• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Gangambike Mallikarjun: ನಾಮಪತ್ರ ವಾಪಸ್ ಪಡೆಯಲು ಒಪ್ಪಿದ ಮಾಜಿ ಮೇಯರ್; ಕಾಂಗ್ರೆಸ್ ಸಂಧಾನ ಯಶಸ್ವಿ?

Gangambike Mallikarjun: ನಾಮಪತ್ರ ವಾಪಸ್ ಪಡೆಯಲು ಒಪ್ಪಿದ ಮಾಜಿ ಮೇಯರ್; ಕಾಂಗ್ರೆಸ್ ಸಂಧಾನ ಯಶಸ್ವಿ?

ಗಂಗಾಂಬಿಕೆ ಮಲ್ಲಿಕಾರ್ಜುನ್, ಮಾಜಿ ಮೇಯರ್

ಗಂಗಾಂಬಿಕೆ ಮಲ್ಲಿಕಾರ್ಜುನ್, ಮಾಜಿ ಮೇಯರ್

ನಾಯಕರ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆಯುತ್ತಿದ್ದೇವೆ. ನಮ್ಮದು ಯಾವುದೇ ಡಿಮ್ಯಾಂಡ್ ಇಲ್ಲ ಎಂದು ಗಂಗಾಂಬಿಕೆ ಪತಿ ಮಲ್ಲಿಕಾರ್ಜುನ ಹೇಳಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore, India
  • Share this:

ಬೆಂಗಳೂರು: ಮಾಜಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ (Former BBMP Mayor Gangambike) ನಾಮಪತ್ರ ಹಿಂಪಡೆಯಲು ಒಪ್ಪಿಕೊಂಡಿದ್ದು, ಕಾಂಗ್ರೆಸ್ ನಾಯಕರ (Congress Leaders) ಸಂಧಾನ ಯಶಸ್ವಿಯಾಗಿದೆ. ನಾವು ನಾಮಪತ್ರ ವಾಪಸ್ ಪಡೆಯುತ್ತೇವೆ. ನಮ್ಮ ಎಲ್ಲಾ ಹೈಕಮಾಂಡ್ ನಾಯಕರು (High Command Leaders) ದೂರವಾಣಿ ಮೂಲಕ ಮಾತನಾಡಿದ್ದಾರೆ. ನಾವು ಕಾಂಗ್ರೆಸ್ ಪಕ್ಷದಲ್ಲೇ ಇರಬೇಕು. ಹಾಗಾಗಿ ನಾಯಕರ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆಯುತ್ತಿದ್ದೇವೆ. ನಮ್ಮದು ಯಾವುದೇ ಡಿಮ್ಯಾಂಡ್ ಇಲ್ಲ ಎಂದು ಗಂಗಾಂಬಿಕೆ ಪತಿ ಮಲ್ಲಿಕಾರ್ಜುನ ಹೇಳಿದ್ದಾರೆ.


AICC ಕಾರ್ಯದರ್ಶಿ ಅಭಿಷೇಕ್ ದತ್ ಭೇಟಿ ಮಾಡಿ ಮನವೊಲಿಕೆ ಬಳಿಕ ನಾಮಪತ್ರ ವಾಪಸ್ ಪಡೆಯಲು ಗಂಗಾಂಬಿಕೆ ಅವರು ಒಪ್ಪಿಕೊಂಡಿದ್ದಾರೆ.


ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಣ್​ದೀಪ್ ಸುರ್ಜೆವಾಲಾ, ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಎಂಬಿ ಪಾಟೀಲ್ ದೂರವಾಣಿ ಮೂಲಕ ಮಲ್ಲಿಕಾರ್ಜುನ್ ಜೊತೆ ಮಾತುಕತೆ ನಡೆಸಿದ್ರು.




ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನವೇ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಪಾರ ಬೆಂಬಲಿಗರ ಜೊತೆ ಆಗಮಿಸಿ ಗಂಗಾಂಬಿಕೆ ನಾಮಪತ್ರ ಸಲ್ಲಿಕೆ ಮಾಡಿದ್ದರು.


ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್ ವಿ ದೇವರಾಜ್ ಸ್ಪರ್ಧೆ ಮಾಡಿದ್ದಾರೆ.


ಇನ್ನು ಕೆಜಿಎಫ್ ಬಾಬು ಪತ್ನಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಕೆಜಿಎಫ್ ಬಾಬು ಚಿಕ್ಕಪೇಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.


ಬಿಜೆಪಿಗೆ ತವನಪ್ಪ ಅಷ್ಟಗಿ ಶಾಕ್​


ಅಮಿತ್ ಷಾ ಹುಬ್ಬಳ್ಳಿಗೆ ಬರೋ ದಿನವೇ ಬಿಜೆಪಿಗೆ ಶಾಕ್ ಎದುರಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತವನಪ್ಪ ಅಷ್ಟಗಿ ಇಂದು ನಾಮಪತ್ರ ವಾಪಸ್ ಪಡೆಯಲಿದ್ದಾರೆ.


ಇದನ್ನೂ ಓದಿ: JDS ಅಭ್ಯರ್ಥಿಗೆ ಶಾಕ್ ನೀಡಿದ ಹೆಚ್​ಡಿ ಕುಮಾರಸ್ವಾಮಿ ಆಪ್ತ

top videos


    ಧಾರವಾಡ ಗ್ರಾಮೀಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ತವನಪ್ಪ, ಈಗಾಗ್ಲೇ ಕಾಂಗ್ರೆಸ್​ ಸೇರ್ಪಡೆಯಾಗಿದ್ದು, ವಿನಯ್ ಕುಲಕರ್ಣಿಗೆ ಬೆಂಬಲಿಸೋದಾಗಿ ಅಧಿಕೃತ ಘೋಷಿಸಿದ್ದಾರೆ.

    First published: