ರೈತರ ಸುಸ್ತಿ ಸಾಲ ವಸೂಲಿಗೆ ಸರ್ಕಾರ ಆದೇಶ - ರೈತರನ್ನು ಮುಗಿಸಲು ಹೊರಟಿದೆ ಎಂದು ಖರ್ಗೆ ಆಕ್ರೋಶ

ಬಿಜೆಪಿ ಸರ್ಕಾರ ಎಲ್ಲವನ್ನೂ ಮುಗಿಸಲು ಹೊರಟಿದೆ. ಸಾರ್ವಜನಿಕ ವಲಯ ಸೇರಿದಂತೆ ಎಲ್ಲದರ ಮೇಲೂ ನಂಬಿಕೆಯಿಲ್ಲ. ರೈತ ವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು.

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

  • Share this:
ಕಲಬುರ್ಗಿ(ಜ.22) :  ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಬೊಕ್ಕಸದಲ್ಲಿ ದುಡ್ಡಿಲ್ಲವೆಂದು ಸಾಲ ವಸೂಲಾತಿಗೆ ಆದೇಶ ನೀಡಿದೆ. ಚುನಾವಣೆ ಮತ್ತು ಉಪ ಚುನಾವಣೆ ಬಂದಾಗ ಮಾತ್ರ ಬಿಜೆಪಿಗೆ ರೈತರ ನೆನಪಾಗುತ್ತೆ. ಚುನಾವಣೆ ಮುಗೀತಿದ್ದಂತೆ ರೈತರ ನೆನಪೇ ಹೋಗುತ್ತೆ. ನೆರೆ, ಬರದಿಂದ ತತ್ತರಿಸಿರುವಾಗ ಗಾಯದ ಮೇಲೆ ಬರೆ ಎಳೆಯೋ ಕೆಲಸ ಮಾಡಿದೆ ಎಂದು  ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಬಿಜೆಪಿ ಸರ್ಕಾರ ಎಲ್ಲವನ್ನೂ ಮುಗಿಸಲು ಹೊರಟಿದೆ. ಸಾರ್ವಜನಿಕ ವಲಯ ಸೇರಿದಂತೆ ಎಲ್ಲದರ ಮೇಲೂ ನಂಬಿಕೆಯಿಲ್ಲ. ರೈತ ವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡೋದನ್ನು ನಿಲ್ಲಿಸಬೇಕೆಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಅಪರೇಷನ್ ಕಮಲಕ್ಕೆ ಬಿಜೆಪಿ ಪಕ್ಷದಲ್ಲಿ ದುಡ್ಡಿರುತ್ತೆ : ಪ್ರಿಯಾಂಕ್ ಕಿಡಿ

ಬಿಜೆಪಿ ಅಪರೇಷನ್ ಕಮಲಕ್ಕೆ ಧಾರಾಳವಾಗಿ ಹಣ ಖರ್ಚು ಮಾಡುತ್ತೆ. ಆದರೆ ರೈತರಿಂದ ಸುಸ್ತಿ ಸಾಲ ವಸೂಲಿಗೆ ಮುಂದಾಗುತ್ತೆ ಎಂದು ಸರ್ಕಾರದ ಆದೇಶದ ವಿರುದ್ದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಬಿಜೆಪಿ ಸರ್ಕಾರ ಎಷ್ಟರಮಟ್ಟಿಗೆ ರೈತ ವಿರೋಧಿ ಅನ್ನೋದು ಇದರಿಂದ ಗೊತ್ತಾಗುತ್ತೆ. ಯಡಿಯೂರಪ್ಪ ಹೆಗಲ ಮೇಲೆ ಹಸಿರು ಶಾಲು ಹಾಕ್ತಾರೆ. ಆದ್ರೆ ರೈತ ವಿರೋಧಿಯಾಗಿಯೇ ವರ್ತಿಸುತ್ತಾರೆ ಎಂದು ಆರೋಪಿಸಿದರು.

ಒಂದು ಕಡೆ ಬರ, ಮತ್ತೊಂದು ಕಡೆ ನೆರೆಯಿಂದ ರೈತ ಸಂಕಷ್ಟಕ್ಕೆ ಗುರಿಯಾಗಿದ್ದಾನೆ. ಗಾಯದ ಮೇಲೆ ಬರೆ ಎಳೆಯೋ ರೀತಿಯಲ್ಲಿ ಸಾಲ ವಸೂಲಿಗೆ ಆದೇಶ ನೀಡಲಾಗಿದೆ. ಅಪರೇಶನ್ ಕಮಲ ಮಾಡಿ ಶಾಸಕರ ಖರೀದಿಗೆ ಇವರ ಬಳಿ ಹಣವಿರುತ್ತೆ. ಆದರೆ ರೈತರಿಗೆ ನೆರವಾಗಲು ಹಣವಿಲ್ಲ. ತೀವ್ರ ತೊಂದರೆಗೆ ಸಿಲುಕಿರೋ ರೈತನೆ ನೆರವಿಗೋ ಬರೋದು ಬಿಟ್ಟು, ಸಾಲ ವಸೂಲಾತಿಗೆ ಇಳಿದಿದೆ. ಇದೊಂದು ಮಾನವೀಯತೆಯೇ ಇಲ್ಲದ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಜಪ್ತಿಗೆ ಮರು ಜಪ್ತಿಯಿಂದ ಉತ್ತರ ಕೊಡುತ್ತೇವೆ ; ಮಾನ್ಪಡೆ ಎಚ್ಚರಿಕೆ

ಬಿಜೆಪಿಯಿಂದ ರೈತ ದ್ರೋಹಿ ಕೆಲಸ ನಡೆದಿದೆ. ಚುನಾವಣೆ ಪೂರ್ವದಲ್ಲಿ 1 ಲಕ್ಷ ರೂಪಾಯಿವರೆಗೆ ಸಾಲ ಮನ್ನಾ ಮಾಡೋದಾಗಿ ಹೇಳಿತ್ತು. ಸಾಲ ಮನ್ನಾ ಅಂತೂ ಮಾಡಿಲ್ಲ. ಈಗ ರೈತರಿಂದ ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡಲು ಹೊರಟಿದೆ. ಶ್ರೀಮಂತರು ಸಾಲ ತೆಗೆದುಕೊಂಡು ವಾಪಸ್ ಕಟ್ಟದೇ ಇದ್ದರೂ ಸುಮ್ಮನಿದೆ. ಆದರೆ ಅನ್ನದಾತನ ಮನೆ ಒಡೆಯಲು ಬಿಜೆಪಿ ಮುಂದಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಕುಮಾರಸ್ವಾಮಿ ಹೇಳಿಕೆಯಿಂದ ಮುಂದೊಂದು ದಿನ ಜೆಡಿಎಸ್ ಅಣಕು ಪಕ್ಷವಾಗುತ್ತೆ: ಆರ್.ಅಶೋಕ್ ಆಕ್ರೋಶ

ಈ ವರ್ಷ ನೆರೆ ಮತ್ತು ಬರದಿಂದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಸಾಲ ವಸೂಲಿಗೆ ಸರ್ಕಾರ ಆದೇಶಿಸಿದೆ. ಕೂಡಲೇ ಆದೇಶವನ್ನು ಹಿಂಪಡೆಯಬೇಕು. ಟ್ರ್ಯಾಕ್ಟರ್ ಮತ್ತಿತರ ಆಸ್ತಿ ಜಪ್ತಿಗೆ ನಾವು ಬಿಡುವುದಿಲ್ಲ. ಹಾಗೊಂದು ವೇಳೆ ಮಾಡಿದರೆ ಮರು ಜಪ್ತಿಗೆ ನಾವು ಬ್ಯಾಂಕ್ ಗಳಿಗೆ ನುಗ್ಗುತ್ತೇವೆ. ಎಲ್ಲ ರೈತ ಸಂಘಟನೆಗಳು ಸೇರಿ ರಾಜ್ಯಾದ್ಯಂತ ಹೋರಾಟ ಆರಂಭಿಸುತ್ತೇವೆ ಎಂದು ಮಾನ್ಪಡೆ ಎಚ್ಚರಿಸಿದ್ದಾರೆ.
First published: