Kolara: ಮಾಲೂರಿನಲ್ಲಿ ಗರಿಗೆದರಿದ ರಾಜಕೀಯ! ಶಾಸಕ ನಂಜೇಗೌಡ, ಮಾಜಿ ಶಾಸಕ ಮಂಜುನಾಥ್ ಮಧ್ಯೆ ಮಾತಿನ ಸಮರ

2013 ರ ವಿಧಾನಸಭೆ ಚುನಾವಣೆಯಲ್ಲಿ ಮಂಜುನಾಥ್ ಗೌಡ ಜೆಡಿಎಸ್ ನಿಂದ ಸ್ಪರ್ಧಿಸಿ ಗೆದ್ದಾಗ, ಈಗಿನ ಮಾಲೂರು ಶಾಸಕ ನಂಜೇಗೌಡ ಜೆಡಿಎಸ್ ನಲ್ಲಿದ್ದು, ಮಂಜುನಾಥ್ ಗೌಡ ಗೆಲುವಿನ ರುವಾರಿಯಾಗಿದ್ದರು, ಕಳೆದ ಚುನಾವಣೆಯಲ್ಲಿ ಮಂಜುನಾಥ್ ಗೌಡ ಸೋತಿದ್ದು, ಇದೀಗ ಇಬ್ಬರು ಮತ್ತೊಮ್ಮೆ ಚುನಾವಣೆಯಲ್ಲಿ ಮುಖಾಮುಖಿ ಆಗಲಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋಲಾರ(ಜೂ.23): ಬಯಲುಸೀಮೆ ಕೋಲಾರ (Kolara) ಜಿಲ್ಲೆಯಲ್ಲಿ ಜಿದ್ದಾ ಜಿದ್ದಿನ ಮತಕ್ಷೇತ್ರ ಎಂದು ಶ್ರೀನಿವಾಸಪುರ ತಾಲೂಕು ಹೆಸರುವಾಸಿಯಾಗಿತ್ತು. ಆದರೆ ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ (Assembly Election) ಮಾಲೂರು ವಿಧಾನಸಭಾ ಕ್ಷೇತ್ರವೂ ಅತಿಸೂಕ್ಷ್ಮ ಕ್ಷೇತ್ರವಾಗಿದೆ. ಇದಕ್ಕೆ ಪ್ರಮುಖ ಕಾರಣ ಮಾಜಿ ಶಾಸಕ (Former MLA) ಮಂಜುನಾಥ್ ಗೌಡ ಹಾಗು ಹಾಲಿ ಶಾಸಕ (Sitting MLA) ನಂಜೇಗೌಡ ಮಧ್ಯೆಯ ತೀವ್ರ ಹಣಾಹಣಿ. 2013 ರ‌ ಚುನಾವಣೆಯಲ್ಲಿ (Election) ಅಣ್ಣ ತಮ್ಮಂದಿರಂತೆ ಇದ್ದ, ಉಭಯ ನಾಯಕರು ವಯಕ್ತಿಕ ಕಾರಣಗಳಿಂದ ಜೆಡಿಎಸ್ (JDS) ತೊರೆದ ನಂಜೇಗೌಡ ಕಾಂಗ್ರೆಸ್ (Congress) ಸೇರ್ಪಡೆಯಾಗಿ, ತಾಲೂಕಿನಲ್ಲಿ ಮಿಂಚಿನ ಸಂಚಾದ ನಡೆಸಿ, 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ (Congress Party) ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಆದರೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡಿದ್ದ, ಮಂಜುನಾಥ್ ಗೌಡ, ಜೆಡಿಎಸ್ ನಿಂದ ದೂರವಾಗಿ, ಇತ್ತೀಚೆಗಷ್ಟೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ, ಮುಂದಿನ 2023 ರ ವಿಧಾನಸಭೆ ಚುನಾವಣೆಯಲ್ಲಿ ಮಂಜುನಾಥ್ ಗೌಡ ರೆ ಬಿಜೆಪಿ ಅಭ್ಯರ್ಥಿಯೆಂದು ಬಿಂಬಿಸಲಾಗಿದ್ದು, ಮಾಲೂರು ಬಿಜೆಪಿ ಟಿಕೆಟ್ ಗಾಗಿ ಹಲವರು ಪೈಪೋಟಿಯಲ್ಲಿದ್ದಾರೆ.

ಮಾತಿನ ಕದನ ಆರಂಭ

2023 ರ ಚುನಾವಣೆಗು ಮೊದಲೇ ಹಾಲಿ ಶಾಸಕ ನಂಜೇಗೌಡ ಹಾಗು ಮಾಜಿ ಶಾಸಕ ಮಂಜುನಾಥ್ ಗೌಡ ಮಧ್ಯೆ ಮತ್ತೊಮ್ಮೆ ಮಾತಿನ ಕದನ ಆರಂಭವಾಗಿದೆ, ಇತ್ತೀಚೆಗೆ ಮಾಲೂರಿನಲ್ಲಿ ಭರ್ಜರಿಯಾಗಿ ತಮ್ಮ ಹುಟ್ಟು ಹಬ್ಬ ಕಾರ್ಯಕ್ರಮ ಆಯೋಜಿಸಿದ್ದ ಶಾಸಕ ನಂಜೇಗೌಡ, ಮಾಜಿ ಶಾಸಕ ಮಂಜುನಾಥ್ ಗೌಡ ಹೆಸರೇಳದೆ ವಾಗ್ದಾಳಿ ನಡೆಸಿದ್ದರು.

4 ವರ್ಷಗಳಿಂದ ಕಾಣೆಯಾಗಿದ್ದವರು ಇದೀಗ ಪತ್ತೆ

ಕಳೆದ 4 ವರ್ಷಗಳಿಂದ ಕಾಣೆಯಾಗಿದ್ದವರು ಇದೀಗ ಪತ್ತೆಯಾಗಿದ್ದಾರೆ. ಜನ ತಮಗೆ ರಜೆ ನೀಡಿದ್ದರು  ಅದಕ್ಕಾಗಿಯೇ ಮನೆಯಲ್ಲಿದ್ದೆ ಎಂಬ ಹಾರಿಕೆ ಮಾತನ್ನಾಡಿ, ಜನರು ಕೊರೊನಾ ವೇಳೆಯಲ್ಲಿ ಅನುಭವಿಸಿದ್ದ ಸಂಕಷ್ಟಕ್ಕು ಮಾಜಿ ಶಾಸಕ ಸ್ಪಂದಿಸಿಲ್ಲ ಎಂದಿದ್ದರು. ಅದಕ್ಕೆ ಕಾರವಾಗಿಯೇ ತಿರುಗೇಟು ನೀಡಿರುವ ಮಾಜಿ ಶಾಸಕ ಮಂಜುನಾಥ್ ಗೌಡ, ನಂಜೇಗೌಡ ವಿರುದ್ದ ಕಿಡಿಕಾರಿದ್ದಾರೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಜನರೇ, ಈ ಏರಿಯಾಗಳಲ್ಲಿ ಜೂನ್ 23 ರಿಂದ 26 ರವರೆಗೆ ಕರೆಂಟ್ ಇರಲ್ಲ

ತೊರಲಕ್ಕಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಮೈಮೇಲಿನ ಒಂದು ಕೂದಲು ಹೋದರು ಅದಕ್ಕೆ ನಾನು ಜವಾಬ್ದಾರಿ ಎಂದು, ಮುಖಂಡರಿಗೆ ಹಾಗು ಕಾರ್ಯಕರ್ತರಿಗೆ ಭರವಸೆ ನೀಡಿದರು. ತಾಲೂಕಿನ ಜನತೆ ಗೆಲ್ಲಿಸಿಕೊಟ್ಟಿದ್ದಾರೆ ಹಾಗಾಗಿ ಶಾಸಕ ಸ್ಥಾನಕ್ಕೆ ಗೌರವ ಕೊಡಬೇಕು ಎನ್ನುವ ಕಾರಣಕ್ಕೆ ಸುಮ್ಮನಿದ್ದೇನೆ. ಇಲ್ಲವಾದರೆ  ಅವರು ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡುವೆ ಎಂದಿದ್ದಾರೆ.

ಮಾತಿನ ನಡುವೆ ವಾರ್ನಿಂಗ್ 

ನಮ್ಮವರ ಮೇಲೆ ಸುಳ್ಳು  ಕೇಸ್ ಹಾಕಿಸೋದು, ಪೊಲೀಸರ ಎದುರು ಆವಾಜ್ ಹಾಕಿದರೆ,  ಅದೆಲ್ಲಾ ಮತ್ತೆ ರಿಪೀಟ್​ ಆಗುತ್ತೆ ಎಂದು ವಾರ್ನಿಂಗ್  ನೀಡಿದರು. ಹಾಲಿ ಶಾಸಕರು ನಾನು ಹೊಸಕೋಟೆ ತಾಲೂಕಿನ ವನು ಎಂತಾರೆ, ವಿಪಕ್ಷ ನಾಯಕ ಸಿದ್ದರಾಮಯ್ಯ  ಬಾದಾಮಿಗೆ ಹೋಗಿದ್ದು ಯಾಕೆ,   ರಾಹುಲ್​ ಗಾಂಧಿ ಕೇರಳಕ್ಕೆ ಯಾಕೆ ಹೋದರು ಎಂದು ಮಂಜುನಾಥ್ ಗೌಡ ಪ್ರಶ್ನಿಸಿದರು.

ಇದನ್ನೂ ಓದಿ: Yadagiri: ನಕಲಿ ಬೀಜ ಮಾರಾಟ, ಮುಂಗಾರು ಕೃಷಿ ಉತ್ಸಾಹದಲ್ಲಿರೋ ರೈತರಿಗೆ ದೋಖಾ

ಒಟ್ಟಿನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಆರಂಭಕ್ಕು ಮುನ್ನವೇ ಮಾಲೂರಿನಲ್ಲಿ ನಾನಾ, ನೀನಾ ಎನ್ನುವ ಮಟ್ಟಿಗೆ ರಾಜಕೀಯ ಮಾತುಕತೆ ಆರಂಭವಾಗಿದೆ. ಮುಂದೆ ಈ ಬೆಳವಣಿಗೆ ಎಲ್ಲಿಗೆ ತಲುಪಲಿದೆಯೊ ಕಾದು ನೋಡ ಬೇಕಿದೆ.
Published by:Divya D
First published: