೆಲೆ ದಿಗ್ಗಜರ ರಣಕಣ ಜೋರಾಗಿತ್ತು. ಸಿಎಂ ಯಡಿಯೂರಪ್ಪ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ‌ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ಪ್ರಚಾರ ನಡೆಸಿದರು.

ಸಿಎಂ ಯಡಿಯೂರಪ್ಪ ಪ್ರಚಾರ ಸಭೆಗೆ ಮೊದಲು ಕೊಟ್ಟೂರು ಮಠಕ್ಕೆ ಭೇಟಿ ನೀಡಿದರು. ಅಲ್ಲಿಯ ಶ್ರೀ ಸಂಗನಬಸವಸ್ವಾಮೀಜಿ ಆರ್ಶೀವಾದ ಪಡೆದು ಬಿಜೆಪಿ ಅಸಮಾಧಾನಗೊಂಡ ನಾಯಕರ ಮನೆಗೆ ಖುದ್ದು ತಾವೇ ಭೇಟಿ ನೀಡಿ ಮನವೊಲಿಸಿದರು. ಚುನಾವಣೆಯಲ್ಲಿ ತಟಸ್ಥರಾಗಿರುವ ಕೈ ನಾಯಕ ಆರ್‌ ಕೊಟ್ರೇಶ್ ಮನೆಗೆ ಭೇಟಿ ನೀಡಿದ ಬಳಿಕ ಬಿಜೆಪಿ ಮುಖಂಡ ಭರಮಲಿಂಗನಗೌಡ ನಿವಾಸಕ್ಕೆ ತೆರಳಿ ಬೆಂಬಲಿಸುವಂತೆ ಕೋರಿದರು.

ಇದನ್ನೂ ಓದಿ : ಯಡಿಯೂರಪ್ಪ ಅಪರೇಷನ್ ಕಮಲದ ಪಿತಾಮಹ - ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ ; ಸಿದ್ಧರಾಮಯ್ಯ ಲೇವಡಿ

ಮನೆಯಿಂದ ಹೊರಗಡೆ ಬರುವ ವೇಳೆ ಸಿಎಂ ಯಡಿಯೂರಪ್ಪ ಅವರಿಗೆ ಅಲ್ಲಿಯೇ ಇದ್ದ ಚಪ್ಪಲಿಯನ್ನು ಕೈಲಿ ಹಿಡಿದು ಅವರ ಪಾದದ ಮುಂದೆ ಇಟ್ಟರು. ಫೋನ್‌ ನಲ್ಲಿ ಬ್ಯುಸಿ ಇದ್ದರೂ ಸ್ವಾಮಿನಿಷ್ಟೆ ಮಾಡೋದು ಮರೆಯಲಿಲ್ಲ. ಇನ್ನು ಕಮಲಾಪುರ ಪಟ್ಟಣದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಅಭಿಮಾನಿಗಳು 110 ಕೇಜಿ ಸೇಬಿನ ಹಾರ ಹಾಕಿ ಸನ್ಮಾನಿಸಿದರು. ನಮಗೆ ಯಾರ ಬೆಂಬಲವೂ ಬೇಕಾಗಿಲ್ಲ. 15 ಕ್ಷೇತ್ರ ಗೆಲ್ಲುತ್ತೇವೆ, ಆನಂದ್ ಸಿಂಗ್ ಗೆಲುವು ನಿಶ್ಚಿತ, ಲೀಡ್ ನದ್ದು ಮಾತ್ರ ಯೋಚನೆ ಎಂದೇಳಿ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಮಾಜಿ ಸಿಎಂ ಹೆಚ್ ಡಿ ಕೆ ಕುಮಾರಸ್ವಾಮಿ ಸಿಎಂ ಬಿಎಸ್ ವೈ ಪ್ರಚಾರ ಸಭೆ ಮುಗಿಸಿದ ಬಳಿಕ ಕಮಲಾಪುರ ಪಟ್ಟಣ ಸೇರಿದಂತೆ ಪಿಕೆಹಳ್ಳಿ, ಹೊಸಪೇಟೆಯಲ್ಲಿ ತಮ್ಮ ಅಭ್ಯರ್ಥಿ ಎಂ ಎನ್ ನಬಿ ಪರ ಪ್ರಚಾರಸಭೆ ನಡೆಸಿದರು. ಆಡಳಿತ ಪಕ್ಷದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಅವರು, ಒಕ್ಕಲಿಗರು ಪ್ರಾಬಲ್ಯವಿರುವ ಮಹಾಲಕ್ಷ್ಮಿ‌ ಲೇಔಟ್ ನಲ್ಲಿ ಲಿಂಗಾಯತರಿಗೆ ಟಿಕೆಟ್ ಕೊಟ್ಟಿದ್ದೇವೆ. ಆದರೆ ಬೇರೆ ಪಕ್ಷಗಳಿಗೆ ಓಟು ಹಾಕಬೇಡಿ ಎಂದೇಳುವ ಸಿಎಂ ಯಡಿಯೂರಪ್ಪ ಕೇವಲ ಒಂದು ಸಮುದಾಯಕ್ಕೆ ಸೀಮಿತವೇ ಎಂದು ಪ್ರಶ್ನೆ ಮಾಡಿದರು.

ಇನ್ನು ಆನಂದ್ ಸಿಂಗ್ ಕಷ್ಟಪಟ್ಟು ದುಡಿದು ಹಣ ಮಾಡಿದ್ರಾ? ಈ ಸಂಪತ್ತನ್ನ ಲೂಟಿ ಮಾಡಿ ಹಣ ಹಂಚುತ್ತಿದ್ದಾರೆ. ನೀವು ಆನಂದ್ ಸಿಂಗ್ ರನ್ನ ಕೊಡುಗೈ ದಾನಿ ಅಂತಾರೆ. ನನಗೆ ಬೆನ್ನಿಗೆ ಚೂರಿ ಹಾಕಿ ಸರ್ಕಾರ ಕೆಡವಿದ್ದಾರೆ. ನಾನು ತಿನ್ನುವ ಪ್ರತಿ ಅಗಳುನಲ್ಲಿ ನಿಮ್ಮ ಹೆಸರು ಹೇಳುವೆ ಎನ್ನುತ್ತಿದ್ದರು. ಆದರೀಗ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.ಇದನ್ನೂ ಓದಿ : ಜೆಡಿಎಸ್ ಪಕ್ಷ ಕಷ್ಟದಲ್ಲಿದೆ; ನಮ್ಮ ಕೈ ಹಿಡಿಯಿರಿ ; ಮತದಾರರಿಗೆ ನಿಖಿಲ್​ ಕುಮಾರಸ್ವಾಮಿ ಮನವಿ

ಬಿಜೆಪಿ ಪ್ರಚಾರಸಭೆಯಲ್ಲಿ ಜನಸಂಖ್ಯೆ ಜೋರಿತ್ತು. ಪ್ರಚಾರ ಸಭೆಯಲ್ಲಿ ಎಚ್ ಆರ್ ಗವಿಯಪ್ಪ ಸೇರಿದಂತೆ ಹಲವು ಕಮಲ ನಾಯಕರ ಗೈರು ಎದ್ದುಕಾಣುತ್ತಿತ್ತು. ಈ ಕಾರಣಕ್ಕಾಗಿ ಸಿಎಂ ಖುದ್ದು ಬಂಡಾಯ ಶಮನ ಮಾಡುವ ಪ್ರಯತ್ನ ಮಾಡಿದರೆ, ಜೆ ಡಿಎಸ್‌ ನಲ್ಲಿಯೂ ನಾಯಕರ ಅಸಮಾಧಾನಗಳನ್ನು ಸರಿಪಡಿಸಿ ಹೋಗುತ್ತೇನೆ ಎಂದು ಹೆಚ್ ಡಿ ಕೆ ಹೇಳುವ ಮೂಲಕ ಪಕ್ಷದಲ್ಲಿ ಗೊಂದಲ ತೆರೆ ಎಳೆಯುವ ಪ್ರಯತ್ನ ಮಾಡಿದರು.
First published: November 25, 2019, 5:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading